ಮನೆ ಕೆಲಸದಾಕೆಗೆ ಹೊಸ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ ನಟಿ ರೊಮಾನಾ
ನಟಿ ಡಿಂಪಲ್ಸ್ ರೊಮಾನಾ ಫಿಲಿಪ್ಪೀನ್ಸ್ ದೇಶದ (Philippines Country) ಒಬ್ಬ ಸುಪ್ರಸಿದ್ಧ ಕಿರುತೆರೆ ನಟಿ. ತಮ್ಮ ಮನೆಯಲ್ಲಿ ಕೆಲಸಮಾಡುವ ವಿಲ್ಮಾರಿಗೆ ಉಡುಗೊರೆಯಾಗಿ ಮನೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವರಿಗೆ ಸಹಾಯ ಮಾಡಬೇಕು ಅಂದರೆ ಜನರಲ್ಲಿ ಹಣವೇ ಇರುವುದಿಲ್ಲ. ಇನ್ನು ಕೆಲವರಿಗೆ ಹಣ ಇದ್ದರೂ ಸಹಾಯ ಮಾಡಬೇಕು ಎನ್ನುವ ಮನಸ್ಸು ಇರುವುದಿಲ್ಲ. ಆದರೆ ಇಂತಹವರ ನಡುವೆ ಅಪರೂಪಕ್ಕೆ ಕೆಲವರು ತಮ್ಮ ಹಣದ ಶ್ರೀಮಂತಿಕೆಯಿಂದ ಮಾತ್ರವಲ್ಲದೇ ತಮ್ಮ ಹೃದಯ ಶ್ರೀಮಂತಿಕೆಯಿಂದ ಹೆಸರು ಮಾಡುತ್ತಾರೆ. ಅಂತಹದ್ದೊಂದು, ಎಲ್ಲರಿಗೂ ಸ್ಪೂರ್ತಿದಾಯಕವಾಗುವ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ ಡಿಂಪಲ್ಸ್ ರೊಮಾನಾ ಎಲ್ಲಿಯವರು:
ನಟಿ ಡಿಂಪಲ್ಸ್ ರೊಮಾನಾ ಫಿಲಿಪ್ಪೀನ್ಸ್ ದೇಶದ (Philippines Country) ಒಬ್ಬ ಸುಪ್ರಸಿದ್ಧ ಕಿರುತೆರೆ ನಟಿ. ಕೆಲವು ದಿನಗಳ ಹಿಂದೆ ರೊಮಾನಾ ಮತ್ತು ಅವರ ಪತಿ ಬೋಯೆಟ್ ಅಹ್ಮಿ ತಮ್ಮ ಕೆಲಸದಾಕೆ ವಿಲ್ಮಾರನ್ನು ಕರೆದು ಆಕೆಗೆ ಒಂದು ಮನೆಯನ್ನು ಬಾಡಿಗೆಗೆ ಕೊಡುವುದಾಗಿ ಹೇಳಿದರು. ನಂತರ ಆ ಮನೆಯಲ್ಲಿ ವೀಡಿಯೋ ಮಾಡುತ್ತಾ ತಮ್ಮ ಮನೆ ಕೆಲಸದಾಕೆ ವಿಲ್ಮಾಗೆ ಕ್ಯಾಮೆರಾ ಮುಂದೆ ಬಂದು ಆಕೆ ತಮಗೆ ಹೇಗೆ ಪರಿಚಯ ಮತ್ತು ತನ್ನ ಕನಸುಗಳು ಏನು ಎಂದು ಹೇಳಲು ಸೂಚಿಸಿದರು.
ಕ್ಯಾಮರಾ ಮುಂದೆ ಕೆಲಸದಾಕೆ ವಿಲ್ಮಾ:
ಕ್ಯಾಮರಾ ಮುಂದೆ ಬಂದ ಕೆಲಸದಾಕೆ ವಿಲ್ಮಾ ತಾನು ಕೆಲಸ ಮಾಡುವ ಮನೆ ಮಾಲೀಕರಾದ ರೊಮಾನಾ ಮತ್ತು ಅವರ ಪತಿ ಇಬ್ಬರೂ ಬಹಳ ಉದಾರಿಗಳು ಎಂದು ಹೇಳುತ್ತಾ, ತನಗೆ ಒಂದು ಸ್ವಂತ ಮನೆಯನ್ನು ಹೊಂದಿಕೊಳ್ಳುವ ಕನಸು ಇದೆ ಎಂದು ಹೇಳಿದ್ದಾರೆ. ನಟಿ ರೊಮಾನಾ ಹಾಗೂ ಅವರ ಪತಿ ವೀಡಿಯೊ ಮಾಡುತ್ತಾ ಮನೆಯನ್ನು ವಿಲ್ಮಾ ಅವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ನಂತರ, ನಟಿ ರೊಮಾನಾ, ಮನೆಯನ್ನೆಲ್ಲ ಸ್ವಚ್ಚ ಮಾಡುತ್ತಾ ಮನೆಯ ಕೋಣೆಯನ್ನು ಸ್ವಚ್ಛಗೊಳಿಸಲು ವಿಲ್ಮಾಗೆ ಹೇಳುತ್ತಾರೆ. ಬಲೂನಿಂದ ಅಲಾಂಕಾರಗೊಂಡ ಕೋಣೆಯಲ್ಲಿ ವಿಲ್ಮಾಳನ್ನು ಸ್ವಾಗತಿಸಲಾಗುತ್ತದೆ. ಮತ್ತು ಈ ಮನೆ ಬಾಡಿಗೆಗೆ ನೀಡುತ್ತಿಲ್ಲ. ಇಂದು ನಿನ್ನ ಸ್ವಂತ ಮನೆ ಎಂಬುದಾಗಿ ನಟಿ ರೊಮಾನಾ ಘೋಷಿಸುತ್ತಾರೆ.
ಉಡುಗೊರೆ ಕಂಡು ಗಾಭರಿಗೊಂಡ ವಿಲ್ಮಾ:
ರೊಮಾನ ಮತ್ತು ಅವರ ಪತಿ ಆಕೆಗೆ ನೀವು ಬಂದಾಗಿನಿಂದ ನಮ್ಮ ಜೀವನದ ಒಂದು ಭಾಗವಾಗಿದ್ದೀರಿ. ನಾವು ಕಷ್ಟದಲ್ಲಿದ್ದಾಗ ಸಂಬಳ ಕೂಡಾ ಕೊಡಲಾಗದ ದಿನಗಳಲ್ಲಿ ಕೂಡಾ ನಮ್ಮೊಂದಿಗೆ ಇದ್ದು, ನಮಗಾಗಿ ಕೆಲಸ ಮಾಡಿದ್ದೀರಿ. ಹಾಗಾಗಿ ಈ ಉಡುಗೊರೆ ಎಂದು ನಟಿ ರೊಮಾನಾ ಹೇಳಿದ್ದನ್ನು ಕಂಡ ವಿಲ್ಮಾ ಭಾವುಕರಾಗುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ಆಗಿದೆ.
ಫಿಟ್ನೆಸ್ಗಾಗಿ MG ರೋಡ್, ವಿಧಾನಸೌಧ ಸುತ್ತಮುತ್ತ ಸೈಕಲ್ ರೌಂಡ್ ಹೊಡೆದ ಅಪ್ಪು!