ಉಕ್ರೇನ್(Ukraine)ನನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬೇಕು ಎಂದು ರಷ್ಯಾ ಹೊಂಚು ಹಾಕಿ ಕುಳಿತಿದೆ, ಕಳೆದ ವರ್ಷ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಆರಂಭವಾಗಿತ್ತು. ಸಾಕಷ್ಟು ಪ್ರದೇಶಗಳನ್ನು ರಷ್ಯಾ ವಶಪಡಿಸಿಕೊಂಡಿತ್ತು. ಆದರೆ ಸಂಪೂರ್ಣವಾಗಿ ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಆದರೆ ಆಗಾಗ ದಾಳಿ ನಡೆಸುತ್ತಲೇ ಇದೆ. ಪೂರ್ವ ಉಕ್ರೇನ್‌ನ ಕೋಸ್ಟಿಯಾಂಟಿನಿವ್ಕಾ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆದಿದೆ, ಘಟನೆಯಲ್ಲಿ 17 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಈ ಮಾಹಿತಿಯನ್ನು ನೀಡಿದ್ದಾರೆ.
ದಾಳಿಯನ್ನು ಹೇಗೆ ನಡೆಸಲಾಯಿತು ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ ಆದರೆ ಕೊಸ್ಟಿಯಾಂಟಿನಿವ್ಕಾ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಉಕ್ರೇನ್‌ನ ಕೋಸ್ಟಿಯಾಂಟಿನಿವ್ಕಾ ನಗರವು ಯುದ್ಧಭೂಮಿಗೆ ಬಹಳ ಹತ್ತಿರದಲ್ಲಿದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದಾಳಿಯನ್ನು ಖಂಡಿಸಿದ್ದಾರೆ. ಈ ದಾಳಿಯಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಪ್ರಾಣ ಕಳೆದುಕೊಂಡವರಲ್ಲಿ ಮಕ್ಕಳೂ ಸೇರಿದ್ದಾರೆ. ರಷ್ಯಾದ ದಾಳಿಯಿಂದಾಗಿ ನಗರದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ರಷ್ಯಾದ ದಾಳಿಯಲ್ಲಿ ನಗರದ ಮಾರುಕಟ್ಟೆ, ಅಂಗಡಿಗಳು ಮತ್ತು ಔಷಧಿ ಅಂಗಡಿಗೆ ಹಾನಿಯಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ತಿಳಿಸಿದ್ದಾರೆ.
ಅಮೆರಿಕದ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಕೀವ್‌ಗೆ ತಲುಪಿರುವ ಸಮಯದಲ್ಲಿ ರಷ್ಯಾ ಈ ದಾಳಿ ಮಾಡಿದೆ.
ಮತ್ತಷ್ಟು ಓದಿ: Russia-Ukraine War: ಉಕ್ರೇನ್ ರಾಜಧಾನಿಯ ಮೇಲೆ ರಷ್ಯಾ ದಾಳಿ, ವಸತಿ ಕಟ್ಟಡದ ಮೇಲ್ಛಾವಣಿಯ ಮೇಲೆ ಬೆಂಕಿ
ಹಲವು ತಿಂಗಳುಗಳಲ್ಲಿ ನಡೆಸಲಾದ ಅತ್ಯಂತ ಅಪಾಯಕಾರಿ ದಾಳಿ ಇದಾಗಿದೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಸ್ಮಿಹಾಲ್ ಹೇಳಿದ್ದಾರೆ.
ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ರಷ್ಯಾದ ಸೈನಿಕರನ್ನು ಭಯೋತ್ಪಾದಕರಿಗೆ ಹೋಲಿಸಿ ತಕ್ಕ ಉತ್ತರ ನೀಡಲಾಗುವುದು ಎಂದು ಹೇಳಿದರು.
ಎಸ್-300 ಕ್ಷಿಪಣಿ ಮೂಲಕ ರಷ್ಯಾ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ನಗರದ ಹೃದಯ ಭಾಗದಲ್ಲಿ ಈ ದಾಳಿ ನಡೆದಿದೆ. ದಾಳಿ ನಡೆದ ಮಾರುಕಟ್ಟೆಯು ಶಾಪಿಂಗ್ ಸೆಂಟರ್‌ಗೆ ಸಮೀಪದಲ್ಲಿದೆ. ಕೋಸ್ಟಿಯಾಂಟಿನಿವ್ಕಾ ಪಟ್ಟಣದ ಹತ್ತಿರದಲ್ಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ