Rishi Sunak: ಬ್ರಿಟನ್ ಪ್ರಧಾನಿ ರೇಸ್​ನಲ್ಲಿ ಅಂತಿಮ ಸುತ್ತಿನಲ್ಲಿ ರಿಷಿ ಸುನಕ್​ಗೆ 118 ಶಾಸಕರ ಬೆಂಬಲ

| Updated By: ವಿವೇಕ ಬಿರಾದಾರ

Updated on: Jul 19, 2022 | 8:49 PM

ಬ್ರಿಟನ್‌ನ ಮುಂದಿನ ಪ್ರಧಾನಿಯನ್ನು ನಿರ್ಧರಿಸಲು ಕನ್ಸರ್ವೇಟಿವ್ ಪಕ್ಷದ ಸಂಸದರು ಮಂಗಳವಾರ ನಡೆಸಿದ ಕೊನೆಯ ಸುತ್ತಿನ ಮತದಾನದಲ್ಲಿ ಬ್ರಿಟನ್​ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಗೆಲವು ಸಾಧಿಸಿದ್ದಾರೆ.

Rishi Sunak: ಬ್ರಿಟನ್ ಪ್ರಧಾನಿ ರೇಸ್​ನಲ್ಲಿ ಅಂತಿಮ ಸುತ್ತಿನಲ್ಲಿ ರಿಷಿ ಸುನಕ್​ಗೆ 118 ಶಾಸಕರ ಬೆಂಬಲ
ರಿಷಿ ಸುನಕ್‌
Follow us on

ಲಂಡನ್: ಬ್ರಿಟನ್‌ನ ಮುಂದಿನ ಪ್ರಧಾನಿಯನ್ನು ನಿರ್ಧರಿಸಲು ಕನ್ಸರ್ವೇಟಿವ್ ಪಕ್ಷದ (Conservative Party) ಸಂಸದರು ಮಂಗಳವಾರ ನಡೆಸಿದ ಕೊನೆಯ ಸುತ್ತಿನ ಮತದಾನದಲ್ಲಿ ಬ್ರಿಟನ್​ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ (Rishi Sunak) ಗೆಲವು ಸಾಧಿಸಿದ್ದಾರೆ. ರಿಷಿ ಸುನಕ್ 118 ಮತಗಳನ್ನು ಪಡೆದು ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಬ್ರಿಟನ್ ಪ್ರಧಾನಿ ಸ್ಥಾನದ ಸ್ಪರ್ಧೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸಿದ್ದಾರೆ.
ಕೆಮಿ ಬಡೆನೋಚ್ ಚುನಾವಣೆ ಕಣದಿಂದ ಹೊರಬಿದ್ದಿದ್ದಾರೆ. ಈ ಮೂಲಕ ಕಣದಲ್ಲಿ ಮೂವರು ಮಾತ್ರ ಉಳಿದಿದ್ದಾರೆ.
ಬ್ರಿಟನ್ ಪ್ರಧಾನಿ ಹುದ್ದೆಗೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಿಷಿ ಸುನಕ್ 118 ಟೋರಿ ಶಾಸಕರ ಬೆಂಬಲವನ್ನು ಗಳಿಸಿದ್ದಾರೆ. ಅವ ಬಳಿಕ ಪೆನ್ನಿ ಮೊರ್ಡಾಂಟ್ 92, ಲಿಜ್ ಟ್ರಸ್ 86, ರೇಸ್​ನಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಉಳಿಯುವವರೆಗೆ ಸಂಸದರು ಮತ ಚಲಾಯಿಸುತ್ತಾರೆ. ವಿಜೇತರನ್ನು ಪಕ್ಷದ ಸದಸ್ಯರು ನಿರ್ಧರಿಸುತ್ತಾರೆ.
ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5ರಂದು ಹೊಸ ನಾಯಕನ ಆಯ್ಕೆಯಾಗುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯುತ್ತಾರೆ.

Published On - 8:49 pm, Tue, 19 July 22