ಮಿಲಿಟರಿ ವಿಮಾನದಲ್ಲೇ ದರೋಡೆ! 39 ರೇಡಿಯೋ ಉಪಕರಣಗಳ ಕಳವು; ದರೋಡೆಕೋರರ​ ಶೂ-ಬೆರಳಚ್ಚು ಪತ್ತೆ

ಬಿಗಿ ಭದ್ರತೆಯ ನಡುವೆಯೂ ವಿಮಾನದ ಕಾರ್ಗೋ ದ್ವಾರವನ್ನು ತೆರೆದ ಕಳ್ಳರು ದರೋಡೆ ಮಾಡಿದ್ದು, ಅವರನ್ನು ಇನ್ನೂ ಹಿಡಿಯಲು ಸಾಧ್ಯವಾಗಿಲ್ಲ. ವಿಮಾನದೊಳಗೆ ದರೋಡೆಕೋರ್​ ಶೂ ಮತ್ತು ಬೆರಳಚ್ಚು ಪೊಲೀಸರಿಗೆ ಪತ್ತೆಯಾಗಿದೆ.

ಮಿಲಿಟರಿ ವಿಮಾನದಲ್ಲೇ ದರೋಡೆ! 39 ರೇಡಿಯೋ ಉಪಕರಣಗಳ ಕಳವು; ದರೋಡೆಕೋರರ​ ಶೂ-ಬೆರಳಚ್ಚು ಪತ್ತೆ
Ilyushin-80 ವಿಮಾನ
Lakshmi Hegde

|

Dec 09, 2020 | 1:28 PM

ರಷ್ಯಾದಲ್ಲಿ ಒಂದು ಬಹುದೊಡ್ಡ ಮಟ್ಟದ ವಿಮಾನ ದರೋಡೆ ನಡೆದಿದೆ. ಅದೂ ಸಕಲ ಭದ್ರತೆಯನ್ನೂಳಗೊಂಡ ಮಿಲಿಟರಿ ವಿಮಾನಕ್ಕೇ ಕನ್ನ ಹಾಕಿದ ದರೋಡೆಕೋರರು 39 ರೇಡಿಯೋ ಉಪಕರಣಗಳನ್ನು ದೋಚಿದ್ದಾರೆ.

ದಕ್ಷಿಣ ರಷ್ಯಾದ ವಾಯುನೆಲೆಯಲ್ಲಿ ಇದ್ದ ಇಲ್ಯುಷಿನ್-80 ಎಂಬ ಡೂಮ್ಸ್​ಡೇ ವಿಮಾನದಲ್ಲಿ ಈ ಕಳವಾಗಿದೆ. ಡೂಮ್ಸ್​ಡೇ ಜೆಟ್​ ಎಂದರೆ ಅಣುಯುದ್ಧ ಸೇರಿ ದೊಡ್ಡ ಮಟ್ಟದ ಸಂಘರ್ಷ ಅಥವಾ ಸೈನ್ಯ ಮತ್ತು ಸರ್ಕಾರಕ್ಕೆ ಇನ್ಯಾವುದೇ ರೀತಿಯ ವಿಪತ್ತು ಎದುರಾದ ಸಂದರ್ಭದಲ್ಲಿ ವಾಯುಗಾಮಿ ಕಮಾಂಡ್ ಪೋಸ್ಟ್ ಆಗಿ ಬಳಸುತ್ತಾರೆ.

ದರೋಡೆಕೋರರ​ ಶೂ-ಬೆರಳಚ್ಚು ಪತ್ತೆ ಅದರಲ್ಲೂ ನ್ಯೂಕ್ಲಿಯರ್​ ಯುದ್ಧದ ಸಂದರ್ಭದಲ್ಲಿ ಪ್ರಮುಖ ನಾಯಕರು, ಮಿಲಿಟರಿಯ ಉನ್ನತ ಅಧಿಕಾರಿಗಳನ್ನು ಪ್ರಾಣಾಪಾಯದಿಂದ ಕಾಪಾಡಲು ಈ ಜೆಟ್​ಗಳನ್ನು ಬಳಸಲಾಗುತ್ತದೆ. ಹಾಗೇ ಇಂಥ ಡೂಮ್ಸ್​ಡೇ ಪ್ಲೇನ್​ಗಳಿಗೆ ಬಿಗಿ ಭದ್ರತೆಯನ್ನೂ ಕಲ್ಪಿಸಲಾಗಿರುತ್ತದೆ. ಅಷ್ಟೆಲ್ಲ ಬಿಗಿ ಭದ್ರತೆಯ ನಡುವೆಯೂ ವಿಮಾನದ ಕಾರ್ಗೋ ದ್ವಾರವನ್ನು ತೆರೆದ ಕಳ್ಳರು ದರೋಡೆ ಮಾಡಿದ್ದು, ಅವರನ್ನು ಇನ್ನೂ ಹಿಡಿಯಲು ಸಾಧ್ಯವಾಗಿಲ್ಲ.

ವಿಮಾನದೊಳಗೆ ದರೋಡೆಕೋರರ​ ಶೂ ಮತ್ತು ಬೆರಳಚ್ಚು ಪೊಲೀಸರಿಗೆ ಪತ್ತೆಯಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ರಷ್ಯಾದಲ್ಲಿ ಇಲ್ಯುಷಿನ್​-80ಯ ಒಟ್ಟು 4 ವಿಮಾನಗಳಿವೆ. ಹಾಗೇ, ಇಲ್​-86 ( Il-86)ನ್ನು ಪರಮಾಣು ಯುದ್ಧದ ಸಂದರ್ಭದಲ್ಲಿ ಹಡಗಿನಲ್ಲಿ ಇದ್ದವರನ್ನು ರಕ್ಷಿಸಲು ಸಹಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

Covid 19 ಲಸಿಕೆ ಪಡೆದವರ ತುಟಿ ಓರೆಯಾಗಿದ್ದೇಕೆ? ಅಡ್ಡ ಪರಿಣಾಮದ ಬಗ್ಗೆ ತಜ್ಞರ ಸಮರ್ಥನೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada