ಫೋರ್ಬ್ಸ್ ಶಕ್ತಿಶಾಲಿ ಮಹಿಳಾ ಪಟ್ಟಿಯಲ್ಲಿ 41ನೇ ಸ್ಥಾನ ಪಡೆದ ನಿರ್ಮಲಾ ಸೀತಾರಾಮನ್!
17ನೇ ವಾರ್ಷಿಕ ಫೋರ್ಬ್ಸ್ ನಿಯತಕಾಲಿಕೆಯ ಶಕ್ತಿಶಾಲಿ ಪಟ್ಟಿಯಲ್ಲಿರುವ ಮಹಿಳೆಯರು 30 ದೇಶಗಳಿಂದ ಬಂದವರಾಗಿದ್ದು, ನಾಲ್ಕು ತಲೆಮಾರುಗಳ ಇತಿಹಾಸವನ್ನು ಹೊಂದಿದವರಾಗಿದ್ದಾರೆ. ಅವರಲ್ಲಿ 10 ರಾಷ್ಟ್ರದ ಮುಖ್ಯಸ್ಥರು, 38 ಸಿಇಒಗಳು ಮತ್ತು 5 ಜನರು ಮನರಂಜನಾ ಕ್ಷೇತ್ರದವರಾಗಿದ್ದಾರೆ.
ನ್ಯೂಯಾರ್ಕ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಮತ್ತು ಎಚ್ಸಿಎಲ್ ಎಂಟರ್ಪ್ರೈಸ್ ಸಿಇಒ ರೋಶ್ನಿ ನಾಡರ್ ಮಲ್ಹೋತ್ರಾ ಅವರನ್ನು ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಫೋರ್ಬ್ಸ್ ಸೇರಿಸಿದ್ದು, ಜರ್ಮನ್ ಛಾನ್ಸಲರ್ ಏಂಜೆಲಾ ಮಾರ್ಕೆಲ್ ಸತತ 10ನೇ ವರ್ಷವೂ ಕೂಡ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
17ನೇ ವಾರ್ಷಿಕ ಫೋರ್ಬ್ಸ್ ನಿಯತಕಾಲಿಕೆಯ ಶಕ್ತಿಶಾಲಿ ಪಟ್ಟಿಯಲ್ಲಿರುವ ಮಹಿಳೆಯರು 30 ದೇಶಗಳಿಗೆ ಸೇರಿದವರಾಗಿದ್ದು, ನಾಲ್ಕು ತಲೆಮಾರುಗಳ ಇತಿಹಾಸವನ್ನು ಹೊಂದಿದವರಾಗಿದ್ದಾರೆ. ಅವರಲ್ಲಿ 10 ರಾಷ್ಟ್ರದ ಮುಖ್ಯಸ್ಥರು, 38 ಸಿಇಒಗಳು ಮತ್ತು 5 ಜನರು ಮನರಂಜನಾ ಕ್ಷೇತ್ರದವರಾಗಿದ್ದಾರೆ. ಆದರೆ ಅವರ ವಯಸ್ಸು, ರಾಷ್ಟ್ರೀಯತೆ ಮತ್ತು ಉದ್ಯೋಗ ವಿವರಣೆ ಭಿನ್ನವಾಗಿದ್ದು, 2020ರ ವಿಶಿಷ್ಟ ಸವಾಲುಗಳನ್ನು ಎದುರಿಸುವಲ್ಲಿ ತಮ್ಮದೇ ಆದ ವೇದಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.
ನಿರ್ಮಲಾ ಸೀತಾರಾಮನ್ ಈ ಪಟ್ಟಿಯಲ್ಲಿ 41ನೇ ಸ್ಥಾನದಲ್ಲಿದ್ದು, ರೋಶ್ನಿ ನಾಡರ್ ಮಲ್ಹೋತ್ರಾ 55ನೇ ಸ್ಥಾನದಲ್ಲಿದ್ದಾರೆ, ಭಾರತದ ಅತ್ಯಂತ ಶ್ರೀಮಂತ, ಸ್ವಯಂ ಶಕ್ತಿಯಿಂದ ಮೇಲೇರಿದವರು ಎಂದು ವರ್ಣಿಸಲಾದ ಕಿರಣ್ ಮಜುಂದಾರ್ ಶಾ 68ನೇ ಸ್ಥಾನ ಮತ್ತು ಲ್ಯಾಂಡ್ ಮಾರ್ಕ್ ಗ್ರೂಪ್ನ ಅಧ್ಯಕ್ಷೆ ರೇಣುಕಾ ಜಗ್ತಿಯಾನಿ 98ನೇ ಸ್ಥಾನದಲ್ಲಿದ್ದಾರೆ.
ಆದರೆ ಏಂಜೆಲಾ ಮಾರ್ಕೆಲ್ ಸತತ 10ನೇ ವರ್ಷವೂ ಕೂಡ ಮೊದಲ ಸ್ಥಾನದಲ್ಲಿದ್ದಾರೆ ಮತ್ತು ಅಮೆರಿಕಾದ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್ ಫೋರ್ಬ್ಸ್ 3ನೇ ಸ್ಥಾನದಲ್ಲಿರುವುದು ಎಲ್ಲರ ಗಮನ ಸೆಳೆದಿದ್ದಾರೆ.
ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ 17 ಮಂದಿ ಹೊಸಬರು ಇದ್ದು, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಮತ್ತು ಜಾಗತಿಕವಾಗಿ ಸಮಾಜವನ್ನು ಮುನ್ನೆಡೆಸುವಲ್ಲಿಈ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ.
Nirmala Sitharaman Economic package ಆನ್ಲೈನ್ ಶಿಕ್ಷಣಕ್ಕೆ ಹೆಚ್ಚಿನ ಕ್ರಮ