AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ukraine Crisis: ರಷ್ಯನ್ ಸೇನೆಯನ್ನು ತಡೆಯಲು ಸೇತುವೆ ಸ್ಫೋಟಗೊಳಿಸುತ್ತಾ, ಪ್ರಾಣಾರ್ಪಣೆ ಮಾಡಿದ ಉಕ್ರೇನ್ ಸೈನಿಕ

Russia Ukraine War: ಉಕ್ರೇನ್​ನತ್ತ ರಷ್ಯಾ ಪಡೆಗಳು ಮುನ್ನುಗ್ಗುತ್ತಿವೆ. ರಷ್ಯಾದ ಆಕ್ರಮಣವನ್ನು ನಿಧಾನಗೊಳಿಸುವ ದೃಷ್ಟಿಯಿಂದ ಉಕ್ರೇನ್ ಸೇನೆ ದಕ್ಷಿಣ ಪ್ರಾಂತ್ಯದ ಹೆನಿಚೆಸ್ಕ್ ಸೇತುವೆ ಸ್ಫೋಟಗೊಳಿಸುವ ನಿರ್ಧಾರ ಕೈಗೊಂಡಿತ್ತು. ಇದರಲ್ಲಿ ಸೈನಿಕನೊಬ್ಬ ಪ್ರಾಣಾರ್ಪಣೆ ಮಾಡಿದ್ದಾನೆ.

Ukraine Crisis: ರಷ್ಯನ್ ಸೇನೆಯನ್ನು ತಡೆಯಲು ಸೇತುವೆ ಸ್ಫೋಟಗೊಳಿಸುತ್ತಾ, ಪ್ರಾಣಾರ್ಪಣೆ ಮಾಡಿದ ಉಕ್ರೇನ್ ಸೈನಿಕ
ಪ್ರಾಣಾರ್ಪಣೆ ಮಾಡಿದ ಯೋಧ (ಎಡ), ಸ್ಫೋಟಗೊಂಡ ಸೇತುವೆ (ಬಲ)
TV9 Web
| Updated By: shivaprasad.hs|

Updated on:Feb 27, 2022 | 9:15 AM

Share

ಕೈವ್: ರಷ್ಯಾದ ಟ್ಯಾಂಕರ್​​ಗಳು ತನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು, ಒಬ್ಬ ಉಕ್ರೇನಿಯನ್ ಸೈನಿಕ ಪ್ರಾಣಾರ್ಪಣೆ ಮಾಡಿದ್ದಾನೆ. ಪ್ರಸ್ತುತ ರಷ್ಯಾ ಆಕ್ರಮಿಸಿಕೊಂಡಿರುವ ಕ್ರೈಮಿಯಾ ಪ್ರದೇಶದಿಂದ ರಷ್ಯನ್ ಪಡೆಗಳು ಆಕ್ರಮಣ ಮಾಡುವುದನ್ನು ತಡೆಯಲು, ಉಕ್ರೇನ್ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಸೇತುವೆಯನ್ನು ಸ್ಫೋಟಿಸುವ ನಿರ್ಧಾರಕ್ಕೆ ಬರಲಾಯಿತು. ಉಕ್ರೇನಿಯನ್ ಮಿಲಿಟರಿಯ ಹೇಳಿಕೆಗಳ ಪ್ರಕಾರ ರಷ್ಯಾದ ಟ್ಯಾಂಕರ್​​ಗಳು ಆಕ್ರಮಣ (Russia Ukraine War) ಮಾಡಿದಾಗ ಮೆರೈನ್ ಬೆಟಾಲಿಯನ್ ಎಂಜಿನಿಯರ್ ಆಗಿದ್ದ ವಿಟಾಲಿ ಸ್ಕಕುನ್ ವೊಲೊಡಿಮಿರೊವಿಚ್ (Vitaliy Skakun Volodymyrovych) ಅವರನ್ನು ದಕ್ಷಿಣ ಪ್ರಾಂತ್ಯದ ಖೆರ್ಸನ್‌ನಲ್ಲಿರುವ ಹೆನಿಚೆಸ್ಕ್ ಸೇತುವೆಗೆ ನಿಯೋಜಿಸಲಾಯಿತು. ರಷ್ಯಾದ ಟ್ಯಾಂಕ್‌ಗಳನ್ನು ತಡೆಯುವ ಏಕೈಕ ಮಾರ್ಗವೆಂದರೆ ಸೇತುವೆಯನ್ನು ಸ್ಫೋಟಿಸುವುದು ಎಂದು ಸೈನ್ಯವು ನಿರ್ಧರಿಸಿತು. ಅದರಂತೆ, ವೊಲೊಡಿಮಿರೊವಿಚ್ ಈ ಕಾರ್ಯವನ್ನು ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದರು ಎಂದು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೇತುವೆಯನ್ನು ಸ್ಫೋಟಿಸುವಾಗ ತಕ್ಷಣ ಮರಳಲು ಸಾಧ್ಯವಿಲ್ಲ ಎನ್ನುವುದನ್ನು ವೊಲೊಡಿಮಿರೊವಿಚ್ ಅರಿತುಕೊಂಡರು. ಈ ಘಟನೆಯಲ್ಲಿ ಅವರು ಪ್ರಾಣಾರ್ಪಣೆ ಮಾಡಿದರು. ಅವರ ಪರಾಕ್ರಮದಿಂದ ರಷ್ಯಾದ ಪಡೆಗಳು ಸುತ್ತು ಮಾರ್ಗವನ್ನು ಬಳಸಿ ಮುಂದುವರೆಯುವುದು ಅನಿವಾರ್ಯವಾಯಿತು. ಇದರಿಂದಾಗಿ ಉಕ್ರೇನಿಯನ್ ಮಿಲಿಟರಿಗೆ ರಷ್ಯಾ ಸೈನಿಕರನ್ನು ಎದುರಿಸಲು ಮತ್ತಷ್ಟು ಸಮಯ ಸಿಕ್ಕಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಉಕ್ರೇನ್ ಮಿಲಿಟರಿ ಪಡೆ ಹೇಳಿದ್ದೇನು?

‘ಈ ಕಷ್ಟದ ದಿನದಂದು ಎಲ್ಲಾ ದಿಕ್ಕುಗಳಲ್ಲಿಯೂ ಆಕ್ರಮಣ ಮಾಡಿದ ರಷ್ಯನ್ ಆಕ್ರಮಣಕಾರರಿಗೆ ಉಕ್ರೇನಿಯನ್ನರು ಬಿಟ್ಟುಕೊಡಬೇಕಾಯಿತು. ಇದರಲ್ಲಿ ಶತ್ರು ನೌಕಾಪಡೆಯನ್ನು ಮೊದಲು ಎದುರಿಸುವ ಕ್ರೈಮಿಯನ್ ಇಂಟರ್​ಸೆಕ್ಷನ್ ಕೂಡ ಒಂದು. ರಷ್ಯನ್ ಟ್ಯಾಂಕರ್​ಗಳನ್ನು ಎದುರಿಸುವ ಸಂದರ್ಭದಲ್ಲಿ ಗೆನಿಚೆ ಸೇತುವೆಯನ್ನು ಸ್ಫೋಟಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಉಕ್ರೇನ್ ಸೇನೆ ಬರೆದುಕೊಂಡಿದೆ.

‘‘ಈ ಕಾರ್ಯವನ್ನು ನಿರ್ವಹಿಸಲು ಪ್ರತ್ಯೇಕ ಬೆಟಾಲಿಯನ್ ನಾವಿಕ ಇಂಜಿನಿಯರ್ ಸ್ಕಕುನ್ ವಿಟಾಲಿ ವೊಲೊಡಿಮಿರೊವಿಚ್‌ನ ಅವರನ್ನು ಕರೆಯಲಾಯಿತು. ಸೇತುವೆಯನ್ನು ಸ್ಫೋಟಿಸುವ ಸಂದರ್ಭ ಅಲ್ಲಿಂದ ಹೊರಬರಲು ಅವರಿಗೆ ಸಮಯವಿರಲಿಲ್ಲ, ತಕ್ಷಣವೇ ಸ್ಫೋಟ ಸಂಭವಿಸಿತು. ನಮ್ಮ ಸಹೋದರ ಇದರಲ್ಲಿ ಪ್ರಾಣಾರ್ಪಣೆ ಮಾಡಿದ್ದಾನೆ. ಇದರಿಂದ ನಮ್ಮ ಘಟಕಗಳನ್ನು ಸ್ಥಳಾಂತರಿಸಲು ಸಮಯಾವಕಾಶ ದೊರೆಯಿತು ಮತ್ತು ರಷ್ಯನ್ ಪಡೆಗಳ ಚಲನೆ ನಿಧಾನಗೊಂಡಿತು’’

‘‘ನಾವು ಬದುಕಿರುವವರೆಗೂ ಹೋರಾಡುತ್ತೇವೆ. ಮತ್ತು ಜೀವಂತವಾಗಿರುವವರೆಗೂ ಹೋರಾಡುತ್ತೇವೆ’’ ಎಂದು ಮಿಲಿಟರಿ ತನ್ನ ಹೇಳಿಕೆ ಮುಕ್ತಾಯಗೊಳಿಸಿದೆ. ಪ್ರಾಣಾರ್ಪಣೆಗೈದ ಯೋಧ ಸ್ಕಕುನ್ ವಿಟಾಲಿ ವೊಲೊಡಿಮಿರೊವಿಚ್ ಅವರಿಗೆ ಶೌರ್ಯ ಹಾಗೂ ಹೋರಾಟಕ್ಕಾಗಿ ಮರಣೋತ್ತರ ರಾಜ್ಯ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಲಾಗಿದೆ.

ಉಕ್ರೇನ್ ಸೇನೆ ಹಂಚಿಕೊಂಡ ಪೋಸ್ಟ್:

ಇದುವರೆಗೆ ಸುಮಾರು 3,500 ರಷ್ಯನ್ ಸೈನಿಕರನ್ನು ಕೊಲ್ಲಲಾಗಿದೆ. 102 ಟ್ಯಾಂಕರ್​ಗಳು ಹಾಗೂ 14 ಪ್ಲೇನ್​ಗಳನ್ನು ನಾಶಮಾಡಲಾಗಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.

ಇದನ್ನೂ ಓದಿ:

Russia Ukraine Crisis Live: ಉಕ್ರೇನ್​ ಮೇಲೆ ರಷ್ಯಾ ದಾಳಿ; ಕೈವ್​​ನಲ್ಲಿ ರಾತ್ರಿಯಿಡೀ ನಡೆದ ಸಂಘರ್ಷದಲ್ಲಿ 35 ಮಂದಿ ಸಾವು

Ukraine Crisis: ಪುಟಿನ್ ನಡೆಯ ವಿರುದ್ಧ ತಿರುಗಿಬಿದ್ದ ಜಗತ್ತಿನ ಜನರು; ವಿಶ್ವದೆಲ್ಲೆಡೆ ಪ್ರತಿಭಟನೆ- ಫೋಟೋಗಳು ಇಲ್ಲಿವೆ

Published On - 2:34 pm, Sat, 26 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ