Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಬಂಧನದ ತೂಗುಗತ್ತಿ

|

Updated on: Feb 17, 2023 | 7:57 AM

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಬಂಧನದ ತೂಗುಗತ್ತಿ ನೇತಾಡುತ್ತಿದೆ. ಚುನಾವಣಾ ಆಯೋಗದ ಹೊರಗೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಕಾರಣ ಬಂಧನ ಭೀತಿ ಎದುರಾಗಿದೆ.

Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಬಂಧನದ ತೂಗುಗತ್ತಿ
ಇಮ್ರಾನ್ ಖಾನ್ ನಿವಾಸದೆದುರು ಬೆಂಬಲಿಗರು
Follow us on

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಬಂಧನದ ತೂಗುಗತ್ತಿ ನೇತಾಡುತ್ತಿದೆ. ಚುನಾವಣಾ ಆಯೋಗದ ಹೊರಗೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಕಾರಣ ಬಂಧನ ಭೀತಿ ಎದುರಾಗಿದೆ. ಕಳೆದ ವರ್ಷ ನವೆಂಬರ್​ನಲ್ಲಿ ನಡೆದ ರ್ಯಾಲಿಯಲ್ಲಿ ವಜೀರಾಬಾದ್​ನಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ ಇಮ್ರಾನ್ ಖಾನ್, ವೈದ್ಯಕೀಯ ಕಾರಣಗಳಿಂದಾಗಿ ಜಾಮೀನು ಪಡೆದಿದ್ದರು.

ಇದೀಗ ತೀರ್ಪು ಪ್ರಕಟವಾಗಿದ್ದು, ಇಮ್ರಾನ್​ ಖಾನ್ ಬಂಧನಕ್ಕೆ ಒಳಗಾಗಬಹುದು ಎಂದು ವರದಿಗಳು ಹೇಳಿವೆ. ಪಾಕಿಸ್ತಾನದಲ್ಲಿ ರಾಜಕೀಯ ಕಲಹ ಹೆಚ್ಚುತ್ತಿದೆ. ಏತನ್ಮಧ್ಯೆ, ಲಾಹೋರ್ ಪೊಲೀಸರು ಭಾರೀ ಲವಲಷ್ಕರ್ ಜೊತೆಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮನೆಗೆ ತಲುಪಿದ್ದಾರೆ. ಮತ್ತೊಂದೆಡೆ, ಇಮ್ರಾನ್ ಖಾನ್ ಬೆಂಬಲಿಗರು ಜಮಾಯಿಸಿದ್ದಾರೆ.

ಲಾಹೋರ್​ನ ಜಮಾನ್ ಪಾರ್ಕ್​ಗೆ ಭಾರಿ ಪೊಲೀಸ್ ಪಡೆ ತಲುಪಿದೆ. ಹೀಗಿರುವಾಗ ಇಮ್ರಾನ್ ಖಾನ್​ಗೆ ಬಂಧನ ಭೀತಿ ಎದುರಾಗಿದೆ, ಇಮ್ರಾನ್ ಖಾನ್ ಬಂಧನದ ನಂತರ ಪಾಕಿಸ್ತಾನದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಓದಿ: Russia Ukraine War: ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದಂತೆ ಪಾಕಿಸ್ತಾನವೂ ತಟಸ್ಥವಾಗಿರಬೇಕಿತ್ತು: ಇಮ್ರಾನ್ ಖಾನ್

ಇಮ್ರಾನ್​ ಖಾನ್​ ಅವರನ್ನು ಲಾಹೋರ್ ಹೈಕೋರ್ಟ್​ಗೆ ಹಾಜರುಪಡಿಸದಿದ್ದರೆ ಬಂಧಿಸಲು ಪೊಲೀಸರು ಯೋಜಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಇಮ್ರಾನ್​ ಖಾನ್​ರನ್ನು ಯಾವಾಗ ಬೇಕಾದರೂ ಬಂಧಿಸಬಹುದು ಎಂದು ಬೆಂಬಲಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಇಮ್ರಾನ್ ಖಾನ್ ಚುನಾವಣಾ ಆಯೋಗದ ಹೊರಗೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಫೆ.20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಲಾಹೋರ್ ನ್ಯಾಯಾಲಯ ಹೇಳಿದೆ.