
ವಾಷಿಂಗ್ಟನ್: ಅಮೆರಿಕದ ಸೌತ್ ಡಕೊಟಾದಲ್ಲಿ ವಿಮಾನ ಪತನಗೊಂಡು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ.
ಚಂಬರ್ಲೇನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗಿದೆ. ದುರಂತದಲ್ಲಿ ಪೈಲೆಟ್ ಸಹ ಬದುಕುಳಿದಿಲ್ಲ. ಪ್ರಯಾಣಿಕರು ಸೇರಿ ಒಟ್ಟು 12 ಮಂದಿ ವಿಮಾನದಲ್ಲಿದ್ದರು. ಅವಘಡದಲ್ಲಿ ಮೂವರು ಬದುಕುಳಿದಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.