ಸೈಬೀರಿಯಾ ಕಾಡಿನಲ್ಲಿ ರಷ್ಯಾ ಅಧ್ಯಕ್ಷ; ಮೀನು ಹಿಡಿದು, ಗುಡ್ಡ ಹತ್ತಿದ ವ್ಲಾದಿಮಿರ್​ ಪುತಿನ್​

| Updated By: Lakshmi Hegde

Updated on: Sep 26, 2021 | 4:41 PM

ವ್ಲಾದಿಮಿರ್​ ಪುತಿನ್​ ಅವರು ವಿಭಿನ್ನ ಉಡುಗೆಯನ್ನು ಧರಿಸಿ ಹುಲ್ಲುಗಾವಲುಗಳ ಮೇಲೆ ಕಾಲ್ನಡಿಗೆಯಲ್ಲಿ ಓಡಾಡಿದ್ದಾರೆ. ಮರಕ್ಕೆ ಆತುನಿಂತು ಪೋಸ್​ ಕೊಟ್ಟಿದ್ದಾರೆ. 

ಸೈಬೀರಿಯಾ ಕಾಡಿನಲ್ಲಿ ರಷ್ಯಾ ಅಧ್ಯಕ್ಷ; ಮೀನು ಹಿಡಿದು, ಗುಡ್ಡ ಹತ್ತಿದ ವ್ಲಾದಿಮಿರ್​ ಪುತಿನ್​
ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​
Follow us on

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್ (Vladimir Putin) ಸೆಪ್ಟೆಂಬರ್​ ಪ್ರಾರಂಭದಲ್ಲಿ ಸೈಬೀರಿಯಾದಲ್ಲಿ ತುಂಬ ಜಾಲಿಯಾಗಿ ದಿನ ಕಳೆದಿದ್ದಾರೆ. ಬೆಟ್ಟ-ಗುಡ್ಡ ಹತ್ತಿ, ಹೊಳೆಯಲ್ಲಿ ಇಳಿದು ನಡೆದಾಡಿದ್ದಾರೆ. ಮೀನು ಹಿಡಿದಿದ್ದಾರೆ. ವ್ಲಾದಿಮಿರ್​ ಪುತಿನ್​ರ ಈ ವಿಶೇಷ ಕ್ಷಣಗಳ ಫೋಟೋವನ್ನು ರಷ್ಯಾ ಸರ್ಕಾರ ಇದೀಗ ಬಿಡುಗಡೆ ಮಾಡಿದೆ.  ರಷ್ಯಾ ಸರ್ಕಾರದ ವೆಬ್​ಸೈಟ್​​ನಲ್ಲಿ ಒಟ್ಟು 20 ಫೋಟೋಗಳನ್ನು ಬಿಡುಗಡೆ ಮಾಡಲಾಗಿದ್ದು, ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಅವರು ಕೆಲ ಕಾಲ ತಮ್ಮ ಸರ್ಕಾರಿ ಕೆಲಸಗಳಿಂದ ಬಿಡುವು ಪಡೆದು, ಸೈಬೀರಿಯಾದ ಅಪರಿಚಿತ ಸ್ಥಳದಲ್ಲಿ ಸಮಯ ಕಳೆದಿದ್ದಾರೆ ಎಂದು ಹೇಳಿದೆ. 

ಸೆಪ್ಟೆಂಬರ್​ ಪ್ರಾರಂಭದಲ್ಲಿ ವ್ಲಾದಿಮಿರ್​ ಪುತಿನ್​ ಅವರ ಸುತ್ತಲಿನ ಹಲವು ಜನರಲ್ಲಿ ಕೊವಿಡ್​ 19 ಕಾಣಿಸಿಕೊಂಡಿದ್ದರಿಂದ ಅವರೂ ಕೂಡ ಐಸೋಲೇಟ್​ ಆಗಬೇಕಾಗಿತ್ತು. ತಜಕಿಸ್ತಾನದ ಪ್ರವಾಸವನ್ನೂ ರದ್ದುಗೊಳಿಸಲಾಗಿತ್ತು. ಹೀಗೆ ಐಸೋಲೇಟ್​ ಆಗಬೇಕಾದ ಸಂದರ್ಭವನ್ನು ಪುತಿನ್ ಸೈಬೀರಿಯಾದ ಸುಂದರ ಜಾಗದಲ್ಲಿ ಕಳೆದಿದ್ದಾರೆ.  ಸದಾ ರಾಜಕೀಯ ಕೆಲಸದಲ್ಲಿ ತೊಡಗಿಕೊಳ್ಳುವ ಅಧ್ಯಕ್ಷರು, ಇದೀಗ ವಿಭಿನ್ನ ಉಡುಗೆಯನ್ನು ಧರಿಸಿ ಹುಲ್ಲುಗಾವಲುಗಳ ಮೇಲೆ ಕಾಲ್ನಡಿಗೆಯಲ್ಲಿ ಓಡಾಡಿದ್ದಾರೆ. ಮರಕ್ಕೆ ಆತುನಿಂತು ಪೋಸ್​ ಕೊಟ್ಟಿದ್ದಾರೆ.

ಈ ಹಿಂದೆ ರಷ್ಯಾ ಅಧ್ಯಕ್ಷರು ಶರ್ಟ್​ ಹಾಕದೆ, ಸನ್​ಗ್ಲಾಸ್ ಹಾಕಿಕೊಂಡಿರುವ ಫೋಟೋ ಕೂಡ ವೈರಲ್ ಆಗಿತ್ತು. ರೈಫಲ್​ ಹಿಡಿದ, ಫೈಟರ್​ ಜೆಟ್​​ನ ಪೈಲಟ್​ ಸ್ಥಳದಲ್ಲಿ ಕುಳಿತ ಫೋಟೋಗಳೂ ಕೂಡ ಆಕರ್ಷಿಸಿದ್ದವು. ವ್ಲಾದಿಮಿರ್​ ಪುತಿನ್​ಗೆ 68 ವರ್ಷ ವಯಸ್ಸಾಗಿದ್ದು, ಸ್ಪುಟ್ನಿಕ್​ ವಿ ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ. ಅವರೀಗ ಆರೋಗ್ಯವಾಗಿದ್ದಾರೆ ಎಂದು ರಷ್ಯಾ ಅಧ್ಯಕ್ಷರ ಕಚೇರಿ ತಿಳಿಸಿದೆ.

ಇದನ್ನೂ ಓದಿ: Viral Video: ಶಾಪಿಂಗ್​ಗೆಂದು 10 ನಿಮಿಷ ಜೀಪ್ ನಿಲ್ಲಿಸಿ ಹೋದ ವ್ಯಕ್ತಿ; ಮರಳಿದಾಗ ಎದುರುಗೊಂಡಿದ್ದು ಜೇನುನೊಣಗಳು!

ಮುಂದಕ್ಕೆ ಹೋಗುತ್ತಾ ‘ಕೋಟಿಗೊಬ್ಬ 3’ ರಿಲೀಸ್ ಡೇಟ್? ನಾಳೆ ಸುದೀಪ್ ಜತೆ ‘ಸಲಗ’ ನಿರ್ಮಾಪಕರ ಭೇಟಿ

(Russian President Vladimir Putin Fishing and Hiking In Siberia)

Published On - 4:39 pm, Sun, 26 September 21