ಪ್ರಶಸ್ತಿ ವಿಜೇತೆ ರಷ್ಯಾದ ತನಿಖಾ ಪತ್ರಕರ್ತೆ ಎಲೆನಾ ಮಿಲಾಶಿನಾ( Elena Milashina)ಅವರು ಚೆಚೆನ್ಯಾ ಪ್ರವಾಸದ ವೇಳೆ ಸಶಸ್ತ್ರಧಾರಿಗಳು ಹಲ್ಲೆ ನಡೆಸಿದ್ದು, ಥಳಿಸಿ, ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾರೆ. ಎಲೆನಾ ಅವರ ಬೆರಳುಗಳು ಮುರಿದು ಹೋಗಿವೆ, ಪ್ರಜ್ಞೆಯನ್ನು ಕೂಡ ಕಳೆದುಕೊಂಡಿದ್ದರು, ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದೇಹದಾದ್ಯಂತ ಮೂಗೇಟುಗಳು ಬಿದ್ದಿವೆ. ಮಂಗಳವಾರ ಮುಂಜಾನೆ ಮಿಲಾಶಿನಾ ಮತ್ತು ವಕೀಲ ಅಲೆಕ್ಸಾಂಡರ್ ನೆಮೊವ್ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಶಸ್ತ್ರಾಸ್ತ್ರಧಾರಿಗಳು ಅಮಾನವೀಯವಾಗಿ ಥಳಿಸಿದ್ದು, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಅವರ ಬಳಿ ಇದ್ದ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಮಾಸ್ಕೋದಲ್ಲಿ ರಷ್ಯಾದ ಕೆಲವು ಶಾಸಕರು ಮತ್ತು ಅಧಿಕಾರಿಗಳು ದಾಳಿಯನ್ನು ಖಂಡಿಸಿದರು, ಅವರು ತನಿಖೆಯ ಅಗತ್ಯವಿದೆ ಎಂದು ಹೇಳಿದರು.
ಮತ್ತಷ್ಟು ಓದಿ:ಭಾರತ್ ಜೋಡೋ ಪಾದಾಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರ ಹಲ್ಲೆ
ಎಲಾನಾಗೆ ಥಳಿಸಿ ತಲೆ ಬೋಳಿಸಿ ತಲೆಗೆ ಹಸಿರು ಬಣ್ಣವನ್ನು ಬಳಿದಿದ್ದಾರೆ. ನೊವಾಯಾ ಗೆಜೆಟಾ ಪತ್ರಿಕೆಯ ಪ್ರಸಿದ್ಧ ಪತ್ರಕರ್ತೆ ಮಿಲಾಶಿನಾ, ಜರೆಮಾ ಮುಸೇವಾ ಅವರ ಶಿಕ್ಷೆಯ ಕುರಿತು ವರದಿ ಮಾಡಲು ಚೆಚೆನ್ಯಾ ರಾಜಧಾನಿ ಗ್ರೋಜ್ನಿಗೆ ಹೋಗಿದ್ದರು.
ಕಾರಿನ ಚಾಲಕನ್ನು ಬೆದರಿಸಿ ಆತನನ್ನು ಕೆಳಗಿಳಿಸಿ ಬಂದೂಕುಧಾರಿಗಳು ಕಾರಿನೊಳಗೆ ಬಂದರು, ಬಳಿಕ ನನ್ನ ಕೈಕಾಲು ಕಟ್ಟಿ, ತಲೆಗೆ ಬಂದೂಕು ಇಟ್ಟು, ಹಲ್ಲೆ ನಡೆಸಿದ್ದಾರೆ, ತನ್ನ ಬಳಿ ಇದ್ದ ಕ್ಯಾಮರಾ, ಫೋನ್ ಅನ್ನು ನಾಶಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ