ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ರಷ್ಯಾ ಮತ್ತು ಸ್ವಾಧೀನ ಪಡಿಸಿಕೊಂಡ ಕ್ರಿಮಿಯನ್ ಪರ್ಯಾಯ ದ್ವೀಪಕ್ಕೆ ಸಂಪರ್ಕಿಸುವ ಕ್ರಿಮಿಯನ್ ಸೇತುವೆಯಲ್ಲಿ (Crimean Bridge) ಮರ್ಸಿಡಿಸ್ ಕಾರು ಚಾಲನೆ ಮಾಡುತ್ತಿರುವುದು ಕಂಡುಬಂದಿದೆ.ಕೆಲವು ತಿಂಗಳ ಹಿಂದೆ ಈ ಸೇತುವೆ ಮೇಲೆ ಸ್ಫೋಟ ನಡೆದಿತ್ತು.2018 ರಲ್ಲಿ ವ್ಲಾಡಿಮಿರ್ ಪುಟಿನ್ ಅವರು ವೈಯಕ್ತಿಕವಾಗಿ ತೆರೆದ 19 ಕಿಮೀ ರಸ್ತೆ ಮತ್ತು ರೈಲು ಸೇತುವೆ ಮೇಲೆ ಅಕ್ಟೋಬರ್ 8 ರಂದು ಉಕ್ರೇನ್ ಬಾಂಬ್ ದಾಳಿ ನಡೆಸಿದೆ ಎಂದು ರಷ್ಯಾ ಹೇಳಿತ್ತು. ಆದರೆ ಉಕ್ರೇನ್ ಎಂದಿಗೂ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಪುಟಿನ್, ಉಪ ಪ್ರಧಾನ ಮಂತ್ರಿ ಮರಾತ್ ಖುಸ್ನುಲಿನ್ ಅವರೊಂದಿಗೆ ಮರ್ಸಿಡಿಸ್ ಕಾರು ಚಲಾಯಿಸುತ್ತಿರುವುದನ್ನು ರಾಜ್ಯ ದೂರದರ್ಶನ ಪ್ರಸಾರ ಮಾಡಿದ್ದು, ದಾಳಿ ಎಲ್ಲಿ ನಡೆಯಿತು ಎಂಬ ಪ್ರಶ್ನೆ ಕೇಳಿದೆ.ಸೇತುವೆಯ ಎಡಭಾಗ, ನಾನು ಅರ್ಥಮಾಡಿಕೊಂಡಂತೆ ನಿರ್ಮಾಣ ಸ್ಥಿತಿಯಲ್ಲಿದೆ. ಆದರೆ ಅದೇನೇ ಇದ್ದರೂ ಅದನ್ನು ಪೂರ್ಣಗೊಳಿಸಬೇಕಾಗಿದೆ. ಅದಕ್ಕೆ ಸ್ವಲ್ಪ ಹಾನಿಯಾಗಿದೆ. ನಾವು ಅದನ್ನು ಸುಸ್ಥಿತಿಗೆ ತರಬೇಕಾಗಿದೆ ಎಂದು ರಷ್ಯಾದ ದೂರದರ್ಶನ ಜತೆ ಮಾತನಾಡಿದ ವ್ಲಾಡಿಮಿರ್ ಪುಟಿನ್ ಹೇಳಿದರು.ವ್ಲಾಡಿಮಿರ್ ಪುಟಿನ್ ಅವರು ಸೇತುವೆಯ ಭಾಗಗಳಲ್ಲಿ ನಡೆದಿದ್ದು , ಹಾನಿಯಾದ ಭಾಗಗಳನ್ನು ಪರಿಶೀಲಿಸಿದರು.
Автомобильную часть Крымского моста Путин протестировал на “Мерседесе”. Учел критику и пристегнулся pic.twitter.com/OHAcpAxyUv
— Кремлевский пул РИА (@Kremlinpool_RIA) December 5, 2022
ಸ್ಫೋಟದಲ್ಲಿ ರಸ್ತೆ ಸೇತುವೆಯ ಒಂದು ಭಾಗವನ್ನು ಧ್ವಂಸಗೊಂಡಿದ್ದು ಕೆರ್ಚ್ ಜಲಸಂಧಿಯಾದ್ಯಂತ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ನೆರೆಯ ದಕ್ಷಿಣ ರಷ್ಯಾದಿಂದ ಸ್ವಾಧೀನಪಡಿಸಿಕೊಂಡ ಕ್ರಿಮಿಯಾನ್ ಪರ್ಯಾಯ ದ್ವೀಪದ ಕಡೆಗೆ ಹೋಗುತ್ತಿದ್ದ ರೈಲಿನಲ್ಲಿದ್ದ ಹಲವಾರು ಇಂಧನ ಟ್ಯಾಂಕರ್‌ಗಳು ಸ್ಫೋಟದಿಂದ ನಾಶವಾಗಿವೆ. ಇದಕ್ಕೆ ಪ್ರತಿಯಾಗಿ ನಾಗರಿಕ ಪ್ರದೇಶಗಳು ಮತ್ತು ಉಕ್ರೇನ್‌ನ ಪವರ್ ಗ್ರಿಡ್‌ನ ಮೇಲೆ ವೈಮಾನಿಕ ದಾಳಿಯೊಂದಿಗೆ ಪುಟಿನ್ ಪ್ರತೀಕಾರ ತೀರಿಸಿಕೊಂಡಿದ್ದರು.
Published On - 1:50 pm, Tue, 6 December 22