ಲಾಕ್ಡೌನ್ ಬಳಿಕ ಸಂಚಾರ ಕೈಗೊಂಡಿದ್ದ ಕರಾಚಿ ವಿಮಾನ ಪತನ!
ಕರಾಚಿ: ಕರಾಚಿಯಲ್ಲಿ ನಾಗರಿಕ ವಿಮಾನವೊಂದು ಪತನಗೊಂಡಿದೆ. ಕರಾಚಿ ಏರ್ಪೋರ್ಟ್ ಬಳಿ ಲ್ಯಾಂಡಿಂಗ್ ಮಾಡಲು ಒಂದೆರಡು ನಿಮಿಷ ಇರುವಾಗ ಪತನವಾಗಿದೆ. ತಾಂತ್ರಿಕ ದೋಷದಿಂದ ವಸತಿ ಪ್ರದೇಶದಲ್ಲಿ, ಮನೆಗಳ ಮೇಲೆ A320 ವಿಮಾನ ನೋಸ್ ಡೈವ್ ಹೊಡೆದು ಬಿದ್ದಿದೆ. Black Friday, Corona Effect ಪಾಕಿಸ್ತಾನಕ್ಕೆ ಇಂದು ಕಪ್ಪು ಶುಕ್ರವಾರ ಆಗಿದೆ. ಇಂದು ರಂಜಾನ್ ಮಾಸದ ಕೊನೆಯ ಶುಕ್ರವಾರ. ಕೊರೊನಾ ವೈರಸ್ ಕಾಟದಿಂದಾಗಿ ದೀರ್ಘಕಾಲದ ಲಾಕ್ಡೌನ್ ಬಳಿಕ ಸಂಚಾರ ಕೈಗೊಂಡಿದ್ದ ವಿಮಾನವೊಂದು ಪಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿದೆ. ನತದೃಷ್ಟ PK-8303 flight ವಿಮಾನದಲ್ಲಿ […]
ಕರಾಚಿ: ಕರಾಚಿಯಲ್ಲಿ ನಾಗರಿಕ ವಿಮಾನವೊಂದು ಪತನಗೊಂಡಿದೆ. ಕರಾಚಿ ಏರ್ಪೋರ್ಟ್ ಬಳಿ ಲ್ಯಾಂಡಿಂಗ್ ಮಾಡಲು ಒಂದೆರಡು ನಿಮಿಷ ಇರುವಾಗ ಪತನವಾಗಿದೆ. ತಾಂತ್ರಿಕ ದೋಷದಿಂದ ವಸತಿ ಪ್ರದೇಶದಲ್ಲಿ, ಮನೆಗಳ ಮೇಲೆ A320 ವಿಮಾನ ನೋಸ್ ಡೈವ್ ಹೊಡೆದು ಬಿದ್ದಿದೆ.
Black Friday, Corona Effect ಪಾಕಿಸ್ತಾನಕ್ಕೆ ಇಂದು ಕಪ್ಪು ಶುಕ್ರವಾರ ಆಗಿದೆ. ಇಂದು ರಂಜಾನ್ ಮಾಸದ ಕೊನೆಯ ಶುಕ್ರವಾರ. ಕೊರೊನಾ ವೈರಸ್ ಕಾಟದಿಂದಾಗಿ ದೀರ್ಘಕಾಲದ ಲಾಕ್ಡೌನ್ ಬಳಿಕ ಸಂಚಾರ ಕೈಗೊಂಡಿದ್ದ ವಿಮಾನವೊಂದು ಪಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿದೆ. ನತದೃಷ್ಟ PK-8303 flight ವಿಮಾನದಲ್ಲಿ ಐದು ಸಿಬ್ಬಂದಿಯ ಜೊತೆಗೆ 51 ಮಂದಿ ಪುರುಷರು, 31 ಮಹಿಳೆಯರು ಮತ್ತು 9 ಮಕ್ಕಳು ಪ್ರಯಾಣಿಸಿದ್ದರು.
ರಂಜಾನ್ ಆಚರಣೆ ಮೇಲೆ ಕರಿಛಾಯೆ: ಪಾಕಿಸ್ತಾನ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಗೆ ಸೇರಿದ ಈ ವಿಮಾನವು (PIA) ಲಾಹೋರ್ ಮತ್ತು ಕರಾಚಿ ನಡುವೆ ಸಂಚರಿಸುತ್ತಿತ್ತು. ಕರಾಚಿಯಲ್ಲಿ ಜಿನ್ನಾ ಗಾರ್ಡನ್ ಏರಿಯಾದಲ್ಲಿ ಲ್ಯಾಂಡಿಂಗ್ಗೆ ಒಂದೆರಡು ನಿಮಿಷ ಇರುವಾಗ ಬಿದ್ದಿದೆ. ಬಹುತೇಕ ಪ್ರಯಾಣಿಕರು ರಂಜಾನ್ ಆಚರಣೆಗೆಂದು ತಮ್ಮ ತಮ್ಮ ಊರುಗಳಿಗೆ ತೆರಳಲು ಲಾಹೋರ್ನಿಂದ ವಿಮಾನದ ಮೂಲಕ ಕರಾಚಿಗೆ ಬಂದಿಳಿಯಬೇಕಿತ್ತು. ಆದ್ರೆ ಅಷ್ಟರಲ್ಲಿ ವಿಧಿ ಬೇರೆಯದ್ದೇ ಆಟ ಆಡಿದೆ.
Published On - 4:16 pm, Fri, 22 May 20