ಸ್ವಾತಂತ್ರ್ಯ ಹೋರಾಟದ ವೇಳೆ ನಮೀಬಿಯಾದ ಜೊತೆ ನಿಂತಿದ್ದಕ್ಕೆ ಭಾರತಕ್ಕೆ ಹೆಮ್ಮೆಯಿದೆ; ಸಂಸತ್ನಲ್ಲಿ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾ ಸಂಸತ್ತಿನಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆ ಸಂಸತ್ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಇಂದು ನಮೀಬಿಯಾ ಸಂಸತ್ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಮೋದಿ ‘ಭಾರತವು ಆಫ್ರಿಕಾವನ್ನು ಕೇವಲ ಕಚ್ಚಾ ವಸ್ತುಗಳ ಮೂಲವಾಗಿ ನೋಡಿಲ್ಲ’ ಎಂದಿದ್ದಾರೆ.

ವಿಂಡ್‌ಹೋಕ್, ಜುಲೈ 9: ನಮೀಬಿಯಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ನಮೀಬಿಯಾದ (PM Modi Namibia Visit) ಸಂಸತ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ಭಾರತವು ತನ್ನ ದೇಶದ ಸ್ವಾತಂತ್ರ್ಯವನ್ನು ಪಡೆಯುವ ಮೊದಲೇ ನಮೀಬಿಯಾದ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿತ್ತು. ನಿಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತದ ಜನರು ನಮೀಬಿಯಾದೊಂದಿಗೆ ಹೆಮ್ಮೆಯಿಂದ ನಿಂತರು. ಆ ಬಗ್ಗೆ ನಮಗೂ ಹೆಮ್ಮೆಯಿದೆ. ವಿಶ್ವಸಂಸ್ಥೆಯಲ್ಲಿ ನೈಋತ್ಯ ಆಫ್ರಿಕಾದ ಸಮಸ್ಯೆಯನ್ನು ಭಾರತ ಎತ್ತಿದೆ, ನೈಋತ್ಯ ಆಫ್ರಿಕಾ ಪೀಪಲ್ಸ್ ಆರ್ಗನೈಸೇಶನ್ (SWAPO) ಅನ್ನು ಬೆಂಬಲಿಸಿದೆ” ಎಂದು ಮೋದಿ ಹೇಳಿದ್ದಾರೆ.
ವಿಂಡ್‌ಹೋಕ್‌ನಲ್ಲಿ ನಮೀಬಿಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಮೀಬಿಯಾದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಮುನ್ನಡೆಸಿದ್ದು ಭಾರತೀಯ ಲೆಫ್ಟಿನೆಂಟ್ ಜನರಲ್ ದಿವಾನ್ ಪ್ರೇಮ್ ಚಂದ್. ಕೇವಲ ಮಾತಿನಲ್ಲಿ ಮಾತ್ರವಲ್ಲ ಕಾರ್ಯದಲ್ಲೂ ನಿಮ್ಮೊಂದಿಗೆ ನಿಂತಿದ್ದಕ್ಕೆ ಭಾರತ ಹೆಮ್ಮೆಪಡುತ್ತದೆ” ಎಂದು ಮೋದಿ ಹೇಳಿದ್ದಾರೆ.
#WATCH | Windhoek: Addressing the Parliament of Namibia, PM Narendra Modi says, “It is a great privilege to address this august house, a temple of democracy. I thank you for giving me this honour. I stand before you as a representative of the Mother of Democracy, and I bring with… pic.twitter.com/2a5kG46cM7
— ANI (@ANI) July 9, 2025
‘ಭಾರತವು ಆಫ್ರಿಕಾ ಖಂಡವನ್ನು ಕೇವಲ ಕಚ್ಚಾ ವಸ್ತುಗಳ ಮೂಲವಾಗಿ ನೋಡುವುದಿಲ್ಲ. ಆಫ್ರಿಕಾ ಮತ್ತು ಜಾಗತಿಕ ದಕ್ಷಿಣವು ತನ್ನದೇ ಆದ ಭವಿಷ್ಯವನ್ನು ರೂಪಿಸಿಕೊಳ್ಳುತ್ತದೆ ಮತ್ತು ತನ್ನದೇ ಆದ ಮಾರ್ಗವನ್ನು ಅನುಸರಿಸುತ್ತದೆ ಎಂಬ ನಂಬಿಕೆ ನಮಗಿದೆ’ ಎನ್ನುವ ಮೂಲಕ ಪ್ರಧಾನಿ ಮೋದಿ ನಮೀಬಿಯಾ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧವನ್ನು ಎತ್ತಿ ತೋರಿಸಿದ್ದಾರೆ.
#WATCH | Windhoek: Addressing the Parliament of Namibia, PM Narendra Modi says, “A few months ago, you celebrated a historic moment, Namibia elected its first woman president. We understand and share your pride and joy because in India, we also proudly say Madam President. It is… pic.twitter.com/7dr3mldANa
— ANI (@ANI) July 9, 2025
ಇದನ್ನೂ ಓದಿ: ಪ್ರಧಾನಿ ಮೋದಿಗೆ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ
ನಮೀಬಿಯಾ ಏಕೀಕೃತ ಪಾವತಿ ಇಂಟರ್ಫೇಸ್ (UPI) ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದಕ್ಕೆ ಮೋದಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. “ಭಾರತದ UPI ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ದೇಶ ನಮೀಬಿಯಾ ಎಂದು ನಮಗೆ ಸಂತೋಷವಾಗಿದೆ. ಶೀಘ್ರದಲ್ಲೇ, ಜನರು “ಟ್ಯಾಂಗಿ ಉನೆನೆ” ಎಂದು ಹೇಳುವುದಕ್ಕಿಂತ ವೇಗವಾಗಿ ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ. ಶೀಘ್ರದಲ್ಲೇ, ಕುನೆನೆಯಲ್ಲಿರುವ ಹಿಂಬಾ ಅಜ್ಜಿ ಅಥವಾ ಕಟುತುರಾದಲ್ಲಿನ ಅಂಗಡಿಯವರು ಸ್ಪ್ರಿಂಗ್‌ಬಾಕ್‌ಗಿಂತ ವೇಗವಾಗಿ ಕೇವಲ ಒಂದು ಟಚ್ ಮೂಲಕ ಡಿಜಿಟಲ್ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ದ್ವಿಪಕ್ಷೀಯ ವ್ಯಾಪಾರ 800 ಮಿಲಿಯನ್ ಡಾಲರ್‌ಗಳನ್ನು ದಾಟಿದೆ. ನಾವು ಇನ್ನೂ ವಾರ್ಮ್ ಅಪ್ ಆಗುತ್ತಿದ್ದೇವೆ. ನಾವು ವೇಗವಾಗಿ ಹೆಚ್ಚಿನ ಸ್ಕೋರ್ ಮಾಡುತ್ತೇವೆ” ಎಂದು ಕ್ರಿಕೆಟ್ ಭಾಷೆಯಲ್ಲಿ ಮೋದಿ ಹೇಳಿದ್ದಾರೆ.
#WATCH | Windhoek: Addressing the Parliament of Namibia, PM Narendra Modi says, “The people of India stood proudly with Namibia during your liberation struggle. Even before our own independence, India raised the issue of South West Africa at the United Nations… It was an Indian… pic.twitter.com/BrnFwQjnmk
— ANI (@ANI) July 9, 2025
“ಕೆಲವು ತಿಂಗಳ ಹಿಂದೆ ನೀವು ಐತಿಹಾಸಿಕ ಕ್ಷಣವನ್ನು ಆಚರಿಸಿದ್ದೀರಿ, ನಮೀಬಿಯಾ ತನ್ನ ಮೊದಲ ಮಹಿಳಾ ಅಧ್ಯಕ್ಷೆಯನ್ನು ಆಯ್ಕೆ ಮಾಡಿದೆ. ನಾವು ನಿಮ್ಮ ಹೆಮ್ಮೆ ಮತ್ತು ಸಂತೋಷವನ್ನು ಅರ್ಥಮಾಡಿಕೊಳ್ಳುತ್ತೇವೆ. ಏಕೆಂದರೆ ಭಾರತದಲ್ಲಿ ಕೂಡ ನಾವು ಹೆಮ್ಮೆಯಿಂದ ಮೇಡಂ ಅಧ್ಯಕ್ಷರೇ (ರಾಷ್ಟ್ರಪತಿ) ಎಂದು ಹೇಳುತ್ತೇವೆ. ಬಡ ಬುಡಕಟ್ಟು ಕುಟುಂಬದ ಮಗಳು ಈಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಪತಿಯಾಗಿರುವುದು ಭಾರತದ ಸಂವಿಧಾನದ ಶಕ್ತಿಯಾಗಿದೆ. ಬಡ ಕುಟುಂಬದಲ್ಲಿ ಜನಿಸಿದ ನನ್ನಂತಹ ವ್ಯಕ್ತಿಗೆ ಮೂರು ಬಾರಿ ಪ್ರಧಾನಿಯಾಗುವ ಅವಕಾಶವನ್ನು ನೀಡಿದ್ದು ಸಂವಿಧಾನದ ಶಕ್ತಿಯಾಗಿದೆ” ಎಂದಿದ್ದಾರೆ.
#WATCH | Windhoek: Addressing the Parliament of Namibia, PM Narendra Modi says, “I am deeply honoured to receive the highest civilian award of Namibia as a symbol of the friendship between our peoples. Like the tough and elegant plants of Namibia, our friendship has stood the… pic.twitter.com/PAWyXLohHY
— ANI (@ANI) July 9, 2025
ಇದನ್ನೂ ಓದಿ: ‘ಮೋದಿ’ಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
“ಸಾಂಕ್ರಾಮಿಕ ಸಮಯದಲ್ಲಿ ಅನೇಕರು ಹಂಚಿಕೊಳ್ಳಲು ನಿರಾಕರಿಸಿದಾಗಲೂ ಲಸಿಕೆಗಳು ಮತ್ತು ಔಷಧಿಗಳನ್ನು ಒದಗಿಸುವ ಮೂಲಕ ನಾವು ಆಫ್ರಿಕಾದೊಂದಿಗೆ ನಿಂತಿದ್ದೇವೆ. ನಮ್ಮ ಆರೋಗ್ಯ ಮೈತ್ರಿ ಉಪಕ್ರಮವು ಆಫ್ರಿಕಾವನ್ನು ಆಸ್ಪತ್ರೆಗಳು, ಉಪಕರಣಗಳು, ಔಷಧಿಗಳು ಮತ್ತು ತರಬೇತಿಯೊಂದಿಗೆ ಬೆಂಬಲಿಸುತ್ತದೆ. ಸುಧಾರಿತ ಕ್ಯಾನ್ಸರ್ ಆರೈಕೆಗಾಗಿ ಭಾರತ ನಮೀಬಿಯಾಕ್ಕೆ ಭಭಾಟ್ರಾನ್ ರೇಡಿಯೊಥೆರಪಿ ಯಂತ್ರವನ್ನು ಪೂರೈಸಲು ಸಿದ್ಧವಾಗಿದೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಈ ಯಂತ್ರವನ್ನು 15 ದೇಶಗಳಲ್ಲಿ ನಿಯೋಜಿಸಲಾಗಿದೆ. ವಿವಿಧ ದೇಶಗಳಲ್ಲಿ ಸುಮಾರು ಅರ್ಧ ಮಿಲಿಯನ್ ರೋಗಿಗಳಿಗೆ ನಿರ್ಣಾಯಕ ಕ್ಯಾನ್ಸರ್ ಆರೈಕೆಯೊಂದಿಗೆ ಸಹಾಯ ಮಾಡಿದೆ. ಕೈಗೆಟುಕುವ ಮತ್ತು ಗುಣಮಟ್ಟದ ಔಷಧಿಗಳ ಪ್ರವೇಶಕ್ಕಾಗಿ ಜನೌಷಧಿ ಕಾರ್ಯಕ್ರಮಕ್ಕೆ ಸೇರಲು ನಾವು ನಮೀಬಿಯಾವನ್ನು ಆಹ್ವಾನಿಸುತ್ತೇವೆ” ಎಂದಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




