ಗುರುವಾರದಂದು ಉಕ್ರೇನ್ ಮೇಲೆ ರಷ್ಯಾ ಘೋಷಿಸಿದ್ದ ಕದನ (Russia Ukraine War) ಇದೀಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೆ ಎರಡೂ ಪಕ್ಷಗಳಲ್ಲಿ ಅಪಾರ ಪ್ರಮಾಣದ ಸಾವು- ನೋವು ಸಂಭವಿಸಿದೆ. ಪ್ರಸ್ತುತ ರಷ್ಯನ್ ಸೇನೆ ಉಕ್ರೇನ್ ರಾಜಧಾನಿ ಕೀವ್ಅನ್ನು (Kyiv) ಸುತ್ತುವರೆಯಲು ಪ್ರಯತ್ನಿಸುತ್ತಿದೆ. ಇದಕ್ಕೆ ಉಕ್ರೇನ್ ತೀವ್ರ ಪ್ರತಿರೋಧ ಒಡ್ಡುತ್ತಿದೆ. ‘ದೇಶವನ್ನು ಸ್ವಾತಂತ್ರ್ಯಗೊಳಿಸಲು ಎಲ್ಲಿಯವರೆಗೆ ಅವಶ್ಯಕತೆಯಿದೆಯೋ ಅಲ್ಲಿಯವರೆಗೆ ಹೋರಾಡುತ್ತೇವೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯ ತ್ವರಿತ ಗತಿಯಲ್ಲಿ ಮುಂದುವರೆದಿದೆ. ಇಂದು (ಫೆ.27) ಮುಂಜಾನೆ 250 ವಿದ್ಯಾರ್ಥಿಗಳನ್ನು ಹೊತ್ತ ಎರಡನೇ ವಿಮಾನ ರೊಮೇನಿಯಾದ ಬುಕಾರೆಸ್ಟ್ನಿಂದ ದೆಹಲಿಗೆ ಆಗಮಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. 219 ಜನರನ್ನು ಹೊತ್ತಿದ್ದ ಮೊದಲ ವಿಮಾನವು ಶನಿವಾರ ಆಗಮಿಸಿತ್ತು. ಪ್ರಸ್ತುತ ಹಂಗೇರಿಯ ಬುಡಾಪೆಸ್ಟ್ನಿಂದ 240 ಜನರನ್ನು ಹೊತ್ತಿರುವ ಮೂರನೇ ವಿಮಾನ ಭಾರತದತ್ತ ಹೊರಟಿದೆ. ಉಕ್ರೇನ್‌ನಿಂದ ಭಾರತದ ನಾಗರಿಕರನ್ನು ಸ್ಥಳಾಂತರಿಸುವ ಯೋಜನೆಗೆ ‘ಆಪರೇಷನ್ ಗಂಗಾ’ (Operation Ganga) ಎಂದು ಹೆಸರಿಡಲಾಗಿದೆ.
ಭಾನುವಾರ ಬೆಳಿಗ್ಗೆ, ಕೀವ್‌ನ ದಕ್ಷಿಣಕ್ಕೆ ಬೃಹತ್ ಸ್ಫೋಟಗಳು ಸಂಭವಿಸಿವೆ. ಉಕ್ರೇನ್ ಸರ್ಕಾರವು ಅಂತಹ ಒಂದು ಸ್ಫೋಟವು ಜುಲಿಯಾನಿ ವಿಮಾನ ನಿಲ್ದಾಣದ ಬಳಿ ಮತ್ತು ಇನ್ನೊಂದು ತೈಲ ಡಿಪೋದಲ್ಲಿ ಸಂಭವಿಸಿದೆ ಎಂದು ಹೇಳಿದೆ. ದೇಶದ ಎರಡನೇ ಅತಿದೊಡ್ಡ ನಗರವಾಗಿರುವ ಖಾರ್ಕಿವ್‌ನಲ್ಲಿ ರಷ್ಯಾ ಪಡೆಗಳು ಗ್ಯಾಸ್ ಪೈಪ್‌ಲೈನ್ ಅನ್ನು ಸ್ಫೋಟಿಸಿದೆ ಎಂದು ಉಕ್ರೇನ್ ಸರ್ಕಾರ ಭಾನುವಾರ ಹೇಳಿದೆ. ಉಕ್ರೇನ್‌ನಲ್ಲಿ ಇದುವರೆಗೆ ಸುಮಾರು 200 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 150,000 ಕ್ಕೂ ಹೆಚ್ಚು ನಾಗರಿಕರು ಪೋಲೆಂಡ್, ಮೊಲ್ಡೊವಾ ಸೇರಿದಂತೆ ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ. ರಷ್ಯಾದ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳಿಗೆ ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಗಲ್ ಧನ್ಯವಾದ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿ ಇದೀಗ ಭಾರತಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ವಿಪತ್ತು ಎಂಜಿಎಂಟಿ ಪ್ರಾಧಿಕಾರದ ಆಯುಕ್ತರು, ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಮನೋಜ್ ರಾಜನ್, ‘‘ಕರ್ನಾಟಕದ ವಿದ್ಯಾರ್ಥಿಗಳು 5 ಬ್ಯಾಚ್‌ಗಳ ಮತ್ತೊಂದು ಸೆಟ್ ಇಂದು ಆಗಮಿಸುತ್ತಿದೆ. ಹಾಗಾಗಿ ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟು 18 ಮಂದಿ ಕರ್ನಾಟಕದ ವಿದ್ಯಾರ್ಥಿಗಳಿದ್ದಾರೆ. ಸದ್ಯಕ್ಕೆ, ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕಕ್ಕೆ ಸೇರಿದ 386 ಜನರ ವಿವರಗಳು ನಮ್ಮ ಬಳಿಯಿದೆ’’ ಎಂದಿದ್ದಾರೆ.
ರಷ್ಯನ್ ಸೇನೆ ಇದೀಗ ಉಕ್ರೇನ್‌ನ ಎರಡನೇ ದೊಡ್ಡ ನಗರವಾಗಿರುವ ಖಾರ್ಕಿವ್ಅನ್ನು ಪ್ರವೇಶಿಸಿವೆ. ಈ ನಡುವೆ ಉಕ್ರೇನಿಯನ್ನರೊಂದಿಗೆ ಮಾತುಕತೆಗಾಗಿ ರಷ್ಯಾದ ನಿಯೋಗ ಬೆಲಾರಸ್‌ಗೆ ಆಗಮಿಸಿದೆ ಎಂದು ಕ್ರೆಮ್ಲಿನ್ (ರಷ್ಯಾ) ವಕ್ತಾರರು ಹೇಳಿದ್ದನ್ನು ರಾಯಿಟರ್ಸ್ ವರದಿ ಮಾಡಿದೆ. ಬೆಲಾರಸ್ನಲ್ಲಿ ಉಕ್ರೇನ್ ಜತೆಗೆ ಮಾತುಕತೆಗೆ ಸಿದ್ಧ ಎಂದು ರಷ್ಯಾದ ಕ್ರೆಮ್ಲಿನ್ ಘೋಷಿಸಿದೆ. ಮಾತುಕತೆಗೆ ಸಿದ್ಧ ಆದರೆ ಬೆಲಾರಸ್ನಲ್ಲಿ ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಕ್ರಿಯೆ ನೀಡಿದ್ದಾರೆ.
ಉಕ್ರೇನ್ ರೈಲ್ವೇಸ್ ಹೆಚ್ಚುವರಿಯಾಗಿ ತುರ್ತು ರೈಲುಗಳನ್ನು ಉಚಿತವಾಗಿ ಆಯೋಜಿಸುತ್ತಿದೆ. ಮೊದಲಿಗೆ ಕೀವ್ನಿಂದ ಹೊರಡಲಿದೆ. ವೇಳಾಪಟ್ಟಿಯನ್ನು ರೈಲು ನಿಲ್ದಾಣಗಳಲ್ಲಿ ಕಾಣಬಹುದು. ಭದ್ರತಾ ಪರಿಸ್ಥಿತಿ ಮತ್ತು ಪ್ರಸ್ತುತದ ನಿಯಮಗಳಿಗೆ ಒಳಪಟ್ಟು ಯುದ್ಧ ವಲಯಗಳಿಂದ ಪಶ್ಚಿಮ ಪ್ರದೇಶಕ್ಕೆ ತೆರಳಿ ಎಂದು ಭಾರತೀಯ ನಾಗರಿಕರಿಗೆ ಉಕ್ರೇನ್‌ನಲ್ಲಿನ ರಾಯಭಾರ ಕಚೇರಿ ತಿಳಿಸಿದೆ.
ಉಕ್ರೇನ್ ಮೇಲೆ ದಾಳಿಯ ಸಂಬಂಧ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಂತರರಾಷ್ಟ್ರೀಯ ಜೂಡೋ ಫೆಡರೇಶನ್ (ಐಜೆಎಫ್) ಗೌರವ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ಕ್ರೀಡಾ ಆಡಳಿತ ಮಂಡಳಿ ಪ್ರಕಟಿಸಿದೆ.
ಕೀವ್ ಹಾಗೂ ಖಾರ್ಕಿವ್ ನಲ್ಲಿ ಭಾರತೀಯ ವಿದ್ಯಾರ್ಥಿಗಳ ಅರಣ್ಯರೋದನ. ಯಾರೂ ಹೆಲ್ಪ್ ಮಾಡ್ತಿಲ್ಲ ಅಂತಾ ಭಾರತೀಯ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇಂಡಿಯನ್ ಎಂಬಸಿ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ತಾವಿದ್ದ ಕಟ್ಟಡಗಳು, ಹಾಸ್ಟೆಲ್ ಬಿಲ್ಡಿಂಗ್ಗಳ ಕೆಳಗಿರೋ ಬಂಕರ್ಸ್ ಗಳು, ಅಡಗುತಾಣಗಳು ಹಾಗೂ ಮೆಟ್ರೋ ಸ್ಟೇಷನ್ ಸುರಂಗಗಳಲ್ಲಿ ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದಾರೆ. ಅಪಾರ್ಟ್ ಮೆಂಟ್, ಹಾಸ್ಟೆಲ್ ಬಿಲ್ಡಿಂಗ್ ಗಳಿಗೆ ಇದ್ದ ಗ್ಯಾಸ್ ಕನೆಕ್ಷನ್ಸ್, ನೀರಿನ ಕನೆಕ್ಷನ್ ಕಟ್ ಆಗಿದೆ. ಕುಡಿಯೋಕೆ ನೀರಿಲ್ಲ, ತಿನ್ನೋಕೆ ಆಹಾರಕ್ಕೂ ಸಿಗದೇ ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಹೆಲ್ಪ್ ಮಾಡ್ತಿಲ್ಲ ಅಂತಾ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಈವರೆಗೆ ಒಟ್ಟು 3 ಬ್ಯಾಚ್ ನಲ್ಲಿ ಕನ್ನಡಿಗ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಮೊದಲ ಬ್ಯಾಚ್ ನಲ್ಲಿ 12 ವಿದ್ಯಾರ್ಥಿಗಳು ಮುಂಬೈ ಏರ್ ಪೋರ್ಟ್ ಮೂಲಕ ಬೆಳಗ್ಗೆ 8.40ಕ್ಕೆ. ಎರಡನೇ ಬ್ಯಾಚ್ ನಲ್ಲಿ 13 ವಿದ್ಯಾರ್ಥಿಗಳು ದೆಹಲಿ ಏರ್ ಪೋರ್ಟ್ ಮೂಲಕ ಇಂದು ರಾತ್ರಿ 9. ಮತ್ತು ಮೂರನೇ ಬ್ಯಾಚ್ ನಲ್ಲಿ 5 ವಿದ್ಯಾರ್ಥಿಗಳು ದೆಹಲಿ ಏರ್ ಪೋರ್ಟ್ ಮೂಲಕ ಇಂದು ರಾತ್ರಿ 8.25ಕ್ಕೆ ಬೆಂಗಳೂರು ಬಂದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಪರಮಾಣು ಪ್ರತಿಬಂಧಕ ಪಡೆಗೆ ಪುಟಿನ್ ಅಲರ್ಟ್ ಹಿನ್ನೆಲೆ, ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬೆದರಿಕೆ ತಂತ್ರಗಾರಿಕೆ ಹೆಣೆಯುತ್ತಿದೆ ಎಂದು US ಆರೋಪ ಮಾಡಿದೆ. ರಷ್ಯಾದ ಶೆಲ್ ದಾಳಿಯಲ್ಲಿ ಸರಕು ಸಾಗಣೆ ವಿಮಾಣ ಭಸ್ಮಗೊಂಡಿದೆ. ಉಕ್ರೇನ್ ನಿರ್ಮಿತ ವಿಶ್ವದ ಬೃಹತ್ ಸರಕು ಸಾಗಣೆ ವಿಮಾನ ಆಂಟೊನೊವ್-225 ಸುಟ್ಟು ಭಸ್ಮವಾಗಿದೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ನ್ಯಾಟೋ ಮುಖ್ಯಸ್ಥರು ಕಿಡಿ ಕಾರಿದ್ದಾರೆ. ನ್ಯೂಕ್ಲೀಯರ್ ಅಲರ್ಟ್ ಬೇಜವಾಬ್ದಾರಿತನಕ್ಕೆ ಸಾಕ್ಷಿ ಆಗಿದ್ದು, ಇದು ಬೇಜವಾಬ್ದಾರಿತನದ ವಾರ್ನಿಂಗ್ ಎಂದು ನ್ಯಾಟೋ ಮುಖ್ಯಸ್ಥರು ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಒಟ್ಟು 406 ಕನ್ನಡಿಗ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರು ನಗರ 135, ಮೈಸೂರು 28, ಬಾಗಲಕೋಟೆ 24, ದಕ್ಷಿಣ ಕನ್ನಡ 18, ವಿಜಯಪುರ 18, ತುಮಕೂರಿನವರು 17, ಬೆಂಗಳೂರು ಗ್ರಾಮಾಂತರ 18, ಹಾಸನ ಜಿಲ್ಲೆಯವರು 13, ರಾಯಚೂರು 15, ಕೊಡಗು ಜಿಲ್ಲೆಯ 12 ವಿದ್ಯಾರ್ಥಿಗಳು. ಬೆಳಗಾವಿ 12, ಹಾವೇರಿ 10, ಕೋಲಾರದ 9 ವಿದ್ಯಾರ್ಥಿಗಳು, ದಾವಣಗೆರೆ 9, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 8, ಉಡುಪಿ 7, ಬೀದರ್ 6, ಬಳ್ಳಾರಿ 6, ಚಿತ್ರದುರ್ಗದ ಐವರು, ಶಿವಮೊಗ್ಗ 4, ಕಲಬುರಗಿ 4, ಧಾರವಾಡ 4, ಮಂಡ್ಯ 3, ಚಾಮರಾಜನಗರ 4, ಕೊಪ್ಪಳ 3, ರಾಮನಗರ 2, ಗದಗ 2, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈವರೆಗೆ 30 ಕನ್ನಡಿಗ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ಸಾಗಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ತವರಿಗೆ ವಾಪಸ್ಸಾಗಿದ್ದಾರೆ. ಕೆಐಎಬಿಯಲ್ಲಿ ನೋಡಲ್ ಅಧಿಕಾರಿಗೆ ಮನೋಜ್ ಕುಮಾರ್ ಹೇಳಿಕೆ ನೀಡಿದ್ದಾರೆ. ಐದು ಜನರ ತಂಡ ಇದೀಗ ಬೆಂಗಳೂರಿಗೆ ಬಂದಿದ್ದು, 13 ವಿದ್ಯಾರ್ಥಿಗಳು ಅರ್ಧಗಂಟೆಯಲ್ಲಿ ಬರಲಿದ್ದಾರೆ. ಕರ್ನಾಟಕಕ್ಕೆ ಇಂದು ಒಟ್ಟು 31 ಜನ ವಿದ್ಯಾರ್ಥಿಗಳು ಬರಲಿದ್ದಾರೆ. ಉಳಿದ ವಿದ್ಯಾರ್ಥಿಗಳು ಹಂತ ಹಂತವಾಗಿ ಕರೆದುಕೊಂಡು ಬರುತ್ತೇವೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾ-ಉಕ್ರೇನ್ ನಿಯೋಗದಿಂದ ಶಾಂತಿ ಮಾತುಕತೆ ಶುರುವಾಗಿದೆ. ಬೆಲಾರಸ್ನ ಗೋಮೆಲ್ ನಗರದಲ್ಲಿ ಯುದ್ಧ ಆರಂಭ ಬಳಿಕ ಮೊದಲ ಬಾರಿಗೆ ಶಾಂತಿ ಮಾತುಕತೆ ಆರಂಭವಾಗಿದೆ.
ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ವಾಪಸ್ ಹಿನ್ನೆಲೆ, ಮಕ್ಕಳನ್ನ ನೋಡಲು ಪೋಷಕರು ಏರ್ಪೋಟ್ಗೆ ಆಗಮಿಸುತ್ತಿದ್ದಾರೆ. 08:20 ರ ವಿಮಾನದಲ್ಲಿ ಐವರು ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ತುಮಕೂರು ಮೂಲದ ಮಗಳನ್ನ ಬರಮಾಡಿಕೊಳ್ಳಲು ತಾಯಿ ಆಗಮಿಸಿದ್ದಾರೆ. ಮಗಳ ಮುಖ ನೋಡಲು ಕಾತುರದಿಂದ ಕಾಯುತ್ತಿದ್ದು, ಬೆಳಗ್ಗೆ 12 ಗಂಟೆಯಿಂದ ಮಗಳಿಗಾಗಿ ಏರ್ಪೋಟ್ನಲ್ಲೆ ತಾಯಿ ಕಾದು ಕುಳಿತಿದ್ದಾಳೆ. ಎರಡು ದಿನಗಳಿಂದ ಮಗಳ ಮುಖ ನೋಡಿಲ್ಲ ಅಂತ ತಾಯಿಯ ಅಳಲು ತೊಡಿಕೊಂಡಿದ್ದಾರೆ. ಮಗಳ ವಿದ್ಯಾಬ್ಯಾಸಕ್ಕಾಗಿ ಮನೆಯೆಲ್ಲ ಮಾರಿ ಮಗಳನ್ನ ಉಕ್ರೇನ್ ಗೆ ಕಳಿಸಿದ್ದು, ಆದ್ರೆ ಇದೀಗ ಮಗಳ ಭವಿಷ್ಯದ ಬಗ್ಗೆಯು ಪೋಷಕರಲ್ಲಿ ಆತಂಕ ಶುರುವಾಗಿದೆ. ಆತಂಕದ ನಡುವೆಯು ಮಗಳ ಮುಖ ನೋಡಬೇಕು, ಮಾತನಾಡಬೇಕು ಅಂತ ತಾಯಿ ಧನಲಕ್ಷ್ಮೀ, ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾತುರದಿಂದ ಕಾಯುತ್ತಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ಆರಂಭವಾಗಿದ್ದು, ನವದೆಹಲಿಯ ಪ್ರಧಾನಿ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ರಕ್ಷಣಾ ಇಲಾಖೆಯ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತಸಚಿವೆ ನಿರ್ಮಲಾ, ವಿದೇಶಾಂಗ ಇಲಾಖೆ ಸಚಿವ ಡಾ.ಎಸ್.ಜೈಶಂಕರ್, ಎನ್ಎಸ್ಎ ಅಜಿತ್ ದೋವಲ್ ಸಭೆಯಲ್ಲಿ ಉಪಸ್ಥಿತರಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರೆದಿದೆ. ಪರಮಾಣು ಪ್ರತಿಬಂಧಕ ಪಡೆಗೆ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಕ್ರಮ ಕೈಗೊಳ್ಳುತ್ತಿವೆ. ಸ್ನೇಹಪರವಲ್ಲದ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಹೀಗಾಗಿ ರಷ್ಯಾ ಸೇನೆಯ ಪ್ರತಿಬಂಧಕ ಸೇನಾ ಮುಖ್ಯಸ್ಥರ ಮೂಲಕ ವ್ಲಾಡಿಮಿರ್ ಪುಟಿನ್ ಅಲರ್ಟ್ ಘೋಷಿಸಿದ್ದಾರೆ.
ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನ ವಿಶೇಷ ಫ್ಲೈಟ್ ಹೊತ್ತುತಂದಿದೆ. ಉಕ್ರೇನ್‌ನಿಂದ ದೆಹಲಿಗೆ ಮತ್ತೊಂದು ವಿಶೇಷ ವಿಮಾನ ಬಂದಿದೆ.
ಉಕ್ರೇನ್ ಮೇಲೆ ಯುದ್ಧ ರಷ್ಯಾ ಸೇನೆ ಮುಂದುವರಿಸಿದೆ. ಖಾರ್ಕಿವ್‌ನಲ್ಲಿ ಬಂಕರ್ನಲ್ಲಿ 150 ಕನ್ನಡಿಗರು ಸಿಲುಕಿದ್ದು, ಬಂಕರ್ನಲ್ಲಿರುವ ಜನರ ಮೇಲೆ ರಷ್ಯಾ ಸೈನಿಕರಿಂದ ಹಲ್ಲೆ ಮಾಡಲಾಗುತ್ತಿದೆ. ಪೋಲೆಂಡ್ ಗಡಿಯಲ್ಲಿ ಭಾರತೀಯರ ಕೂಡ ಮೇಲೆ ಹಲ್ಲೆ ಮಡಿದ್ದು, ಭಾರತೀಯರು ಸೇರಿ ವಿವಿಧ ದೇಶದ ಜನರ ಮೇಲೆ ಹಲ್ಲೆ ಮಾಡಲಾಗಿದೆ.
ಉಕ್ರೇನ್ ಮೇಲೆ ಯುದ್ಧ ರಷ್ಯಾ ಸೇನೆ ಮುಂದುವರಿಸಿದೆ. ಕೆಲಹೊತ್ತಿನಲ್ಲೇ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಸಭೆ ನಡೆಯಲಿದ್ದು, ಉಕ್ರೇನ್‌ನಲ್ಲಿ ಸದ್ಯದ ಪರಿಸ್ಥಿತಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಜೊತೆಗೆ ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರ ಬಗ್ಗೆ ಮಾತುಕತೆ ನಡೆಸಲಾಗುವುದು.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರೆಸಿದ್ದು, ಕೂಡಲೇ ರಷ್ಯಾ ಸೇನೆ ವಾಪಸ್ ಪಡೆಯುವಂತೆ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಯರ್ ಒತ್ತಾಯಿಸಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆತರುತ್ತೇವೆ. ಇನ್ನೂ ಸಾವಿರಾರು ಭಾರತೀಯರು ಉಕ್ರೇನ್‌ನಲ್ಲಿದ್ದಾರೆ. ಭಾರತೀಯರನ್ನು ಶೀಘ್ರ ಸ್ಥಳಾಂತರಕ್ಕೆ ಹಗಲು, ರಾತ್ರಿ ಶ್ರಮಿಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಬಸ್ತಿಯಲ್ಲಿ ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ ಸೇನೆ, ನಾಲ್ಕು ದೇಶಗಳ ಗಡಿಗಳ ಮೂಲಕ ಭಾರತೀಯರ ಸ್ಥಳಾಂತರ ಮಾಡಲಾಗುವುದು ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಹೇಳಿಕೆ ನೀಡಿದ್ದಾರೆ. ಪೋಲೆಂಡ್ ಗಡಿ ಮೂಲಕ 1 ಸಾವಿರ ಜನರು ಸ್ಥಳಾಂತರಗೊಂಡಿದ್ದು, ಕೀವ್‌ನಲ್ಲಿ ಇನ್ನೂ 2 ಸಾವಿರ ಭಾರತೀಯರು ಸಿಲುಕಿದ್ದಾರೆ. ಒಂದು ಸಾವಿರ ಭಾರತೀಯರ ಸ್ಥಳಾಂತರಕ್ಕೆ ಸಿದ್ಧತೆ ನಡೆದಿದ್ದು, ಉಕ್ರೇನ್, ರಷ್ಯಾ ರಾಯಭಾರಿಗಳ ಜೊತೆ ಚರ್ಚಿಸಲಾಗಿದೆ ಎಂದರು.
ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ ಸೇನೆ, ಲಿಥುವೇನಿಯಾ ದೇಶ ಮಧ್ಯಪ್ರವೇಶಿಸಿದ್ರೆ ಪರಮಾಣು ಶಸ್ತ್ರಾಸ್ತ್ರ ನಿಯೋಜಿಸುವುದಾಗಿ ಬೆಲಾರಸ್ ದೇಶ ಎಚ್ಚರಿಕೆ ನೀಡಿದೆ. ಇನ್ನೂ ರಷ್ಯಾ ಸೇನೆಯಿಂದ ಉಕ್ರೇನ್ ಖಾರ್ಕಿವ್ ನಗರವನ್ನು ಮರು ವಶಪಡಿಸಿಕೊಂಡಿದೆ. ಸದ್ಯ ರಾಜಧಾನಿ ಕೀವ್ ನಗರದಲ್ಲಿ 3 ಬಾಂಬ್‌ಗಳು ಸ್ಫೋಟಗೊಂಡಿವೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು ಒಂದು ಕಡೆಯಾದರೇ, ಉಕ್ರೇನ್ ಗಡಿಯಲ್ಲಿ ಭಾರತೀಯರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಹಲ್ಲೆ ಮಾಡುತ್ತಿರುವ ದೃಶ್ಯಗಳನ್ನು ಬಾಗಲಕೋಟೆಯ ಕಿರಣ ಸವದಿ ಹಂಚಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದವರಾದ ಕಿರಣ ಸವದಿ, ಖಾರ್ಕಿವ್ ನ್ಯಾಷನಲ್‌ಮೆಡಿಕಲ್ ಯುನಿವರ್ಸಿಟಿ ಎಮ್ ಬಿ ಬಿ ಎಸ್ ಓದುತ್ತಿದ್ದಾರೆ. ಲಗೇಜ್ ತೆಗೆದುಕೊಂಡು ಗಡಿಯಲ್ಲಿ ಬಂದವರ ಮೇಲೆ ಹಲ್ಲೆ ಮಾಡಲಾಗುತ್ತಿದ್ದು, ಹಲ್ಲೆ ಮಾಡುತ್ತಿರುವವರು ಯಾರು ಅಂತ ಗೊತ್ತಾಗುತ್ತಿಲ್ಲ ಎಂದು ವಿಡಿಯೋದಲ್ಲಿ ಕಿರಣ ಸವದಿ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಮಾತುಕತೆ ಕುರಿತು ಉಕ್ರೇನ್‌ಗೆ ನಾಳೆ ಮಧ್ಯಾಹ್ನ 3ರವರೆಗೆ ರಷ್ಯಾ ಡೆಡ್ಲೈನ್ ನೀಡಿದೆ.
ಬಳ್ಳಾರಿ: ಉಕ್ರೇನ್ ಹಾಗೂ ಸ್ಲೋವೋಕಿಯಾ ಬಾರ್ಡರ್‌ನಲ್ಲಿ ಭಾರತದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ. ಉಕ್ರೇನ್ ಇವಾನೋ ಪ್ರಾಂಕ್ ನಿಂದ ಸ್ಲೋವೋಕಿಯಾ ದೇಶಕ್ಕೆ ವಿದ್ಯಾರ್ಥಿಗಳು ಹೊರಟಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸೂಚನೆ ಮೇರೆಗೆ ಸ್ಲೋವೋಕಿಯಾಗೆ ವಿದ್ಯಾರ್ಥಿಗಳು ಹೊರಟಿದ್ದು, ಆದ್ರೆ ಸ್ಲೋವೋಕಿಯಾ ಬಾರ್ಡರ್ ನಲ್ಲಿ ಭಾರತೀಯರನ್ನ ಸ್ಲೋಕಿಯಾ ಪಡೆ ತಡೆದಿದೆ. ಬಳ್ಳಾರಿ ಇಬ್ಬರು ವಿದ್ಯಾರ್ಥಿಗಳು ಸೇರಿ ಕರ್ನಾಟಕದ ಹಲವು ವಿದ್ಯಾರ್ಥಿಗಳ ಅರಣ್ಯ ರೋಧನೆ ಪಡುತ್ತಿದ್ದು, ಬಳ್ಳಾರಿ ವಿದ್ಯಾರ್ಥಿ ಅಲ್ಲಿನ ಪ್ರತ್ಯಕ್ಷ ವರದಿ ಕೊಟ್ಟು ಕಾಪಾಡುವಂತೆ ಮನವಿ ಮಾಡಿದ್ದಾನೆ.
ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತೇವೆ ಎಂದು ಜರ್ಮನ್ ಛಾನ್ಸಲರ್ ಒಲಾಫ್ ಸ್ಕೋಲ್ಜ್ ಹೇಳಿಕೆ ನೀಡಿದ್ದಾರೆ. ಪ್ರಸಕ್ತ ವರ್ಷ ರಕ್ಷಣಾ ಕ್ಷೇತ್ರದ ವೆಚ್ಚವನ್ನು 100 ಬಿಲಿಯನ್ ಯುರೋಗೆ ಹೆಚ್ಚಿಸುತ್ತೇವೆ. ರಷ್ಯಾ ಮೇಲಿನ ಶಸ್ತ್ರಾಸ್ತ್ರ ಅವಲಂಬನೆ ಕಡಿಮೆ ಮಾಡಲು ದೇಶೀಯ LNG ಟರ್ಮಿನಲ್‌ಗಳನ್ನು ನಿರ್ಮಿಸುತ್ತೇವೆ ಎಂದು ಜರ್ಮನ್ ಛಾನ್ಸಲರ್ ಒಲಾಫ್ ಸ್ಕೋಲ್ಜ್ ಹೇಳಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ ಸೇನೆ, ಉಕ್ರೇನ್ ನಿರಾಶ್ರಿತರ ಸಂಖ್ಯೆ 3,68,000ಕ್ಕೆ ಏರಿಕೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ರಷ್ಯಾದ ಎಲ್ಲ ವಿಮಾನಗಳಿಗೆ ಬೆಲ್ಜಿಯಂ ನಿರ್ಬಂಧ ಹೇರಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಸರ್ಕಾರದ ವೆಚ್ಚದಲ್ಲಿ ದೇಶಕ್ಕೆ ಕರೆತರಲಾಗುವುದು. ಈ ಉದ್ದೇಶಕ್ಕಾಗಿ ಅವರ ಅನುಮತಿಯೊಂದಿಗೆ ಉಕ್ರೇನ್‌ನ ನೆರೆಯ ದೇಶಗಳಿಗೆ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಸಾರಿದೆ. ರಷ್ಯಾ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಉಕ್ರೇನ್ ಅರ್ಜಿ ಸಲ್ಲಿಸಿದ್ದು, ಮಿಲಿಟರಿ ಚಟುವಟಿಕೆ ನಿಲ್ಲಿಸುವಂತೆ ಆದೇಶ ನೀಡಲು ಮನವಿ ಮಾಡಿದಕೊಂಡಿದೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಭಾರತದಿಂದ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಏರ್‌ಲಿಫ್ಟ್ ಮಾಡಲು ವಿಶೇಷ ವಿಮಾನ ಸಿದ್ಧ ಪಡಿಸಿದ್ದು, ದೆಹಲಿಯಿಂದ ಬುಕಾರೆಸ್ಟ್‌ಗೆ ವಿಶೇಷ ವಿಮಾನ ತೆರಳಿದೆ. ಉಕ್ರೇನ್‌ನಿಂದ ಬುಕಾರೆಸ್ಟ್‌ಗೆ ಕರೆಸಿ ಅಲ್ಲಿಂದ ಭಾರತೀಯರನ್ನು ಏರ್‌ಲಿಫ್ಟ್‌ಗೆ ಕ್ರಮ ಕೈಗೊಳ್ಳಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ ರಷ್ಯಾ ಸೇನೆಯನ್ನ ಹೊಗಳುವುದರ ಜೊತೆಗೆ ಧ್ಯನ್ಯವಾದ ಕೂಡ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾದ 146 ಯುದ್ಧ ಟ್ಯಾಂಕ್‌ಗಳನ್ನು ಧ್ವಂಸಗೊಳಿಸಿದ್ದು, ಈವರೆಗೆ ರಷ್ಯಾದ 4300 ಸೇನಾ ಯೋಧರು ಮೃತಪಟ್ಟಿದ್ದಾರೆ. ರಷ್ಯಾದ ಜೊತೆ ಯುದ್ಧದ ಬಗ್ಗೆ ಉಕ್ರೇನ್ ಸೇನೆ ಮಾಹಿತಿ ನೀಡಿದೆ. ಉಕ್ರೇನ್ ವಿಚಾರವಾಗಿ ಇಂದು ರಾತ್ರಿ UNSC ವಿಶೇಷ ಸಭೆ ನಡೆಯಲಿದೆ.
ಕಾರವಾರ: ಉಕ್ರೇನ್‌ನಲ್ಲಿ ಬನವಾಸಿಯ ಯುವಕಯೊರ್ವ ಸಿಲುಕಿಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಇಮ್ರಾನ್ ನಜೀರ್ ಚೌದರಿ (21) ಎನ್ನುವ ಯುವಕ ಸಿಲುಕಿಕೊಂಡಿದ್ದಾನೆ. ಬೆಳಿಗ್ಗೆಯಿಂದ ಪೋನ್ ಸಂಪರ್ಕಕ್ಕೆ ಸಿಗದಿಂದ ಮಗನನ್ನು ನೆನದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಬಹಳ ಪ್ರೀತಿಯಿಂದ ಮಗನನ್ನು ಬೆಳಸಿದ್ದೆವಿ, ಕಷ್ಟಪಟ್ಟು ಹಣ ಹೊಂದಿಸಿ ಅಲ್ಲಿಗೆ ಓದಲಿಕ್ಕೆ ಕಳಿಸಿದೇವೆ. ಈಗ ನೋಡಿದರೆ ಹಿಂಗೆ ಆಗಿದೆ ಎಂದು ಬನವಾಸಿ ತಹಶಿಲ್ದಾರರ ಮುಂದೆ ಪೋಷಕರ ಕಣ್ಣೀರು ಹಾಕಿದ್ದಾರೆ. ನಿನ್ನೆ ಸಂಜೆ ಸ್ನೇಹಿತರೊಂದಿಗೆ ಬಸ್ ಮೂಲಕ ರೋಮ್‌ಗೆ ಹೋಗುತ್ತಿದ್ದೇವೆ ಎಂದು ಹೇಳಿದ್ದ. ರೋಮ್‌ಗೆ ಹೋಗುತ್ತಿದ್ದಂತೆ ಪೋಷಕರಿಗೆ ಫೋನ್ ಮಾಡಿ ಇಲ್ಲಿ ಬಹಳ ಹಿಮ ಬಿಳುತ್ತಿದೆ, ನಮ್ಮನ್ನು ಬಾರ್ಡರ್ ಒಳಗೆ ಬಿಡುತ್ತಿಲ್ಲ. ಉಕ್ರೇನ್‌ನಲ್ಲಿ ಸೇಪ್ ಅಲ್ಲಾ ಅಂತಾ ರೋಮ್‌ಗೆ ಬಂದಿದ್ದೆವೆ. ಆದರೆ ಸಾಲುಗಟ್ಟಿ ನಮ್ಮನ್ನ ಇಲ್ಲಿ ನಿಲೆಸಿದ್ದಾರೆ. 24 ಜನ ಕರ್ನಾಟಕ ವಿದ್ಯಾರ್ಥಿಗಳು ಇದ್ದೆವೆ. ಚಳಿ ಬಹಳ ಇದ್ದು, ಊಟಕ್ಕೂ ಸಿಕ್ಕಿಲ್ಲ. ರೋಮ್‌ನಲ್ಲಿ ಬಾರ್ಡರ್ ಒಳಗೆ ಬಿಡುತ್ತಿಲ್ಲ ಎಂದು ಪೋಷಕರ ಮುಂದೆ ಯುವಕ ಅಳಲು ತೋಡಿಕೊಂಡಿದ್ದಾನೆ. ನಮ್ಮ ಮಗನ್ನ ಹೇಗಾದರು ಮಾಡಿ ಕಾಪಾಡಿ ಎಂದು ಪೋಷಕರು ಕೇಳಿಕೊಳ್ಳುತ್ತಿದ್ದಾರೆ.
ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣದಿಂದ ಪಾರಾಗುವ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ವೀಸಾ ಇಲ್ಲದೆ ಪೋಲೆಂಡ್‌ಗೆ ಪ್ರವೇಶಿಸಲು ದೇಶವು ಅವಕಾಶ ನೀಡುತ್ತಿದೆ ಎಂದು ಭಾರತಕ್ಕೆ ಪೋಲೆಂಡ್ ರಾಯಭಾರಿ ಆಡಮ್ ಬುರಾಕೊವ್ಸ್ಕಿ ತಿಳಿಸಿದ್ದಾರೆ.
ಚೆರ್ನೋಬಿಲ್ ಸ್ಥಾವರದಿಂದ ವಿಕಿರಣ ಸೋರಿಕೆ ಆಗುತ್ತಿದೆ ಎಂದು ವರದಿಯಾಗಿತ್ತು. ಇದನ್ನು ಅಲ್ಲಗಳೆದಿರುವ ರಷ್ಯಾ, ವಿಕಿರಣ ಸೋರಿಕೆ ಆಗುತ್ತಿಲ್ಲವೆಂದು ಸ್ಪಷ್ಟನೆ ನೀಡಿದೆ. ಪ್ರಸ್ತುತ ಚೆರ್ನೋಬಿಲ್ ಸ್ಥಾವರ ರಷ್ಯಾ ವಶದಲ್ಲಿದೆ.
ಉಕ್ರೇನ್ ರಕ್ಷಣಾ ಸಚಿವಾಲಯದ ಮಾಹಿತಿಯಂತೆ ರಷ್ಯಾ ಈವರೆಗೆ 4,300 ಸೈನಿಕರನ್ನು ಕಳೆದುಕೊಂಡಿದೆ. 146 ಟ್ಯಾಂಕ್‌ಗಳನ್ನು ಉಕ್ರೇನ್ ಹೊಡೆದುರುಳಿಸಿದೆ ಎಂದು ಉಕ್ರೇನ್‌ನ ಉಪ ರಕ್ಷಣಾ ಮಂತ್ರಿ ಹೇಳಿದ್ದಾರೆ.
ರಷ್ಯಾದ ವಿಮಾನಗಳಿಗೆ ಫಿನ್ಲ್ಯಾಂಡ್ ನಿರ್ಬಂಧ ವಿಧಿಸಿತ್ತು. ಇದೀಗ ಈ ಪಟ್ಟಿಗೆ ಡೆನ್ಮಾರ್ಕ್ ಕೂಡ ಸೇರ್ಪಡೆಯಾಗಿದೆ.
ಉಕ್ರೇನ್‌ನಲ್ಲಿ ಕನಿಷ್ಠ 64 ನಾಗರಿಕರು ಹತ್ಯೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಒಟ್ಟು 240ಕ್ಕೂ ಹೆಚ್ಚು ಸಾವು-ನೋವುಗಳು ವರದಿಯಾಗಿವೆ ಎಂದು ಅದು ಹೇಳಿದೆ.
ಉಕ್ರೇನ್ ಮೇಲೆ ದಾಳಿ ಮಾಡಿದ ನಂತರ ಜಗತ್ತಿನ ನಿರ್ಬಂಧ ರಷ್ಯಾದ ಮೇಲೆ ಹೆಚ್ಚಾಗಿದೆ. ಈ ಮೊದಲು ರಷ್ಯಾದ ಸರ್ಕಾರಿ ಖಾತೆಗಳಿಗೆ ಜಾಹಿರಾತುಗಳಿಂದ ಹಣ ಬರದಂತೆ ಫೇಸ್‌ಬುಕ್ ಹಾಗೂ ಯುಟ್ಯೂಬ್ ನಿರ್ಬಂಧಿಸಿತ್ತು. ಇದೀಗ ಯುಟ್ಯೂಬ್ ಮಾತೃಸಂಸ್ಥೆ ಗೂಗಲ್ ಕೂಡ ಇದೇ ನಿರ್ಧಾರ ಕೈಗೊಂಡಿದೆ.
ಖಾರ್ಕಿವ್ ನಗರ ಪ್ರವೇಶಿಸಿದ ರಷ್ಯಾದ ಪಡೆಗಳಲ್ಲಿ ಅರ್ಧದಷ್ಟು ನಾಶವಾಗಿದೆ ಎಂದು ಉಕ್ರೇನ್ ಅಧ್ಯಕ್ಷೀಯ ಸಲಹೆಗಾರರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ದಕ್ಷಿಣ ಭಾಗದಿಂದ ರಷ್ಯಾ ಪಡೆ ಮುಂದುವರೆಯುತ್ತಿರುವುದು ಕಾಣಿಸುತ್ತಿಲ್ಲ ಎಂದು ಉಕ್ರೇನ್ ಹೇಳಿದೆ.
ಬ್ರಿಟನ್ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಅವರು ಉಕ್ರೇನ್ ಕುರಿತು ರಷ್ಯಾದೊಂದಿಗೆ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಮಾಸ್ಕೋ ತನ್ನ ನೆರೆಹೊರೆಯಲ್ಲಿ ಸೈನ್ಯವನ್ನು ಹೊಂದಿದೆ, ಸಂಘರ್ಷವು ದೀರ್ಘವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಾತುಕತೆಯು ಗಂಭೀರವಾಗಿ ನಡೆಯಬೇಕಿದ್ದರೆ ರಷ್ಯಾವು ಹಿಂದೆ ಸರಿಯಬೇಕು ಎಂದು ಲಿಜ್ ಸ್ಕೈ ನ್ಯೂಸ್ಗೆ ಹೇಳಿದ್ದಾರೆ. ಈ ಸಂಘರ್ಷ ಇನ್ನೂ ದೀರ್ಘಕಾಲ ಇರಬಹುದು. ಜಗತ್ತು ಮಾಸ್ಕೋದ ಸಂಘರ್ಷ ಎದುರಿಸಲು ಸಿದ್ಧರಾಗಬೇಕು ಎಂದು ಅವರು ಹೇಳಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಈ ಹಿಂದೆ ಭದ್ರತಾ ಸಂಸ್ಥೆಯಲ್ಲಿ ಮತದಾನದಿಂದ ಹಿಂದೆ ಉಳಿದಿತ್ತು. ಈಗ ಅದು ಮಾತನಾಡಿ, ಈ ಸಂದರ್ಭದಲ್ಲಿ ಯಾವುದೇ ಪಕ್ಷದ ವಹಿಸಬಾರದು. ರಾಜಕೀಯವಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಉಕ್ರೇನ್‌ಗೆ ಎಚ್ಚರಿಕೆ ನೀಡಿದ್ದು, ಉಕ್ರೇನ್ ರಾಜ್ಯತ್ವ ಕಳೆದುಕೊಳ್ಳಬಾರದೆಂದರೆ ಕುಳಿತು ಮಾತನಾಡಬೇಕು ಎಂದಿದ್ದಾರೆ.
ರಷ್ಯಾವು ಖಾರ್ಕಿವ್ ನಗರ ಪ್ರದೇಶಿಸಿದ್ದರೂ ನಗರವು ಉಕ್ರೇನ್‌ನ ವಶದಲ್ಲಿಯೇ ಇದೆ ಎಂದು ಉಕ್ರೇನ್ ಹೇಳಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾವು ಮತ್ತಷ್ಟು ನಾಗರಿಕರನ್ನು ಗುರಿಯಾಗಿಸಿದೆ ಎಂದು ಆರೋಪಿಸಿದ್ದಾರೆ. ರಷ್ಯಾದ ದಾಳಿಯ ಕ್ರಮಗಳು ನರಮೇಧವನ್ನು ಹೋಲುತ್ತವೆ ಎಂದು ಉಕ್ರೇನ್ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾದ ಮತದಾನದ ಹಕ್ಕನ್ನು ರದ್ದುಗೊಳಿಸಬೇಕು ಎಂದೂ ಒತ್ತಾಯಿಸಲಾಗಿದೆ.
ಶರಣಾದ 471 ಉಕ್ರೇನಿಯನ್ ಸೈನಿಕರನ್ನು ಖಾರ್ಕಿನ್ನಲ್ಲಿ ಬಂಧಿಸಲಾಗಿದೆ. 223 ಟ್ಯಾಂಕ್‌ಗಳು ಮತ್ತು ಇತರ ಶಸ್ತ್ರಸಜ್ಜಿತ ಯುದ್ಧ ವಾಹನಗಳು, 28 ವಿಮಾನಗಳು, 39 ಮಲ್ಟಿಪಲ್ ರಾಕೆಟ್ ಲಾಂಚರ್‌ಗಳು, 143 ವಿಶೇಷ ಮಿಲಿಟರಿ ವಾಹನಗಳು ಸೇರಿದಂತೆ ಹಲವು ಮಿಲಿಟರಿ ಉಪಕರಣಗಳು ನಾಶವಾಗಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆನ್‌ಲೈನ್ ಭಾಷಣದಲ್ಲಿ ಮಾತನಾಡಿ, ಉಕ್ರೇನ್ ತನ್ನ ಅಂತರರಾಷ್ಟ್ರೀಯ ಮಿತ್ರರಾಷ್ಟ್ರಗಳಿಂದ ಪಡೆಯುತ್ತಿರುವ ಸಹಾಯವನ್ನು ಶ್ಲಾಘಿಸಿದರು. ‘ನಾವು ಶಸ್ತ್ರಾಸ್ತ್ರಗಳು, ಔಷಧಿ, ಆಹಾರ, ಡೀಸೆಲ್ ಮತ್ತು ಆರ್ಥಿಕ ಸಹಾಯ ಪಡೆಯುತ್ತಿದ್ದೇವೆ’ ಎಂದು ಅವರು ಹೇಳಿದರು. ‘ಉಕ್ರೇನ್‌ಗೆ ಬೆಂಬಲವಾಗಿ ಯುದ್ಧ ವಿರೋಧಿಗಳ ಪ್ರಬಲ ಒಕ್ಕೂಟವನ್ನು ರಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಉಕ್ರೇನ್ ಮೇಲೆ ದಾಳಿಯ ಸಂಬಂಧ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಂತರರಾಷ್ಟ್ರೀಯ ಜೂಡೋ ಫೆಡರೇಶನ್ (ಐಜೆಎಫ್) ಗೌರವ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ಕ್ರೀಡಾ ಆಡಳಿತ ಮಂಡಳಿ ಪ್ರಕಟಿಸಿದೆ.
#UPDATE Russian president Vladimir Putin has been suspended as honorary president of the International Judo Federation (IJF) due to Russia’s invasion of Ukraine the sport’s governing body announced#AFPSports pic.twitter.com/mQsdTkHQRk
— AFP News Agency (@AFP) February 27, 2022
ಕಳೆದ ರಾತ್ರಿ ಕ್ರೂರವಾಗಿತ್ತು. ನಾಗರಿಕರ ನಿವಾಸಗಳ ಮೇಲೆ ರಷ್ಯಾ ದಾಳಿ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಮಿಲಿಟರಿ ಪಡೆಗಳೇ ಇಲ್ಲದ ಪ್ರದೇಶಗಳಲ್ಲೂ ರಷ್ಯನ್ ಪಡೆಗಳು ದಾಳಿ ಮಾಡುತ್ತಿವೆ. ಆಂಬುಲೆನ್ಸ್ ಸೇರಿದಂತೆ ಎಲ್ಲವುಗಳ ಮೇಲೂ ದಾಳಿಯಾಗುತ್ತಿದೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಉಕ್ರೇನ್ ರೈಲ್ವೇಸ್ ಹೆಚ್ಚುವರಿಯಾಗಿ ತುರ್ತು ರೈಲುಗಳನ್ನು ಉಚಿತವಾಗಿ ಆಯೋಜಿಸುತ್ತಿದೆ. ಮೊದಲಿಗೆ ಕೀವ್ನಿಂದ ಹೊರಡಲಿದೆ. ವೇಳಾಪಟ್ಟಿಯನ್ನು ರೈಲು ನಿಲ್ದಾಣಗಳಲ್ಲಿ ಕಾಣಬಹುದು. ಭದ್ರತಾ ಪರಿಸ್ಥಿತಿ ಮತ್ತು ಪ್ರಸ್ತುತದ ನಿಯಮಗಳಿಗೆ ಒಳಪಟ್ಟು ಯುದ್ಧ ವಲಯಗಳಿಂದ ಪಶ್ಚಿಮ ಪ್ರದೇಶಕ್ಕೆ ತೆರಳಲು ಭಾರತೀಯ ನಾಗರಿಕರಿಗೆ ಸಲಹೆಯನ್ನು ಉಕ್ರೇನ್ ರಾಯಭಾರ ಕಚೇರಿ ನೀಡಿದೆ.
Ukraine Railways is additionally organising emergency trains at no cost, first come basis from Kyiv. Schedule can be found at train stations.
??n diaspora is advised to move away from conflict zones to the Western region subject to security situation and the extant regulations.— India in Ukraine (@IndiainUkraine) February 27, 2022
ಉಕ್ರೇನ್ ಮೂಲಕ ಯುರೋಪ್‌ಗೆ ದೇಶದ ಅನಿಲ ರಫ್ತು ಸಾಮಾನ್ಯವಾಗಿ ಮುಂದುವರೆದಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಗಾಜ್‌ಪ್ರೊಮ್ ಭಾನುವಾರ ಹೇಳಿದೆ.
ಕೀವ್ನಿಂದ 37 ಕಿಮೀ ದೂರದ ವಾಸಿಲ್ಕಿವ್ನಲ್ಲಿ ಮಕ್ಕಳ ಆಶ್ರಯಧಾಮವೊಂದರ ಮೇಲೆ ರಷ್ಯಾದ ಕ್ಷಿಪಣಿಗಳು ದಾಳಿ ನಡೆಸಿದ ವಿಡಿಯೋವನ್ನು ಉಕ್ರೇನ್‌ನ ಸಂಸದೆಯೊಬ್ಬರು ಹಂಚಿಕೊಂಡಿದ್ದಾರೆ. ಉಕ್ರೇನ್ ನಾಗರಿಕರ ಹತ್ಯೆಯಿಂದ ರಕ್ಷಿಸಿ ಎಂದು ಅವರು ಕೋರಿಕೊಂಡಿದ್ದಾರೆ.
This is a children’s home in Vasylkiv, 37 km from #Kyiv. Shot at by @Russia missiles. The black smoke behind is the oil depot that was targeted by #Russia missiles. #SaveTheChildrenOfUkraine #CivilianCasualties pic.twitter.com/lZRznfIsfp
— Lesia Vasylenko (@lesiavasylenko) February 27, 2022
ರಷ್ಯಾವು ಉಕ್ರೇನ್ನೊಂದಿಗೆ ಮಾತುಕತೆಗೆ ಸಿದ್ಧವಾಗಿದೆ ಎಂದಿದೆ. ಇತ್ತ ಉಕ್ರೇನ್ ಕೂಡ ತಾನು ಮಾತುಕತೆಗೆ ಸಿದ್ಧ ಎಂದು ಹೇಳಿಕೊಂಡಿದೆ. ಆದರೆ ಎರಡೂ ಪಕ್ಷಗಳಲ್ಲಿ ಯಾವ ಪ್ರದೇಶದಲ್ಲಿ ಮಾತುಕತೆ ನಡೆಸಬೇಕು ಎಂಬ ಗೊಂದಲಗಳಿವೆ. ರಷ್ಯಾವು ಉಕ್ರೇನ್ಅನ್ನು ಬೆಲಾರಸ್‌ಗೆ ಆಹ್ವಾನಿಸಿದೆ. ರಷ್ಯಾದ ನಿಯೋಗ ಕೂಡ ಬೆಲಾರಸ್ನಲ್ಲಿದೆ. ಆದರೆ ಉಕ್ರೇನ್ ಈ ಆಹ್ವಾನವನ್ನು ಒಪ್ಪುತ್ತಿಲ್ಲ. ಇದಕ್ಕೆ ತನ್ನದೇ ಆದ ಕಾರಣಗಳನ್ನು ಉಕ್ರೇನ್ ನೀಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋ ಸಂದೇಶದಲ್ಲಿ ಮಾತನಾಡಿ, ‘‘ಉಕ್ರೇನ್‌ಗೆ ಮಾತುಕತೆ ನಡೆಸಲು ಮುಕ್ತ ಮನಸ್ಸಿದೆ. ಆದರೆ ಬೆಲಾರಸ್ನಲ್ಲ. ಕಾರಣ, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲುಬೆಲಾರಸ್ಅನ್ನು ಲಾಂಚ್ ಪ್ಯಾಡ್ನಂತೆ ಬಳಸುತ್ತಿದೆ. ಆದ್ದರಿಂದ ಅಲ್ಲಿ ಮಾತುಕತೆ ನಡೆಸುವುದಿಲ್ಲ’’ ಎಂದಿದೆ. ಅಷ್ಟೇ ಅಲ್ಲ, ಈ ಮಾತುಕತೆಗೆ ‘ವಾರ್ಸಾ, ಬ್ರಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್, ಬಕು’ ಮೊದಲಾದ ಪ್ರದೇಶಗಳನ್ನು ಹೆಸರಿಸಿದ್ದೆವು’ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
#UPDATE President Volodymyr Zelensky said Ukraine is willing to hold talks with Russia – but not in neighbouring Belarus as it is being used as a launchpad for the invasion.
“Warsaw, Bratislava, Budapest, Istanbul, Baku. We proposed all of them,” he said in an online address.
— AFP News Agency (@AFP) February 27, 2022
ಉಕ್ರೇನ್‌ನಲ್ಲಿರುವ ಭಾರತೀಯರು, ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ಹಗಲಿರುಳು ಶ್ರಮಿಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನುಡಿದಿದ್ದಾರೆ.
ಮಾತುಕತೆಗೆ ಸಿದ್ಧ ಆದರೆ ಬೆಲಾರಸ್ನಲ್ಲಿ ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
#BREAKING Zelensky says ready for talks with Russia, but not in Belarus pic.twitter.com/uew5fSvJJ7
— AFP News Agency (@AFP) February 27, 2022
ಉಕ್ರೇನಿಯನ್ನರೊಂದಿಗೆ ಮಾತುಕತೆಗಾಗಿ ರಷ್ಯಾದ ನಿಯೋಗ ಬೆಲಾರಸ್‌ಗೆ ಆಗಮಿಸಿದೆ ಎಂದು ಕ್ರೆಮ್ಲಿನ್ (ರಷ್ಯಾ) ವಕ್ತಾರರು ಹೇಳಿದ್ದನ್ನು ರಾಯಿಟರ್ಸ್ ವರದಿ ಮಾಡಿದೆ. ಬೆಲಾರಸ್ನಲ್ಲಿ ಉಕ್ರೇನ್ ಜತೆಗೆ ಮಾತುಕತೆಗೆ ಸಿದ್ಧ ಎಂದು ರಷ್ಯಾದ ಕ್ರೆಮ್ಲಿನ್ ಘೋಷಿಸಿತ್ತು. ಈ ಕುರಿತು ರಷ್ಯನ್ ಮಾಧ್ಯಮಗಳು ವರದಿ ಮಾಡಿದ್ದವು.
ಉಕ್ರೇನ್‌ನಲ್ಲಿ ಹೋರಾಡುತ್ತಿರುವ ತಮ್ಮ ದೇಶದ ಪಡೆಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಂದನೆ ಸಲ್ಲಿಸಿದ್ದಾರೆ. ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ವರದಿಗಳು ಹೇಳಿವೆ.
ರಷ್ಯಾದ ವಿಮಾನಗಳಿಗೆ ಫಿನ್ಲ್ಯಾಂಡ್ ನಿರ್ಬಂಧ ಹೇರಿದೆ. ಈ ಹಿಂದೆ ಹಲವು ರಾಷ್ಟ್ರಗಳು ರಷ್ಯಾದ ವಿಮಾನಗಳ ಮೇಲೆ ನಿರ್ಬಂಧ ಹೇರಿದ್ದವು. ಈ ಸಾಲಿಗೆ ಫಿನ್ಲ್ಯಾಂಡ್ ಸೇರ್ಪಡೆಯಾಗಿದೆ. ಇದಲ್ಲದೇ ಜರ್ಮನಿಯು ಉಕ್ರೇನ್‌ಗೆ ಶಸ್ತ್ರಾಸ್ತ್ರ ನೆರವು ಘೋಷಿಸಿದೆ. ಅದರಲ್ಲಿ 1,000 ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರ, 500 ಕ್ಷಿಪಣಿಗಳಿವೆ.
ಬೆಲಾರಸ್ನಲ್ಲಿ ಉಕ್ರೇನ್ ಜತೆಗೆ ಮಾತುಕತೆಗೆ ಸಿದ್ಧ ಎಂದು ರಷ್ಯಾದ ಕ್ರೆಮ್ಲಿನ್ ಘೋಷಿಸಿದೆ. ಈ ಕುರಿತು ರಷ್ಯನ್ ಮಾಧ್ಯಮಗಳು ವರದಿ ಮಾಡಿವೆ.
#BREAKING Kremlin says ready for talks with Ukraine in Belarus: Russian news agencies pic.twitter.com/Tju2OXghU8
— AFP News Agency (@AFP) February 27, 2022
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ಗೆ ಅಮೇರಿಕಾ ಸೇರಿದಂತೆ ಹಲವು ಮಿತ್ರ ರಾಷ್ಟ್ರಗಳು ನೆರವು ನೀಡಲು ಮುಂದೆ ಬಂದಿವೆ. ಇದುವರೆಗಿನ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ.
ಪೂರ್ಣ ಬರಹ: ರಷ್ಯಾ- ಉಕ್ರೇನ್ ಕದನ; ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಂದ ಉಕ್ರೇನ್‌ಗೆ ನೆರವು; 10 ಮುಖ್ಯಾಂಶಗಳು ಇಲ್ಲಿವೆ
ಉಕ್ರೇನ್‌ನ ಎರಡನೇ ದೊಡ್ಡ ನಗರ ಖಾರ್ಕಿವ್ ಪ್ರವೇಶಿಸಿದ ರಷ್ಯಾ ಸೇನೆಯ ವಿರುದ್ಧ ಉಕ್ರೇನ್ ಸೇನೆ ಹೋರಾಡುತ್ತಿದೆ ಎಂದು ಎಎಫ್ಪಿ ವರದಿ ಮಾಡಿದೆ. ಶತ್ರು ಸೈನ್ಯವನ್ನು ನಾಶಮಾಡುವಲ್ಲಿ ಉಕ್ರೇನ್ ಶ್ರಮಿಸುತ್ತಿದೆ ಎಂದು ಅಲ್ಲಿನ ಪ್ರಾದೇಶಿಕ ಅಧಿಕಾರಿ ತಿಳಿಸಿದ್ದಾರೆ.
ವಾಯುದಾಳಿ ಸೈರನ್‌ಗಳ ನಂತರ ಕೆಲವೇ ನಿಮಿಷಗಳಲ್ಲಿ ಕೀವ್ ಸಿಟಿಯ ಪಶ್ಚಿಮಕ್ಕೆ ಸ್ಫೋಟದ ಶಬ್ಧ ಕೇಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸುದ್ದಿ ಸಂಸ್ಥೆ ಎಎಫ್ಪಿ ಪ್ರಕಾರ ರಷ್ಯಾವು ಉಕ್ರೇನ್‌ನ ದಕ್ಷಿಣ ಮತ್ತು ಆಗ್ನೇಯದಲ್ಲಿರುವ ಎರಡು ದೊಡ್ಡ ನಗರಗಳನ್ನು ಮುತ್ತಿಗೆ ಹಾಕಿದೆ.
#BREAKING Russia claims to have besieged two big cities in south and southeast of Ukraine pic.twitter.com/SVvGNdb82W
— AFP News Agency (@AFP) February 27, 2022
‘ಆಪರೇಷನ್ ಗಂಗಾ’ ಅಡಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ. ಬುಕಾರೆಸ್ಟ್ನಿಂದ ನಾಲ್ಕನೇ ವಿಮಾನವು ಹೊರಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಇದರಲ್ಲಿ 198 ಜನರಿದ್ದಾರೆ.
ಉಕ್ರೇನ್ ಶತ್ರು ಪಡೆಗಳನ್ನು ನಾಶ ಮಾಡುತ್ತಿದೆ. ನಾಗರಿಕರು ಹೊರಗೆ ಓಡಾಡಬೇಡಿ ಎಂದು ಉಕ್ರೇನ್‌ನ ಅಧಿಕಾರಿಯೋರ್ವರು ಕೋರಿಕೊಂಡಿದ್ದಾರೆ. ರಾಜಧಾನಿ ಕೀವ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ರಷ್ಯನ್ ಸೇನೆ ಇದೀಗ ಉಕ್ರೇನ್‌ನ ಎರಡನೇ ದೊಡ್ಡ ನಗರವಾಗಿರುವ ಖಾರ್ಕಿವ್ಅನ್ನು ಪ್ರವೇಶಿಸಿವೆ. ಭಾನುವಾರ ಉಕ್ರೇನ್‌ನ ಈಶಾನ್ಯ ನಗರವಾದ ಖಾರ್ಕಿವ್‌ನ ಬೀದಿಗಳಲ್ಲಿ ರಷ್ಯಾದ ಸೈನ್ಯದ ವಾಹನಗಳು ಕಂಡುಬಂದವು ಎಂದು ಉಕ್ರೇನ್‌ನ ಆಂತರಿಕ ಸಚಿವರ ಸಲಹೆಗಾರ ಆಂಟನ್ ಹೆರಾಶ್ಚೆಂಕೊ ಅವರು ಟೆಲಿಗ್ರಾಮ್‌ನಲ್ಲಿ ಬರೆದಿದ್ದಾರೆ.
ಆಸ್ಟ್ರೇಲಿಯಾವು ನ್ಯಾಟೋ ಮಿತ್ರರಾಷ್ಟ್ರಗಳ ಮೂಲಕ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲಿದೆ ಎಂದು ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಭಾನುವಾರ ಹೇಳಿದ್ದಾರೆ. ಈ ಮೂಲಕ ಉಕ್ರೇನ್‌ಗೆ ವಿವಿಧ ದೇಶಗಳಿಂದ ಒದಗುತ್ತಿರುವ ಸಹಾಯದ ಪ್ರಮಾಣ ಏರಿಕೆಯಾಗುತ್ತಿದೆ.
ಪ್ರಸ್ತುತ ಪರಿಸ್ಥಿತಿಗಳು ತುಂಬಾ ಕಠಿಣವಾಗಿರುವುದರಿಂದ ಉಕ್ರೇನ್‌ನಲ್ಲಿರುವ ಚೀನಾದ ಪ್ರಜೆಗಳ ಸ್ಥಳಾಂತರಿಸುವಿಕೆಯನ್ನು ಮುಂದೂಡಲಾಗಿದೆ ಎಂದು ಚೀನಾದ ರಾಯಭಾರಿ ಹೇಳಿದ್ದಾರೆ. ಹೊರಡುವ ಮೊದಲು ಸುರಕ್ಷಿತವಾಗುವವರೆಗೆ ನಾವು ಕಾಯಬೇಕು ಎಂದು ಚೀನಾದ ರಾಯಭಾರಿ ಫ್ಯಾನ್ ಕ್ಸಿಯಾನ್‌ರಾಂಗ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ಕದನ ಘೋಷಿಸಿರುವ ರಷ್ಯಾದ ವಿರುದ್ಧ ವಿಶ್ವದ ಹಲವು ರಾಷ್ಟ್ರಗಳು ಒಟ್ಟಾಗಿ ನಿರ್ಬಂಧಗಳನ್ನು ಹೇರುತ್ತಿವೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ನಿರ್ವಾಹಕರು ಈ ಕುರಿತು ಮಾತನಾಡಿ, ರಷ್ಯಾ ವಿರುದ್ಧ ಹೇರಿರುವ ನಿರ್ಬಂಧಗಳ ಸಂಬಂಧ ಇದೀಗ ಚೀನಾವೂ ರಷ್ಯಾದ ರಕ್ಷಣೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಪೂರ್ಣ ಪ್ರಮಾಣದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಕೊರಿಯಾ ಇದಕ್ಕೆ ಅಮೇರಿಕಾ ಕಾರಣ ಎಂದು ಆರೋಪಿಸಿದೆ. ‘ಉಕ್ರೇನಿಯನ್ ಬಿಕ್ಕಟ್ಟಿನ ಮೂಲ ಕಾರಣ ಅಮೇರಿಕಾದ ಉನ್ನತ-ಕೈಗಾರಿಕೆ ಮತ್ತು ಅದರ ನಿರಂಕುಶತೆಯಲ್ಲಿದೆ’ ಎಂದು ಉತ್ತರ ಕೊರಿಯಾದ ಸಚಿವಾಲಯ ಶನಿವಾರ ಹೇಳಿದೆ.
ಉಕ್ರೇನ್‌ನ ಸ್ನೇಕ್ ಐಲ್ಯಾಂಡ್ನಲ್ಲಿ ಕಾಯುತ್ತಿದ್ದ 13 ಸೈನಿಕರು ರಷ್ಯನ್ ನೌಕಾಪಡೆಗೆ ಶರಣಾಗದೇ ಪ್ರಾಣಾರ್ಪಣೆ ಮಾಡಿದ್ದು ಸುದ್ದಿಯಾಗಿತ್ತು. ಎರಡೂ ಪಕ್ಷಗಳ ಸಂಭಾಷಣೆಯ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ರಷ್ಯನ್ ಸೇನೆಯ ಶರಣಾಗತಿ ಆಯ್ಕೆಗೆ ಉಕ್ರೇನಿಯನ್ನರು ಒಪ್ಪಿರಲಿಲ್ಲ. ದ್ವೀಪದಲ್ಲಿದ್ದ ಎಲ್ಲಾ 13 ಜನರನ್ನು ರಷ್ಯಾ ಕೊಂದಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಉಕ್ರೇನ್ ರಾಜ್ಯ ಗಡಿ ವರದಿಗಳ ಪ್ರಕಾರ ಆ 13 ಸೈನಿಕರು ಬದುಕುಳಿದಿರುವ ಸಾಧ್ಯತೆ ಇದೆ. ಈ ಕುರಿತು ಮತ್ತಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.
ಹಳೆಯ ಬರಹ ಇಲ್ಲಿದೆ: ‘ಏನು ಮಾಡುತ್ತೀರೋ ಮಾಡಿಕೊಳ್ಳಿ’; ಸಾಯುವ ಮುನ್ನ ಧೈರ್ಯದಿಂದ ರಷ್ಯಾ ಪಡೆಯನ್ನು ಎದುರಿಸಿದ ಉಕ್ರೇನ್ ಸೈನಿಕರು
ಸಾಮಾಜಿಕ ಜಾಲತಾಣದಲ್ಲಿ ಉಕ್ರೇನ್ ನಾಗರಿಕರು ಯುದ್ಧದಲ್ಲಿ ಸೈನಿಕರಿಗೆ ಜತೆಯಾಗುತ್ತಿರುವ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಟ್ಯಾಂಕ್ ಮೇಲೆ ಹತ್ತಿದ ನಾಗರಿಕರು ರಷ್ಯಾ ಸೇನೆಯನ್ನು ನಿಧಾನಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಈ ಸಂದರ್ಭದ ವಿಡಿಯೋಗಳು ವೈರಲ್ ಆಗಿದ್ದು, ನಾಗರಿಕರ ಪ್ರಯತ್ನಕ್ಕೆ, ಧೈರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
Ukrainian civilians slow down the Russian advance by climbing on top of enemy tanks trying to pass through the city of Bakhmach in the Chernihiv region.
The bravery of the Ukrainian people is unparalleled.
— Visegrád 24 (@visegrad24) February 26, 2022
ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಹೆಚ್ಚಿಸುವುದಾಗಿ ಫ್ರೆಂಚ್ ಸರ್ಕಾರ ಭಾನುವಾರ ಘೋಷಿಸಿದೆ. ಸರ್ಕಾರದ ಹೇಳಿಕೆಯ ಪ್ರಕಾರ, ಈ ನಿರ್ಬಂಧಗಳು ರಷ್ಯಾದ ವ್ಯಕ್ತಿಗಳ ಹಣಕಾಸಿನ ಆಸ್ತಿಗಳನ್ನು ಫ್ರೀಜ್ ಮಾಡುವುದು ಮತ್ತು SWIFTಗೆ ಸಂಬಂಧಿಸಿದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ.
ಉಕ್ರೇನ್‌ನಲ್ಲಿ ಸಿಲುಕಿ ಇದೀಗ ಭಾರತಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ವಿಪತ್ತು ಎಂಜಿಎಂಟಿ ಪ್ರಾಧಿಕಾರದ ಆಯುಕ್ತರು, ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಮನೋಜ್ ರಾಜನ್, ‘‘ಕರ್ನಾಟಕದ ವಿದ್ಯಾರ್ಥಿಗಳು 5 ಬ್ಯಾಚ್‌ಗಳ ಮತ್ತೊಂದು ಸೆಟ್ ಇಂದು ಆಗಮಿಸುತ್ತಿದೆ. ಹಾಗಾಗಿ ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟು 18 ಮಂದಿ ಕರ್ನಾಟಕದ ವಿದ್ಯಾರ್ಥಿಗಳಿದ್ದಾರೆ. ಸದ್ಯಕ್ಕೆ, ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕಕ್ಕೆ ಸೇರಿದ 386 ಜನರ ವಿವರಗಳು ನಮ್ಮ ಬಳಿಯಿದೆ’’ ಎಂದಿದ್ದಾರೆ.
Another set of 5 batches is arriving at 10.15 today. So, 18 confirmed at Delhi Airport today. As of now, we have details of 386 people belonging to Karnataka, stranded in Ukraine: Manoj Rajan, Commissioner, Karnataka State Disaster Mgmt Authority, appointed as the nodal officer pic.twitter.com/qvT7ttMQ90
— ANI (@ANI) February 27, 2022
ರಷ್ಯಾದ ಆಕ್ರಮಣದಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 198 ಉಕ್ರೇನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ಆರೋಗ್ಯ ಸಚಿವಾಲಯದ ಮುಖ್ಯಸ್ಥರು ತಿಳಿಸಿದ್ದನ್ನು ಮಾಧ್ಯಮಗಳು ಉಲ್ಲೇಖಿಸಿವೆ.
ರಷ್ಯಾವು ತನ್ನದೇ ದೇಶದ ನಾಗರಿಕರಿಗೆ ಸಾಮಾಜಿಕ ಮಾಧ್ಯಮ ಪ್ರವೇಶವನ್ನು ಸೀಮಿತಗೊಳಿಸುತ್ತಿವೆ ಎಂದು ಬ್ರಿಟನ್ ಹೇಳಿದೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಯ ವಿವರಗಳನ್ನು ತಮ್ಮದೇ ಜನರಿಂದ ಮರೆಮಾಚುವ ಪ್ರಯತ್ನದಲ್ಲಿ ರಷ್ಯಾದ ಪಡೆಗಳು ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿವೆ ಎಂದು ಹೇಳಲಾಗಿದೆ. ‘ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ತೀವ್ರ ಸಾವುನೋವುಗಳನ್ನು ಅನುಭವಿಸುತ್ತಿವೆ. ಹಲವಾರು ರಷ್ಯನ್ ಸೈನಿಕರು ಉಕ್ರೇನಿಯನ್ನರಿಗೆ ಸೆರೆಯಾಳಾಗಿದ್ದಾರೆ’ ಎಂದು ರಕ್ಷಣಾ ಸಚಿವಾಲಯವು ಗುಪ್ತಚರ ಹೇಳಿಕೆ ಆಧರಿಸಿ ತಿಳಿಸಿದೆ. ಉಕ್ರೇನಿಯನ್ನರ ತೀವ್ರ ಪ್ರತಿರೋಧ ಹಾಗೂ ವಿವಿಧ ದೇಶಗಳು ಹೇರಿರುವ ನಿರ್ಬಂಧದಿಂದ ರಷ್ಯಾ ಬಳಲುತ್ತಿದೆ ಎಂದು ಬ್ರಿಟನ್ ಹೇಳಿದೆ.
ಇಂದು (ಭಾನುವಾರ) ಮುಂಬೈನಿಂದ 12 ಮಂದಿ ಆಗಮಿಸಿದ್ದು, ದೆಹಲಿಯಿಂದ 18 ಮಂದಿ ಆಗಮಿಸಲಿದ್ದಾರೆ. ರಾಜ್ಯ ಕಂದಾಯ ಇಲಾಖೆ ಕರ್ನಾಟಕ ಭವನದಲ್ಲಿ ಎಲ್ಲ ವ್ಯವಸ್ಥೆ ಮಾಡಿದೆ. ಅವರು ಅಲ್ಲಿಯೇ ಉಳಿದಿದ್ದಾರೆ. ಕನ್ನಡಿಗರಿಗಾಗಿ ಬೆಂಗಳೂರಿಗೆ ವಿಮಾನ ಟಿಕೆಟ್ ಕಾಯ್ದಿರಿಸಿದೆ. ನಿನ್ನೆ ರಾತ್ರಿ ಸಿಎಂ ಜೊತೆ ಚರ್ಚಿಸಿದ್ದು, ಟಿಕೆಟ್ ಕೊಡಿಸಲು ಕಂದಾಯ ಇಲಾಖೆ ಹಣ ನೀಡಲಿದೆ ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ ತಿಳಿಸಿದ್ದಾರೆ.
ಅಮೇರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ಮೇಲೆ ವಿಧಿಸಿರುವ ಆರ್ಥಿಕ ನಿರ್ಬಂಧಗಳಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಗಲ್ ಭಾನುವಾರ ಹೇಳಿದ್ದಾರೆ. ‘ನಮ್ಮ ಸ್ನೇಹಿತರಿಗೆ ಧನ್ಯವಾದಗಳು. SWIFTನಿಂದ ಹಲವಾರು ರಷ್ಯಾದ ಬ್ಯಾಂಕ್‌ಗಳನ್ನು ತೆಗೆದುಹಾಕುವ ನಿರ್ಣಯ ಸೇರಿದಂತೆ ಕಠಿಣ ಕ್ರಮಗಳಿಗೆ ಧನ್ಯವಾದಗಳು ಎಂದು ಶ್ಮಿಗಲ್ ಟ್ವೀಟ್ ಮಾಡಿದ್ದಾರೆ.
ಉಕ್ರೇನ್‌ನ ಮೇಲೆ ಆಕ್ರಮಣ ಮಾಡುತ್ತಿರುವ ರಷ್ಯಾದ ಪಡೆಗಳು ಉಕ್ರೇನಿಯನ್ ಮಿಲಿಟರಿಯ ಅನಿರೀಕ್ಷಿತ ತೀವ್ರ ಪ್ರತಿರೋಧದಿಂದ ನಿರಾಶೆಗೊಂಡಿವೆ ಎಂದು ಅಮೇರಿಕಾದ ಪೆಂಟಗನ್ ಶನಿವಾರ ಹೇಳಿದೆ.
ಉಕ್ರೇನ್ ಬಿಕ್ಕಟ್ಟಿನ ನಡುವೆ ಪಾರಾಗಿ ಭಾರತಕ್ಕೆ ಬಂದ ಕರ್ನಾಟಕದ ವಿದ್ಯಾರ್ಥಿಗಳನ್ನು ಸಚಿವ ಆರ್.ಅಶೋಕ್ ಸ್ವಾಗತಿಸಿದ್ದಾರೆ. ಭಾರತ ಸರ್ಕಾರ ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ನಾಗರಿಕರನ್ನು ಭಾರತಕ್ಕೆ ಮರಳಿ ಕರೆತರುತ್ತಿದೆ. ಇದುವರೆಗೆ ಎರಡು ವಿಮಾನದಲ್ಲಿ ನಾಗರಿಕರು ಆಗಮಿಸಿದ್ದಾರೆ.
Bengaluru | Karnataka Minister R Ashoka welcomed students of the state who were stranded in Ukraine amid #RussiaUkraineConflict and arrived here earlier today. pic.twitter.com/AlubsZ4yRR
— ANI (@ANI) February 27, 2022
ಅಮೇರಿಕಾದ ಟಾಪ್ ರಿಪಬ್ಲಿಕನ್ ಸೆನೆಟರ್ ಜಾನ್ ಕಾರ್ನಿನ್ ಅವರು ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ವಿರುದ್ಧದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ರಷ್ಯಾದೊಂದಿಗೆ ತನ್ನ ಸಂಬಂಧದ ಸಮತೋಲನಕ್ಕೆ ಪ್ರಯತ್ನಿಸುತ್ತಾ, ಮಾಸ್ಕೋವನ್ನು ಸಾರ್ವಜನಿಕವಾಗಿ ಖಂಡಿಸುವುದನ್ನು ನವದೆಹಲಿ ತಪ್ಪಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಎಲೋನ್ ಮಸ್ಕ್ ಅವರು ಶನಿವಾರ ತಮ್ಮ ಕಂಪನಿ SpaceX ನ ಸ್ಟಾರ್‌ಲಿಂಕ್ ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಉಕ್ರೇನ್‌ನಲ್ಲಿ ಸಕ್ರಿಯಗೊಳಿಸಲಾಗಿದೆ ಎಂದು ಹೇಳಿದರು. ಕೀವ್ ಅಧಿಕಾರಿಯೊಬ್ಬರು ತಮ್ಮ ದೇಶಕ್ಕೆ ಸೇವೆಗಳನ್ನು ಒದಗಿಸುವಂತೆ ಒತ್ತಾಯಿಸಿದ ನಂತರ ಎಲೋನ್ ಮಸ್ಕ್ ಹೇಳಿಕೆ ನೀಡಿದ್ದಾರೆ. ‘ಸ್ಟಾರ್‌ಲಿಂಕ್ ಸೇವೆಯು ಈಗ ಉಕ್ರೇನ್‌ನಲ್ಲಿ ಸಕ್ರಿಯವಾಗಿದೆ’ ಎಂದು ಮಸ್ಕ್ ಟ್ವೀಟ್ ಮಾಡಿದ್ದು, ‘ಹೆಚ್ಚಿನ ಸೇವೆ ಲಭ್ಯವಾಗಲಿದೆ’ ಎಂದಿದ್ದಾರೆ.
ಉಕ್ರೇನ್‌ನಲ್ಲಿ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ. ಇದಕ್ಕೆ ಯುಎಸ್ ಹಾಲಿ ಅಧ್ಯಕ್ಷ ಜೋ ಬಿಡೆನ್ ಕಾರಣ ಎಂದು ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಒರ್ಲ್ಯಾಂಡೊದಲ್ಲಿ ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್‌ನಲ್ಲಿ ಶನಿವಾರ ಭಾಷಣ ಮಾಡಿದ ಟ್ರಂಪ್, ಉಕ್ರೇನ್ ಆಕ್ರಮಣವನ್ನು ‘ಮಾನವೀಯತೆಯ ಮೇಲಿನ ಆಕ್ರಮಣ’ ಮತ್ತು ‘ಭಯಾನಕ ವಿಪತ್ತು’ ಎಂದು ಕರೆದಿದ್ದಾರೆ. ‘ನಾವು ಉಕ್ರೇನ್‌ನ ಜನರಿಗಾಗಿ ಪ್ರಾರ್ಥಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ರಷ್ಯಾದ ಟ್ಯಾಂಕರ್ಗಳು ತನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು, ಒಬ್ಬ ಉಕ್ರೇನಿಯನ್ ಸೈನಿಕ ಪ್ರಾಣಾರ್ಪಣೆ ಮಾಡಿದ್ದಾನೆ. ಪ್ರಸ್ತುತ ರಷ್ಯಾ ಆಕ್ರಮಿಸಿಕೊಂಡಿರುವ ಕ್ರೈಮಿಯಾ ಪ್ರದೇಶದಿಂದ ರಷ್ಯನ್ ಪಡೆಗಳು ಆಕ್ರಮಣ ಮಾಡುವುದನ್ನು ತಡೆಯಲು, ಉಕ್ರೇನ್ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಸೇತುವೆಯನ್ನು ಸ್ಫೋಟಿಸುವ ನಿರ್ಧಾರಕ್ಕೆ ಬರಲಾಯಿತು. ರಷ್ಯಾದ ಆಕ್ರಮಣವನ್ನು ನಿಧಾನಗೊಳಿಸುವ ದೃಷ್ಟಿಯಿಂದ ಉಕ್ರೇನ್ ಸೇನೆ ದಕ್ಷಿಣ ಪ್ರಾಂತ್ಯದ ಹೆನಿಚೆಸ್ಕ್ ಸೇತುವೆ ಸ್ಫೋಟಗೊಳಿಸುವ ನಿರ್ಧಾರ ಕೈಗೊಂಡಿತ್ತು. ಇದರಲ್ಲಿ ಸೈನಿಕನೊಬ್ಬ ಪ್ರಾಣಾರ್ಪಣೆ ಮಾಡಿದ್ದಾನೆ.
ಪೂರ್ಣ ಬರಹವನ್ನು ಇಲ್ಲಿದೆ ಓದಿ: ರಷ್ಯನ್ ಸೇನೆಯನ್ನು ತಡೆಯಲು ಸೇತುವೆ ಸ್ಫೋಟಗೊಳಿಸುತ್ತಾ, ಪ್ರಾಣಾರ್ಪಣೆ ಮಾಡಿದ ಉಕ್ರೇನ್ ಸೈನಿಕ
‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಕರೆತರುವ ಯೋಜನೆಯ ಮೂರನೆಯ ವಿಮಾನ ಇಂದು ಭಾರತ ತಲುಪಲಿದೆ. ಬೆಳಗ್ಗೆ ಸುಮಾರು 9.30ರ ಸುಮಾರಿಗೆ ವಿಮಾನ ತಲುಪುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಸೇರಿದಂತೆ 240 ಭಾರತೀಯರಿದ್ದಾರೆ.
ಸೊಸೈಟಿ ಫಾರ್ ವರ್ಲ್ಡ್‌ವೈಡ್ ಇಂಟರ್‌ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್ (SWIFT) ಮೂಲಕ ಯುನೈಟೆಡ್ ಕಿಂಗ್‌ಡಮ್ (ಯುಕೆ) ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ವಿರುದ್ಧ ನಿರ್ಣಾಯಕ ಕ್ರಮವನ್ನು ತೆಗೆದುಕೊಂಡಿವೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ‘ಸ್ವಿಫ್ಟ್‌ನಿಂದ ರಷ್ಯಾದ ಬ್ಯಾಂಕುಗಳನ್ನು ಹೊರಹಾಕುವ ಪ್ರಮುಖ ಮೊದಲ ಹೆಜ್ಜೆ ಸೇರಿದಂತೆ ಜಾಗತಿಕ ಹಣಕಾಸು ವ್ಯವಸ್ಥೆಯಿಂದ ರಷ್ಯಾವನ್ನು ಹೊರಹಾಕಲು ನಾವು ನಮ್ಮ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ನಿರ್ಣಾಯಕ ಕ್ರಮ ಕೈಗೊಂಡಿದ್ದೇವೆ’ ಎಂದು ಜಾನ್ಸನ್ ಭಾನುವಾರ ಟ್ವೀಟ್ ಮಾಡಿದ್ದಾರೆ.
ಫೇಸ್ಬುಕ್ನಂತೆಯೇ ಇದೀಗ ಯುಟ್ಯೂಬ್ ಕೂಡ ರಷ್ಯಾದ ಖಾತೆಗಳಿಗೆ ಜಾಹಿರಾತುಗಳಿಂದ ಹಣ ವರ್ಗಾವಣೆಯಾಗದಂತೆ ತಡೆಯಲು ಮುಂದಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ರಷ್ಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ‘ಔಟ್‌ಲೆಟ್ ಆರ್‌ಟಿ’ ಮತ್ತು ರಷ್ಯಾದ ಇತರ ಚಾನೆಲ್‌ಗಳು ತಮ್ಮ ವಿಡಿಯೋಗಳಿಂದ ಜಾಹೀರಾತು ಮೂಲಕ ಹಣವನ್ನು ಸ್ವೀಕರಿಸದಂತೆ ಯೂಟ್ಯೂಬ್ ಶನಿವಾರ ನಿರ್ಬಂಧಿಸಿದೆ.
YouTube on Saturday barred Russian state-owned media outlet RT and other Russian channels from receiving money for advertisements that run with their videos, similar to a move by Facebook, after the invasion of Ukraine: Reuters
— ANI (@ANI) February 27, 2022
ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ನಡುವೆ ರಾಜ್ಯಗಳು ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕೇಂದ್ರಗಳನ್ನು ಸ್ಥಾಪಿಸಿ, ನೋಡಲ್ ಅಧಿಕಾರಿಗಳನ್ನು ನೇಮಿಸುತ್ತಿವೆ. ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿರುವ ಕರ್ನಾಟಕ ಹೆಲ್ಪ್ ಡೆಸ್ಕ್‌ನ ರವಿಕುಮಾರ್, ‘ನಮ್ಮ ರಾಜ್ಯದ ಜನರನ್ನು ಕರ್ನಾಟಕ ಭವನಕ್ಕೆ ಬಿಡಲು ನಮಗೆ ಸೂಚನೆ ಇದೆ. ಇದುವರೆಗೆ 13 ವಿದ್ಯಾರ್ಥಿಗಳನ್ನು ಡ್ರಾಪ್ ಮಾಡಲಾಗಿದೆ’ ಎಂದು ಹೇಳಿದ್ದಾರೆ.
State Govts set up help desks&appoint Nodal Officers to assist people from their state amid #RussiaUkraineConflict
Karnataka Help Desk's Ravi Kumar, at Delhi's IGI Airport, says, "We've instructions to drop people from our state at Karnataka Bhawan; dropped 13 children till now" pic.twitter.com/D9tHLzDKg7
— ANI (@ANI) February 27, 2022
ಉಕ್ರೇನ್‌ನ ರಾಜ್ಯ ರಸ್ತೆ ಏಜೆನ್ಸಿಯಾದ ಉಕ್ರಾವ್ಟೋಡರ್, ರಷ್ಯಾದ ಪಡೆಗಳು ತಮ್ಮ ದಾರಿಯಲ್ಲಿ ಸಂಚರಿಸಲು ಬಳಸಬಹುದಾದ ಎಲ್ಲಾ ರಸ್ತೆ ಚಿಹ್ನೆಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಹೇಳಿದೆ. ‘ಶತ್ರುಗಳ (ರಷ್ಯನ್ ಪಡೆಗಳು) ಸಂವಹನ ಉತ್ತಮವಾಗಿಲ್ಲ. ಅವರು ಭೂಪ್ರದೇಶವನ್ನು ನ್ಯಾವಿಗೇಟ್ ಮಾಡಲು ಸಾಧ್ಯವಿಲ್ಲ’ ಎಂದು ಉಕ್ರಾವ್ಟೋಡರ್ ಶುಕ್ರವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ. ಅಲ್ಲದೇ ದಿಕ್ಕುಗಳನ್ನು ಬದಲಾಯಿಸಿರುವ ಫೋಟೋ ಒಂದನ್ನು ಹಂಚಿಕೊಳ್ಳಲಾಗಿದೆ.
ರಷ್ಯಾ ದಾಳಿಯಿಂದ ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಕಟ್ಟಡವೊಂದಕ್ಕೆ ಹಾನಿಯಾಗಿದೆ. ಲುಗಾನ್ಸ್ಕ್ ಪ್ರದೇಶದಲ್ಲಿ ಉಕ್ರೇನಿಯನ್ ಟ್ಯಾಂಕ್, ಕೀವ್‌ನಲ್ಲಿರುವ ಉಕ್ರೇನಿಯನ್ ಸೈನಿಕರು ಮತ್ತು ಖಾರ್ಕಿವ್ ಬಳಿ ನಾಶವಾದ ರಷ್ಯಾದ ಟ್ಯಾಂಕ್‌ನ ತುಣುಕಿನ ಚಿತ್ರಗಳನ್ನು ಎಎಫ್ಪಿ ಹಂಚಿಕೊಂಡಿದೆ.
Scenes from #Ukraine (clockwise from top left): damage to a building in Kyiv, a Ukrainian tank in the Lugansk region, Ukrainian soldiers in Kyiv, fragment of a destroyed Russian tank near Kharkiv
? @lealolivas @AnatoliiStepan4 Sergei Supinsky Sergey Bobok @AFPphoto pic.twitter.com/lXt7LOPDlQ— AFP News Agency (@AFP) February 27, 2022
ರಷ್ಯಾದ ಪಡೆಗಳು ಹಾರಿಸಿದ ಕ್ಷಿಪಣಿಗಳು ಉಕ್ರೇನ್‌ನ ರಾಜಧಾನಿ ಕೀವ್‌ನ ನೈಋತ್ಯದಲ್ಲಿರುವ ವಾಸಿಲ್ಕಿವ್ ಎಂಬ ಪಟ್ಟಣವನ್ನು ಧ್ವಂಸಗೊಳಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಮಿಸೈಲ್ನಿಂದ ಆಯಿಲ್ ಟರ್ಮಿನಲ್ ಬೆಂಕಿಗಾಹುತಿಯಾಗಿದೆ.
ಭಾನುವಾರ ಬೆಳಿಗ್ಗೆ, ಕೀವ್‌ನ ದಕ್ಷಿಣಕ್ಕೆ ಬೃಹತ್ ಸ್ಫೋಟಗಳು ಸಂಭವಿಸಿವೆ. ಉಕ್ರೇನ್ ಸರ್ಕಾರವು ಅಂತಹ ಒಂದು ಸ್ಫೋಟವು ಜುಲಿಯಾನಿ ವಿಮಾನ ನಿಲ್ದಾಣದ ಬಳಿ ಮತ್ತು ಇನ್ನೊಂದು ತೈಲ ಡಿಪೋದಲ್ಲಿ ಸಂಭವಿಸಿದೆ ಎಂದು ಹೇಳಿದೆ. ದೇಶದ ಎರಡನೇ ಅತಿದೊಡ್ಡ ನಗರವಾಗಿರುವ ಖಾರ್ಕಿವ್‌ನಲ್ಲಿ ರಷ್ಯಾ ಪಡೆಗಳು ಗ್ಯಾಸ್ ಪೈಪ್‌ಲೈನ್ ಅನ್ನು ಸ್ಫೋಟಿಸಿದೆ ಎಂದು ಉಕ್ರೇನ್ ಸರ್ಕಾರ ಭಾನುವಾರ ಹೇಳಿದೆ. ಉಕ್ರೇನ್‌ನಲ್ಲಿ ಇದುವರೆಗೆ ಸುಮಾರು 200 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 150,000 ಕ್ಕೂ ಹೆಚ್ಚು ನಾಗರಿಕರು ಪೋಲೆಂಡ್, ಮೊಲ್ಡೊವಾ ಸೇರಿದಂತೆ ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ.
ಆಪರೇಷನ್ ಗಂಗಾದ ಮೂರನೇ ಬ್ಯಾಚ್ ಹಂಗೇರಿಯ ಬುಡಾಪೆಸ್ಟ್ನಿಂದ ಭಾರತದತ್ತ ಹೊರಟಿದೆ. 240 ಜನರನ್ನು ಕರೆತರಲಿರುವ ಈ ವಿಮಾನವು ದೆಹಲಿಯಲ್ಲಿ ಲ್ಯಾಂಡ್ ಆಗಲಿದೆ.
The third flight of Operation Ganga carrying 240 Indian nationals from Budapest (Hungary) has taken off for Delhi #UkraineCrisis pic.twitter.com/8nG4vAIoEi
— ANI (@ANI) February 26, 2022
ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಯೋಜನೆ ‘ಆಪರೇಷನ್ ಗಂಗಾ’ ಅಡಿಯಲ್ಲಿ ಮೊದಲ ಬ್ಯಾಚ್ನಲ್ಲಿ 219 ವಿದ್ಯಾರ್ಥಿಗಳು ಆಗಮಿಸಿದ್ದರು. ಎರಡನೇ ಬ್ಯಾಚ್ನಲ್ಲಿ 250 ವಿದ್ಯಾರ್ಥಿಗಳು ಆಗಮಿಸಿದ್ದು, ದೆಹಲಿಯಲ್ಲಿ ಇಳಿದುಕೊಂಡಿದ್ದಾರೆ.
The second evacuation flight from Romanian capital Bucharest carrying 250 Indian nationals who were stranded in Ukraine landed at the Delhi airport in the early hours of Sunday. #OperationGanga pic.twitter.com/vjKHRqsYF7
— ANI (@ANI) February 26, 2022
Published On - 7:49 am, Sun, 27 February 22