ಭಯೋತ್ಪಾದನೆ ಬಗ್ಗೆ ಚೀನಾ-ಪಾಕ್ ಮೃದು ಧೋರಣೆ, ಎಸ್​ಸಿಒ ಸಭೆಯಲ್ಲಿ ಸಹಿ ಹಾಕಲು ನಿರಾಕರಿಸಿದ ರಾಜನಾಥ್ ಸಿಂಗ್

SCO Meet: ಭಯೋತ್ಪಾದನೆ ಕುರಿತು ಚೀನಾ ಹಾಗೂ ಪಾಕಿಸ್ತಾನ ಮೃದು ಧೋರಣೆ ಅನುಸರಿಸುತ್ತಿರುವ ಕಾರಣ, ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಸಹಿ ಹಾಕಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಯೋತ್ಪಾದನೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಭಾರತದ ನಿಲುವನ್ನು ದುರ್ಬಲಗೊಳಿಸುವ ಶಾಂಘೈ ಸಹಕಾರ ಸಂಸ್ಥೆ (SCO) ದಾಖಲೆಗೆ ಸಹಿ ಹಾಕಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರಾಕರಿಸಿದರು ಎಂದು ಮೂಲಗಳು ತಿಳಿಸಿವೆ. ಈ ಶೃಂಗಸಭೆಯು ಚೀನಾ, ರಷ್ಯಾ, ಪಾಕಿಸ್ತಾನ ಮತ್ತು ಭಾರತ ಸೇರಿದಂತೆ ಹತ್ತು ಸದಸ್ಯ ರಾಷ್ಟ್ರಗಳ ರಕ್ಷಣಾ ನಾಯಕರನ್ನು ಒಟ್ಟುಗೂಡಿಸಿತ್ತು.

ಭಯೋತ್ಪಾದನೆ ಬಗ್ಗೆ ಚೀನಾ-ಪಾಕ್ ಮೃದು ಧೋರಣೆ, ಎಸ್​ಸಿಒ ಸಭೆಯಲ್ಲಿ ಸಹಿ ಹಾಕಲು ನಿರಾಕರಿಸಿದ ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

Updated on: Jun 26, 2025 | 11:10 AM

ಶಾಂಘೈ, ಜೂನ್ 26: ಭಯೋತ್ಪಾದನೆ ಕುರಿತು ಚೀನಾ(China) ಹಾಗೂ ಪಾಕಿಸ್ತಾನ(Pakistan) ಮೃದು ಧೋರಣೆ ಅನುಸರಿಸುತ್ತಿರುವ ಕಾರಣ, ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಸಹಿ ಹಾಕಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಯೋತ್ಪಾದನೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಭಾರತದ ನಿಲುವನ್ನು ದುರ್ಬಲಗೊಳಿಸುವ ಶಾಂಘೈ ಸಹಕಾರ ಸಂಸ್ಥೆ (SCO) ದಾಖಲೆಗೆ ಸಹಿ ಹಾಕಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರಾಕರಿಸಿದರು ಎಂದು ಮೂಲಗಳು ತಿಳಿಸಿವೆ. ಈ ಶೃಂಗಸಭೆಯು ಚೀನಾ, ರಷ್ಯಾ, ಪಾಕಿಸ್ತಾನ ಮತ್ತು ಭಾರತ ಸೇರಿದಂತೆ ಹತ್ತು ಸದಸ್ಯ ರಾಷ್ಟ್ರಗಳ ರಕ್ಷಣಾ ನಾಯಕರನ್ನು ಒಟ್ಟುಗೂಡಿಸಿತ್ತು.

ಯಾವುದೇ ದೇಶ, ಅದು ಎಷ್ಟೇ ದೊಡ್ಡ ಮತ್ತು ಶಕ್ತಿಶಾಲಿಯಾಗಿದ್ದರೂ, ಏಕಾಂಗಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ವಾಸ್ತವವಾಗಿ, ಜಾಗತಿಕ ಕ್ರಮ ಅಥವಾ ಬಹುಪಕ್ಷೀಯತೆಯ ಮೂಲ ಕಲ್ಪನೆಯೆಂದರೆ, ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂಬುದು.ಸರ್ವೇ ಜನಾಃ ಸುಖಿನೋ ಭವಂತು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಿಂದ ಎಲ್ಲರಿಗೂ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಚೀನಾದ ಬಂದರು ನಗರಿ ಕ್ವಿಂಗ್ಡಾವೊದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಸಭೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಮೇ 2020 ರಲ್ಲಿ ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಉಂಟಾದ ಮಿಲಿಟರಿ ಬಿಕ್ಕಟ್ಟಿನ ನಂತರ ಸಂಬಂಧಗಳಲ್ಲಿ ಗಂಭೀರ ಉದ್ವಿಗ್ನತೆಯ ನಂತರ ರಕ್ಷಣಾ ಸಚಿವರೊಬ್ಬರು ಚೀನಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಮತ್ತಷ್ಟು ಓದಿ:ಭಾರತಕ್ಕೆ ತನ್ನ ರಕ್ಷಿಸಿಕೊಳ್ಳುವ, ಅಪರಾಧಿಗಳ ಶಿಕ್ಷಿಸುವ ಹಕ್ಕಿದೆ: ಚೀನಾದಲ್ಲಿ ಭಯೋತ್ಪಾದನೆ ವಿರುದ್ಧ ಗುಡುಗಿದ ರಾಜನಾಥ್ ಸಿಂಗ್

ಶಾಂತಿ, ಭದ್ರತೆ ಕುರಿತು ಮಾತು

ಈ ಸಂದರ್ಭದಲ್ಲಿ, ರಾಜನಾಥ್ ಸಿಂಗ್ ಭಯೋತ್ಪಾದನೆ, ಶಾಂತಿ ಮತ್ತು ಭದ್ರತೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಮಾತನಾಡಿದರು. ನಮ್ಮ ಪ್ರದೇಶದಲ್ಲಿನ ದೊಡ್ಡ ಸವಾಲೆಂರೆ ಅದು ಶಾಂತಿ, ಭದ್ರತೆ ಮತ್ತು ವಿಶ್ವಾಸದ ಕೊರತೆಯಾಗಿದೆ. ಮತ್ತು ಈ ಸಮಸ್ಯೆಗಳಿಗೆ ಮೂಲ ಕಾರಣ ಹೆಚ್ಚುತ್ತಿರುವ ಮೂಲಭೂತವಾದ, ಉಗ್ರವಾದ ಮತ್ತು ಭಯೋತ್ಪಾದನೆ ಎಂಬುದು ನನ್ನ ಅಭಿಪ್ರಾಯ ಎಂದರು.

ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ನೀತಿಯಾಗಿ ಬಳಸುತ್ತವೆ. ಅವರು ಭಯೋತ್ಪಾದಕರಿಗೆ ವಾಸಿಸಲು ಸ್ಥಳ ನೀಡುತ್ತಾರೆ. ಅಂತಹ ದ್ವಿಮುಖ ನೀತಿಗಳಿಗೆ ಯಾವುದೇ ಸ್ಥಳವಿಲ್ಲ. ರಾಜನಾಥ್ ಸಿಂಗ್ ಅವರು, SCO ಅಂತಹ ದೇಶಗಳನ್ನು ಟೀಕಿಸಲು ಹಿಂಜರಿಯಬಾರದು ಎಂದು ಹೇಳಿದರು.

ಪಹಲ್ಗಾಮ್ ದಾಳಿ ಪ್ರಸ್ತಾಪ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್ ದಾಳಿಯ ಬಗ್ಗೆ ಬಹಿರಂಗವಾಗಿ ಪ್ರಸ್ತಾಪಿಸಿದರು. ಭಾರತಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಮತ್ತು ಅಪರಾಧಿಗಳನ್ನು ಶಿಕ್ಷಿಸುವ ಹಕ್ಕಿದೆ ಎಂದು ಅವರು ಹೇಳಿದರು. ಭಯೋತ್ಪಾದನೆಯ ವಿರುದ್ಧ ನಾವು ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಅವರು ಪಾಕಿಸ್ತಾನದ ರಕ್ಷಣಾ ಸಚಿವರಿಗೆ ಸ್ಪಷ್ಟವಾಗಿ ಹೇಳಿದರು. ಅಮಾಯಕರ ರಕ್ತ ಚೆಲ್ಲುವವರನ್ನು ನಾವು ಬಿಡುವುದಿಲ್ಲ ಎಂದು ಹೇಳಿದರು.

ಯಾವುದೇ ಭಯೋತ್ಪಾದನಾ ಕೃತ್ಯವು ಅಪರಾಧ ಮತ್ತು ಸಮರ್ಥನೀಯವಲ್ಲ, ಅವರ ಉದ್ದೇಶ ಏನೇ ಇರಲಿ. SCO ಸದಸ್ಯರು ಭಯೋತ್ಪಾದನೆಯನ್ನು ಸ್ಪಷ್ಟವಾಗಿ ಖಂಡಿಸಬೇಕು ಎಂದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ