AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia War On Ukraine: ಬೆಂಗಳೂರಿನ ಈ ಜ್ಯೋತಿಷ್ಯ ಪತ್ರಿಕೆಯಲ್ಲಿ 2 ತಿಂಗಳಿಗೂ ಮೊದಲೇ ರಷ್ಯಾ ಸೇನಾ ದಾಳಿ ಸುಳಿವು

ಬೆಂಗಳೂರು ಮೂಲದ ಜ್ಯೋತಿಷ್ಯ ಮಾಸ ಪತ್ರಿಕೆಯೊಂದು ರಷ್ಯಾ- ಉಕ್ರೇನ್​ ಬಿಕ್ಕಟ್ಟನ್ನು ಎರಡು ತಿಂಗಳ ಮುಂಚೆಯೇ ತಿಳಿಸಿದ್ದರ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರ ವಿವರ ಇಲ್ಲಿದೆ.

Russia War On Ukraine: ಬೆಂಗಳೂರಿನ ಈ ಜ್ಯೋತಿಷ್ಯ ಪತ್ರಿಕೆಯಲ್ಲಿ 2 ತಿಂಗಳಿಗೂ ಮೊದಲೇ ರಷ್ಯಾ ಸೇನಾ ದಾಳಿ ಸುಳಿವು
ಗಾಯತ್ರಿ ದೇವಿ ವಾಸುದೇವ್
TV9 Web
| Updated By: Srinivas Mata|

Updated on:Feb 26, 2022 | 8:23 PM

Share

ಜ್ಯೋತಿಷಿ ಹಾಗೂ ಮಾಡರ್ನ್ ಅಸ್ಟ್ರಾಲಜಿ ಮಾಸ ಪತ್ರಿಕೆಯ ಸಂಪಾದಕಿ ಗಾಯತ್ರಿ ದೇವಿ ವಾಸುದೇವ್ ಅವರ ಬಗ್ಗೆ ಮತ್ತೊಮ್ಮೆ ಬರೆಯಬೇಕಿದೆ. ಬೆಂಗಳೂರಿನ ವಿದ್ಯಾಪೀಠಕ್ಕೆ ಸಮೀಪದಲ್ಲೇ ಮಾಡರ್ನ್ ಅಸ್ಟ್ರಾಲಜಿ ಪತ್ರಿಕೆ ಕಚೇರಿ ಇದೆ. ಈ ಹಿಂದಿನ ಲೇಖನವೊಂದರಲ್ಲಿ ತಿಳಿಸಿದಂತೆ ಗಾಯತ್ರಿ ದೇವಿ ಅವರು ಪ್ರಖ್ಯಾತ ಜ್ಯೋತಿಷಿಗಳಾದ ಬಿ.ವಿ. ರಾಮನ್ ಅವರ ಮಗಳು. ಸದ್ಯಕ್ಕೆ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡು, ಜ್ಯೋತಿಷ್ಯದಲ್ಲಿ ಬಹಳ ಆಸಕ್ತಿಕರವಾದ ಸಂಗತಿಗಳನ್ನು ಬರೆಸುತ್ತಾರೆ, ಬರೆಯುತ್ತಾರೆ. ಈಗ ಹೇಳ ಹೊರಟಿರುವುದು ಆ ಜ್ಯೋತಿಷ್ಯ (Astrology) ಪತ್ರಿಕೆಯಲ್ಲಿ ಜನವರಿ ತಿಂಗಳಲ್ಲಿ ಬಂದಂಥ ಸಂಪಾದಕೀಯದ ಬಗ್ಗೆ. ಮಾಡರ್ನ್ ಅಸ್ಟ್ರಾಲಜಿ ಇಂಗ್ಲಿಷ್ ಪತ್ರಿಕೆಯ 2022ರ ಜನವರಿ ತಿಂಗಳ ಸಂಚಿಕೆ ಡಿಸೆಂಬರ್ ಮಧ್ಯದ ಹೊತ್ತಿಗೇ ಮಾರುಕಟ್ಟೆಗೆ ಬರುತ್ತದೆ. ಇನ್ನು ಈ ಸಂಪಾದಕೀಯವನ್ನು ಬರೆದಿರುವುದು 2021ರ ನವೆಂಬರ್ 22ರಂದು. ಆ ಸಂಪಾದಕೀಯದಲ್ಲಿ ಬರೆದ ಸಂಗತಿಯೇ ಈಗ ನಿಮ್ಮೆದುರು ಪ್ರಸ್ತಾವ ಮಾಡುತ್ತಿರುವುದು.

“ರಷ್ಯಾವು ಸೇನೆಯು 2022ರ ಆರಂಭ ಹಾಗೂ 2023ರ ಶುರುವಿನಲ್ಲಿ ನೆರೆಯ ದೇಶಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಬಹುದು. ಇದಕ್ಕೆ ಯಾವುದೇ ಪರಿಹಾರ ಕಾಣುವುದಿಲ್ಲ. ಆ ಭಾಗದಲ್ಲಿ ಉದ್ವಿಗ್ನತೆಯನ್ನು ಉಳಿಸುವ ರಷ್ಯಾದ ಉದ್ದೇಶವನ್ನು ಸಂಪೂರ್ಣವಾಗಿ ಗೌರವಿಸುವುದು ಸಾಧ್ಯ ಆಗದಿರಬಹುದು.” -ಹೀಗೆ ಬರೆಯಲಾಗಿದೆ. ಅಷ್ಟೇ ಅಲ್ಲ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜನ್ಮ ಜಾತಕದ ಪ್ರಕಾರ, ವರ್ಷದ ಕೊನೆಗೆ ಸಾಗುತ್ತಾ ಬಂದಂತೆ ಅವರು ಇನ್ನಷ್ಟು ಬಲಿಷ್ಠರಾಗುತ್ತಾರೆ. ಪುಟಿನ್ ಆರೋಗ್ಯದ ಬಗ್ಗೆ ಇರುವ ವದಂತಿಗಳು ಈಗಿನ ಸೂಚನೆಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಜಾತಕದಲ್ಲಿ 9ನೇ ಮನೆಯ ಅಧಿಪತಿಯಾಗಿ ಬಲಿಷ್ಠ ಬುಧನ ದಶಾ ಕಾಲದಲ್ಲಿ ಭಾರೀ ಬುದ್ಧಿವಂತಿಕೆಯಿಂದ ಪುಟಿನ್ ತಂತ್ರಗಳನ್ನು ಹೆಣೆಯುತ್ತಾರೆ. ಭಾರತದ ಸಂಬಂಧವು ರಷ್ಯಾ ಜತೆಗೆ ಸ್ವಲ್ಪ ಮಟ್ಟಿಗೆ ಬಳಲಲಿದೆ.

Astrology Prediction

ಪತ್ರಿಕೆಯಲ್ಲಿ ಪ್ರಕಟವಾಗಿರುವ ಭವಿಷ್ಯ

ಕುಜ- ಗುರುವಿನ ಸಂಯೋಗ ಆಗುವ ಏಪ್ರಿಲ್ 29, 2022 ಹಾಗೂ ರಾಹು- ಕುಜ ಸಂಯೋಗದ ಆಗಸ್ಟ್ 1, 2022ರಲ್ಲಿ ರಷ್ಯಾದ ಮೇಲೆ ಪ್ರಮುಖ ಭಯೋತ್ಪಾದನೆ ದಾಳಿ ಆಗಬಹುದು. ಆದರೆ ಇದೇ ಅವಧಿಯಲ್ಲಿ ಪುಟಿನ್ ಮೇಲೆ ಯಾವುದೇ ದಾಳಿ ಸಾಧ್ಯತೆಗಳಿಲ್ಲ. ಯಾವುದೇ ದೈಹಿಕ ಅಪಾಯಗಳು ಇಲ್ಲದೆ ಅವರ ರಕ್ಷಣೆ ಮಾಡಲಾಗುತ್ತದೆ. ಈ ಹಿಂಸಾಚಾರದಲ್ಲಿ ಕ್ರೆಮ್ಲಿನ್​ನ ಹಿರಿಯ ಸದಸ್ಯರು ಅಪಾಯಕ್ಕೆ ಈಡಾಗಬಹುದು. ಹನ್ನೆರಡನೇ ಮನೆಯಲ್ಲಿನ ರಾಹು ತೈಲ ಸಂಗ್ರಹಕ್ಕೆ ಉತ್ತಮ ಲಕ್ಷಣ ಅಲ್ಲ. ನೆರೆಯ ದೇಶದಲ್ಲಿನ ಅಗ್ನಿ ಅವಘಡ ರಷ್ಯಾದ ಆರ್ಥಿಕತೆಗೆ ದೊಡ್ಡ ಹೊಡೆತವನ್ನು ನೀಡಬಹುದು ಎಂದಿದ್ದಾರೆ.

ರಷ್ಯಾದಿಂದ ನೆರೆಯ ದೇಶದ ಮೇಲೆ ಸೇನಾ ಕಾರ್ಯಾಚರಣೆ ನಡೆಯುತ್ತದೆ ಎಂದು ಹೇಳಿರುವುದಕ್ಕಾದರೂ ಕಾರಣ ಏನು ಎಂಬ ಬಗ್ಗೆ ಟಿವಿ9ಕನ್ನಡ ಡಿಜಿಟಲ್​ನಿಂದ ಗಾಯತ್ರಿ ದೇವಿ ಅವರನ್ನೇ ಮಾತನಾಡಿಸಲಾಯಿತು. ಅವರು ಹೇಳಿದ್ದು ಹೀಗೆ: “ಈ ಬಾರಿ ಯುಗಾದಿ ಸಮಯಕ್ಕೆ ಕುಂಡಲಿಯನ್ನು ರಚಿಸಲಾಗುತ್ತದೆ. ಅದರಲ್ಲಿ ರಷ್ಯಾ ಮಿಥುನ ರಾಶಿ ಬರುತ್ತದೆ. ಅದರ ಎರಡನೇ ಮನೆಯನ್ನು 6 ಹಾಗೂ 11ನೇ ಮನೆಯ ರಾಶ್ಯಾಧಿಪತಿಯಾದ ಉಚ್ಚ ಕುಜನು ವೀಕ್ಷಣೆ ಮಾಡುತ್ತಾನೆ. ಇದು ಮಿಲಿಟರಿಗಾಗಿ ಹೆಚ್ಚಿನ ಖರ್ಚು ಮಾಡುವುದು ಹಾಗೂ ಸೇನಾ ಕಾರ್ಯಾಚರಣೆಗಳನ್ನು ಸೂಚಿಸುತ್ತದೆ,” ಎಂದು ವಿವರಿಸಿದರು.

ಇದನ್ನೂ ಓದಿ: TV9 Kannada Digital Exclusive: ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ರ ಸಾವಿನ ಬಗ್ಗೆ ವರ್ಷಕ್ಕೂ ಮುಂಚೆ ಎಚ್ಚರಿಸಿತ್ತು ಈ ಜ್ಯೋತಿಷ ಪತ್ರಿಕೆ

Published On - 11:34 am, Sat, 26 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ