AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಕೆ ತಲುಪಿದ ಪ್ರಧಾನಿ ಮೋದಿ; ಕೋಪ್​ 26 ಶೃಂಗಸಭೆಯಲ್ಲಿ ಭಾಗಿ, ಬ್ರಿಟನ್​ ಪ್ರಧಾನಿಯೊಟ್ಟಿಗೆ ದ್ವಿಪಕ್ಷೀಯ ಮಾತುಕತೆ

COP 26 Summit: ಈ ಹಿಂದೆ ಬೋರಿಸ್​ ಜಾನ್ಸನ್​​ ಭಾರತಕ್ಕೆ ಬರುವವರಿದ್ದರು. ಆದರೆ ಕೊವಿಡ್​ 19 ಕಾರಣದಿಂದ ಭೇಟಿ ರದ್ದಾಗಿತ್ತು. ಇದೀಗ ನರೇಂದ್ರ ಮೋದಿಯವರೇ ಅಲ್ಲಿ ಹೋಗಿ ಬೋರಿಸ್​​ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಯುಕೆ ತಲುಪಿದ ಪ್ರಧಾನಿ ಮೋದಿ; ಕೋಪ್​ 26 ಶೃಂಗಸಭೆಯಲ್ಲಿ ಭಾಗಿ, ಬ್ರಿಟನ್​ ಪ್ರಧಾನಿಯೊಟ್ಟಿಗೆ ದ್ವಿಪಕ್ಷೀಯ ಮಾತುಕತೆ
ಯುಕೆ ತಲುಪಿದ ಪ್ರಧಾನಿ ಮೋದಿ
TV9 Web
| Edited By: |

Updated on:Nov 01, 2021 | 9:56 AM

Share

ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ರೋಮ್​ ಪ್ರವಾಸ ಮುಗಿಸಿ ಇದೀಗ ಯುಕೆ (ಇಂಗ್ಲೆಂಡ್​)ಗೆ ತೆರಳಿದ್ದಾರೆ. ನಿನ್ನೆ ಭಾನುವಾರ ಜಿ20 ಶೃಂಗಸಭೆಯ 2ನೇ ಸೆಷನ್​​ನಲ್ಲಿ ಪಾಲ್ಗೊಂಡ ಬಳಿಕ ಅವರು ಯುಕೆಯ ಸ್ಕಾಟ್ಲೆಂಡ್​​ನಲ್ಲಿರುವ ಗ್ಲಾಸ್ಗೋಗೆ ಹೋಗಿದ್ದಾರೆ. ಅವರಿಂದು ವಿಶ್ವಸಂಸ್ಥೆಯ 2021ನೇ ಸಾಲಿನ  ಹವಾಮಾನ ಬದಲಾವಣೆ ಸಮ್ಮೇಳನ ಅಥವಾ ಕೋಪ್​ 26 ಶೃಂಗಸಭೆ (COP26 Summit)ಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಯುಕೆ ಪ್ರಧಾನಮಂತ್ರಿ ಬೋರಿಸ್​ ಜಾನ್ಸನ್​​ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.  

ಇಂದು ಮುಂಜಾನೆ 4 ಗಂಟೆ ಹೊತ್ತಿಗೆ ಟ್ವೀಟ್​ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೀಗ ಗ್ಲಾಸ್ಗೋಗೆ ಬಂದಿಳಿದಿದ್ದೇನೆ. ಹವಾಮಾನ ಬದಲಾವಣೆ ನಿಯಂತ್ರಣ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಭಾರತ ನಡೆಸುತ್ತಿರುವ ಪ್ರಯತ್ನಗಳನ್ನು ವಿಶ್ವದ ಇತರ ನಾಯಕರ ಎದುರು ವ್ಯಕ್ತಪಡಿಸಲು ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾಗೇ ಒಂದೆರಡು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.

ಈ ಹಿಂದೆ ಬೋರಿಸ್​ ಜಾನ್ಸನ್​​ ಭಾರತಕ್ಕೆ ಬರುವವರಿದ್ದರು. ಆದರೆ ಕೊವಿಡ್​ 19 ಕಾರಣದಿಂದ ಭೇಟಿ ರದ್ದಾಗಿತ್ತು. ಇದೀಗ ನರೇಂದ್ರ ಮೋದಿಯವರೇ ಅಲ್ಲಿ ಹೋಗಿ ಬೋರಿಸ್​​ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅವರು ಗ್ಲಾಸ್ಗೋ ಬಂದು ಇಳಿಯುತ್ತಿದ್ದಂತೆ ಅಲ್ಲಿರುವ ಭಾರತೀಯ ಮೂಲದವರು ದೊಡ್ಡದಾಗಿ ಭಾರತ್​ ಮಾತಾ ಕಿ ಜೈ ಎಂದು ಘೋಷಣೆ ಕೂಗಿ, ಸ್ವಾಗತಿಸಿದ್ದಾರೆ. ಇನ್ನು ಪ್ರಧಾನಿ ಮೋದಿ ಇಂದು ಮೊದಲು ಸ್ಕಾಟ್​ಲೆಂಡ್​ ಸಮುದಾಯದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ನಡೆಯಲಿರುವ ವಿಶ್ವಸಂಸ್ಥೆ ಹವಾಮಾನ ಬದಲಾವಣೆ 26ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಶೃಂಗಸಭೆಯ ಸಮಗ್ರ ಅಧಿವೇಶನದಲ್ಲಿ ಮಾತನಾಡಲಿದ್ದಾರೆ.

ಈ ಕೋಪ್​ 26 ಶೃಂಗಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಕೆಲ್ವಿಂಗ್ರೋವ್ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂಗೆ ಭೇಟಿ ಕೊಡುವರು.  ವೇಳೆ ಸರ್ಕಾರದ ವಿವಿಧ ವಿಭಾಗದ 120 ಮುಖ್ಯಸ್ಥರು ಇರುವರು. ಇದರಲ್ಲಿ ಪ್ರಿನ್ಸ್​ ಚಾರ್ಲ್ಸ್​ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಕೂಡ ಭಾಗವಹಿಸುವ ನಿರೀಕ್ಷೆಯಿದೆ.  ಮಂಗಳವಾರ ಪ್ರಧಾನಿ ಮೋದಿಯವರ ಯುಕೆ ಭೇಟಿಯ ಕೊನೇ ದಿನವಾಗಿದ್ದು, ಅಂದು ಸ್ವಿಟ್ಜರ್ಲ್ಯಾಂಡ್​, ಫಿನ್ಲ್ಯಾಂಡ್​, ಇಸ್ರೇಲ್​, ನೇಪಾಳ, ಮಲಾವಿ, ಉಕ್ರೇನ್​, ಜಪಾನ್​ ಮತ್ತು ಅರ್ಜಿಂಟೀನಾ ದೇಶಗಳೊಂದಿಗೆ ಸರಣಿ ದ್ವಿಪಕ್ಷೀಯ ಸಭೆ ನಡೆಸುವರು. ಅದಾದ ಬಳಿಕ ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ರೊಂದಿಗೆ ಕೂಡ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: ಕನ್ನಡ ಕಸ್ತೂರಿ ರಾಜ್ಯೋತ್ಸವದಂದೇ ಗಾಯಕಿ, ಅಚ್ಚ ಕನ್ನಡತಿ ಕಸ್ತೂರಿ ಶಂಕರ್ ಹುಟ್ಟುಹಬ್ಬ!

Published On - 9:54 am, Mon, 1 November 21

Follow Us
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ