ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚಿಸದೇ ಅಫ್ಘಾನ್ ವಿಮಾನ ನಿಲ್ದಾಣ ಕಾರ್ಯಾಚರಣೆ ಇಲ್ಲ: ಟರ್ಕಿ

ಅಫ್ಗಾನಿಸ್ತಾನದ ರಾಜಧಾನಿಯು ತಾಲಿಬಾನ್ ವಶಕ್ಕೆ ಬಂದ ನಂತರ ಅಲ್ಲಿನ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆ ಸ್ಥಿತಿಯಲ್ಲಿ ಇರಿಸಲು ಸಹಾಯ ಮಾಡಲು ಟರ್ಕಿ ಈ ಮೊದಲು ಚಿಂತನೆ ನಡೆಸಿತ್ತು.

ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚಿಸದೇ ಅಫ್ಘಾನ್ ವಿಮಾನ ನಿಲ್ದಾಣ ಕಾರ್ಯಾಚರಣೆ ಇಲ್ಲ: ಟರ್ಕಿ
ಟರ್ಕಿ ಅಧ್ಯಕ್ಷ ಎರ್ಡೊಗನ್ ತಯ್ಯಪ್ ರೆಕೆಪ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 26, 2021 | 10:58 PM

ನ್ಯೂಯಾರ್ಕ್: ಕಾಬೂಲ್ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿಡುವ ಬಗ್ಗೆ ಅಫ್ಗಾನಿಸ್ತಾನದ ಸರ್ಕಾರಕ್ಕೆ ಸಹಕರಿಸುವ ಕುರಿತು ಪ್ರತಿಕ್ರಿಯಿಸಿರುವ ಟರ್ಕಿ ಅಧ್ಯಕ್ಷ ರೆಕೆಪ್ ತಯ್ಯಪ್ ಎರ್ಡೊಗನ್, ‘ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಟರ್ಕಿ ಸರ್ಕಾರವು ಅಫ್ಘಾನಿಸ್ತಾನಕ್ಕೆ ಸಹಕರಿಸುವ ಬಗ್ಗೆ ಅಂತಿಮ ತೀರ್ಮಾಣ ತೆಗೆದುಕೊಳ್ಳುವ ಮೊದಲು ಅಲ್ಲಿ ಎಲ್ಲರನ್ನೂ ಒಳಗೊಳ್ಳುವ ಸರ್ಕಾರವೊಂದು ರಚನೆಯಾಗಬೇಕಾದ್ದು ಅನಿವಾರ್ಯ’ ಎಂದು ಹೇಳಿದರು. ಅಫ್ಗಾನಿಸ್ತಾನದ ರಾಜಧಾನಿಯು ತಾಲಿಬಾನ್ ವಶಕ್ಕೆ ಬಂದ ನಂತರ ಅಲ್ಲಿನ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆ ಸ್ಥಿತಿಯಲ್ಲಿ ಇರಿಸಲು ಸಹಾಯ ಮಾಡಲು ಟರ್ಕಿ ಈ ಮೊದಲು ಚಿಂತನೆ ನಡೆಸಿತ್ತು.

ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಗಾನಿಸ್ತಾನದಲ್ಲಿದ್ದ ಟರ್ಕಿ ಪಡೆಗಳು ಈಗಾಗಲೇ ಹಿಂದಿರುಗಿವೆ. ಕಾಬೂಲ್ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿರಿಸುವ ಕುರಿತು ಅಫ್ಗಾನಿಸ್ತಾನ ಮತ್ತು ಅಮೆರಿಕ ಅಧಿಕಾರಿಗಳ ನಡುವೆ ಈ ಹಿಂದೆಯೂ ಮಾತುಕತೆ ನಡೆದಿತ್ತು. ಅಮೆರಿಕ ಭದ್ರತಾ ಪಡೆಗಳೊಂದಿಗೆ ಟರ್ಕಿ ಸಿಬ್ಬಂದಿಯೂ ಅಫ್ಗಾನಿಸ್ತಾನದಿಂದ ಹಿಂದಿರುಗುವುದರೊಂದಿಗೆ ಅಮೆರಿಕದ ಸುದೀರ್ಘ ಮಿಲಿಟರಿ ಸಂಘರ್ಷವು ಕೊನೆಗೊಂಡಿತ್ತು.

ಅಫ್ಘಾನಿಸ್ತಾನವನ್ನು ಸುಪರ್ದಿಗೆ ತೆಗೆದುಕೊಂಡ ನಂತರವೂ ಕಾಬೂಲ್ ವಿಮಾನ ನಿಲ್ದಾಣ ನಿರ್ವಹಿಸಲು ಟರ್ಕಿ ಮುಂದಾಗಬಹುದು ಎಂದು ತಾಲಿಬಾನ್ ಹೇಳಿತ್ತು. ಈ ಸಂಬಂಧ ಟರ್ಕಿ ತಾಲಿಬಾನ್​ನೊಂದಿಗೆ ಮಾತುಕತೆಯನ್ನು ನಡೆಸುತ್ತಲೇ ಇದೆ.

ಅಫ್ಗಾನಿಸ್ತಾನದ ಸರ್ಕಾರವು ಎಲ್ಲರನ್ನೂ ಒಳಗೊಂಡಿಲ್ಲ. ಎಲ್ಲ ಗುಂಪುಗಳಿಗೂ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚನೆಯಾಗುವವರೆಗೂ ಅಫ್ಗಾನಿಸ್ತಾನಕ್ಕೆ ನಾವು ಹೋಗುವುದಿಲ್ಲ. ಎಲ್ಲರಿಗೂ ಪ್ರಾತಿನಿಧ್ಯ ಸಿಗುವ ಸರ್ಕಾರ ರಚನೆಯಾದರೆ ಟರ್ಕಿ ಅಫ್ಘಾನಿಸ್ತಾನಕ್ಕೆ ಅಗತ್ಯ ನೆರವು ನೀಡಲಿದೆ. ಅಫ್ಗಾನಿಸ್ತಾನದಲ್ಲಿರುವ ಎಲ್ಲ ಮಹಿಳೆಯರೂ ಬದುಕಿನ ವಿವಿಧ ಆಯಾಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಅಂಥ ಸಂದರ್ಭದಲ್ಲಿ ಮಾತ್ರ ನಾವು ಅವರಿಗೆ ಬೆಂಬಲಿಸಲು ಸಾಧ್ಯ ಎಂದು ಎರ್ಡೊಗನ್ ಅಮೆರಿಕ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಬ್ರುಸೆಲ್ಸ್​ನಲ್ಲಿ ನಡೆದ ನ್ಯಾಟೊ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೂ ಟರ್ಕಿ ಅಧ್ಯಕ್ಷ ಎರ್ಡೊಗನ್ ಕಾಬೂಲ್ ವಿಮಾನ ನಿಲ್ದಾಣ ನಿರ್ವಹಣೆ ಕುರಿತು ಚರ್ಚಿಸಿದ್ದರು. ಆದರೆ ಈಚಿನ ದಿನಗಳಲ್ಲಿ ಎರಡೂ ದೇಶಗಳ ನಡುವಣ ಸಂಬಂಧ ಹಳಸಿದೆ. ರಷ್ಯಾದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಟರ್ಕಿ ಖರೀದಿಸಿದ್ದು ಇದಕ್ಕೆ ಮುಖ್ಯ ಕಾರಣ. ಈ ಬೆಳವಣಿಗೆಯು ಪಾಶ್ಚಾತ್ಯ ಒಕ್ಕೂಟಗಳ ಭದ್ರತೆಗೆ ಧಕ್ಕೆ ತರುತ್ತದೆ ಎಂದು ಅಮೆರಿಕ ವಿಶ್ಲೇಷಿಸಿದೆ.

ರಷ್ಯಾಕ್ಕೆ ಕಳೆದ ಬುಧವಾರ ಭೇಟಿ ನೀಡುವ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಎರ್ಡೊಗನ್, ರಷ್ಯಾದಿಂದ ಮತ್ತೊಂದು ಹಂತದ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿಸಲು ಟರ್ಕಿ ಒಪ್ಪಿದೆ ಎಂದಿದ್ದರು. ನಾವು ಯಾವ ಯುದ್ಧೋಪಕರಣ ಖರೀದಿಸಬೇಕು ಎನ್ನುವುದನ್ನು ಎಂಬುದನ್ನು ನಮ್ಮ ದೇಶವಷ್ಟೇ ನಿರ್ಧರಿಸುತ್ತದೆ. ಯಾವುದೇ ದೇಶವು ಯಾವುದೇ ಹಂತದಲ್ಲಿ ಮಧ್ಯಪ್ರವೇಶಿಸುವಂತಿಲ್ಲ ಎಂದು ಎರ್ಡೊಗನ್ ಟರ್ಕಿಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ತಿಳಿಸಿದ್ದರು.

(Turkey President Erdogan Tayyip Recep on Afghan Airport Deal with Taliban)

ಇದನ್ನೂ ಓದಿ: ‘ಕಾಬೂಲ್​ ಏರ್​ಪೋರ್ಟ್​​ ಮೇಲೆ ನಾವು ಡ್ರೋನ್​ ದಾಳಿ ಮಾಡಿದ್ದು ತಪ್ಪಾಯ್ತು’-ಕ್ಷಮೆ ಕೇಳಿದ ಯುಎಸ್​

ಇದನ್ನೂ ಓದಿ: ಮತ ಗಳಿಸಲು ಬಿಜೆಪಿ ತಾಲಿಬಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನವನ್ನು ಬಳಸುತ್ತದೆ: ಮೆಹಬೂಬ ಮುಫ್ತಿ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ