ಇಂಗ್ಲೆಂಡ್: ಕೈದಿಯೊಬ್ಬನೊಂದಿಗೆ ದೈಹಿಕ ಸಂಬಂಧವಿಟ್ಟುಕೊಂಡು ಜೈಲಿಂದ ಅವನು ಪರಾರಿಯಾಗಲು ನೆರವಾದ ಜೈಲು ಅಧಿಕಾರಿಣಿಗೆ ಈಗ ಸೆರೆವಾಸ!

ಜೇನ್ ಆರ್ಚರ್ ಳನ್ನು 18-ತಿಂಗಳು ಜೈಲುವಾಸದ ಶಿಕ್ಷೆಗೊಳಪಡಿಸಿದ ಬಳಿಕ ನ್ಯಾಯಾಧೀಶ ಶಾನ್ ಸ್ಮಿತ್ ಕೆಸಿ ತಮ್ಮ ತೀರ್ಪಿನಲ್ಲಿ: ‘ಕೆಲ ವರ್ಷಗಳ ಹಿಂದೆ ಒಬ್ಬ ಜೈಲು ಅಧಿಕಾರಿಯ ಸಾಮರ್ಥ್ಯದಲ್ಲಿ ಕೆಲಸ ಮಾಡುವಾಗ ನೀವು ಕೊಲೆ ಮಾಡಿದ ಅಪರಾಧದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಸ್ಟೀಫನ್ ಆರ್ಚರ್ ಹೆಸರಿನ ಕೈದಿಯೊಬ್ಬನೊಂದಿಗೆ ದೈಹಿಕ ಸಂಪರ್ಕ ಬೆಳಸಿದಿರಿ,’ ಅಂತ ಹೇಳಿದ್ದಾರೆ.

ಇಂಗ್ಲೆಂಡ್: ಕೈದಿಯೊಬ್ಬನೊಂದಿಗೆ ದೈಹಿಕ ಸಂಬಂಧವಿಟ್ಟುಕೊಂಡು ಜೈಲಿಂದ ಅವನು ಪರಾರಿಯಾಗಲು ನೆರವಾದ ಜೈಲು ಅಧಿಕಾರಿಣಿಗೆ ಈಗ ಸೆರೆವಾಸ!
ಮಾಜಿ ಜೈಲು ಅಧಿಕಾರಿ ಜೇನ್ ಆರ್ಚರ್
Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 29, 2022 | 8:01 AM

ತನ್ನ ಸುಪರ್ದಿಯಲ್ಲಿದ್ದ ಮತ್ತು ಹತ್ಯೆ ನಡೆಸಿದ ಅಪರಾಧದಲ್ಲಿ ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬನೊಂದಿಗೆ ದೈಹಿಕ ಸಂಬಂಧ (physical relationship) ಬೆಳೆಸಿ ಬಳಿಕ ಅವನಿಗೆ ಜೈಲಿನಿಂದ ಪರಾರಿಯಾಗಲು ಸಹಾಯ ಮಾಡಿದ ಒಬ್ಬ ಮಾಜಿ ಜೈಲು ಅಧಿಕಾರಿಣಿಯನ್ನು ಇಂಗ್ಲೆಂಡ್ ನಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದೆ. ರೋದರ್ಹ್ಯಾಮ್ ಗೆ ಹತ್ತಿರದ ಮಾಲ್ಟ್ ಬಿ ನಿವಾಸಿ 48-ವರ್ಷ-ವಯಸ್ಸಿನ ಮಾಜಿ ಜೈಲು ಅಧಿಕಾರಿ ಜೇನ್ ಆರ್ಚರ್ (Jane Archer) ಜೈಲಿನಲ್ಲಿದ್ದ ಅವಳಷ್ಟೇ ವಯಸ್ಸಿನ ಸ್ಟೀಫನ್ ಆರ್ಚರ್ನೊಂದಿಗೆ (Stephen Archer) ಸಂಬಂಧ ಬೆಳೆಸಿ ಅಂತಿಮವಾಗಿ ಅವನಿಗೆ ಡರ್ಬಿಶೈರ್ ಜೈಲಿಂದ ಪರಾರಿಯಾಗಲು ನೆರವಾಗಿದ್ದಳು.

ಆರ್ಚರ್, ಜೈಲು ಹೊರಭಾಗದಿಂದ ಕೈದಿಯನ್ನು ಹೇಗೆ ಮನೆಗೆ ಕರೆತಂದೆ ಅನ್ನೋದನ್ನು ಡರ್ಬಿ ಕ್ರೌನ್ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿದ್ದಾಳೆ. ಅಲ್ಲಿಂದ ಈಚೆ ಬಂದ ಮೇಲೆ ಅವಳು ಕಾರನ್ನು ಫೊಕೆಸ್ಟೋನ್ ಮತ್ತು ಡೋವರ್ ಕಡೆ ಡ್ರೈವ್ ಮಾಡಿಕೊಂಡು ಹೋಗಿದ್ದು ಮತ್ತು ಅಲ್ಲೇ ಒಂದು ಅಜ್ಞಾತ ಸ್ಥಳದಲ್ಲಿ ಕೈದಿಯನ್ನು ಅಡಗಿಸಿಟ್ಟ ಬಗ್ಗೆಯೂ ಅವಳು ಕೋರ್ಟಿಗೆ ತಿಳಿಸಿದ್ದಾಳೆ.

ನಂತರ ಪೊಲೀಸರು ಆಕೆಗೆ ಅಜ್ಞಾತ ಸ್ಥಳದಿಂದ ಕೈದಿಯನ್ನು ಕರೆತರಲು ಹೇಳಿದ್ದಾರೆ. ಆದರೆ ಕೈದಿ ಬಳಿಗೆ ಹೋಗುವ ಬದಲು ಪತಿಯನ್ನು ಪಿಕಪ್ ಮಾಡಿ ಅವನೊಂದಿಗೆ ಪರಾರಿಯಾಗುವ ಪ್ರಯತ್ನವನ್ನು ಮಾಡಿದ್ದಾಳೆ. ಆದರೆ ಅವಳ ಮೇಲೆ ಒಂದು ಕಣ್ಣಿಟ್ಟಿದ್ದ ಪೊಲೀಸರು ಅವರಿಬ್ಬರನ್ನು ಮ್ಯಾಂಚೆಸ್ಟರ್ ನಲ್ಲಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆರ್ಚರ್ ಪತಿಯನ್ನೂ ಬಂಧನಕ್ಕೊಳಪಡಿಸಿದ್ದಾರೆ.

ಜೇನ್ ಆರ್ಚರ್ ಳನ್ನು 18-ತಿಂಗಳು ಜೈಲುವಾಸದ ಶಿಕ್ಷೆಗೊಳಪಡಿಸಿದ ಬಳಿಕ ನ್ಯಾಯಾಧೀಶ ಶಾನ್ ಸ್ಮಿತ್ ಕೆಸಿ ತಮ್ಮ ತೀರ್ಪಿನಲ್ಲಿ: ‘ಕೆಲ ವರ್ಷಗಳ ಹಿಂದೆ ಒಬ್ಬ ಜೈಲು ಅಧಿಕಾರಿಯ ಸಾಮರ್ಥ್ಯದಲ್ಲಿ ಕೆಲಸ ಮಾಡುವಾಗ ನೀವು ಕೊಲೆ ಮಾಡಿದ ಅಪರಾಧದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಸ್ಟೀಫನ್ ಆರ್ಚರ್ ಹೆಸರಿನ ಕೈದಿಯೊಬ್ಬನೊಂದಿಗೆ ದೈಹಿಕ ಸಂಪರ್ಕ ಬೆಳಸಿದಿರಿ,’ ಅಂತ ಹೇಳಿದ್ದಾರೆ.

ಅವರಿಬ್ಬರ ನಡುವೆ ಸುದೀರ್ಘ ಅವಧಿಯವರೆಗೆ ಸಂಬಂಧ ಮುಂದುವರಿದಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ‘ಜೇನ್ ಆರ್ಚರ್ ಮತ್ತು ಸ್ಟೀಫನ್ ಆರ್ಚರ್ ನಡುವಿನ ಸಂಬಂಧ ಬಹಳ ವರ್ಷಗಳವರೆಗೆ ಮುಂದುವರಿದಿದೆ, ಮೇ 2019ರಲ್ಲಿ ಜೇನ್ ಸುಡ್ಬರಿಯಿಂದ ಆಚೆ ಬಂದಿದ್ದಾರೆ. ನಂತರ ಅವರನ್ನು ಪಿಕಪ್ ಮಾಡಲು ನೀವು (ಜೇನ್ ಆರ್ಚರ್) ಯಾಕೆ ಬಂದಿದ್ದೆಂದು ಈಗ ವಿದಿತವಾಗಿದೆ.’

‘ಆಮೇಲೆ ಹಲವಾರು ದಿನಗಳವರೆಗೆ ಸ್ಟೀಪನ್ ಆರ್ಚರ್ ಕಣ್ಮರೆಯಾಗಿದ್ದರು ಮತ್ತು ಅದರಲ್ಲಿ ಮಿಸೆಸ್ ಆರ್ಚರ್ ಅವರಿಗೆ ನೆರವಾಗಿದ್ದರು. ಮಿಸೆಸ್ ಆರ್ಚರ್ ಕೋರ್ಟಿಗೆ ಒಂದು ಕಟ್ಟುಕತೆಯನ್ನು ಹೇಳಿದ್ದರು. ಜೈಲಿನಿಂದ ತಪ್ಪಿಸಿಕೊಳ್ಳಲು ಕೈದಿಯೊಬ್ಬನಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದು ಒಂದು ಗಂಭೀರ ಅಪರಾಧವಾಗಿದೆ,’ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಮಿಸೆಸ್ ಆರ್ಚರ್ ಅವರ ಕೃತ್ಯಗಳನ್ನು ಖಂಡಿಸಿದ ನ್ಯಾಯಾಧೀಶರು, ‘ ನಿಮ್ಮ ವಿಷಯದಲ್ಲಿ ಇದು ಮತ್ತಷ್ಟು ಗಂಭೀರ ಅಪರಾಧವಾಗಿದೆ. ಯಾಕೆಂದರೆ, ಜೈಲು ವ್ಯವಸ್ಥೆಯಲ್ಲಿ ನೀವು ಕೆಲಸ ಮಾಡಿರುವಿರಿ, ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಅಂತ ನಿಮಗೆ ಚೆನ್ನಾಗಿ ಗೊತ್ತಿದೆ. ಅವನು ಕೊಲೆ ಮಾಡಿದ್ದಕ್ಕೆ ಸೆರೆಮನೆಯಲ್ಲಿದ್ದ ಮತ್ತು ಇದರ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ,’ ಎಂದು ನ್ಯಾಯಧೀಶರು ಹೇಳಿದರು.

ಸರ್ಕಾರಿ ವಕೀಲ ಮಾರ್ಕ್ ಅಚರ್ಚ್, ‘1995ರಲ್ಲಿ ಸ್ಟೀಫನ್ ಆರ್ಚರ್ ಗೆ ಕೊಲೆ ಅಪರಾಧಲ್ಲಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಯಿತು. ಅವನು ಎಚ್ ಎಮ್ ಪಿ ರಾಂಬಿಯಲ್ಲಿದ್ದಾಗ ಅಲ್ಲಿನ ಜೈಲಿನ ಅಧಿಕಾರಿಯಾಗಿದ್ದ ಜೇನ್ ಆರ್ಚರ್ ಪರಿಚಯವಾಯಿತು,’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಜೇನ್ ಆರ್ಚರ್ ಮತ್ತು ಸ್ಟೀಫನ್ ಸುಮಾರು 14 ವರ್ಷ ದೈಹಿಕ ಸಂಬಂಧ ಇಟ್ಟುಕೊಂಡಿದ್ದರು ಎಂದು ವಕೀಲರು ಕೋರ್ಟ್​ಗೆ ಹೇಳಿದರು.

ಜೇನ್ ಆರ್ಚರ್ ತನ್ನ ತಪ್ಪನ್ನು ಅಂಗೀಕರಿಸಿದ್ದಾಳೆ.