PM Modi in Singapore: ಸಿಂಗಾಪುರದಲ್ಲಿ ಪ್ರಧಾನಿ ಮೋದಿಯವರನ್ನು ನೋಡಲು ಮುಗಿಬಿದ್ದ ಭಾರತೀಯರು
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಿಂಗಾಪುರಕ್ಕೆ ಆಗಮಿಸಿದ್ದು, ಬೆಳಗ್ಗೆ ಹೊಟೇಲ್‌ಗೆ ಆಗಮಿಸಿದ ಅವರಿಗೆ ಭಾರತೀಯ ವಲಸಿಗರು ಆತ್ಮೀಯ ಸ್ವಾಗತ ಸಿಕ್ಕಿತು. ಅವರನ್ನು ಸಿಂಗಾಪುರ ದೇಶಕ್ಕೆ ಸ್ವಾಗತಿಸಲು ಭಾರತೀಯ ವಲಸಿಗರು ಸಾಂಪ್ರದಾಯಿಕ ಉಡುಗೆ ತೊಟ್ಟು ನಿಂತಿದ್ದರು.
ಬ್ರೂನೆಯಿಂದ ಚಾಂಗೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸಿಂಗಾಪುರದ ಭಾರತೀಯ ಹೈಕಮಿಷನರ್ ಶಿಲ್ಪಕ್ ಆಂಬುಲೆ ಮತ್ತು ಭಾರತದಲ್ಲಿರುವ ಸಿಂಗಾಪುರದ ಹೈಕಮಿಷನರ್ ಸೈಮನ್ ವಾಂಗ್ ಇತರ ಅಧಿಕಾರಿಗಳು ಸ್ವಾಗತಿಸಿದರು. ಬಳಿಕ, ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ವಲಸಿಗರು ಸಾಂಪ್ರದಾಯಿಕ ಉಡುಗೆ ಧರಿಸಿ, ಸಾಂಪ್ರದಾಯಿಕ ನೃತ್ಯದ ಮೂಲಕ ಡೊಳ್ಳು ಕುಣಿತದೊಂದಿಗೆ ಮೋದಿಯವರನ್ನು ಸ್ವಾಗತಿಸಿದರು. ಬಳಿಕ ಅಲ್ಲಿನ ಭಾರತೀಯರಿಗೆ ಮೋದಿ ಆಟೋಗ್ರಾಫ್ ನೀಡಿದರು.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos