ಹೂಸ್ಟನ್ ಏರ್ಪೋರ್ಟ್ನಲ್ಲಿ ಟೇಕಾಫ್ ವೇಳೆ ವಿಮಾನ ಸ್ಫೋಟ; 21 ಪ್ರಯಾಣಿಕರು ಪಾರು
ಹೂಸ್ಟನ್ ಏರ್ಪೋರ್ಟ್ನಿಂದ 18 ಪ್ರಯಾಣಿಕರನ್ನು ಹೊತ್ತು ಟೇಕಾಫ್ ಆಗುತ್ತಿದ್ದಂತೆ ಖಾಸಗಿ ವಿಮಾನ ಸ್ಫೋಟಗೊಂಡಿದೆ. ಬೆಂಕಿ ಹೊತ್ತಿಕೊಂಡ ವಿಮಾನದಲ್ಲಿದ್ದ 18 ಪ್ರಯಾಣಿಕರು ಹಾಗೂ ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಹೂಸ್ಟನ್: ಅಮೆರಿಕದ ಹೂಸ್ಟನ್ ವಿಮಾನ ನಿಲ್ದಾಣದಲ್ಲಿ (Houston airport) ನಿನ್ನೆ ವಿಮಾನ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್ ಸೇರಿ 21 ಪ್ರಯಾಣಿಕರು ಕೂಡ ಬಚಾವಾಗಿದ್ದಾರೆ. ಏರ್ಪೋರ್ಟ್ನಿಂದ 18 ಪ್ರಯಾಣಿಕರನ್ನು ಹೊತ್ತು ಟೇಕಾಫ್ ಆಗುತ್ತಿದ್ದಂತೆ ಖಾಸಗಿ ವಿಮಾನ ಗೋಡೆಗೆ ಅಪ್ಪಳಿಸಿದೆ. ಇದರಿಂದ ವಿಮಾನ ಸ್ಫೋಟಗೊಂಡಿದೆ. ಬೆಂಕಿ ಹೊತ್ತಿಕೊಂಡ ವಿಮಾನದಲ್ಲಿದ್ದ 18 ಪ್ರಯಾಣಿಕರು ಹಾಗೂ ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಹೀಗಾಗಿ, ಕೂದಲೆಳೆ ಅಂತರದಲ್ಲಿ ಭಾರೀ ಅಪಾಯವೊಂದು ತಪ್ಪಿದೆ. ಏರ್ಪೋರ್ಟ್ ಸಿಬ್ಬಂದಿ ವಿಮಾನ ಪತನವಾಗಿದ್ದನ್ನು ಗಮನಿಸಿ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರಿಂದ ಎಲ್ಲ ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಾಯಿತು. ಇಲ್ಲಿದ್ದರೆ ವಿಮಾನದಲ್ಲಿದ್ದ 21 ಜನರೂ ಸುಟ್ಟು ಕರಕಲಾಗುವ ಅಪಾಯವಿತ್ತು. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಮೆರಿಕದ ವಾಯುಯಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೆಕ್ಡೊನ್ನೆಲ್ ಡೌಗ್ಲಸ್ ಎಂಡಿ018 ಎಂಬ ಖಾಸಗಿ ಜೆಟ್ ಹೂಸ್ಟನ್ ಎಕ್ಸಿಕ್ಯೂಟಿವ್ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವಾಗ ಈ ದುರಂತ ಸಂಭವಿಸಿದೆ. ಟೇಕಾಫ್ ಆಗಲು ಪ್ರಯತ್ನಿಸುತ್ತಿದ್ದಂತೆ ವಿಮಾನ ಪತನಗೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮೇಜರ್ ಲೀಗ್ ಬೇಸ್‌ಬಾಲ್‌ನ ಅಮೆರಿಕನ್ ಲೀಗ್ ಚಾಂಪಿಯನ್‌ಶಿಪ್ ಸರಣಿಯ ಗೇಮ್ 4ರಲ್ಲಿ ಹೂಸ್ಟನ್ ಆಸ್ಟ್ರೋಸ್ ರೆಡ್ ಸಾಕ್ಸ್ ಆಡುವುದನ್ನು ನೋಡಲು ಬೋಸ್ಟನ್‌ಗೆ ತೆರಳುತ್ತಿದ್ದರು.
ಇದನ್ನೂ ಓದಿ: ವಿದೇಶಗಳಿಂದ ಬಂದವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಅಗತ್ಯವಿಲ್ಲ