ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಪ್ರಧಾನಿ ಮೋದಿ ಸ್ವಾಗತ; ಟ್ರಂಪ್ ಶಾಂತಿ ಪ್ರಯತ್ನಕ್ಕೆ ಶ್ಲಾಘನೆ

ಬರೋಬ್ಬರಿ 2 ವರ್ಷಗಳ ನಂತರ 20 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಈ ಕದನವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು. ಈ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ ಹಾಗೂ ಟ್ರಂಪ್ ಅವರ ಶಾಂತಿ ಪ್ರಯತ್ನಗಳನ್ನು ಬೆಂಬಲಿಸಿದ್ದಾರೆ.

ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಪ್ರಧಾನಿ ಮೋದಿ ಸ್ವಾಗತ; ಟ್ರಂಪ್ ಶಾಂತಿ ಪ್ರಯತ್ನಕ್ಕೆ ಶ್ಲಾಘನೆ
Donald Trump- Modi

Updated on: Oct 13, 2025 | 7:45 PM

ನವದೆಹಲಿ, ಅಕ್ಟೋಬರ್ 13: ಗಾಜಾ ಕದನ ವಿರಾಮವನ್ನು ಪ್ರಧಾನಿ ಮೋದಿ (PM Modi) ಸ್ವಾಗತಿಸಿದ್ದಾರೆ. ಕದನವಿರಾಮಕ್ಕೆ ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರನ್ನು ಮೋದಿ ಶ್ಲಾಘಿಸಿದ್ದಾರೆ. ಇದನ್ನು ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ “ಅಚಲ” ಮತ್ತು “ಬಲವಾದ ಸಂಕಲ್ಪ” ಎಂದು ಬಣ್ಣಿಸಿದ್ದಾರೆ.

ಎಕ್ಸ್​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಇಸ್ರೇಲಿ ಒತ್ತೆಯಾಳುಗಳ ಸ್ವಾತಂತ್ರ್ಯವು ಅವರ ಕುಟುಂಬಗಳ ಧೈರ್ಯಕ್ಕೆ ನೀಡಿದ ಗೌರವವಾಗಿದೆ ಎಂದು ಹೇಳಿದ್ದಾರೆ. ಈ ಪ್ರದೇಶಕ್ಕೆ ಶಾಂತಿಯನ್ನು ತರುವ ಅಧ್ಯಕ್ಷ ಟ್ರಂಪ್ ಅವರ ಪ್ರಯತ್ನಗಳಿಗೆ ಮೋದಿ ಬೆಂಬಲ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯ; ಕದನವಿರಾಮದ ಬಳಿಕ ಇಸ್ರೇಲ್‌ನಲ್ಲಿ ಟ್ರಂಪ್

“ಎರಡು ವರ್ಷಗಳಿಗೂ ಹೆಚ್ಚು ಕಾಲ ಸೆರೆಯಲ್ಲಿದ್ದ ಎಲ್ಲಾ ಒತ್ತೆಯಾಳುಗಳ ಬಿಡುಗಡೆಯನ್ನು ನಾವು ಸ್ವಾಗತಿಸುತ್ತೇವೆ. ಒತ್ತೆಯಾಳುಗಳ ಸ್ವಾತಂತ್ರ್ಯವು ಅವರ ಕುಟುಂಬಗಳ ಧೈರ್ಯ, ಅಧ್ಯಕ್ಷ ಟ್ರಂಪ್ ಅವರ ಅಚಲ ಶಾಂತಿ ಪ್ರಯತ್ನಗಳು ಮತ್ತು ಪ್ರಧಾನಿ ನೆತನ್ಯಾಹು ಅವರ ಬಲವಾದ ಸಂಕಲ್ಪಕ್ಕೆ ಸಿಕ್ಕ ಗೌರವವಾಗಿದೆ. ಈ ಪ್ರದೇಶದಲ್ಲಿ ಶಾಂತಿಯನ್ನು ತರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಪ್ರಾಮಾಣಿಕ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ಲಾಘಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ