AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positivism vs Negativism: ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾತ್ವಿಕತೆ ಮನೆ ಮಾಡಬೇಕು ಅಂತಾದರೆ ಈ 30 ಸಲಹೆ ಪಾಲಿಸಿ!

ಮನೆಯ ಸಮೃದ್ದಿ ಮತ್ತು ಸಾತ್ವಿಕತೆಗಾಗಿ ಕೆಲವು ಸಲಹೆಗಳು ಇಲ್ಲಿವೆ. ಇವು ವಾಸ್ತು, ಧಾರ್ಮಿಕತೆ, ಜ್ಯೋತಿಷ್ಯದ ಪ್ರಭಾವಗಳ ಆಧಾರಲ್ಲಿದೆ. ಅವು ಏನು ಎಂಬುದನ್ನು ತಿಳಿಯಿರಿ. ನಿಮಗೆ ಸಮಯವಿಲ್ಲದಿದ್ದರೂ ಈ ನಿಯಮಗಳಲ್ಲಿ ಕೆಲವನ್ನಾದರೂ ಪಾಲಿಸಿ. ಅದರಿಂದ ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ.

Positivism vs Negativism: ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾತ್ವಿಕತೆ ಮನೆ ಮಾಡಬೇಕು ಅಂತಾದರೆ ಈ 30 ಸಲಹೆ ಪಾಲಿಸಿ!
ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾತ್ವಿಕತೆ ಮನೆ ಮಾಡಬೇಕು ಅಂತಾದರೆ ಈ 30 ಸಲಹೆಗಳನ್ನು ಪಾಲಿಸಿ!
TV9 Web
| Edited By: ಸಾಧು ಶ್ರೀನಾಥ್​|

Updated on: Jan 07, 2022 | 6:06 AM

Share

1. ಹಿರಿಯರು ನಂಬಿಕೊಂಡು ಬಂದ ದೈವಗಳಿಗೆ; ಅವರದೇ ಆದ ಸಂಪ್ರದಾಯಗಳಿಗೆ ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ. 2. ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು. 3. ಬರೀ ನೆಲದಲ್ಲಿ ಮಲಗುವುದಾಗಲಿ ಹರಿದ ಬಟ್ಟೆ ಧರಿಸುವುದು ಮಾಡಬೇಡಿ. 4. ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿ ಮಾಡಿಕೊಳ್ಳಿ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ವಿಷ್ಣು ಸಹಸ್ರನಾಮ ಅಥವಾ ನಿಮ್ಮ ಇಷ್ಟ ದೇವರ ಯಾವುದೇ ಸ್ತೋತ್ರ ಮಂತ್ರ (ಭಜನೆ) ಪಠಿಸಿ ಅಥವಾ ಅದನ್ನು ಮನೆಯಲ್ಲಿ ಕೇಳುವಂತೆ ನಿತ್ಯ ವ್ಯವಸ್ಥೆ ಮಾಡಿ. ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ವೃದ್ಧಿಯಾಗುತ್ತದೆ. 5. ಆಗ್ನೇಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅನ್ನಾದರೂ ಇಡಬೇಕು. ಅಡುಗೆ ಮನೆಯಲ್ಲಿ ಔಷಧಗಳನ್ನ ಇಡಬೇಡಿ. ನೆಗಟಿವ್ ಎನರ್ಜಿಗೆ ಆಹ್ವಾನ ನೀಡದಂತಾಗುತ್ತದೆ. 6. ಆಹಾರ ಸೇವಿಸಿದ ನಂತರ ಎಂಜಲು ಮುಸುರೆಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೆ ಇಡಬೇಡಿ 7. ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ. ಒಂದು ವೇಳೆ ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ನಿಮ್ಮ ಮುಖ ಕಾಣದಂತೆ ಕನ್ನಡಿಗೆ ಅಡ್ಡವಿಡಿ. ರಾತ್ರಿ ಹೊತ್ತಿನಲ್ಲಿ ಕನ್ನಡಿ ನೋಡುವುದು ಅಷ್ಟೊಂದು ಸಮಂಜಸವಲ್ಲ. 8. ವರ್ಷಕ್ಕೆ ಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ ಉತ್ತಮ. ಇದರಿಂದ ವಾಸ್ತು ಸದೃಢವಾಗಿರುತ್ತದೆ. 9. ವರ್ಷಕ್ಕೆ ಒಮ್ಮೆಯಾದರೂ ಶ್ರೀ ವೈಷ್ಣವ ಬ್ರಾಹ್ಮಣ ಸುವಾಸಿನಿ (ಅತಿಥಿ ಸತ್ಕಾರ ) ಪೂಜೆ ಮಾಡಿ. ಯೋಗ್ಯರಿಗೆ ದಾನ ಮಾಡಿ. ಇದರಿಂದ ಸಂಪತ್ತು ದೈವಿಕ ರೂಪ ಪಡೆಯುತ್ತದೆ. 10. ಸಾಧ್ಯವಿದ್ದಲ್ಲಿ ನಿತ್ಯವೂ ಮನೆಯ ಸಮೀಪದ ದೇವಾಲಯ ಮತ್ತು ಗ್ರಾಮ ದೇವಸ್ಥಾನಕ್ಕೆ ತೆರಳಿ, ಭಕ್ತಯಿಂದ ನಮಿಸಿ ಬನ್ನಿ. 11. ವರ್ಷಕ್ಕೆ ಒಮ್ಮೆಯಾದರೂ ಸಮಾಜದ (ಕುಟುಂಬದ) ಗುರುಪೀಠದ ಫಲ ಮಂತ್ರಾಕ್ಷತೆಯನ್ನು ತರುವುದು. 12. ಮನೆಯಲ್ಲಿ ಅಕ್ವೇರಿಯಂ ಇಡಬೇಕು ಅಂತಾದರೆ ಆಗ್ನೇಯ ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಒಳ್ಳೆಯದು. 13. ಸ್ನಾನವಿಲ್ಲದೆ ಊಟ ಮಾಡುವುದು ಒಳ್ಳೆಯದಲ್ಲ. ಅನ್ನವು ದೇವರಿಗೆ ಸಮಾನ. 14. ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ. ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ. 15. ಹಣದಿಂದ ನಾವು ಏನೆಲ್ಲ ಕೊಂಡು ಕೊಳ್ಳಬಹುದು, ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನಲ್ಲ. ಅದು ಸಿಗಬೇಕು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯ ಗಳನ್ನು ಆಚರಿಸಿದಾಗ ಮಾತ್ರ ಅದೆಲ್ಲಾ ಕೈಗೂಡಲು ಸಾಧ್ಯವಾದೀತು.

16. ಒಡೆದಿರುವ ಅಥವಾ ಬಿರುಕು ಬಿಟ್ಟಿರುವ ಕನ್ನಡಿ ಇಡಬೇಡಿ – ಅದು ನಕಾರಾತ್ಮಕ ಶಕ್ತಿಗೆ ಆಹ್ವಾನ ನೀಡಿದಂತೆ. 17. ಮನೆಯ ಯಾವುದೇ ಜಾಗದಲ್ಲಿ ನಲ್ಲಿ ನೀರು ನಿರಂತರ ಸೋರುತ್ತಿರಬಾರದು – ಅದರಿಂದ ಹಣ ವ್ಯಯವಾಗುವ ಸಂಭವ ಇರುತ್ತದೆ. 18. ಮನೆಯ ಆವರಣದಲ್ಲಿ ಒಣಗಿದ ಗಿಡಗಳನ್ನು ಇಡಬೇಡಿ – ಇದರಿಂದ ಮನಸ್ಸನಲ್ಲಿ ಖಿನ್ನತೆ ಉಂಟಾಗುವ ಸಂಭವ ಇರುತ್ತದೆ. 19. ಸಾಧ್ಯವಾದಷ್ಟು ದೇವರಿಗೆ ಮನೆಯ ಹೂವುಗಳನ್ನೇ ಅರ್ಪಿಸಲು ಪ್ರಯತ್ನ ಮಾಡಿ – ಹೊರಗಡೆಯಿಂದ ತಂದ ಹೂವಿಗೆ ಮನೆಯ ನೀರನ್ನು ಸಿಂಪಡಿಸಬೇಕು. ಶುದ್ಧ ಮಾಡಿ, ನಂತರ ಉಪಯೋಗಿಸಬೇಕು. ಇಲ್ಲದಿದ್ದರೆ ಮನೆಯ ಅಡುಗೆ ಸಾಮಗ್ರಿ ಹಾಳಾಗುವ ಸಂಭವ ಇರುತ್ತದೆ. 20. ನಿಂತ ಗಡಿಯಾರವು ಅಶುಭದ ಲಕ್ಷಣ. ಇದನ್ನು ಕೂಡಲೇ ರಿಪೇರಿ ಮಾಡಿಸುವುದು ಉತ್ತಮ. 21. ದೇವರ ಕೋಣೆಯ ಮೇಲೆ ಅತಿಯಾದ ಭಾರವನ್ನು ಇಡಬಾರದು. ಒಡೆದು ಹೋದ ದೇವರ ಮೂರ್ತಿ ಅಥವಾ ಫೋಟೋಗಳನ್ನು ಇಡಬೇಡಿ. 22. ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ-ತಾಯಿಯರಿಗೆ ಕಾಲುಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ. ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು. ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ. 23. ದೇವರ ಕೋಣೆಯಲ್ಲಿ ಒಂಟಿ ದೀಪ ಉರಿಸಬಾರದು. ಸಣ್ಣ ದೀಪವಾದರೂ ಅಡ್ಡಿ ಇಲ್ಲ, ಎರಡು ದೀಪಗಳನ್ನು ಇಡಿ. 24. ಸಂಜೆ ವೇಳೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು. 25. ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿಟ್ಟು ತೆಗೆದುಕೊಳ್ಳುವುದು. ಇದರಿಂದ ವಸ್ತುವಿನಲ್ಲಿ ಇದ್ದ ಕಲಿ ದೋಷ ದೂರವಾಗುವುದು. 26. ಕುಲದೇವರಿಗೆ, ಇಷ್ಟ ದೇವರಿಗೆ, ಗ್ರಾಮ ದೇವರಿಗೆ ಮನೆಯ ಎಲ್ಲ ಶುಭಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಢಿ ಮಾಡಿಕೊಳ್ಳೀ. 27. ಜೇಡರಬಲೆ ಮನೆಯಲ್ಲಿ ಕಟ್ಟಿದ್ದರೆ ತಕ್ಷಣ ತೆಗೆದು ಹಾಕಿ. ಅದು ಅಶುಭ ತರುವ ಸಂಕೇತ. ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆಯೋ ಅಷ್ಟೂ ದೈವಿಕ ಕಳೆ ವೃದ್ಧಿಸುವುದು. 28. ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆ ಮಾಡಿಕೊಂಡರೆ ಅದು ಕಷ್ಟಗಳು ಎದುರಾಗುವ ಸಂಕೇತ. ಅವುಗಳ ಪ್ರಾಣಕ್ಕೆ ಹಾನಿ ಆಗದಂತೆ ಅಲ್ಲಿಂದ ಓಡಿಸಬೇಕು. 29. ಜೇನಿನ ಗೂಡು ಮನೆಯಲ್ಲಿ ಕಟ್ಟಬಾರದು. ಸಾಧ್ಯವಾದಷ್ಟು ಮನೆಯೊಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ. 30. ಬಾವುಲಿಗಳು ಮನೆಯ ಸರಹದ್ದಿನಲ್ಲಿ ವಾಸ ಮಾಡದಂತೆ ಎಚ್ಚರವಹಿಸಿ.

Follow Us
Web contact
Web contact

TV9 Kannada

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?