ನೂತನ ಅಧ್ಯಕ್ಷನ ಬರಮಾಡಿಕೊಳ್ಳಲು ಅಮೆರಿಕ ಸಿದ್ಧ; ಕೊರೊನಾ ಕಾರಣಕ್ಕೆ ಸಮಾರಂಭ ಸರಳ.. ಬೈಡನ್​ ಭಾಷಣದ ವಿಷಯವೇನು?

| Updated By: ಸಾಧು ಶ್ರೀನಾಥ್​

Updated on: Jan 20, 2021 | 1:39 PM

ಅಮೆರಿಕದಲ್ಲಿ ಇಂದಿನಿಂದ ಜೋ ಬೈಡನ್​ ಆಡಳಿತ ಶುರುವಾಗಲಿದೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗೇ ಕಮಲಾ ಹ್ಯಾರಿಸ್​ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಮ್ಮ ಉತ್ತರಾಧಿಕಾರಿ ಬೈಡನ್​ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸುವುದಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಹೀಗೆ ನಿರ್ಗಮಿತ ಅಧ್ಯಕ್ಷ ತನ್ನ ನಂತರ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳದೆ ಇರುವುದು 100 ವರ್ಷದಲ್ಲಿ ಇದೇ ಮೊದಲು. ಇನ್ನು ನೂತನ ಅಧ್ಯಕ್ಷರ […]

ನೂತನ ಅಧ್ಯಕ್ಷನ ಬರಮಾಡಿಕೊಳ್ಳಲು ಅಮೆರಿಕ ಸಿದ್ಧ; ಕೊರೊನಾ ಕಾರಣಕ್ಕೆ ಸಮಾರಂಭ ಸರಳ.. ಬೈಡನ್​ ಭಾಷಣದ ವಿಷಯವೇನು?
ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್​
Follow us on

ಅಮೆರಿಕದಲ್ಲಿ ಇಂದಿನಿಂದ ಜೋ ಬೈಡನ್​ ಆಡಳಿತ ಶುರುವಾಗಲಿದೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗೇ ಕಮಲಾ ಹ್ಯಾರಿಸ್​ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಮ್ಮ ಉತ್ತರಾಧಿಕಾರಿ ಬೈಡನ್​ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸುವುದಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಹೀಗೆ ನಿರ್ಗಮಿತ ಅಧ್ಯಕ್ಷ ತನ್ನ ನಂತರ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳದೆ ಇರುವುದು 100 ವರ್ಷದಲ್ಲಿ ಇದೇ ಮೊದಲು.

ಇನ್ನು ನೂತನ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಕೊವಿಡ್​-19ನಿಂದ ಮೃತಪಟ್ಟವರಿಗೆ ಜೋ ಬೈಡನ್​ ಶ್ರದ್ಧಾಂಜಲಿ ಸಲ್ಲಿಸಿದರು.

ಕೊರೊನಾ ಕಾರಣದಿಂದ ಸರಳ ಸಮಾರಂಭ
ಅಮೆರಿಕ ಕಾಲಮಾನದ ಪ್ರಕಾರ ಮಧ್ಯಾಹ್ನ 11ಗಂಟೆಯಿಂದ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಪದಗ್ರಹಣ ಸಮಾರಂಭ ಪ್ರಾರಂಭವಾಗಲಿದೆ. ಅದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10ಗಂಟೆಯಿಂದ ಶುರುವಾಗುತ್ತದೆ. ಕೊರೊನಾ ಕಾರಣದಿಂದ ಈ ಬಾರಿ ಸಾಂಪ್ರದಾಯಿಕವಾಗಿ, ಸರಳವಾಗಿ ಕಾರ್ಯಕ್ರಮ ನಡೆಯಲಿದೆ.

ಸಾಮಾನ್ಯವಾಗಿ ಅಧ್ಯಕ್ಷರ ಪ್ರಮಾಣವಚನದ ದಿನ ಹಲವು ಗಣ್ಯರು ಒಟ್ಟಾಗುತ್ತಾರೆ. ಈ ಕೂಟವನ್ನು ಅಧ್ಯಕ್ಷೀಯ ಉದ್ಘಾಟನಾ ಸಮಿತಿ ಆಯೋಜಿಸುತ್ತದೆ. ಇದರಲ್ಲಿ ಭಾಗವಹಿಸುವವರು ಮೊದಲೇ ಟಿಕೆಟ್​ ಪಡೆದುಕೊಳ್ಳಬೇಕು. ಈ ಸಮಾರಂಭ ಭರ್ಜರಿಯಾಗಿ ನಡೆಯುತ್ತದೆ. ಆದರೆ ಕೊರೊನಾ ಕಾರಣದಿಂದ ಈ ಬಾರಿ ಸಮಾರಂಭ ನಡೆಯುತ್ತಿಲ್ಲ. ಅದರ ಬದಲಿಗೆ ಜೋ ಬೈಡನ್​ ಮತ್ತು ಕಮಲಾ ಹ್ಯಾರಿಸ್​ ಇಂದು 90 ನಿಮಿಷಗಳ ಸೆಲೆಬ್ರೇಟಿಂಗ್ ಅಮೆರಿಕಾ ಎಂಬ ಟಿವಿ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ.

ಯಾರೆಲ್ಲ ಪಾಲ್ಗೊಳ್ಳುತ್ತಾರೆ?
ನೂತನ ಅಧ್ಯಕ್ಷ ಜೋ ಬೈಡನ್​ ಪದಗ್ರಹಣ ಸಮಾರಂಭದಲ್ಲಿ ಅಮೆರಿಕ ಕಾಂಗ್ರೆಸ್(ಯುಎಸ್​ನ ಸಂಯುಕ್ತ ಸರ್ಕಾರದ ದ್ವಿಪಕ್ಷೀಯ ಶಾಸಕಾಂಗ. ಇದು ಹೌಸ್ ಆಫ್​ ರಿಪ್ರೆಸೆಂಟೇಟಿವ್ಸ್​ ಮತ್ತು ಸೆನೆಟ್​ನ್ನು ಒಳಗೊಂಡಿರುತ್ತದೆ) ​ನ ಬಹುತೇಕ ಸದಸ್ಯರು ಭಾಗವಹಿಸುತ್ತಾರೆ. ಡೆಮಾಕ್ರಟಿಕ್​ ಪಕ್ಷದ ಮಾಜಿ ಅಧ್ಯಕ್ಷರಾದ ಬರಾಕ್​ ಒಬಾಮಾ, ಜಾರ್ಜ್​ ಡಬ್ಲ್ಯೂ ಬುಶ್​, ಬಿಲ್​ ಕ್ಲಿಂಟನ್​ ಪಾಲ್ಗೊಳ್ಳುತ್ತಾರೆ. ಹಾಗೇ, ಅಮೆರಿಕದ ಮಾಜಿ ಪ್ರಥಮ ಮಹಿಳೆಯರಾದ ಮೈಕೆಲ್ ಒಬಾಮಾ, ಲ್ಯೂರಾ ಬುಶ್​, ಹಿಲರಿ ಕ್ಲಿಂಟನ್​ ಕೂಡ ಹಾಜರಿರುತ್ತಾರೆ.

ಇನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಈಗಾಗಲೇ ಹಲವು ವಿವಾದಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈಗಲೂ ಅವರು ತಮ್ಮ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಹೀಗಾಗಿ ತಾನು ಜೋ ಬೈಡನ್ ಪದಗ್ರಹಣ ಸಮಾರಂಭಕ್ಕೆ ಬರೋದಿಲ್ಲ ಎಂದು ಹೇಳಿಬಿಟ್ಟಿದ್ದಾರೆ.

ಬೈಡನ್​ ಭಾಷಣದ ವಿಷಯವೇನು?
ಜೋ ಬೈಡನ್​ ಅವರು ಈ ಬಾರಿ ಅಮೆರಿಕಾ ಯುನೈಟೆಡ್ ಪರಿಕಲ್ಪನೆಯನ್ನೇ ಮುಂದಾಗಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸಿದ್ದರು. ಹೀಗಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಂದು ರಾತ್ರಿ ಕೂಡ ಇದೇ ವಿಷಯದ ಬಗ್ಗೆಯೇ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.

3.15ಕ್ಕೆ ವರ್ಚ್ಯುವಲ್​ ಪರೇಡ್​
ಪದಗ್ರಹಣ ಸಮಾರಂಭ ಬಳಿಕ ಜೋ ಬೈಡನ್​ ಮತ್ತು ಅವರ ಪತ್ನಿ ಜಿಲ್​ ಬೈಡನ್​, ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಡೌಗ್​ ಎಮ್ಹಾಫ್​ ಶ್ವೇತಭವನ ಪ್ರವೇಶಿಸಲಿದ್ದಾರೆ. ಆಗಲೇ ಅವರು ಅಧ್ಯಕ್ಷೀಯ ಬೆಂಗಾವಲು ಪಡೆಯಲಿದ್ದಾರೆ. ಈ ಎಸ್ಕಾರ್ಟ್​ನಲ್ಲಿ ಅಮೆರಿಕ ಸೇನೆಯ ಪ್ರತಿ ಶಾಖೆಯ ಪ್ರತಿನಿಧಿಗಳೂ ಇರಲಿದ್ದಾರೆ. ಹಾಗೇ ಅಲ್ಲಿನ ಕಾಲಮಾನದ ಪ್ರಕಾರ ಮಧ್ಯಾಹ್ನ 3.15ಕ್ಕೆ ವರ್ಚ್ಯುವಲ್​ ಪರೇಡ್​ ಶುರುವಾಗಲಿದೆ. ಅಮೆರಿಕದ ಎಲ್ಲ 56 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ ಪರೇಡ್​ಗಳನ್ನೂ ಇಲ್ಲಿ ವೀಕ್ಷಿಸಬಹುದು.

ಅಮೆರಿಕದ 46ನೇ ಅಧ್ಯಕ್ಷರಾಗಿ ಇಂದು ಜೋ ಬೈಡನ್ ಪ್ರಮಾಣ.. ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪದಗ್ರಹಣ