Russia-Ukraine War: ಕೈವ್ ಬಳಿ 14 ಜನರಿದ್ದ ಉಕ್ರೇನ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ರಷ್ಯಾ ಸೇನೆ

| Updated By: ಸುಷ್ಮಾ ಚಕ್ರೆ

Updated on: Feb 24, 2022 | 7:47 PM

ರಷ್ಯಾದ ಮಿಲಿಟರಿ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಉಕ್ರೇನ್​ನ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ. ಉಕ್ರೇನ್‌ನಲ್ಲಿ ರಷ್ಯಾ ಸೈನಿಕರು ನಡೆಸಿದ ದಾಳಿಯಲ್ಲಿ ಇದುವರೆಗೆ ಸುಮಾರು 40 ಜನರು ಸಾವನ್ನಪ್ಪಿದ್ದಾರೆ.

Russia-Ukraine War: ಕೈವ್ ಬಳಿ 14 ಜನರಿದ್ದ ಉಕ್ರೇನ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ರಷ್ಯಾ ಸೇನೆ
ಉಕ್ರೇನ್​ನಲ್ಲಿ ಮಿಲಿಟರಿ ವಿಮಾನ ಪತನ
Follow us on

ಕೈವ್: ಉಕ್ರೇನ್  (Ukraine) ಮೇಲೆ ರಷ್ಯಾ ಯುದ್ಧ ಸಾರಿದ ನಂತರ ಉಕ್ರೇನ್​ನಲ್ಲಿರುವ ಜನರು ಜೀವ ಕೈಯಲ್ಲಿ ಹಿಡಿದು ಉಸಿರಾಡುವಂತಾಗಿದೆ. ಇದರ ನಡುವೆ ಇಂದು 14 ಜನರನ್ನು ಹೊತ್ತೊಯ್ಯುತ್ತಿದ್ದ ಉಕ್ರೇನಿಯನ್ ಮಿಲಿಟರಿ ವಿಮಾನವನ್ನು ಪತನಗೊಳಿಸಲಾಗಿದೆ. ಈ ಘಟನೆಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬ ಖಚಿತವಾದ ಮಾಹಿತಿ ಇನ್ನೂ ಸಿಕ್ಕಿಲ್ಲ. ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಷ್ಯಾದ (Russia) ಮಿಲಿಟರಿ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಉಕ್ರೇನ್​ನ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ. ಉಕ್ರೇನ್‌ನಲ್ಲಿ ರಷ್ಯಾ ಸೈನಿಕರು ನಡೆಸಿದ ದಾಳಿಯಲ್ಲಿ ಇದುವರೆಗೆ ಸುಮಾರು 40 ಜನರು ಸಾವನ್ನಪ್ಪಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಉಕ್ರೇನ್‌ನ ಪೂರ್ವಕ್ಕೆ ಎರಡು ಗ್ರಾಮಗಳನ್ನು ರಷ್ಯಾ ತನ್ನ ವಶಕ್ಕೆ ಪಡೆದಿದೆ. ಉಕ್ರೇನ್ ಮೇಲೆ ಆಕ್ರಂನ ಮಾಡಿದ ಬಳಿಕ ಟಿವಿ ವಾಹಿನಿಯೊಂದಿಗೆ ಮಾತನಾಡಿದ ಪುಟಿನ್, ಉಕ್ರೇನಿಯನ್ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗುವಂತೆ ಮನವಿ ಮಾಡಿದರು. ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳ ನಡುವಿನ ಘರ್ಷಣೆಗಳು ‘ಅನಿವಾರ್ಯ’ ಮತ್ತು ವಿಶೇಷ ಮಿಲಿಟರಿ ಕ್ರಮವು ‘ಉಕ್ರೇನ್‌ನ ಸಶಸ್ತ್ರೀಕರಣ ಮತ್ತು ಡೆನಾಜಿಫಿಕೇಶನ್ ಗುರಿಯನ್ನು ಹೊಂದಿದೆ’ ಎಂದು ಅವರು ಹೇಳಿದರು.

ಹಾಗೇ, ರಷ್ಯಾ- ಉಕ್ರೇನ್ ನಡುವಿನ ಸಂಘರ್ಷ ಮಿಲಿಟರಿ ಕಾರ್ಯಾಚರಣೆಯಲ್ಲಿ ಮಧ್ಯೆ ಪ್ರವೇಶಿಸಿದವರ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ನಮ್ಮ ದೇಶ ಮತ್ತು ನಮ್ಮ ಜನರಿಗೆ ಬೆದರಿಕೆ ಹಾಕಲು ನೋಡಿದರೆ, ಈ ವಿಷಯದಲ್ಲಿ ಮಧ್ಯ ಪ್ರವೇಶಿಸಲು ಪ್ರಯತ್ನಿಸುವ ಯಾರಿಗಾದರೂ ರಷ್ಯಾದಿಂದ ಪ್ರತಿಕ್ರಿಯೆ ನೀಡುತ್ತೇವೆ. ಹಾಗೇನಾದರೂ ಮಧ್ಯ ಪ್ರವೇಶ ಮಾಡಿದರೆ ನಿಮ್ಮ ಇತಿಹಾಸದಲ್ಲಿ ಹಿಂದೆಂದೂ ಅನುಭವಿಸದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್‌ನ ಪ್ರದೇಶಗಳನ್ನು, ಪ್ರಾಂತ್ಯಗಳನ್ನು ಆಕ್ರಮಿಸಿಕೊಳ್ಳುವುದು ನಮ್ಮ ಯೋಜನೆಯಲ್ಲ. ಉಕ್ರೇನ್‌ನ ಮಿಲಿಟರಿ ಶಕ್ತಿಯನ್ನು ಮಟ್ಟ ಹಾಕುವುದು ಮತ್ತು ಉಕ್ರೇನ್ ನಾಜಿ ತತ್ವವನ್ನು ತೊಡೆದು ಹಾಕುವುದರ ಜೊತೆಗೆ ರಷ್ಯಾದ ಜನರ ರಕ್ಷಣೆಯೇ ನಮ್ಮ ಗುರಿಯಾಗಿದೆ ಎಂದು ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ: Russia Ukraine War ಉಕ್ರೇನ್‌ನಲ್ಲಿ ಬಾಂಬ್ ಶೆಲ್ಟರ್‌ಗಳನ್ನು ಹೇಗೆ ಕಂಡುಹಿಡಿಯಲು ಗೂಗಲ್ ಮಾಡಿ ಎಂದ ಭಾರತೀಯ ರಾಯಭಾರ ಕಚೇರಿ

Russia-Ukraine War: ರಷ್ಯಾ- ಉಕ್ರೇನ್ ಯುದ್ಧ ಹಿನ್ನೆಲೆ; ಸಚಿವರ ತುರ್ತು ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ

Published On - 7:45 pm, Thu, 24 February 22