PM Modi in Singapore: ಭಾರತದಲ್ಲಿ ಹೂಡಿಕೆ ಮಾಡಲು ಸಿಂಗಾಪುರದ ಸಿಇಒಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

|

Updated on: Sep 05, 2024 | 4:32 PM

ಇಂದು ಸಿಂಗಾಪುರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಪ್ರಮುಖ ಕಂಪನಿಗಳ ಸಿಇಓಗಳ ಪೈಕಿ ಬ್ಲಾಕ್‌ಸ್ಟೋನ್ ಸಿಂಗಾಪುರ್, ಟೆಮಾಸೆಕ್ ಹೋಲ್ಡಿಂಗ್ಸ್, ಸೆಂಬ್‌ಕಾರ್ಪ್ ಇಂಡಸ್ಟ್ರೀಸ್ ಲಿಮಿಟೆಡ್, ಕ್ಯಾಪಿಟಾಲ್ಯಾಂಡ್ ಇನ್ವೆಸ್ಟ್‌ಮೆಂಟ್, ಎಸ್‌ಟಿ ಟೆಲಿಮೀಡಿಯಾ ಗ್ಲೋಬಲ್ ಡಾಟಾ ಸೆಂಟರ್‌ಗಳು, ಸಿಂಗಾಪುರ್ ಏರ್‌ವೇಸ್‌ನ ಸಿಇಒಗಳು ಕೂಡ ಇದ್ದರು.

PM Modi in Singapore: ಭಾರತದಲ್ಲಿ ಹೂಡಿಕೆ ಮಾಡಲು ಸಿಂಗಾಪುರದ ಸಿಇಒಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ
ಸಿಂಗಾಪುರದ ಕಂಪನಿಗಳ ಸಿಇಓಗಳ ಜೊತೆ ಮೋದಿ ಮಾತುಕತೆ
Follow us on

ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಿಂಗಾಪುರದಲ್ಲಿ ಉದ್ಯಮಿಗಳ ಜತೆ ದುಂಡು ಮೇಜಿನ ಸಭೆ ನಡೆಸಿದರು. ಇಂದು ಸಿಂಗಾಪುರದಲ್ಲಿ ಪಿಎಂ ಮೋದಿಯನ್ನು ಭೇಟಿ ಮಾಡಿದ ಪ್ರಮುಖ ಉದ್ಯಮ ನಾಯಕರಾದ ಬ್ಲಾಕ್‌ಸ್ಟೋನ್ ಸಿಂಗಾಪುರ್, ಟೆಮಾಸೆಕ್ ಹೋಲ್ಡಿಂಗ್ಸ್, ಸೆಂಬ್‌ಕಾರ್ಪ್ ಇಂಡಸ್ಟ್ರೀಸ್ ಲಿಮಿಟೆಡ್, ಕ್ಯಾಪಿಟಾಲ್ಯಾಂಡ್ ಇನ್ವೆಸ್ಟ್‌ಮೆಂಟ್, ಎಸ್‌ಟಿ ಟೆಲಿಮೀಡಿಯಾ ಗ್ಲೋಬಲ್ ಡಾಟಾ ಸೆಂಟರ್‌ಗಳು ಮತ್ತು ಸಿಂಗಾಪುರ್ ಏರ್‌ವೇಸ್‌ನ ಸಿಇಒಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ.

“ಸಿಂಗಾಪೂರ್‌ನಲ್ಲಿ ಉನ್ನತ ವ್ಯಾಪಾರ ನಾಯಕರು ಮತ್ತು ಸಿಇಒಗಳೊಂದಿಗೆ ಸಂವಾದ ನಡೆಸಿದ್ದೇವೆ. ನಾವು ಆರ್ಥಿಕ ಸಂಬಂಧಗಳನ್ನು ಗಾಢವಾಗಿಸುವ ಮಾರ್ಗಗಳ ಕುರಿತು ಮಾತನಾಡಿದ್ದೇವೆ. ನಾನು ಭಾರತದಲ್ಲಿ ನಡೆಯುತ್ತಿರುವ ಸುಧಾರಣೆಗಳನ್ನು ಎತ್ತಿ ತೋರಿಸಿದೆ. ಇದು ಹೂಡಿಕೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುತ್ತದೆ” ಎಂದು ಉನ್ನತ ಮಟ್ಟದ ಸಭೆಯನ್ನು ಮುಕ್ತಾಯಗೊಳಿಸಿದ ನಂತರ ಪ್ರಧಾನ ಮಂತ್ರಿ ಮೋದಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: PM Modi in Singapore: ಸಿಂಗಾಪುರದಲ್ಲಿ ಪ್ರಧಾನಿ ಮೋದಿಯವರನ್ನು ನೋಡಲು ಮುಗಿಬಿದ್ದ ಭಾರತೀಯರು

ಇದಕ್ಕೂ ಮುನ್ನ ಸಿಂಗಾಪುರದಲ್ಲಿ ಸಿಂಗಾಪುರ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಭಾರತ-ಸಿಂಗಾಪುರ ಸಹಕಾರವನ್ನು ವಿಸ್ತರಿಸುವ ಮತ್ತು ಆಳಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ಸಿಂಗಾಪುರದ ಹಿರಿಯ ಸಚಿವ ಲೀ ಸೀನ್ ಲೂಂಗ್ ಅವರು ಆಯೋಜಿಸಿದ್ದ ಭೋಜನಕೂಟದಲ್ಲಿ ಮೋದಿ ಭಾಗವಹಿಸಿದ್ದರು.


ಇಂದು ಸಿಂಗಾಪುರದ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಮತ್ತು ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಭೇಟಿಯಾದರು. ಇಬ್ಬರೂ ನಾಯಕರು ತಮ್ಮ ನಿಯೋಗಗಳೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Thu, 5 September 24