AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಯಾರ್ಕ್​ನ ರೋಚೆಸ್ಟರ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, ಓರ್ವ ಸಾವು, 6 ಮಂದಿಗೆ ಗಾಯ

ನ್ಯೂಯಾರ್ಕ್​ನ ರೋಚೆಸ್ಟರ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಓರ್ವ ಸಾವನ್ನಪ್ಪಿ, 6 ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಭಾನುವಾರ ಸಂಜೆ ರೋಚೆಸ್ಟರ್‌ನ ಮ್ಯಾಪಲ್‌ವುಡ್ ಪಾರ್ಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ನ್ಯೂಯಾರ್ಕ್​ನ ರೋಚೆಸ್ಟರ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, ಓರ್ವ ಸಾವು, 6 ಮಂದಿಗೆ ಗಾಯ
ಗುಂಡಿನ ದಾಳಿ
ನಯನಾ ರಾಜೀವ್
|

Updated on: Jul 29, 2024 | 8:26 AM

Share

ನ್ಯೂಯಾರ್ಕ್​ನ ರೋಚೆಸ್ಟರ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಓರ್ವ ಸಾವನ್ನಪ್ಪಿ, 6 ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಭಾನುವಾರ ಸಂಜೆ ರೋಚೆಸ್ಟರ್‌ನ ಮ್ಯಾಪಲ್‌ವುಡ್ ಪಾರ್ಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

20 ವರ್ಷದ ಯುವಕನಿಗೆ ಗುಂಡು ಹಾರಿಸಲಾಯಿತು, ಘಟನೆಯ ಸಮಯದಲ್ಲಿ ಇನ್ನೊಬ್ಬ ವ್ಯಕ್ತಿಗೆ ಮಾರಣಾಂತಿಕ ಗಾಯಗಳಾಗಿವೆ, ಇದು ಸಂಜೆ 6:20 ರ ಸುಮಾರಿಗೆ ಸಂಭವಿಸಿದೆ ಎಂದು ರೋಚೆಸ್ಟರ್ ಪೋಲೀಸ್ ತಿಳಿಸಿದ್ದಾರೆ.

ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾರ್ಕ್​ನಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರು ಚೆಲ್ಲಾಪಿಲ್ಲಿಯಾಗಿ ಓಡಲು ಶುರುಮಾಡಿದರು. ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತರ ಸಂಖ್ಯೆ ಅಥವಾ ಮೃತರದ ಬಗ್ಗೆ ಪೊಲೀಸರು ಇನ್ನೂ ವಿವರಗಳನ್ನು ಬಿಡುಗಡೆ ಮಾಡಿಲ್ಲ.

ಆ ಸಮಯದಲ್ಲಿ, ಎಷ್ಟು ಜನರು ಗುಂಡು ಹಾರಿಸುತ್ತಿದ್ದಾರೆಂದು ನಮಗೆ ತಿಳಿದಿರಲಿಲ್ಲ, ರೋಚೆಸ್ಟರ್ ಪೊಲೀಸ್ ಕ್ಯಾಪ್ಟನ್ ಗ್ರೆಗ್ ಬೆಲ್ಲೊ ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಪ್ರತ್ಯಕ್ಷದರ್ಶಿಗಳ ಜತೆ ಮಾತನಾಡಬೇಕಿದೆ ಎಂದರು.

ಮತ್ತಷ್ಟು ಓದಿ: ಅಲಿಗಢ ಮುಸ್ಲಿಂ ವಿವಿ ಕ್ಯಾಂಪಸ್​ ಒಳಗೆ ಇಬ್ಬರ ಮೇಲೆ ಗುಂಡಿನ ದಾಳಿ

ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ, ಘಟನೆಯ ಮಾಹಿತಿ ಅಥವಾ ವೀಡಿಯೊ ತುಣುಕನ್ನು ಹೊಂದಿರುವ ಯಾರಾದರೂ 911 ಅನ್ನು ಸಂಪರ್ಕಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ