ಮುಸ್ಲಿಂ ರಾಷ್ಟ್ರಗಳಿಗೂ ಗೊತ್ತಾಗೋಯ್ತು ಪಾಕ್ ಬುದ್ಧಿ, ಎಚ್ಚರಿಕೆ ರವಾನೆ

ಸದಾ ಭಾರತದೊಂದಿಗೆ ಕಾಲು ಕೆರೆದು ಜಗಳವಾಡುತ್ತಿರುವ ಪಾಕಿಸ್ತಾನಕ್ಕೆ ಮುಸ್ಲಿಂ ರಾಷ್ಟ್ರಗಳು ಬೆಂಡೆತ್ತಿವೆ. ಭಿಕ್ಷುಕರ, ಕಳ್ಳರನ್ನು ಕಳುಹಿಸದಂತೆ ಎಚ್ಚರಿಕೆ ನೀಡಿವೆ. ಇರಾನ್ 34,000 ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡಿದೆ. ಇರಾಕ್ 50,000 ಪಾಕಿಸ್ತಾನಿಗಳನ್ನು ಗಡಿಪಾರು ಮಾಡಿದೆ. ಹಾಗೆಯೇ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾಗೆ ಯಾತ್ರಿಕರ ಸೋಗಿನಲ್ಲಿ ಭಿಕ್ಷುಕರು, ಜೇಬುಗಳ್ಳರನ್ನು ಕಳುಹಿಸಬೇಡಿ ಎಂದು ಸೌದಿ ಅರೇಬಿಯಾ ಎಚ್ಚರಿಕೆ ನೀಡಿದೆ.

ಮುಸ್ಲಿಂ ರಾಷ್ಟ್ರಗಳಿಗೂ ಗೊತ್ತಾಗೋಯ್ತು ಪಾಕ್ ಬುದ್ಧಿ, ಎಚ್ಚರಿಕೆ ರವಾನೆ
ಶೆಹಬಾಜ್ ಷರೀಫ್
Image Credit source: France24
Edited By:

Updated on: Jun 08, 2025 | 10:52 AM

ಸದಾ ಭಾರತದೊಂದಿಗೆ ಕಾಲು ಕೆರೆದು ಜಗಳವಾಡುತ್ತಿರುವ ಪಾಕಿಸ್ತಾನ(Pakistan)ಕ್ಕೆ ಮುಸ್ಲಿಂ ರಾಷ್ಟ್ರಗಳು ಬೆಂಡೆತ್ತಿವೆ. ಭಿಕ್ಷುಕರ, ಕಳ್ಳರನ್ನು ಕಳುಹಿಸದಂತೆ ಎಚ್ಚರಿಕೆ ನೀಡಿವೆ. ಇರಾನ್ 34,000 ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡಿದೆ. ಇರಾಕ್ 50,000 ಪಾಕಿಸ್ತಾನಿಗಳನ್ನು ಗಡಿಪಾರು ಮಾಡಿದೆ. ಹಾಗೆಯೇ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾಗೆ ಯಾತ್ರಿಕರ ಸೋಗಿನಲ್ಲಿ ಭಿಕ್ಷುಕರು, ಜೇಬುಗಳ್ಳರನ್ನು ಕಳುಹಿಸಬೇಡಿ ಎಂದು ಸೌದಿ ಅರೇಬಿಯಾ ಎಚ್ಚರಿಕೆ ನೀಡಿದೆ.

ಭಿಕ್ಷಾಟನೆ ಮತ್ತು ಇತರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ವಿದೇಶಗಳಿಂದ ಗಡಿಪಾರು ಮಾಡಲಾದ ಸಾವಿರಾರು ಪಾಕಿಸ್ತಾನಿ ನಾಗರಿಕರ ಪಾಸ್​ಪೋರ್ಟ್​ಗಳನ್ನು ರದ್ದುಗೊಳಿಸಲು ಸೌದಿ ಸರ್ಕಾರ ಮುಂದಾಗಿದೆ. 7,873 ಜನರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯು ಈಗಾಗಲೇ ನಡೆಯುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ಪಾಕಿಸ್ತಾನದ ಸೆನೆಟ್ ಸಮಿತಿಗೆ ಮಾಹಿತಿ ನೀಡಿದರು.

ಈ ಗಡಿಪಾರು ಮಾಡಲಾದವರಲ್ಲಿ 5,600 ಕ್ಕೂ ಹೆಚ್ಚು ಜನರನ್ನು 2019 ಮತ್ತು 2025 ರ ನಡುವೆ ಸೌದಿ ಅರೇಬಿಯಾ, ಒಮಾನ್ ಮತ್ತು ಕತಾರ್‌ನಿಂದ ಹೊರಹಾಕಲಾಗಿದೆ.  ಪ್ರಾಥಮಿಕವಾಗಿ ಸಂಘಟಿತ ಭಿಕ್ಷಾಟನೆ ಜಾಲಗಳಲ್ಲಿ ತೊಡಗಿದ್ದರು.

ಇದನ್ನೂ ಓದಿ
ಭಯೋತ್ಪಾದನೆಯ ಕಿತ್ತೊಗೆಯಲು ಜಾಗತಿಕ ಸಮುದಾಯ ಒಗ್ಗೂಡಬೇಕು; ರಾಜನಾಥ್ ಸಿಂಗ್
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ

ಮತ್ತಷ್ಟು ಓದಿ: Video: ಪಾಕ್​ನಲ್ಲಿ ಹಿಜಾಬ್ ಇಲ್ಲದೆ ಜೀನ್ಸ್​ ​ ಧರಿಸಿ ಹೋದ ಯುವತಿಯರ ಸ್ಥಿತಿ ಏನಾಯ್ತು ನೋಡಿ

ಇವರನ್ನು ಈಗ ಪಾಸ್‌ಪೋರ್ಟ್ ನಿಯಂತ್ರಣ ಪಟ್ಟಿಯಲ್ಲಿ (PCL) ಇರಿಸಲಾಗಿದೆ, ಇದು ಪ್ರಯಾಣ ದಾಖಲೆಗಳ ವಿತರಣೆ ಅಥವಾ ನವೀಕರಣವನ್ನು ನಿರ್ಬಂಧಿಸುವ ಕ್ರಮವಾಗಿದೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

ಸೌದಿ ಅರೇಬಿಯಾ, ಇರಾನ್ ಮತ್ತು ಇರಾಕ್‌ನಂತಹ ದೇಶಗಳಲ್ಲಿ, ವಿಶೇಷವಾಗಿ ಯಾತ್ರಿಕರು, ಪಾಕಿಸ್ತಾನಿ ಪ್ರಜೆಗಳು ತಮ್ಮ ವೀಸಾ ಅವಧಿ ಮುಗಿದ ನಂತರವೂ ದೇಶದಲ್ಲಿಯೇ ಉಳಿಯುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಪಾಸ್‌ಪೋರ್ಟ್ ಮತ್ತು ವಲಸೆ ಮಹಾನಿರ್ದೇಶಕ ಮುಸ್ತಫಾ ಜಮಾಲ್ ಕಾಜಿ ಸಮಿತಿಗೆ ವಿವರಿಸಿದರು. 2024ರಲ್ಲಿ ಸರಿಸುಮಾರು 34,೦೦೦ ಪಾಕಿಸ್ತಾನಿಗಳನ್ನು ಇರಾನ್‌ನಿಂದ ಮತ್ತು ಸುಮಾರು 50,೦೦೦ ಜನರನ್ನು ಇರಾಕ್‌ನಿಂದ ಗಡಿಪಾರು ಮಾಡಲಾಯಿತು.

ಯುರೋಪಿನಲ್ಲಿ ಪಾಕಿಸ್ತಾನಿಗಳು ಆಶ್ರಯ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆಯೂ ಆತಂಕ ಹೆಚ್ಚಿದೆ.ಕಳೆದ ವರ್ಷ ಅಂದಾಜು 125,000 ಮಂದಿ ಯುರೋಪಿಯನ್ ರಾಷ್ಟ್ರಗಳಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.ಪಾಕಿಸ್ತಾನವು ಬಹುಕಾಲದಿಂದ ಹಣ ರವಾನೆ ಹರಿವನ್ನು ಹೆಚ್ಚಿಸಲು ತನ್ನ ವಿದೇಶಿ ಕಾರ್ಯಪಡೆಯ ಮೇಲೆ ಅವಲಂಬಿತವಾಗಿದೆ, ಗಲ್ಫ್ ಪ್ರದೇಶವು ಪ್ರಾಥಮಿಕ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ.

ಮೆಕ್ಕಾ ಯಾತ್ರೆ ಸೋಗಿನಲ್ಲಿ ಪಾಕಿಸ್ತಾನಿ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು.ಪರಿಸ್ಥಿತಿಯನ್ನು ನಿಯಂತ್ರಿಸದಿದ್ದರೆ, ಅದು ಪಾಕಿಸ್ತಾನಿ ಉಮ್ರಾ ಮತ್ತು ಹಜ್ ಯಾತ್ರಿಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸೌದಿ ಅಧಿಕಾರಿಗಳು ಎಚ್ಚರಿಸಿದ್ದರು.

ಸೌದಿ ಹಜ್ ಸಚಿವಾಲಯವು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ಎಚ್ಚರಿಕೆ ನೀಡಿದ್ದು, ಉಮ್ರಾ ವೀಸಾಗಳ ಅಡಿಯಲ್ಲಿ ಪಾಕಿಸ್ತಾನಿ ಭಿಕ್ಷುಕರು ರಾಜ್ಯವನ್ನು ಪ್ರವೇಶಿಸುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದವು. ಧಾರ್ಮಿಕ ತೀರ್ಥಯಾತ್ರೆಯ ನೆಪದಲ್ಲಿ ಭಿಕ್ಷುಕರು ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವುದನ್ನು ತಡೆಯಲು ಮಾರ್ಗಗಳನ್ನು ಕಂಡುಕೊಳ್ಳುವಂತೆ ಸಚಿವಾಲಯ ಪಾಕಿಸ್ತಾನ ಸರ್ಕಾರವನ್ನು ಕೇಳಿತ್ತು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ವಿಮಾನದಿಂದ ಯಾತ್ರಿಕರ ವೇಷ ಧರಿಸಿ ಗಲ್ಫ್​ಗೆ ಭಿಕ್ಷಾಟನೆ ಮಾಡಲು ಯತ್ನಿಸಿದ್ದಕ್ಕಾಗಿ 16 ಭಿಕ್ಷುಕರನ್ನು ಕೆಳಗಿಳಿಸಿ ಬಂಧಿಸಲಾಗಿತ್ತು. ವಿದೇಶಗಳಲ್ಲಿ ಬಂಧಿಸಲ್ಪಟ್ಟ ಭಿಕ್ಷುಕರಲ್ಲಿ ಶೇ 90 ರಷ್ಟು ಜನರು ಪಾಕಿಸ್ತಾನಕ್ಕೆ ಸೇರಿದವರು .

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ