2nd Moon: 2000 ವರ್ಷಗಳಿಂದ ಭೂಮಿ ಸುತ್ತುತ್ತಾ ಜೊತೆಯಲ್ಲೇ ಬರುತ್ತಿರುವ ಕ್ಷುದ್ರಗ್ರಹ ಪತ್ತೆ; ಅಪ್ಪಳಿಸುವ ಅಪಾಯ ಇದೆಯಾ?

|

Updated on: Jun 02, 2023 | 6:10 PM

Asteroid Following Earth From 2100 Years: ಕ್ರಿ.ಪೂ.100ರಿಂದಲೂ ಭೂಮಿಯ ಜೊತೆಯಲ್ಲೇ ಸಾಗಿ ಬರುತ್ತಿರುವ ಹಾಗು ಭೂಮಿಯ ಪ್ರದಕ್ಷಿಣೆ ಹಾಕುತ್ತಿರುವ ಆಕಾಶಕಾಯವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇದಕ್ಕೆ 2023ಎಫ್​ಡಬ್ಲ್ಯೂ13 ಎಂದು ಹೆಸರಿಸಲಾಗಿದೆ.

2nd Moon: 2000 ವರ್ಷಗಳಿಂದ ಭೂಮಿ ಸುತ್ತುತ್ತಾ ಜೊತೆಯಲ್ಲೇ ಬರುತ್ತಿರುವ ಕ್ಷುದ್ರಗ್ರಹ ಪತ್ತೆ; ಅಪ್ಪಳಿಸುವ ಅಪಾಯ ಇದೆಯಾ?
ಕ್ಷುದ್ರಗ್ರಹ
Follow us on

ಭೂಮಿಯ ಒಳಗೆಯೇ ಅನೇಕ ರಹಸ್ಯಗಳು ಮಾನವನ ಕಣ್ಣಿಗೆ ಇನ್ನೂ ಬಿದ್ದಿಲ್ಲ. ಇನ್ನು ಅನಂತವಾಗಿರುವ ಬಾಹ್ಯಾಕಾಶದಲ್ಲಿ ಅದೆಷ್ಟು ವಿಸ್ಮಯಗಳಿರಬೇಡ..! ದೀರ್ಘಕಾಲದಿಂದ ಭೂಮಿಯ ಜೊತೆಯಲ್ಲೇ ಸಾಗಿ ಬರುತ್ತಿರುವ ಹಾಗು ಭೂಮಿಯ ಪ್ರದಕ್ಷಿಣೆ ಹಾಕುತ್ತಿರುವ ಆಕಾಶಕಾಯವೊಂದನ್ನು (Asteroid) ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಗ್ರಹವನ್ನು ಸುತ್ತುಹಾಕುವ ಆಕಾಶಕಾಯ ಉಪಗ್ರಹ (Moon Or Satellite) ಎನಿಸುತ್ತದೆ. ಭೂಮಿಗೆ ಉಪಗ್ರಹವಾಗಿ ಚಂದ್ರ ಇದೆ. ಈಗ ಇದ್ಯಾವುದೋ ಹೊಸ ಚಂದ್ರ ಎಂದು ವಿಸ್ಮಯ ಆಗಬಹುದು. ಆದರೆ, ವಿಜ್ಞಾನಿಗಳ ಕಣ್ಣಿಗೆ ಬಿದ್ದಿರುವ ಈ ಆಕಾಶಕಾಯ ಒಂದು ಕ್ಷುದ್ರಗ್ರಹ ಅಥವಾ ಆಸ್ಟರಾಯ್ಡ್ ಆಗಿದೆ. ವಿಜ್ಞಾನಿಗಳ ಪ್ರಕಾರ ಕ್ರಿಸ್ತ ಪೂರ್ವ 100ರಿಂದಲೂ, ಅಂದರೆ 2,100 ವರ್ಷಗಳಿಂದಲೂ ಈ ಆಕಾಶಕಾಯವು ಭೂಮಿಯ ಬೆನ್ನುಬಿದ್ದಿದೆಯಂತೆ. ಅಷ್ಟೇ ಅಲ್ಲ, ಮುಂದಿನ 1,500 ವರ್ಷಗಳವರೆಗೂ ಇದು ಭೂಮಿಯ ಸಂಗಡವೇ ಇರಲಿದೆ ಎಂಬುದು ವಿಜ್ಞಾನಿಗಳ ಅನಿಸಿಕೆ.

ಭೂಮಿ ಮತ್ತು ಸೂರ್ಯ ಎರಡನ್ನೂ ಸುತ್ತುತ್ತದೆ ಈ ಕ್ಷುದ್ರಗ್ರಹ

ವಿಜ್ಞಾನಿಗಳು ಈ ಕ್ಷುದ್ರಗ್ರಹಕ್ಕೆ 2023ಎಫ್​ಡಬ್ಲ್ಯೂ13ಎಂದು ಹೆಸರಿಟ್ಟಿದ್ದಾರೆ. ಭೂಮಿ ಸೂರ್ಯನ ಪ್ರದಕ್ಷಿಣೆ ಹಾಕುವಂತೆ ಇದೂ ಕೂಡ ಸೂರ್ಯನನ್ನು ಸುತ್ತುತ್ತದೆ. ಸೂರ್ಯನ ಪ್ರದಕ್ಷಿಣೆಗೆ ಭೂಮಿಯಷ್ಟೇ ಸಮಯ ತೆಗೆದುಕೊಳ್ಳುತ್ತದೆ. ಈ ವೇಳೆ ಭೂಮಿಯನ್ನೂ ಈ ಕ್ಷುದ್ರಗ್ರಹ ಸುತ್ತುಹಾಕುತ್ತದೆ. ಕೆಲವೊಮ್ಮೆ ಇದು ಭೂಮಿಯಿಂದ 1.4 ಕೋಟಿ ಕಿಲೋಮೀಟರ್​ನಷ್ಟು ಸಮೀಪಕ್ಕೆ ಬರುತ್ತದೆ. ಇದಕ್ಕೆ ಹೋಲಿಕೆ ಮಾಡುವುದಾದರೆ ಭೂಮಿಯಿಂದ ಚಂದ್ರ ಇರುವ ದೂರ 3ರಿಂದ 5 ಲಕ್ಷ ಕಿಲೋಮೀಟರ್.

ಇದನ್ನೂ ಓದಿ: ಕಚೇರಿಯ ಅವಧಿಯಲ್ಲಿ ನಿತ್ಯ 6 ಗಂಟೆಗಳ ಕಾಲ ಟಾಯ್ಲೆಟ್​ನಲ್ಲೇ ಕುಳಿತಿರುತ್ತಿದ್ದ ಉದ್ಯೋಗಿ, ಕೆಲಸದಿಂದ ವಜಾ

ಇನ್ನು, ಚಂದ್ರನ ವ್ಯಾಸ 3,475 ಕಿಲೋಮೀಟರ್​ನಷ್ಟಿದ್ದರೆ, 2023ಎಫ್​ಡಬ್ಲ್ಯು13 ಕ್ಷುದ್ರಗ್ರಹದ ಗಾತ್ರ ಕೇವಲ 50 ಅಡಿ ಮಾತ್ರ. ಹೀಗಾಗಿ, ಒಂದು ದೊಡ್ಡ ಬಂಡೆಗಲ್ಲಿಗೆ ಇದನ್ನು ಹೋಲಿಸಬಹುದು.

ಎರಡು ತಿಂಗಳ ಹಿಂದೆಯೇ ಈ ಪುಟ್ಟ ಆಕಾಶಕಾಯವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ಆದರೆ ಹವಾಯಿ ದ್ವೀಪ ಮತ್ತು ಆರಿಝೋನಾದಲ್ಲಿರುವ ವೀಕ್ಷಣಾ ಕೇಂದ್ರಗಳಿಂದ ಈ ಕ್ಷುದ್ರಗ್ರಹದ ಇರುವುವಿಕೆಯನ್ನು ಖಚಿತಪಡಿಸಿಕೊಳ್ಳಲಾಗಿದೆ. ಏಪ್ರಿಲ್​ನಲ್ಲಿ ಇದನ್ನು ಅಧಿಕೃತವೆಂದು ಪರಿಗಣಿಸಲಾಯಿತು.

ಅಂದಹಾಗೆ ಭೂಮಿಯನ್ನು ಪ್ರದಕ್ಷಿಣೆ ಹಾಕುತ್ತಿರುವುದು ಚಂದ್ರ ಹೊರತುಪಡಿಸಿ ಇದೊಂದೇ ಆಕಾಶಕಾಯವಲ್ಲ. 2016ರಲ್ಲಿ ಇಂಥದ್ದೆ ಒಂದು ಪುಟ್ಟ ಕ್ಷುದ್ರಗ್ರಹ ಪತ್ತೆಯಾಗಿತ್ತು. ಇದೂ ಕೂಡ 2023ಎಫ್​ಡಿಬ್ಲ್ಯೂ13 ನಂತೆ ಸೂರ್ಯ ಮತ್ತು ಭೂಮಿ ಎರಡನ್ನೂ ಪ್ರದಕ್ಷಿಣೆ ಹಾಕುತ್ತಾ ಹೋಗುತ್ತಿದೆ.

ಇದನ್ನೂ ಓದಿ: ಭೂಮಿಯ ಹೊರಪದರದಲ್ಲಿ ಚೀನಾ 32,808 ಅಡಿ ಆಳದ ರಂಧ್ರವನ್ನು ಕೊರೆಯುತ್ತಿದೆ, ಇದರ ಹಿಂದಿರುವ ಉದ್ದೇಶ ಏನು?

ಭೂಮಿಗೆ ಅಪ್ಪಳಿಸುತ್ತಾ ಈ ಕ್ಷುದ್ರಗ್ರಹ?

2100ರಿಂದಲೂ ಭೂಮಿಯ ಜೊತೆ ಜೊತೆಗೇ ಬರುತ್ತಿರುವ 2023ಎಫ್​ಡಬ್ಲ್ಯೂ13 ಆಕಾಶಕಾಯವು ಭೂಮಿಯನ್ನು ಅಪ್ಪಳಿಸುವ ಸಾಧ್ಯತೆ ಇದೆಯಾ? ವಿಜ್ಞಾನಿಗಳ ಪ್ರಕಾರ ಆ ಸಾಧ್ಯತೆ ಇಲ್ಲ. ಯಾಕೆಂದರೆ ಇದು ಸಾಗುತ್ತಿರುವ ಪಥವು ಭೂಮಿಗೆ ಮುಟ್ಟುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಪೇಸ್ ಸೈನ್ಸ್ ಇನ್ಸ್​ಟಿಟ್ಯೂಟ್​ನ ವಿಜ್ಞಾನಿ ಅಲನ್ ಹ್ಯಾರಿಸ್ ಹೇಳುತ್ತಾರೆ. ಅಂದಹಾಗೆ ಈ ಕ್ಷುದ್ರಗ್ರಹ ನಾವು ಬೇಡವೆಂದರೂ ಕ್ರಿ.. 3700ರವರೆಗೂ ಭೂಮಿಯ ಸಹವಾಸ ಬಿಟ್ಟು ಹೋಗುವುದಿಲ್ಲವಂತೆ.

ಈ ವಿಭಾಗದಲ್ಲಿ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ