ಅಂಫಾನ್ ಹೋಯ್ತು, ಅಪ್ಪಳಿಸಲಿದೆ ನಿಸರ್ಗ ಚಂಡಮಾರುತ! ಏನಿದರ ಹಕೀಕತ್ತು?
ದೆಹಲಿ: ಮಹಾಮಾರಿ ಕೊರೊನಾ ಸಂಕಷ್ಟದ ನಡುವೆ ಅಂಫಾನ್ ಚಂಡಮಾರುತ ಅಪ್ಪಳಿಸಿತ್ತು. ಈ ಸೈಕ್ಲೋನ್ ಅಬ್ಬರಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು ತತ್ತರಿಸಿ ಹೋಗಿವೆ. ಇದೀಗ ಉತ್ತರ ಭಾರತದ ಕರಾವಳಿ ಪ್ರದೇಶಗಳಿಗೆ ನಿಸರ್ಗ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂಬರುವ ಸೈಕ್ಲೋನ್ಗೆ ನಿಸರ್ಗ ಎಂದು ಬಾಂಗ್ಲಾದೇಶ ಹೆಸರು ನೀಡಿದೆ. ಭಾರತದ ಹವಾಮಾನ ಇಲಾಖೆಯೂ ಸಹ ಹಲವು ಹೆಸರುಗಳನ್ನು ಸೂಚಿಸಿತ್ತು. ಗಾಟಿ, ತೇಜ್, ಮುರಸು, ನೀರ್ ಸೇರಿದಂತೆ ಹಲವು ಹೆಸರುಗಳನ್ನು ನೀಡಿತ್ತು. ಮುಂದಿನ ಚಂಡಮಾರುತಕ್ಕೆ […]
ದೆಹಲಿ: ಮಹಾಮಾರಿ ಕೊರೊನಾ ಸಂಕಷ್ಟದ ನಡುವೆ ಅಂಫಾನ್ ಚಂಡಮಾರುತ ಅಪ್ಪಳಿಸಿತ್ತು. ಈ ಸೈಕ್ಲೋನ್ ಅಬ್ಬರಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು ತತ್ತರಿಸಿ ಹೋಗಿವೆ. ಇದೀಗ ಉತ್ತರ ಭಾರತದ ಕರಾವಳಿ ಪ್ರದೇಶಗಳಿಗೆ ನಿಸರ್ಗ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂಬರುವ ಸೈಕ್ಲೋನ್ಗೆ ನಿಸರ್ಗ ಎಂದು ಬಾಂಗ್ಲಾದೇಶ ಹೆಸರು ನೀಡಿದೆ. ಭಾರತದ ಹವಾಮಾನ ಇಲಾಖೆಯೂ ಸಹ ಹಲವು ಹೆಸರುಗಳನ್ನು ಸೂಚಿಸಿತ್ತು. ಗಾಟಿ, ತೇಜ್, ಮುರಸು, ನೀರ್ ಸೇರಿದಂತೆ ಹಲವು ಹೆಸರುಗಳನ್ನು ನೀಡಿತ್ತು. ಮುಂದಿನ ಚಂಡಮಾರುತಕ್ಕೆ ಭಾರತ, ಬಾಂಗ್ಲಾದೇಶ, ಇರಾನ್, ಮಾಲ್ಡೀವ್ಸ್, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಒಟ್ಟು 13 ದೇಶಗಳಿಂದ 169 ಹೆಸರುಗಳನ್ನು ಕೊಡಲಾಗಿತ್ತು.
ಜಾಗತಿಕವಾಗಿ ಆರು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು ಮತ್ತು ಐದು ಪ್ರಾದೇಶಿಕ ಉಷ್ಣವಲಯದ ಚಂಡಮಾರುತ ಎಚ್ಚರಿಕೆ ಕೇಂದ್ರಗಳು ಸೈಕ್ಲೋನ್ಗೆ ಹೆಸರು ನೀಡುತ್ತವೆ. ಅದರಲ್ಲಿ ಭಾರತೀಯ ಹವಾಮಾನ ಇಲಾಖೆಯೂ ಒಂದಾಗಿದೆ.
Published On - 8:15 am, Sat, 23 May 20