ಲಂಡನ್: ಬ್ರಿಟನ್ ಪ್ರಧಾನಿ (Britain Prime Minister) ಚುನಾವಣಾ ಅಭ್ಯರ್ಥಿಯಾಗಿ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಕಣಕ್ಕೆ ಇಳಿದಿದ್ದಾರೆ. ಕನ್ಸರ್ವೇಟಿವ್ ಪಕ್ಷದ (Conservative Party) ಅಭ್ಯರ್ಥಿಯಾಗಿ ರಿಷಿ ಸುನಕ್ ಕಣದಲ್ಲಿದ್ದಾರೆ. ಹಾಗಾಗಿ ಬ್ರಿಟನ್ ಹೊಸ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ವಿರುದ್ಧ ಸಿಡಿದೆದ್ದು ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಮೇಲೆ ಹತ್ತಾರು ಮಂತ್ರಿಗಳು ಪ್ರಧಾನಿ ಬೋರಿಸ್ ಜಾನ್ಸನ್ ಸಂಪುಟವನ್ನು ತೊರೆದಿದ್ದರು. ಇದರಿಂದ ಅನಿವಾರ್ಯವಾಗಿ ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಬ್ರಿಟನ್ ತನ್ನ ನೂತನ ಪ್ರಧಾನಿಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. (ಸುದ್ದಿ ಮೂಲ: ಡಿಡಿ ಇಂಡಿಯಾ)
Britain Former Finance Minister Rishi Sunak announces bid to succeed Boris Johnson as a Conservative Party Leader and Prime Minister.#RishiSunak pic.twitter.com/nykz56CdUe
— DD India (@DDIndialive) July 8, 2022