ಟಿವಿ ಚರ್ಚೆ ವೇಳೆ ಇಮ್ರಾನ್ ಖಾನ್ ಆಪ್ತ ನಾಯಕಿ ಫಿರ್ದೋಸ್​ನಿಂದ ವಿರೋಧ ಪಕ್ಷದ ಸಂಸದರಿಗೆ ಕಪಾಳಮೋಕ್ಷ; ವಿಡಿಯೋ ವೈರಲ್

ಜಾವೇದ್​ ಚೌಧರಿ ಆಯೋಜಿಸಿದ್ದ ಎಕ್ಸ್​ಪ್ರೆಸ್​ ನ್ಯೂಸ್​ ಟಾಕ್​ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಗಮನಿಸುವಂತೆ ಇಮ್ರಾನ್ ಖಾನ್ ಆಪ್ತೆ ಮಹಿಳಾ ನಾಯಕಿ ಫಿರ್ದೋಸ್​ ಮತ್ತು ಪಿಪಿಪಿಯ ಸಂಸದ ಮಂಡೋಖೆಲ್​ ಪರಸ್ಪರ ಕಿತ್ತಾಡಿಕೊಂಡ ದೃಶ್ಯ ವೈರಲ್​ ಆಗಿದೆ.

ಟಿವಿ ಚರ್ಚೆ ವೇಳೆ ಇಮ್ರಾನ್ ಖಾನ್ ಆಪ್ತ ನಾಯಕಿ ಫಿರ್ದೋಸ್​ನಿಂದ ವಿರೋಧ ಪಕ್ಷದ ಸಂಸದರಿಗೆ ಕಪಾಳಮೋಕ್ಷ; ವಿಡಿಯೋ ವೈರಲ್
ಇಮ್ರಾನ್ ಖಾನ್ ಆಪ್ತೆ ಮಹಿಳಾ ನಾಯಕಿ ಫಿರ್ದೋಸ್​ನಿಂದ ವಿರೋಧ ಪಕ್ಷದ ಸಂಸದರಿಗೆ ಕಪಾಳಮೋಕ್ಷ

ಸುದ್ದಿ ಕಾರ್ಯಕ್ರಮವೊಂದರಲ್ಲಿ ಇಮ್ರಾನ್ ಖಾನ್ ಆಪ್ತೆ, ಪಿಟಿಐ ಪಕ್ಷದ ಮಹಿಳಾ ನಾಯಕಿ ಫಿರ್ದೋಸ್​ ಅವರು ಪಿಪಿಪಿ ಪಕ್ಷದ ಸಂಸದ ಖಾದಿರ್​ ಖಾನ್​ ಮಂಡೋಖೇಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಟಿವಿ ಕಾರ್ಯಕ್ರಮದಲ್ಲಿ ಫಿರ್ದೋಸ್​ ತುಂಬಾ ಕೋಪಗೊಂಡು ಸಂಸದರ ಕಾಲರ್​ ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ. ಸುದ್ದಿ ವಾಹಿನಿಯ ಆ್ಯಂಕರ್​ ಮುಂದೆಯೇ ನಡೆದಿರುವ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

ಜಾವೇದ್​ ಚೌಧರಿ ಆಯೋಜಿಸಿದ್ದ ಎಕ್ಸ್​ಪ್ರೆಸ್​ ನ್ಯೂಸ್​ ಟಾಕ್​ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಕಾಣಿಸುವಂತೆ ಇಮ್ರಾನ್ ಖಾನ್ ಆಪ್ತೆ ಫಿರ್ದೋಸ್​ ಮತ್ತು ಪಿಪಿಪಿ ಪಕ್ಷದ ಸಂಸದ ಮಂಡೋಖೆಲ್​ ಪರಸ್ಪರ ಕಿತ್ತಾಡಿಕೊಂಡ ದೃಶ್ಯ ವೈರಲ್​ ಆಗಿದೆ.

ಘಟನೆ ವೈರಲ್​ ಆದ ಬಳಿಕ ಫಿರ್ದೋಸ್​ ಖಾನ್​ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಒಂದು ಭಾಗ ಮಾತ್ರ ಬಿಡುಗಡೆಯಾಗಿದೆ. ಸಂಪೂರ್ಣ ವಿಡಿಯೋವನ್ನೂ ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ನಾವಿಬ್ಬರೂ ಕುಳಿತಿದ್ದೆವು. ಪಿಪಿಪಿಯ ಖಾದಿರ್​ ಮಂಡೋಖೇಲ್​ ನನಗೆ ಬೆದರಿಕೆ ಹಾಕಿದರು. ನನ್ನ ತೀರಿಹೋದ ತಂದೆ ಮತ್ತು ನನ್ನ ಬಗ್ಗೆ ಕೆಟ್ಟ  ಭಾಷೆಗ ಬಳಸಿ ಅವಮಾನಿಸಿದರು. ನನ್ನ ರಕ್ಷಣೆಗಾಗಿ ನಾನು ಮುಂದಿನ ಹೆಜ್ಜೆ ಇಡಲೇಬೇಕಾಯಿತು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

Throwback! ಪಾಕಿಸ್ತಾನದ ವಿರುದ್ಧ ವೀರೂ ದಾದಾ ಎರಡೇ ಎರಡು ಬಾಲ್​ನಲ್ಲಿ 21 ರನ್ ಚಚ್ಚಿದ್ದು ಹೇಗೆ ಅಂತೀರಾ…?

ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ, ವಿಶ್ವಸಂಸ್ಥೆಗೆ 88 ಉಗ್ರರ ಅಡ್ರಸ್ ಕೊಟ್ಟು ಪಾಕಿಸ್ತಾನ್ ನಾಟಕ