ಚೀನಾ ಕಾಲ್ಕೆರೆತ ಆಗಾಗ ನಡೆಯುತ್ತಲೇ ಇರುತ್ತದೆ. ಆದ್ರೆ ಪ್ರತ್ಯುತ್ತರ ನೀಡಲು ಹಿಂದೆಮುಂದೆ ನೋಡದ ಭಾರತ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿರುತ್ತದೆ. ಎರಡು ವರ್ಷದ ಹಿಂದೆ ದೊಕ್ಲಾಮ್ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಿಸಿದ್ದ ಚೀನಾ ಕೊನೆಗೆ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿತ್ತು. ಈಗ, ಮೊದಲು ಕೊರೊನಾ ಛೂಬಿಟ್ಟ ಚೀನಾ ಅದರ ಮಧ್ಯೆಯೇ ಭಾರತದ ಗಡಿಯಲ್ಲಿ ತಂಟೆ ತೆಗೆದಿದೆ.
ಗಡಿಯಲ್ಲಿ ನಿಶ್ಚಿತವಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಕಳೆದ 28 ದಿನಗಳಿಂದ ಕಾಲು ಕೆರೆದುಕೊಂಡು ಯುದ್ಧೋನ್ಮಾದದಲ್ಲಿರುವ ಚೀನಾಕ್ಕೆ ಪ್ರತ್ಯುತ್ತರ ನೀಡಲು ಗಲ್ವಾನ್ ಕಣಿವೆಯಲ್ಲಿ ಲಡಾಕ್ನತ್ತ ಭಾರತ ಸಹ ಯುದ್ಧ ಸಾಮಾಗ್ರಿಗಳ ಜಮಾವಣೆಯಲ್ಲಿ ತೊಡಗಿದೆ ಎಂದು ಸೇನಾ ಮೂಲಗಳನ್ನು ಉಲ್ಲೇಖಿಸಿ, ವರದಿಗಳು ತಿಳಿಸಿವೆ.
ಈ ಮಧ್ಯೆ, ಗಲ್ವಾನ್ ಕಣಿವೆಯಲ್ಲಿ ಭಾರತ ಸೇನಾ ಚಟುವಟಿಕೆಗಳನ್ನು ಕೈಗೊಂಡಿರುವುದರಿಂದ ಟ್ಯಾಂಕ್ಗಳು, ಹೆಲಿಕಾಪ್ಟರ್ಗಳು, ಅತ್ಯಾಧುನಿಕ ಡ್ರೋನ್ಗಳನ್ನು ಚೀನಾ ಜಮಾವಣೆ ಮಾಡುತ್ತಿದೆ ಎಂದು ಚೀನಾ ಕಮ್ಯುನಿಸ್ಟ್ ಪಕ್ಷದ ಮುಖವಾಣಿಯಾದ ಗ್ಲೋಬಲ್ ಟೈಮ್ಸ್ ಹೇಳಿಕೊಂಡಿದೆ.
Published On - 3:08 pm, Tue, 2 June 20