ರಷ್ಯಾದಲ್ಲೊಂದು ಭಿನ್ನ ಸೌಂದರ್ಯ ಸ್ಪರ್ಧೆ, ಹಗಲಿರುಲು ಕೈದಿಗಳೊಂದಿರುವ ಮಹಿಳಾ ಜೈಲು ಅಧಿಕಾರಿಗಳೇ ಇಲ್ಲಿ ಸ್ಪರ್ಧಿಗಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2021 | 5:03 PM

ಮಿಸ್ ಪೀನಲ್ ಸಿಸ್ಟಮ್ ಕಾಂಟೆಸ್ಟ್​ 2021ರಲ್ಲಿ ಮಹಿಳಾ ಜೈಲು ಅಧಿಕಾರಿಗಳು ತಮ್ಮ ವೃತ್ತಿಯ ಸೊಬಗಿನ ವಿವರಣೆ ಮತ್ತು ತಾವು ವಾಸವಾಗಿರುವ ಪ್ರದೇಶದ ಅದ್ಭುತ ಚಿತ್ರಣವನ್ನು ನೀಡಿ ತಾವು ಮ್ಯೂಸಿಯಂನಲ್ಲಿರುವ ವಸ್ತು ಎಂಬಂತೆ ನಟಿಸುತ್ತಾ ಒಂದು ವಿಡಿಯೋವನ್ನು ಮಾಡಿ ಅದನ್ನು ಆಯೋಜಕರಿಗೆ ಕಳಿಸುತ್ತಾರೆ.

ರಷ್ಯಾದಲ್ಲೊಂದು ಭಿನ್ನ ಸೌಂದರ್ಯ ಸ್ಪರ್ಧೆ, ಹಗಲಿರುಲು ಕೈದಿಗಳೊಂದಿರುವ ಮಹಿಳಾ ಜೈಲು ಅಧಿಕಾರಿಗಳೇ ಇಲ್ಲಿ ಸ್ಪರ್ಧಿಗಳು!
ಅಂತಿಮ ಸುತ್ತು ತಲುಪಿರುವ ಸುಂದರಿಯರು ಇವರೇ!
Follow us on

ಮಿಸ್ ಕರ್ನಾಟಕ, ಮಿಸ್​ ಇಂಡಿಯಾ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಮೊದಲಾದ ಸ್ಪರ್ಧೆಗಳ ಬಗ್ಗೆ ನಾವು ಯಾವಾಗಲೂ ಕೇಳಿಸಿಕೊಳ್ಳುತ್ತಿರುತ್ತೇವೆ. ಮದುವೆಯಾದವರಿಗಾಗಿ ಮಿಸೆಸ್ ಗೃಹಿಣಿ ಸ್ಪರ್ಧೆಗಳು ಸಹ ನಿಯಮಿತವಾಗಿ ನಡೆಯುತ್ತಿರುತ್ತವೆ. ಸುಂದರಿಯರ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾ ಒಂದು ಹೊಸ ಪ್ರಯೋಗ ಮಾಡಲು ಮುಂದಾಗಿರುವಂತಿದೆ. ಅಲ್ಲೂ ಪ್ರತಿವರ್ಷ ಬ್ಯೂಟಿ ಕಾಂಟೆಸ್ಟ್​ಗಳು ನಡೆಯುತ್ತಿರುತ್ತವೆ ಅದು ಬೇರೆ ವಿಷಯ , ಆದರೆ ನಾವೀಗ ಚರ್ಚಿಸುತ್ತಿರುವ ಸೌಂದರ್ಯ ಸ್ಪರ್ಧೆ ಸ್ವಲ್ಪ ಭಿನ್ನವಾಗಿದೆ. ಇದು ಮಿಸ್​ಗಳಾಗಲೀ, ಮಿಸೆಸ್​​ಗಳಾಗಲೀ ನಡೆಯುತ್ತಿರುವ ಸ್ಪರ್ಧೆ ಅಲ್ಲ, ಬದಲಿಗೆ ರಷ್ಯಾದ ಬೇರೆ ಬೇರೆ ಪ್ರಾಂತ್ಯಗಳಲ್ಲಿರುವ ಜೈಲುಗಳ ಮಹಿಳಾ ವಾರ್ಡನ್ ಮತ್ತು ಅಧಿಕಾರಿಗಳು ಮಾತ್ರ ಇದರಲ್ಲಿ ಭಾಗವಹಿಸಲು ಅರ್ಹರು. ಮೊದಲಿನ ಸುತ್ತಿನ ‘ಮಿಸ್ ಪೀನಲ್ ಸಿಸ್ಟಮ್ ಸ್ಪರ್ಧೆ’ ಈಗಾಗಲೇ ಮುಗಿದಿದ್ದು, ಅದರಲ್ಲಿ ಭಾಗವಹಿಸಿದ್ದ 100 ಕ್ಕಿಂತ ಜೈಲು ಅಧಿಕಾರಿಗಳ ಪೈಕಿ 12 ಸುಂದರಿಯರನ್ನು ಕೊನೆಯ ಅಂದರೆ ಚಾಂಪಿಯನ್​ಶಿಪ್​ ಸುತ್ತಿಗೆ ಶಾರ್ಟ್​ಲಿಸ್ಟ್​ ಮಾಡಲಾಗಿದೆ. ಇವರಲ್ಲಿ ಅತ್ಯಂತ ಸುಂದರವಾದ ಜೈಲು ಅಧಿಕಾರಿಯನ್ನು ಆಯ್ಕೆ ಮಾಡಲು ಜೂನ್​ 7 ರಂದೇ ವೋಟಿಂಗ್ ಶುರುವಾಗಿದ್ದು ಅದು ಗುರುವಾರದಂದು ಕೊನೆಗೊಳ್ಳಲಿದೆ.

ರಷ್ಯಾದ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಅಲ್ಲಿನ ನ್ಯಾಶನಲ್ ಗಾರ್ಡ್​ (ರಾಸ್ಗಾವರ್ಡಿಯಾ) 2019 ರಲ್ಲಿ ‘ರಾಸ್ಗಾವರ್ಡಿಯಾ ಸುಂದರಿ’ ಸ್ಫರ್ಧೆಯನ್ನು ಏರ್ಪಡಿಸಿತ್ತು.

ಈ ಕಮ್ಯೂನಿಸ್ಟ್​ ರಾಷ್ಟ್ರ ಏನೇ ಮಾಡಿದರು ‘ಜರಾ ಹಟ್​ ಕೆ’ ಮಾಡುತ್ತದೆ ಅಂತ ವಿಶ್ವದ ಇತರ ದೇಶಗಳು ಹೇಳುತ್ತವೆ. ಸಾಮಾನ್ಯವಾಗ ಅಲ್ಲಿ ನಡೆಯುವ ವಿದ್ಯಮಾನಗಳು ಹೊರಜಗತ್ತಿಗೆ ಗೊತ್ತಾಗುವುದಿಲ್ಲ.

ಅದು ಬಿಡಿ, ಸುಂದರಿಯರ ವಿಷಯಕ್ಕೆ ಬರೋಣ, ಮಿಸ್ ಪೀನಲ್ ಸಿಸ್ಟಮ್ ಕಾಂಟೆಸ್ಟ್​ 2021ರಲ್ಲಿ ಮಹಿಳಾ ಜೈಲು ಅಧಿಕಾರಿಗಳು ತಮ್ಮ ವೃತ್ತಿಯ ಸೊಬಗಿನ ವಿವರಣೆ ಮತ್ತು ತಾವು ವಾಸವಾಗಿರುವ ಪ್ರದೇಶದ ಅದ್ಭುತ ಚಿತ್ರಣವನ್ನು ನೀಡಿ ತಾವು ಮ್ಯೂಸಿಯಂನಲ್ಲಿರುವ ವಸ್ತು ಎಂಬಂತೆ ನಟಿಸುತ್ತಾ ಒಂದು ವಿಡಿಯೋವನ್ನು ಮಾಡಿ ಅದನ್ನು ಆಯೋಜಕರಿಗೆ ಕಳಿಸುತ್ತಾರೆ.

ಅದರೆ ಜೊತೆಗೆ ಅವರು ತಮ್ಮ ಯೂನಿಫಾರ್ಮ್​ನಲ್ಲಿರುವ ಹೆಚ್ಚುವರಿ ಇಮೇಜುಗಳನ್ನು ಸಹ ಕಳಿಸುತ್ತಾರೆ. ಪುರುಷರೇ ಜಾಸ್ತಿಯಿರುವ ಜ್ಯೂರಿಯು ವೆಬ್​-ಬ್ಯಾಲಟ್​ ಮೂಲಕ ನಡೆಯುವ ವೋಟಿಂಗ್ ಆಧಾರದ ಮೇಲೆ ವಿಜೇತೆಯನ್ನು ಘೋಷಿಸುತ್ತದೆ.

ಗಮನಾರ್ಹ ವಿಷಯವೆಂದರೆ, ನಮ್ಮ ದೇಶದಲ್ಲಿ ಯಾವುದೇ ಒಂದು ಅಭಿಯಾನ ಲಾಂಚ್​ ಮಾಡುವಾಗ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುವ ಹಾಗೆ ಮಿಸ್ ಪೀನಲ್ ಸಿಸ್ಟಮ್ ಕಾಂಟೆಸ್ಟ್​ 2021 ಅನ್ನು ಸಹ ವಿರೋಧಿಸಲಾಗುತ್ತಿದೆ. ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನಸ್ತ್ಯಾ ಕ್ರಾಸ್ಲಿಂಕೋವ, ಈ ಸ್ಪರ್ಧೆಯನ್ನು ‘ಅಹಿತಕರ’ ಎಂದು ಕರೆದಿದ್ದಾರೆ. ಸ್ಪರ್ಧಿಗಳನ್ನು ಜನ ವಸ್ತುಗಳ ಹಾಗೆ ನೋಡುತ್ತಾರೆ ಎಂದು ಹೇಳಿರುವ ಅವರು, ‘ಅವರ ಸೌಂದರ್ಯಗಳನ್ನು ಜನ ಪ್ರಶಂಸಿಸಬಹುದು, ಅವರನ್ನು ಕಾಮುಕ ದೃಷ್ಟಿಯಿಂದಲೂ ನೋಡಬಹುದು. ಆದರೆ, ಈ ಸ್ಪರ್ಧೆ ಮತ್ತು ಸ್ಪರ್ಧಿಗಳು ಯಾವ ದೃಷ್ಟಿಯಿಂದಲೂ ಗಮನ ಸೆಳೆಯುವುದಿಲ್ಲ’ ಎಂದಿದ್ದಾರೆ.

ಬೇರೆ ಸಾಮಾಜಿಕ ಕಾರ್ಯಕರ್ತರು ಸಹ ಮಹಿಳಾ ಜೈಲು ಅಧಿಕಾರಿಗಳಿಗಾಗಿ ಏರ್ಪಡಿಸಿರುವ ಸೌಂದರ್ಯ ಸ್ಪರ್ಧೆಯನ್ನು ಖಂಡಿಸಿದ್ದಾರೆ.

ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಸಮಾರಾ ಪ್ರಾಂತ್ಯದ ಸೀನಿಯರ್ ಲೆಫ್ಟಿನೆಂಟ್​ ಅನಸ್ತಾಸಿಯ ಒಕೊಲಿಲೊವ ಅವರು ತಾವು ಕಳಿಸಿರುವ ವಿಡಿಯೊದಲ್ಲಿ, ಚಿಕ್ಕಂದಿನಲ್ಲೇ ಪೀನಲ್ ಸಿಸ್ಟಮ್ ಯೂನಿಫಾರ್ಮ್ ಧರಿಸುವ ಮತ್ತು ಜೈಲುಗಳಲ್ಲಿ ಸೇವೆ ಸಲ್ಲಿಸುವ ಬಗ್ಗೆ ಕನಸು ಕಂಡಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬ ಸ್ಪರ್ಧಿ ಕ್ಯಾಪ್ಟನ್ ಇಕಾಟರ್ನಿಯಾ ವ್ಯಾಸಿಲೀವಾ ಅವರು ತನಗೆ ರೂಪದರ್ಶಿಯಾಗಬೇಕೆಂಬ ಹಂಬಲವಿತ್ತಾದರೂ ಕುಟುಂಬದ ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ಜೈಲು ಅಧಿಕಾರಿಯಾಗುವ ಸಂಕಲ್ಪ ಮಾಡಿಕೊಂಡೆ ಎಂದು ಹೇಳಿದ್ದಾರೆ. ಆಕೆ ಕುದರೆ ಸವಾರಿಯಲ್ಲೂ ನಿಷ್ಣಾತಳಾಗಿದ್ದಾರೆ.

ಇದನ್ನೂ ಓದಿ: ಲಸಿಕೆ ಪ್ರವಾಸೋದ್ಯಮ: ವಿದೇಶಿಯರಿಗೆ ರಷ್ಯಾಕ್ಕೆ ಆಗಮಿಸಿ ಲಸಿಕೆ ಪಡೆಯಲು ಅವಕಾಶ ನೀಡಿದ ಅಧ್ಯಕ್ಷ ಪುಟಿನ್