200 ವರ್ಷಗಳ ಕಾಲ ಭಾರತವನ್ನು ಹೊಸ ವಸಾಹತುವನ್ನಾಗಿ ಆಳ್ವಿಕೆ ಮಾಡಿದ ಯುನೈಟೆಡ್ ಕಿಂಗ್‌ಡಮ್‌ಗೆ ಹೊಸ ಪ್ರಧಾನ ಮಂತ್ರಿ ರಿಷಿ ಸುನಕ್ ಆಯ್ಕೆಯಾಗುತ್ತಿದ್ದಂತೆ ಭಾರತೀಯರು ತಮ್ಮದೇ ಆದಂತಹ ವಿಶೇಷ ಕಾರಣಗಳಿಗಾಗಿ ಸಂತಸ, ಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಸುನಕ್ ಅವರ ಕುರಿತಾದ ಸೃಜನಾತ್ಮಕ ಮೇಮ್‌ಗಳಿಂದ ಇಂಟರ್ನೆಟ್ ತುಂಬಿ ತುಳುಕಿದೆ. ಕೆಲವರು ಯುಕೆ ಕೊಹಿನೂರ್ ಅನ್ನು ಭಾರತಕ್ಕೆ ಹಿಂದಿರುಗಿಸುವ ಸಮಯ ಬಂದಿದೆ ಎಂದು ತಮ್ಮ ಪುರಾತನ ಉಚಿತ ಸಲಹೆ ನೀಡಿದ್ದಾರೆ.
ಪ್ರತಿಷ್ಠಿತ ಗೋಲ್ಡ್‌ಮನ್ ಸ್ಯಾಚ್ಸ್ ಮಾಜಿ ವಿಶ್ಲೇಷಕರಾದ ರಿಷಿ ಸುನಕ್ ಯುನೈಟೆಡ್ ಕಿಂಗ್‌ಡಮ್ ನ ಭಾರತೀಯ ಮೂಲದ ಮೊದಲ ಪ್ರಧಾನಿ. ಭಾರತ ಮತ್ತು ಪೂರ್ವ ಆಫ್ರಿಕಾದಲ್ಲಿ ಬ್ರಿಟನ್‌ನ ಹಳೆಯ ಸಾಮ್ರಾಜ್ಯದಿಂದ ವಲಸಿಗರಾಗಿ ಬಂದ ಹಿಂದೂ ವಂಶಸ್ಥರು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದೆಲ್ಲ ಸುನಕ್ ಪ್ರಧಾನ ಮಂತ್ರಿ ಪಟ್ಟ ಅಲಂಕರಿಸಿದ್ದರ ಬಗ್ಗೆ ವ್ಯಾಖ್ಯಾನಿಸಿದ್ದಾರೆ.
UK ಯ 57 ನೇ ಪ್ರಧಾನ ಮಂತ್ರಿಯ ಬಗ್ಗೆ ಐದಾರು ವಿಷಯಗಳು ಇಲ್ಲಿವೆ. ಅದು ಖಚಿತವಾಗಿ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ:
ರಿಷಿ ‘ಭಾರತೀಯ’ ಅಲ್ಲ – ರಿಷಿ ಸುನಕ್ 1980 ರಲ್ಲಿ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜನಿಸಿದವರು. ಸುನಕ್ ಅವರು ವಿಂಚೆಸ್ಟರ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮತ್ತು ಆರ್ಥಿಕತೆ ವ್ಯಾಸಂಗ ಮುಂದುವರಿಸಿದರು. ನಂತರ ಸ್ಟ್ಯಾನ್‌ಫೋರ್ಡ್‌ನಿಂದ MBA ಪದವಿ ಪಡೆದರು.
ರಿಷಿ ಸುನಕ್ ಅವರ ಹಿರಿಯಯರು ಭಾರತದ ಪಂಜಾಬ್‌ನಿಂದ (ಈಗ ಪಾಕಿಸ್ತಾನದಲ್ಲಿದೆ) ಬಂದವರಾಗಿರುವುದರಿಂದ ಅವರು ತಮ್ಮನ್ನು “ಭಾರತೀಯ ಬೇರುಗಳು” ಹೊಂದಿರುವವರು ಎಂದು ಉಲ್ಲೇಖಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ ಸುನಕ್ ಅವರ ಅಜ್ಜ ರಾಮದಾಸ್ ಸುನಕ್ ಅವರು ಕೀನ್ಯಾದ ನೈರೋಬಿಗೆ 1935 ರಲ್ಲಿ ವಲಸೆ ಹೋದರು. ಸುನಕ್ ಅವರ ತಂದೆ ಯಶ್ವೀರ್ ಸುನಕ್, 1949 ರಲ್ಲಿ ನೈರೋಬಿಯಲ್ಲಿ ಜನಿಸಿದರು. ಮುಂದೆ ಅವರು 1966 ರಲ್ಲಿ ಇಂಗ್ಲೆಂಡಿಗೆ ವಲಸೆ ಬಂದರು. ಯಶ್ವೀರ್ ಅವರು ಭಾರತೀಯ ಮೂಲವನ್ನು ಹೊಂದಿದ್ದ ಉಷಾ ಬೆರ್ರಿ ಅವರೊಂದಿಗೆ ವಿವಾಹ ಮಾಡಿಕೊಂಡರು. ಉಷಾ ಬೆರ್ರಿ ಅವರು ರಘುಬೀರ್ ಬೆರ್ರಿ ಎಂಬ ಪಂಜಾಬ್ ಮೂಲದವರ ಮಗಳು. ರಘುಬೀರ್ ಅವರು ಟ್ಯಾಂಗನಿಕಾಗೆ (ಇಂದಿನ ತಾಂಜಾನಿಯಾ) ಸ್ಥಳಾಂತರಗೊಂಡರು. ಯಶ್ವೀರ್ ಸುನಕ್ (ವೈದ್ಯರು) ಮತ್ತು ಉಷಾ ಬೆರ್ರಿ (ಫಾರ್ಮಸಿಸ್ಟ್) ದಂಪತಿಗೆ 1980 ರಲ್ಲಿ ಗಂಡು ಮಗುವಾಯಿತು. ಮತ್ತು ಆ ಮಗುವಿಗೆ ರಿಷಿ ಸುನಕ್ ಎಂದು ಹೆಸರಿಸಿದರು!
ಸುನಕ್ ಅವರು ಭಾರತದ ಇನ್ಫೋಸಿಸ್ ಕಂಪನಿಯ ಎನ್ ಆರ್ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ. 200 ವರ್ಷಗಳಿಗಿಂತ ಹೆಚ್ಚು ಅಸ್ತಿತ್ವ ಹೊಂದಿರುವ ಯುನೈಟೆಡ್ ಕಿಂಗ್‌ಡಂನ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ರಿಷಿ ಸುನಕ್ (42 ವರ್ಷ ವಯಸ್ಸು) ಎಂಬುದು ದಾಖಲಾರ್ಹ ಸಂಗತಿ. 1783 ರಲ್ಲಿ. ವಿಲಿಯಂ ಪಿಟ್ ಕಿರಿಯ 24 ನೇ ವಯಸ್ಸಿನಲ್ಲಿ 1783 ರಲ್ಲಿ ಗ್ರೇಟ್ ಬ್ರಿಟನ್ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮುನ್ನ 1783 ರಲ್ಲಿ, ಕಿರಿಯ ವಿಲಿಯಂ ಪಿಟ್ ಗ್ರೇಟ್ ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿ ತನ್ನ 24 ನೇ ವಯಸ್ಸಿನಲ್ಲಿಯೇ ಅಧಿಕಾರ ವಹಿಸಿಕೊಂಡಿದ್ದರು.
ಸುನಕ್ ಅವರು 2015 ರಲ್ಲಿ ರಿಚ್ಮಂಡ್ (ಯಾರ್ಕ್‌ಷೈರ್) ಕ್ಷೇತ್ರದಿಂದ ಚುನಾಯಿತರಾದವರು. ಏಳು ವರ್ಷಗಳ ಅತ್ಯಲ್ಪ ರಾಜಕೀಯ ಜೀವನದಲ್ಲಿಯೇ ಅವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಅವರಿಗಿಂತ ಮೊದಲು, ಒಂಬತ್ತು ವರ್ಷಗಳ ಕಾಲ ಸಂಸದರಾಗಿದ್ದ ಡೇವಿಡ್ ಕ್ಯಾಮರೂನ್ ಅಲ್ಪಾವಧಿಯ ರಾಜಕೀಯದ ಬಳಿಕ ಪ್ರಧಾನಿಯಾಗಿದ್ದರು. ಡೇವಿಡ್ ಕ್ಯಾಮರೂನ್ ಅವರು 2001 ರಲ್ಲಿ ಸಂಸತ್ತಿಗೆ ಆಯ್ಕೆಯಾಗಿ, 2010 ರಲ್ಲಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡರು. ಸುನಕ್ ಅವರು 2018-19 ರಲ್ಲಿ ಸ್ಥಳೀಯ ಸರ್ಕಾರದ ಕಿರಿಯ ಸಚಿವರಾಗಿದ್ದರು. ನಂತರ ಸುನಕ್ ಅವರು 2019-20ರಲ್ಲಿ ದೇಶದ ಖಜಾನೆಯ ಮುಖ್ಯ ಕಾರ್ಯದರ್ಶಿಯಾದರು.
ಸುನಕ್ ನಂತರ 2020-22ರಲ್ಲಿ ಖಜಾನೆಯ ಛಾನ್ಸಲರ್ ಆದರು. ಬ್ರಿಟನ್‌ಗೆ COVID-19 ಸಾಂಕ್ರಾಮಿಕ ರೋಗವು ಭಯಾನಕವಾಗಿ ಅಪ್ಪಳಿಸಿದಾಗ ಪ್ರಧಾನಿ ಡೇವಿಡ್ ಜಾನ್ಸನ್ ಅವರ ಅಧಿಕಾರಾವಧಿಯಲ್ಲಿ ಸುನಕ್ ಹಣಕಾಸು ಮಂತ್ರಿಯಾದರು. 18 ತಿಂಗಳ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗಗಳು ಮತ್ತು ಉದ್ಯಮ ವ್ಯವಹಾರಗಳನ್ನು ಸಂರಕ್ಷಿಸಲು ಶತಕೋಟಿ ಪೌಂಡ್‌ಗಳ ಮೌಲ್ಯದ ಫರ್ಲೋ ಆರ್ಥಿಕ ಬೆಂಬಲದ ಯೋಜನೆಗಳನ್ನು ತ್ವರಿತವಾಗಿ ಪರಿಚಯಿಸಿದ್ದಕ್ಕಾಗಿ ಅವರು ಸಾಕಷ್ಟು ಪ್ರಶಂಸೆಯನ್ನು ಗಳಿಸಿದರು.
ದಿ ಗಾರ್ಡಿಯನ್ ಪ್ರಕಾರ, ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿಯ ಒಟ್ಟು ಸಂಪತ್ತು £ 730 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಕಿಂಗ್ ಚಾರ್ಲ್ಸ್ III ಮತ್ತು ಕ್ವೀನ್ ಕಾನ್ಸಾರ್ಟ್ ಕ್ಯಾಮಿಲ್ಲಾ ಅವರ ಅಂದಾಜು ಸಂಪತ್ತಿಗಿಂತ (£300 ಮಿಲಿಯನ್-£350 ಮಿಲಿಯನ್) ಇದು ದುಪ್ಪಟ್ಟು ಆಗಿದೆ. ಸುನಕ್ ಮತ್ತು ಮೂರ್ತಿ ಪ್ರಪಂಚದಾದ್ಯಂತ ಹರಡಿರುವ ನಾಲ್ಕು ಬೃಹದಾದ ಆಸ್ತಿಗಳ ಮಾಲೀಕರಾಗಿದ್ದಾರೆ. ಸುಮಾರು £ 700 ಮಿಲಿಯನ್ ಮೌಲ್ಯದ ಇನ್ಫೋಸಿಸ್ ಕಂಪನಿಯಲ್ಲಿ ರಿಶಿ-ಅಕ್ಷತಾ ಮೂರ್ತಿ ದಂಪತಿ 0.91 % ಪಾಲನ್ನು ಹೊಂದಿದ್ದಾರೆಂದು ವರದಿಯಾಗಿದೆ.
ಸುನಕ್ ಕೋಕಾ-ಕೋಲಾ ವ್ಯಸನಿ: 2021 ರಲ್ಲಿ, ಸುನಕ್ ಅವರು ತಾನು “ಕೋಕಾ-ಕೋಲಾ ವ್ಯಸನಿ” ಎಂದು ಇಬ್ಬರು ಶಾಲಾ ವಿದ್ಯಾರ್ಥಿಗಳಿಗೆ ಹೇಳಿದ್ದರು. ಅದರಲ್ಲೂ “ಮೆಕ್ಸಿಕನ್ ಕೋಕ್” ತಮ್ಮ ನೆಚ್ಚಿನ ಪಾನೀಯ ಎಂದು ಹೇಳಿದ್ದಾಗಿ ದಿ ಗಾರ್ಡಿಯನ್ ವರದಿ ಮಾಡಿತ್ತು.
Published On - 7:59 pm, Tue, 25 October 22