ಭಾರತದ ವಿಚಾರದಲ್ಲಿ ಮಾಲ್ಡೀವ್ಸ್ ಮೃದು ಧೋರಣೆಯನ್ನು ತೋರುತ್ತಿದೆ. ಯಾಕೆಂದರೆ ಈ ಹಿಂದೆ ಮಾಲ್ಡೀವ್ಸ್ ಭಾರತದ ವಿರೋಧ ಮಾತನಾಡಿ ಆರ್ಥಿಕವಾಗಿ ಕೈಸುಟ್ಟುಕೊಂಡಿತ್ತು. ಭಾರತದ ಶಕ್ತಿ ಏನು ಎಂಬ ಬಗ್ಗೆ ಈಗ ಮಾಲ್ಡೀವ್ಸ್ ಅರ್ಥವಾಗಿದೆ. ಅದಕ್ಕಾಗಿ ಭಾರತದ ಜತೆಗೆ ಮೊದಲಿನ ಸಂಬಂಧವನ್ನು ಬೆಳೆಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಿ. ಇದೀಗ ಭಾರತದ ಜತೆಗೆ ಆರ್ಥಿಕವಾಗಿ ಒಪ್ಪಂದ ಮಾಡಿಕೊಂಡಿದೆ. ಅದಕ್ಕಾಗಿ ಮಾಲ್ಡೀವ್ಸ್ ಅಧ್ಯಕ್ಷರು ಭಾರತಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ತಮ್ಮ ಸಾಲ ಮರುಪಾವತಿಯನ್ನು ಸರಾಗಗೊಳಿಸುವಲ್ಲಿ ದ್ವೀಪ ರಾಷ್ಟ್ರಕ್ಕೆ ಬೆಂಬಲ ನೀಡಿದಕ್ಕಾಗಿ ಭಾರತಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಭಾರತ ಮತ್ತು ಮಾಲ್ಡೀವ್ಸ್ ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮೊಹಮ್ಮದ್ ಮುಯಿಝು ಅವರು ಶುಕ್ರವಾರ (ಜು.26) ಮಾಲ್ಡೀವ್ಸ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಭಾರತಕ್ಕೆ ಧನ್ಯವಾಗಳನ್ನು ತಿಳಿಸಿದ್ದಾರೆ.
ಅವರ ಭಾಷಣದಲ್ಲಿ, ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದರು. ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ಪ್ರಕಾರ ಇದು ಎಂಟು ತಿಂಗಳ ‘ರಾಜತಾಂತ್ರಿಕ ಯಶಸ್ಸಿನ’ ಸಂಭ್ರಮ ಎಂದು ಹೇಳಿದ್ದಾರೆ. ಮಾಲ್ಡೀವ್ಸ್‌ನ ಸಾಲ ಮರುಪಾವತಿಯನ್ನು ಸರಾಗಗೊಳಿಸುವಲ್ಲಿ ಭಾರತ ಮತ್ತು ಚೀನಾ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಈ ಬೆಂಬಲ ನಮ್ಮ ದೇಶದ ಆರ್ಥಿಕ ಸಾರ್ವಭೌಮತ್ವಕ್ಕೆ ಅವಕಾಶ ನೀಡುತ್ತದೆ ಎಂದು ಹೇಳಿದರು.
ಯುಎಸ್ ಡಾಲರ್‌ಗಳ ಮೂಲಕ ಸ್ಥಳೀಯ ಕೊರತೆಯನ್ನು ನಿವಾರಿಸುವ ಅಗತ್ಯ ಇದೆ. ಮಾಲ್ಡೀವ್ಸ್ ಸರ್ಕಾರವು ನವದೆಹಲಿ ಮತ್ತು ಬೀಜಿಂಗ್ ಎರಡರೊಂದಿಗೂ ಕರೆನ್ಸಿ ವಿನಿಮಯ ಒಪ್ಪಂದಗಳನ್ನು ಮಾತುಕತೆ ನಡೆಸುತ್ತಿದೆ ಎಂದರು. ಈಗಾಗಲೇ ಮಾಲ್ಡೀವ್ಸ್ ಅಧ್ಯಕ್ಷರು ತಮ್ಮ ಆಡಳಿತವು ಯುನೈಟೆಡ್ ಕಿಂಗ್‌ಡಮ್‌ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ (ಎಫ್‌ಟಿಎ) ಮಾತುಕತೆ ನಡೆಸುತ್ತಿದೆ. ಭಾರತದೊಂದಿಗೆ ಇದೇ ರೀತಿಯ ಒಪ್ಪಂದವನ್ನು ಮಾಡಿಕೊಳ್ಳವ ಭರವಸೆ ಇದೆ ಎಂದು ಹೇಳಿದರು.
ಈ ಮೂಲಕ ಭಾರತ ಮತ್ತು ಮಾಲ್ಡೀವ್ಸ್ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಮೊಹಮ್ಮದ್ ಮುಯಿಝು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿವ ಸಮಾರಂಭದಲ್ಲಿ ಅಧ್ಯಕ್ಷ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಕೂಡ ಭಾಗವಹಿಸಿದರು. ಈ ಸಂಬಂಧದಲ್ಲಿ ಮುಯಿಝು ಅವರು ಭಾರಿ ಸಾಲಗಳ ಮರುಪಾವತಿಯಲ್ಲಿ ಸಾಲ ಪರಿಹಾರ ಕ್ರಮಗಳನ್ನು ಕೋರಿದರು. ಇದೀಗ ಭಾರತ ಅದಕ್ಕೆ ಅಸ್ತು ಎಂದು ಹೇಳಿದೆ ಎಂದರು.
ಇದನ್ನೂ ಓದಿ: ಬೆಂಗಳೂರಿಗರನ್ನು ಕರೆಯಲು ಬರುತ್ತಿರುವ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ
ಭಾರತದ ಜತೆಗೆ ಯಾವುದೇ ದ್ವೇಷ ಇಲ್ಲ, ಹಾಗೂ ಭಾರತವು ಮಾಲ್ಡೀವ್ಸ್‌ನ ಹತ್ತಿರದ ಮಿತ್ರ, ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ ಎಂದು ಹೇಳಿದರು. ಇನ್ನು ಇಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲೂ ರೋಡ್ ಶೋ ನಡೆಸುತ್ತಿರುವುದು ವಿಶೇಷ. ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಪ್ರಮುಖ ನಗರಗಳಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ