‘ವಾರಂತ್ಯದಲ್ಲಿ ಚರ್ಚ್ಗಳನ್ನ ಕಡ್ಡಾಯವಾಗಿ ತೆರೆಯಲೇಬೇಕು’
ವಾಷಿಂಗ್ಟನ್: ದಿನದಿಂದ ದಿನಕ್ಕೆ ಅಮೆರಿಕದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಅಲ್ಲದೆ, ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರಿರುವುದು ಅಮೆರಿಕದಲ್ಲಿ. ಈ ಮಧ್ಯೆ ಅಗತ್ಯ ಸೇವೆಗಳೆಂದು ಪರಿಗಣಿಸಿ ಲಾಕ್ಡೌನ್ನಿಂದ ಬಂದ್ ಆಗಿರುವ ಚರ್ಚ್ಗಳನ್ನು ತೆರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ದೊಡ್ಡಣ್ಣನ ಆಜ್ಞೆ.. ಚರ್ಚ್ಗಳನ್ನು ತೆರೆಯುವ ಕೆಲಸವನ್ನು ತಕ್ಷಣ ಗವರ್ನರ್ಗಳು ಮಾಡಬೇಕು. ನನ್ನ ಆದೇಶವನ್ನ ಉಲ್ಲಂಘಿಸುವ ಗವರ್ನರ್ಗಳನ್ನ ಅತಿಕ್ರಮಿಸಿಕೊಳ್ಳುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ದೇಗುಲಗಳು, ಚರ್ಚುಗಳು, ಮಸೀದಿಗಳನ್ನು ಅಗತ್ಯ ಸೇವೆಗಳನ್ನು ಒದಗಿಸುವ ಸ್ಥಳಗಳಾಗಿ ಗುರುತಿಸುತ್ತಿದ್ದೇನೆ. ಈ ಸ್ಥಳಗಳು […]
ವಾಷಿಂಗ್ಟನ್: ದಿನದಿಂದ ದಿನಕ್ಕೆ ಅಮೆರಿಕದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಅಲ್ಲದೆ, ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರಿರುವುದು ಅಮೆರಿಕದಲ್ಲಿ. ಈ ಮಧ್ಯೆ ಅಗತ್ಯ ಸೇವೆಗಳೆಂದು ಪರಿಗಣಿಸಿ ಲಾಕ್ಡೌನ್ನಿಂದ ಬಂದ್ ಆಗಿರುವ ಚರ್ಚ್ಗಳನ್ನು ತೆರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ.
ದೊಡ್ಡಣ್ಣನ ಆಜ್ಞೆ.. ಚರ್ಚ್ಗಳನ್ನು ತೆರೆಯುವ ಕೆಲಸವನ್ನು ತಕ್ಷಣ ಗವರ್ನರ್ಗಳು ಮಾಡಬೇಕು. ನನ್ನ ಆದೇಶವನ್ನ ಉಲ್ಲಂಘಿಸುವ ಗವರ್ನರ್ಗಳನ್ನ ಅತಿಕ್ರಮಿಸಿಕೊಳ್ಳುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ದೇಗುಲಗಳು, ಚರ್ಚುಗಳು, ಮಸೀದಿಗಳನ್ನು ಅಗತ್ಯ ಸೇವೆಗಳನ್ನು ಒದಗಿಸುವ ಸ್ಥಳಗಳಾಗಿ ಗುರುತಿಸುತ್ತಿದ್ದೇನೆ. ಈ ಸ್ಥಳಗಳು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಬಗ್ಗೆ ಸಮುದಾಯಗಳಿಗೆ ಮಾಹಿತಿ ನೀಡುತ್ತವೆ ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ. ವಾರಂತ್ಯದಲ್ಲಿ ಚರ್ಚ್ಗಳನ್ನ ಕಡ್ಡಾಯವಾಗಿ ತೆರೆಯಲೇಬೇಕು. ಅಗತ್ಯ ಸೇವೆಗಳಲ್ಲಿ ಚರ್ಚ್ ಕೂಡ ಒಂದು ಅಂತಾ ಟ್ರಂಪ್ ಹೇಳಿದ್ದಾರೆ.
"Today, I am identifying houses of worship, churches, synagogues, and mosques as essential places that provide essential services." pic.twitter.com/PptCGYNAaa
— The White House (@WhiteHouse) May 22, 2020
Published On - 10:54 am, Sat, 23 May 20