ನಮ್ಮ ದೇಹದ ಅಂಗಾಗಳ ಪೈಕಿ ತಲೆಬುರುಡೆಯಲ್ಲಿ ಅಡಗಿ ಕುಳಿತು ನಮ್ಮ ಎಲ್ಲ್ಲ ಚಲನವಲನಗಳನ್ನು ನಿಯಂತ್ರಿಸುವ ಮೆದುಳು ಅತ್ಯಂತ ಸೂಕ್ಷ್ಮವಾದದ್ದು ಅಂತ ಎಲ್ಲರಿಗೂ ಗೊತ್ತು. ಅದರ ರಚನೆ ಅದೆಷ್ಟು ಸಂಕೀರ್ಣವಾಗಿದೆಯೆಂದರೆ ವಿಜ್ಞಾನಿಗಳು ಈಗಲೂ ಸಂಶೋಧನೆಗಳನ್ನು ಮುಂದುವರಿಸಿದ್ದಾರೆ. ಮೆದುಳು ಕುರಿತ ಹೊಸ ಹೊಸ ಅವಿಷ್ಕಾರಗಳನ್ನು ನಮ್ಮ ಮುಂದಿಡುತ್ತಿದ್ದಾರೆ. ಸಂಕ್ಷಿಪ್ತವಾಗಿ, ಎಸ್ ವೈ ಎಲ್ ಎಮ್ (SYLM) ಅಂತ ಕರೆಸಿಕೊಳ್ಳುವ ಸಬ್ಅರಾಕ್ನಾಯಿಡಲ್ ಲಿಂಫಾಟಿಕ್-ರೀತಿಯ ಮೆಂಬರೇನ್, ಅಥವಾ ಸಬ್ಅರಾಕ್ನಾಯಿಡ್ (subarachnoid) ಸ್ಥಳವನ್ನು ವಿಭಜಿಸುತ್ತದೆ. ಮೆದುಳಿನ ಸುತ್ತ ಸೆರಿಬ್ರೊಸ್ಪೈನಲ್ ದ್ರವ (cerebrospinal liquid) ಇರುವ ಪ್ರದೇಶವನ್ನು ಎರಡು ಭಾಗಗಳನ್ನಾಗಿ ಮಾಡುತ್ತದೆ. ಸೆಂಟರ್ ಫಾರ್ ಟ್ರಾನ್ಸ್‌ಲೇಶನಲ್ ನ್ಯೂರೋಮೆಡಿಸಿನ್‌ನ ಸಹ-ನಿರ್ದೇಶಕ ಮೈಕೆನ್ ನೆಡೆರ್‌ಗಾರ್ಡ್ ಮತ್ತು ನ್ಯೂರೋಅನಾಟಮಿ ಪ್ರಾಧ್ಯಾಪಕ ಕೆಜೆಲ್ಡ್ ಮೊಲ್‌ಗಾರ್ಡ್ ಅವರ ಪ್ರಯೋಗಾಲಯದಲ್ಲಿ ಸಂಶೋಧಕರು ಹೆಚ್ಚಿನ ರೆಸಲ್ಯೂಶನ್ ಎರಡು-ಫೋಟಾನ್ ಪ್ರಚೋದಕ ಸೂಕ್ಷ್ಮದರ್ಶಕವನ್ನು ಬಳಸಿಕೊಂಡು ಕೆಲವೇ ಕೋಶಗಳಷ್ಟು ದಪ್ಪವಿರುವ ತೆಳುವಾದ ಪದರವನ್ನು ಪತ್ತೆಮಾಡಿದ್ದಾರೆ. ಅವರು ಬಳಸಿದ ತಂತ್ರಗಾರಿಕೆಯು ಫ್ಲೋರೋಸೆಂಟ್ ಪ್ರೋಟೀನ್ ಬಣ್ಣಗಳೊಂದಿಗೆ ಸೇರಿಕೊಂಡು, ಅಣುಜೀವಿಗಳೊಳಗೆ ಮೈಕ್ರೋಮೀಟರ್ ಪ್ರಮಾಣದಲ್ಲಿ ಗಮನಾರ್ಹ ಮತ್ತು ವಿವರವಾದ ಚಿತ್ರಗಳನ್ನು ನಿರ್ಮಿಸಿದೆ.
ರಚನೆಯ ಬಗ್ಗೆ ಒಮ್ಮೆ ಸ್ಪಷ್ಟ ಚಿತ್ರಣ ಮೂಡಿದ ಬಳಿಕ ಸಂಶೋಧಕರು ಇಲಿಗಳ ಮೇಲೆ ಅನೇಕ ಸಂಶೋಧನೆಗಳನ್ನು ನಡೆಸಿದರು. ಬೇರೆ ಬೇರೆ ಆಕಾರ ಮತ್ತು ಗುಣಲಕ್ಷಣಗಳ ಬಣ್ಣದ ವಸ್ತುಗಳನ್ನು ಬಳಸಿ ಅವು ಯಾವ್ಯಾವ ಅಡೆತಡೆಗಳನ್ನು ದಾಟಬಲ್ಲದು ಯಾವುದನ್ನು ದಾಟಲಾರದು ಅನ್ನೋದನ್ನು ವಿಶ್ಲೇಷಿಸಿದರು. ಅವರು ಮತ್ತಷ್ಟು ಸೂಕ್ಷ್ಮವಾಗಿ ಅವಲೋಕಿಸಿದಾಗ ಎಸ್ ವೈ ಎಲ್ ಎಮ್ ನರಮಂಡಲದ ರೋಗ ನಿರೋಧಕ ಕೋಶಗಳ ಜನಸಂಖ್ಯೆಯನ್ನು ಹಿಡಿದಿಟ್ಟುಕೊಳ್ಳುತ್ತದೆ ಅನ್ನೋದು ಗೊತ್ತಾಗಿದೆ ಮತ್ತು ಇತರ ಪ್ರಮುಖ ಅಂಗಗಳನ್ನು ಸುತ್ತುವರೆದಿರುವ ಮೆಸೊಥೆಲಿಯಲ್ ಅಂಗಾಂಶಕ್ಕೆ- ತೆಳುವಾದ ರಕ್ಷಣಾತ್ಮಕ ಪದರದೊಂದಿಗೆ ಅದರ ಹೋಲಿಕೆ ಮಾಡಬಹುದು ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ.
-ಅದು ಮೆದುಳಿನ ರಕ್ಷಣಾ ಕವಚವಾಗಿದೆ.
-ಮೆದುಳಿನ ಸೋಂಕು ಮತ್ತು ಉರಿಯನ್ನು ತಡೆಯಲು ಜೀವನಿರೋಧಕ ಕೋಶಗಳಿಗೆ ಒಂದು ವೇದಿಕೆಯಾಗಿ ನೆರವಾಗುತ್ತದೆ.
-ಮೆದುಳು ಕ್ರೇನಿಯಮ್ ಒಳಗಡೆ ಸುತ್ತುವುದರಿಂದ ಅದರ ಮತ್ತು ಬುರಡೆ ನಡುವೆ ನಡೆಯಬಹುದಾದ ತಿಕ್ಕಾಟವನ್ನು ತಡೆಯುತ್ತದೆ.
-ಮೆದುಳಿನ ಹೊರಭಾಗವನ್ನು ಸ್ವಚ್ಛಮಾಡುವ ಸೆರಿಬೋಸ್ಪೈನಲ್ ವರ್ಣರಹಿತ ದ್ರವಕ್ಕೆ ಮಾರ್ಗದರ್ಶನ ನೀಡುತ್ತದೆ.
ನಾಲ್ಕನೇ ಸೈದ್ಧಾಂತಿಕ ಕಾರ್ಯವು ಅತ್ಯಂತ ಆಸಕ್ತಿದಾಯಕವಾಗಿರಬಹುದು ಅನಿಸುತ್ತದೆ. ಇತ್ತೀಚಿನ ಆವಿಷ್ಕಾರಗಳ ಪ್ರಕಾರ ಸೆರೆಬ್ರೊಸ್ಪೈನಲ್ ದ್ರವವು ಎಚ್ಚರದ ಸ್ಥಿತಿ ಸಮಯದಲ್ಲಿ ನಿರ್ಮಿಸುವ ಮೆದುಳಿನಿಂದ ತ್ಯಾಜ್ಯ ಉತ್ಪನ್ನಗಳನ್ನು ತೆರವುಗೊಳಿಸುವ ಮಾಧ್ಯಮವಾಗಿ ಸೂಚಿಸುತ್ತವೆ. ನಾವು ನಿದ್ದೆ ಮಾಡುವಾಗ, ಗ್ಲಿಮ್ಫಾಟಿಕ್ ವ್ಯವಸ್ಥೆಯು ಎಲ್ಲ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ. ಎಸ್ ವೈ ಎಲ್ ಎಮ್ ‘ಸ್ವಚ್ಛ’ ಸೆರೆಬ್ರೊಸ್ಪೈನಲ್ ದ್ರವವನ್ನು ಮೆದುಳಿನ ಸುತ್ತಲಿನ ಸಬ್ಅರಾಕ್ನಾಯಿಡ್ ಜಾಗವನ್ನು ಪ್ರವೇಶಿಸಲು ಮತ್ತು ‘ಕೊಳಕು‘ ಸೆರೆಬ್ರೊಸ್ಪೈನಲ್ ದ್ರವವನ್ನು ಬಿಡಲು ಸಕ್ರಿಯವಾಗಿ ಅನುಮತಿಸಬಹುದು.
ಇದನ್ನೂ ಓದಿ: Pravasi Bharatiya Divas: ವಿದೇಶದಲ್ಲಿರುವ ಭಾರತೀಯರ ಸಾಧನೆಗೆ ಇದು ವೇದಿಕೆ, ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ
‘ಈ ಆವಿಷ್ಕಾರವು… ಸೆರೆಬ್ರೊಸ್ಪೈನಲ್ ದ್ರವವು ಮೆದುಳಿನಿಂದ ತ್ಯಾಜ್ಯವನ್ನು ಸಾಗಿಸುವಲ್ಲಿ ಮತ್ತು ತೆಗೆದುಹಾಕುವಲ್ಲಿ ಮಾತ್ರವಲ್ಲದೆ ಅದರ ಪ್ರತಿರಕ್ಷಣಾ ರಕ್ಷಣೆಯನ್ನು ಬೆಂಬಲಿಸುವಲ್ಲಿಯೂ ನೆರವಾಗುತ್ತದೆ,’ ಎಂದು ನೆಡರ್ಗಾರ್ಡ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಎಸ್ ವೈ ಎಲ್ ಎಮ್ ಉಪಸ್ಥಿತಿಯ ಬಗ್ಗೆ ಲಭ್ಯವಾಗಿರುವ ಹೊಸ ಮಾಹಿತಿಯು ಮೆದುಳಿನ ಆಘಾತದ ಒಳನೋಟಗಳನ್ನು ಒದಗಿಸುವ ಅಂಶವನ್ನು ಸಂಶೋಧಕರು ಗಮನಿಸಿದ್ದಾರೆ. ‘ಎಸ್ ವೈ ಎಲ್ ಎಮ್ ಭೌತಿಕ ಛಿದ್ರತೆ ಸೆರೆಬ್ರೊಸ್ಪೈನಲ್ ದ್ರವದ ಹರಿವಿನ ಮಾದರಿಗಳನ್ನು ಬದಲಾಯಿಸುವ ಮೂಲಕ, ಆಘಾತಕಾರಿ ಮಿದುಳಿನ ಗಾಯದ ನಂತರ ಗ್ಲಿಮ್ಫಾಟಿಕ್ ಹರಿವಿನ ದೀರ್ಘಕಾಲದ ನಿಗ್ರಹವನ್ನು ವಿವರಿಸುತ್ತದೆ ಮತ್ತು ಆಲ್ಝೈಮರ್ ಕಾಯಿಲೆಯ ಬೆಳವಣಿಗೆಯ ನಂತರ ಆಘಾತಕಾರಿ ಅಗಬಹುದಾದ ಅಪಾಯವನ್ನು ಹೆಚ್ಚಿಸುತ್ತದೆ, ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ: China Covid Cases: ಚೀನಾದಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದರೂ ವಿದೇಶಿ ಪ್ರಯಾಣ ನಿರ್ಬಂಧ ತೆರವು, ಕ್ವಾರಂಟೈನ್ ಇಲ್ಲ
ಅಷ್ಟು ಮಾತ್ರವಲ್ಲದೆ, ಮಲ್ಟಿಪಲ್ ಸ್ಕ್ಲೆರೋಸಿಸ್ ನಂಥ ಕೇಂದ್ರ ನರಮಂಡಲದ ಅಸ್ವಸ್ಥತೆಗಳು ಎಸ್ ವೈ ಎಲ್ ಎಮ್ ಗೆ ಹಾನಿಯಾಗುವುದರಿಂದ ತಲೆದೋರಬಹುದು ಅ ಅಥವಾ ಉಲ್ಬಣಗೊಳ್ಳಬಹುದು ಎಂದು ಸಂಶೋಧಕರು ಹೇಳುತ್ತಾರೆ. ಮೆದುಳಿನ ಹೊಸ ಥೆರಪಿಗಳನ್ನು ಅನ್ವೇಷಿಸುವ ವಿಜ್ಞಾನಿಗಳು ಥೆರಪಿಯನ್ನು ವಿನ್ಯಾಸಗೊಳಿಸುವಾಗ ತಡೆಗೋಡೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಹೆಚ್ಚಿನ ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ