ಕೊರೊನಾದಿಂದ ಚೇತರಿಸಿಕೊಂಡಿದ್ದ ಪಿಜ್ಜಾ ಹಟ್‌ನ ಸಹ ಸಂಸ್ಥಾಪಕ ಫ್ರಾಂಕ್ ಕಾರ್ನೆ ನಿಧನ

|

Updated on: Dec 04, 2020 | 7:49 AM

ಪಿಜ್ಜಾ ಹಟ್‌ನ ಸಹ ಸಂಸ್ಥಾಪಕ ಮತ್ತು ಉದ್ಯಮಿ (Lifelong Entrepreneur) ಫ್ರಾಂಕ್ ಕಾರ್ನೆ(82) ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಪತ್ನಿ ಜಾನಿ (janie carney) ಖಚಿತಪಡಿಸಿದ್ದಾರೆ.

ಕೊರೊನಾದಿಂದ ಚೇತರಿಸಿಕೊಂಡಿದ್ದ ಪಿಜ್ಜಾ ಹಟ್‌ನ ಸಹ ಸಂಸ್ಥಾಪಕ ಫ್ರಾಂಕ್ ಕಾರ್ನೆ ನಿಧನ
Follow us on

ಪಿಜ್ಜಾ ಹಟ್‌ನ ಸಹ ಸಂಸ್ಥಾಪಕ ಮತ್ತು ಉದ್ಯಮಿ (Lifelong Entrepreneur) ಫ್ರಾಂಕ್ ಕಾರ್ನೆ(82) ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಪತ್ನಿ ಜಾನಿ (janie carney) ಖಚಿತಪಡಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನೆ, ನ್ಯುಮೋನಿಯಾ ವಿರುದ್ಧ ಹೋರಾಡುತ್ತಿದ್ದರು. ಜೊತೆಗೆ ಇತ್ತೀಚೆಗೆ ಕೊರೊನಾದಿಂದ ಚೇತರಿಸಿಕೊಂಡಿದ್ದರು. ಆದರೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಫ್ರಾಂಕ್ ಕಾರ್ನೆ 19 ವಯಸ್ಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ 26 ವರ್ಷದ ತಮ್ಮ ಸಹೋದರನ ಜೊತೆ ಸೇರಿ ತಾಯಿಯ ಬಳಿ ಹಣ ಸಾಲ ಪಡೆದು 1958 ರಲ್ಲಿ ಪಿಜ್ಜಾ ವ್ಯವಹಾರವನ್ನು ಪ್ರಾರಂಭಿಸಿದ್ದರು. ಆದರೆ ಈಗ ಪಿಜ್ಜಾ ಹಟ್ ಸಾಮ್ರಾಜ್ಯವನ್ನು ಬಿಟ್ಟು ಹೊರಟ್ಟಿದ್ದಾರೆ.