20 ವರ್ಷಗಳಿಂದ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ‘ಸ್ಲೀಪಿಂಗ್ ಪ್ರಿನ್ಸ್’ ವಲೀದ್ ನಿಧನ
ಸೌದಿ ಅರೇಬಿಯಾ(Saudi Arabia) ದ ರಾಜಕುಮಾರ(Prince) ಅಲ್ ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅಲ್ ಸೌದ್ ಶನಿವಾರ ನಿಧನರಾಗಿದ್ದಾರೆ.ಅವರು ಕಳೆದ 20 ವರ್ಷಗಳಿಂದ ಕೋಮಾದಲ್ಲಿದ್ದರು. ಅವರನ್ನು 'ಸ್ಲೀಪಿಂಗ್ ಪ್ರಿನ್ಸ್ ' ಎಂದು ಕರೆಯಲಾಗುತ್ತಿತ್ತು.ಪ್ರಿನ್ಸ್ ಅಲ್ ವಲೀದ್ ಸೌದಿ ರಾಜಮನೆತನದ ಹಿರಿಯ ಸದಸ್ಯರಾದ ಪ್ರಿನ್ಸ್ ಖಲೀದ್ ಬಿನ್ ತಲಾಲ್ ಅವರ ಮಗ ಮತ್ತು ಬಿಲಿಯನೇರ್ ಪ್ರಿನ್ಸ್ ಅಲ್ ವಲೀದ್ ಬಿನ್ ತಲಾಲ್ ಅವರ ಸೋದರಳಿಯ. ವಲೀದ್ 1990ರ ಏಪ್ರಿಲ್ನಲ್ಲಿ ಜನಿಸಿದ್ದರು. 2005 ರಲ್ಲಿ, ಲಂಡನ್‌ನಲ್ಲಿ ಮಿಲಿಟರಿ ತರಬೇತಿಯ ಸಮಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು.

ಸೌದಿ ಅರೇಬಿಯಾ, ಜುಲೈ 20: ಸೌದಿ ಅರೇಬಿಯಾ(Saudi Arabia) ದ ರಾಜಕುಮಾರ(Prince) ಅಲ್ ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅಲ್ ಸೌದ್ ಶನಿವಾರ ನಿಧನರಾಗಿದ್ದಾರೆ.ಅವರು ಕಳೆದ 20 ವರ್ಷಗಳಿಂದ ಕೋಮಾದಲ್ಲಿದ್ದರು. ಅವರನ್ನು ‘ಸ್ಲೀಪಿಂಗ್ ಪ್ರಿನ್ಸ್ ‘ ಎಂದು ಕರೆಯಲಾಗುತ್ತಿತ್ತು.ಪ್ರಿನ್ಸ್ ಅಲ್ ವಲೀದ್ ಸೌದಿ ರಾಜಮನೆತನದ ಹಿರಿಯ ಸದಸ್ಯರಾದ ಪ್ರಿನ್ಸ್ ಖಲೀದ್ ಬಿನ್ ತಲಾಲ್ ಅವರ ಮಗ ಮತ್ತು ಬಿಲಿಯನೇರ್ ಪ್ರಿನ್ಸ್ ಅಲ್ ವಲೀದ್ ಬಿನ್ ತಲಾಲ್ ಅವರ ಸೋದರಳಿಯ.
ವಲೀದ್ 1990ರ ಏಪ್ರಿಲ್ನಲ್ಲಿ ಜನಿಸಿದ್ದರು. 2005 ರಲ್ಲಿ, ಲಂಡನ್‌ನಲ್ಲಿ ಮಿಲಿಟರಿ ತರಬೇತಿಯ ಸಮಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಬಳಿಕ ಅವರು ಕೋಮಾಗೆ ಜಾರಿದ್ದರು. ಈ ಅಪಘಾತದಲ್ಲಿ ಅವರ ಮೆದುಳಿಗೆ ತೀವ್ರ ಗಾಯಗಳು ಮತ್ತು ಆಂತರಿಕ ರಕ್ತಸ್ರಾವವಾಯಿತು. ಇದಾದ ನಂತರ, ಅವರು ಕೋಮಾಕ್ಕೆ ಜಾರಿದ್ದರು.
ಸೌದಿ ಸರ್ಕಾರವು ರಾಜಕುಮಾರನಿಗೆ ಚಿಕಿತ್ಸೆ ನೀಡಲು ಅಮೆರಿಕ ಮತ್ತು ಸ್ಪೇನ್‌ನಿಂದ ನುರಿತ ತಜ್ಞರನ್ನು ಕರೆಸಿತ್ತು. ಆದರೆ ಎಂದೂ ಪ್ರಜ್ಞೆಯನ್ನು ಮರಳಿ ಪಡೆಯಲೇ ಇಲ್ಲ. ದೇಹದಲ್ಲಿ ಚಲನೆ ಇತ್ತು ಹೀಗಾಗಿ ಯಾವತ್ತೋ ಒಂದು ದಿನ ಏಳಬಹುದು ಎನ್ನುವ ಆಸೆಯಲ್ಲಿ ಕುಟುಂಬದವರಿದ್ದರು. ಆದರೆ ವೈದ್ಯರು ಅವರು ಎಂದೂ ಎದ್ದೇಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು ಆದರೆ ಅವರ ತಂದೆ ಪ್ರಿನ್ಸ್ ಖಾಲಿದ್ ಚಿಕಿತ್ಸೆಯನ್ನು ನಿಲ್ಲಿಸಲು ನಿರಾಕರಿಸಿದ್ದರು.
ಮತ್ತಷ್ಟು ಓದಿ: Fauja Singh: ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ, 114 ವರ್ಷದ ಫೌಜಾ ಸಿಂಗ್ ರಸ್ತೆ ಅಪಘಾತದಲ್ಲಿ ನಿಧನ
ಇದಾದ ನಂತರ ಅವರನ್ನು ರಿಯಾದ್‌ನ ಅರಮನೆಯಲ್ಲಿ ವಿಶೇಷ ಕೋಣೆಯಲ್ಲಿ ಇರಿಸಲಾಯಿತು. ವೈದ್ಯರು, ದಾದಿಯರು ಮತ್ತು ವೈದ್ಯಕೀಯ ನೆರವು ಇಲ್ಲಿ ದಿನದ 24 ಗಂಟೆಯೂ ಲಭ್ಯವಿತ್ತು.ಪ್ರಿನ್ಸ್ ಅಲ್ ವಲೀದ್ ಅವರ ಸ್ಥಿತಿಯ ವೀಡಿಯೊಗಳು ಆಗಾಗ ಹೊರಬರುತ್ತಿದ್ದವು.
ಅವರ ಕೈಗಳು ಅಥವಾ ಕಣ್ಣುರೆಪ್ಪೆಗಳ ಚಲನೆಯನ್ನು ಕಾಣಬಹುದು. ಇದು ಒಂದು ದಿನ ಅವರು ಪ್ರಜ್ಞೆ ಮರಳಿ ಪಡೆಯಬಹುದು ಎಂಬ ಭರವಸೆಯನ್ನು ಜನರಿಗೆ ನೀಡಿತ್ತು. ಇದೀಗ ವಲೀದ್ ತಮ್ಮ 36ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 2005 ರಲ್ಲಿ ನಡೆದ ದುರಂತ ಕಾರು ಅಪಘಾತದ ನಂತರ ಅವರು ಆ ವರ್ಷಗಳಲ್ಲಿ 20 ವರ್ಷಗಳನ್ನು ಕೋಮಾದಲ್ಲಿ ಕಳೆದಿದ್ದರು. ಇಂದು ಅಂತ್ಯಕ್ರಿಯೆ ನೆರವೇರಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:55 am, Sun, 20 July 25




