ಕಜಕಿಸ್ತಾನದ ಅಸ್ತಾನದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ(Narendra Modi) ಸಂದೇಶವನ್ನು ವಿಶ್ವದ ನಾಯಕರಿಗೆ ತಲುಪಿಸಿದ್ದಾರೆ. ಭಾರತ ಮತ್ತು ಚೀನಾ ನಡುವೆ ಹಲವು ವಿಷಯಗಳಲ್ಲಿ ಬಲವಾದ ಭಿನ್ನಾಭಿಪ್ರಾಯವಿದೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ, ಉಭಯ ದೇಶಗಳ ನಡುವಿನ ಸಂಬಂಧಗಳು ಉತ್ತಮವಾಗಿಲ್ಲ.
ವಾಂಗ್ ಯಿ ಅವರನ್ನು ಭೇಟಿ ಮಾಡುವ ಮೊದಲು, ಜೈಶಂಕರ್ ಅವರು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿ ಮಾಡಿದ್ದಾರೆ. ಎಸ್‌ಸಿಒ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಮತ್ತು ವಿವಿಧ ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದ ಜೈಶಂಕರ್, ಬೆಲಾರಸ್ ಸಹವರ್ತಿ ಮ್ಯಾಕ್ಸಿಮ್ ರೆಜೆಂಕೋವ್ ಮತ್ತು ತಜಕಿಸ್ತಾನ್ ವಿದೇಶಾಂಗ ಸಚಿವ ಸಿರಾಜುದ್ದೀನ್ ಮುಹ್ರಿದ್ದಿನ್ ಅವರನ್ನು ಭೇಟಿಯಾದರು.
ಮುಂದಿರುವ ಮತ್ತೊಂದು ಸವಾಲೆಂದರೆ ಅದು ಹವಾಮಾನ ಬದಲಾವಣೆ, ಪರ್ಯಾಯ ಇಂಧನಗಳಿಗೆ ಪರಿವರ್ತನೆ, ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಮೂಲಸೌಕರ್ಯಗಳನ್ನು ನಿರ್ಮಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಭಯೋತ್ಪಾದನೆ, ಹವಾಮಾನ ಬದಲಾವಣೆ, ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವುದು, ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಸಂದೇಶವನ್ನು ಜೈಶಂಕರ್ ರವಾನಿಸಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾಗವಹಿಸಿದ್ದರು.
ಮತ್ತಷ್ಟು ಓದಿ:Hijab Ban: ಮುಸ್ಲಿಂ ರಾಷ್ಟ್ರವಾದ ತಜಿಕಿಸ್ತಾನದಲ್ಲಿ ಹಿಜಾಬ್ ಬ್ಯಾನ್
ಸಾಂಕ್ರಾಮಿಕಗಳು, ಘರ್ಷಣೆಗಳು, ಉದ್ವಿಗ್ನತೆಗಳು, ನಂಬಿಕೆಯ ಕೊರತೆಯು ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಎಂದರು. ಮೇ ಅಂತ್ಯದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಇರಾನ್ ಮಾಜಿ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಭಯೋತ್ಪಾದನೆಯನ್ನು ಎದುರಿಸಲು ಮತ್ತು ಯುವಕರಲ್ಲಿ ಭಯೋತ್ಪಾದನೆ ಹರಡುವಿಕೆಯನ್ನು ತಡೆಯಲು ಪೂರ್ವಭಾವಿ ಕ್ರಮಗಳಿಗೆ ಒತ್ತು ನೋಡಬೇಕಿದೆ ಎಂದರು.
9 ಸದಸ್ಯ ರಾಷ್ಟ್ರಗಳೊಂದಿಗೆ, ಭಾರತ, ಇರಾನ್, ಕಜಕಿಸ್ತಾನ್, ಚೀನಾ, ಕಿರ್ಗಿಜ್, ಪಾಕಿಸ್ತಾನ, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ – SCO ಪ್ರಭಾವಶಾಲಿ ಆರ್ಥಿಕ ಮತ್ತು ಭದ್ರತಾ ಬಣವಾಗಿ ಹೊರಹೊಮ್ಮಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ