Kannada News World ತೊಳೆದು, ಪುನಃ ಬಳಸುತ್ತಿದ್ದ ಲಕ್ಷಾಂತರ ಕಾಂಡೋಮ್ ವಶ ಪಡಿಸಿಕೊಂಡ ಪೊಲೀಸರು!
ತೊಳೆದು, ಪುನಃ ಬಳಸುತ್ತಿದ್ದ ಲಕ್ಷಾಂತರ ಕಾಂಡೋಮ್ ವಶ ಪಡಿಸಿಕೊಂಡ ಪೊಲೀಸರು!
ಬಳಸಿ ತೊರೆದಿದ್ದ ಕಾಂಡೋಮ್ಗಳನ್ನ ಸಂಗ್ರಹಿಸಿ, ಅವುಗಳನ್ನು ತೊಳೆದು ಪುನಃ ಮಾರಾಟ ಮಾಡಲು ಕೂಡಿಟ್ಟಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಆಗ್ನೇಯ ಏಷ್ಯಾದ ವಿಯೆಟ್ನಾಂನಲ್ಲಿ ಬೆಳಕಿಗೆ ಬಂದಿದೆ. ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 360 ಕೆ.ಜಿ ತೂಕದ (3,45,000 ಕಾಂಡೋಮ್ಗಳು) ಕಾಂಡೋಮ್ಗಳನ್ನ ಜಪ್ತಿ ಮಾಡಿದ್ದಾರೆ. ಜೊತೆಗೆ, ಗೋದಾಮಿನಲ್ಲಿದ್ದ ಓರ್ವ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಅಂದ ಹಾಗೆ, ಈ ಖರಾಬ್ ಐಡಿಯಾಗೆ ಇಳಿದಿದ್ದ ಕಿರಾತಕರು ಬಳಕೆಯಾಗಿ ಬಿಸಾಡಿದ್ದ ಕಾಂಡೋಮ್ಗಳನ್ನ ಸಂಗ್ರಹಿಸಿ ಅವುಗಳನ್ನು ಬಿಸಿನೀರಿನಲ್ಲಿ ಮೊದಲು ಶುದ್ಧ ಮಾಡುತ್ತಿದ್ದರಂತೆ. […]
Follow us on
ಬಳಸಿ ತೊರೆದಿದ್ದ ಕಾಂಡೋಮ್ಗಳನ್ನ ಸಂಗ್ರಹಿಸಿ, ಅವುಗಳನ್ನು ತೊಳೆದು ಪುನಃ ಮಾರಾಟ ಮಾಡಲು ಕೂಡಿಟ್ಟಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಆಗ್ನೇಯ ಏಷ್ಯಾದ ವಿಯೆಟ್ನಾಂನಲ್ಲಿ ಬೆಳಕಿಗೆ ಬಂದಿದೆ.
ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 360 ಕೆ.ಜಿ ತೂಕದ (3,45,000 ಕಾಂಡೋಮ್ಗಳು) ಕಾಂಡೋಮ್ಗಳನ್ನ ಜಪ್ತಿ ಮಾಡಿದ್ದಾರೆ. ಜೊತೆಗೆ, ಗೋದಾಮಿನಲ್ಲಿದ್ದ ಓರ್ವ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಅಂದ ಹಾಗೆ, ಈ ಖರಾಬ್ ಐಡಿಯಾಗೆ ಇಳಿದಿದ್ದ ಕಿರಾತಕರು ಬಳಕೆಯಾಗಿ ಬಿಸಾಡಿದ್ದ ಕಾಂಡೋಮ್ಗಳನ್ನ ಸಂಗ್ರಹಿಸಿ ಅವುಗಳನ್ನು ಬಿಸಿನೀರಿನಲ್ಲಿ ಮೊದಲು ಶುದ್ಧ ಮಾಡುತ್ತಿದ್ದರಂತೆ. ಬಳಿಕ ಕೋಲು ಒಂದನ್ನು ಬಳಸಿ ಕಾಂಡೋಮ್ ಅನ್ನು ಅದರ ಮೂಲಾಕಾರಕ್ಕೆ ತಂದು ಬಳಿಕ ಹೊಚ್ಚಹೊಸ ಪ್ಯಾಕೇಟ್ನಲ್ಲಿ ಹಾಕಿ ಮಾರಾಟಕ್ಕೆ ರವಾನಿಸುತ್ತಿದ್ದರಂತೆ..ಹುಷಾರು!