ತುರ್ತು ಪರಿಸ್ಥಿತಿ ಸಮಯದಲ್ಲಿ ವೇಷ ಬದಲಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ನರೇಂದ್ರ ಮೋದಿ
1975ರಲ್ಲಿ ಇಂದಿರಾ ಗಾಂಧಿ ಸರ್ಕಾರ ಘೋಷಣೆ ಮಾಡಿದ ತುರ್ತು ಪರಿಸ್ಥಿತಿ ಸಮಯದಲ್ಲಿ ಪ್ರತಿರೋಧ ಚಳವಳಿಯಲ್ಲಿ ಭಾಗವಹಿಸಿದ ನಾಯಕರನ್ನು ಬಂಧನ ಮಾಡಲಾಗಿತ್ತು, ಆದರೆ ಮೋದಿ ಅವರನ್ನು ಮಾತ್ರ ಬಂಧನ ಮಾಡಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಈ ವೇಷವೇ ಕಾರಣ, ಅಷ್ಟಕ್ಕೂ ಮೋದಿ ಅವರು ಧರಿಸಿದ ವೇಷವೇನು, ಹೇಗೆಲ್ಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರಸ್ತುತ ಭಾರೀ ಚರ್ಚೆಯಲ್ಲಿರುವ ಸುದ್ದಿ “ತುರ್ತು ಪರಿಸ್ಥಿತಿ“, (Emergency) ಇಡೀ ದೇಶದಲ್ಲಿ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರ ಮಧ್ಯೆ ಒಂದು ಫೋಟೋ ಭಾರಿ ವೈರಲ್ ಆಗುತ್ತಿದೆ. ಅದು ನರೇಂದ್ರ ಮೋದಿ ಅವರ ಅಂದಿನ ಫೋಟೋ. 1975ರಲ್ಲಿ ಭಾರತದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ಈ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ನಾಯಕರನ್ನು ಬಂಧಿಸಲಾಗಿತ್ತು. ಆದರೆ ನರೇಂದ್ರ ಮೋದಿ ಅವರನ್ನು ಮಾತ್ರ ಬಂಧಿಸಲು ಸಾಧ್ಯವಾಗಿಲ್ಲ. ಇವರು ಕೂಡ ಈ ಹೋರಾಟದಲ್ಲಿ ಪ್ರಮುಖರಾಗಿದ್ದರು. ಮೋದಿ ಅವರನ್ನು ಯಾಕೆ ಬಂಧಿಸಿಲ್ಲ ಅಥವಾ ಯಾವ ಕಾರಣಕ್ಕೆ ಅವರು ಪೊಲೀಸರ ಕೈಗೆ ಸಿಕ್ಕಿಲ್ಲ ಎಂಬುದಕ್ಕೆ ಒಂದು ಕಾರಣ ಇದೆ. ಹೌದು ಮೋದಿ ಅವರು ಈ ಹೋರಾಟದಲ್ಲಿ ಸಕ್ರಿಯವಾಗಿದ್ದರು. ಅವರು ದಿನಕ್ಕೊಂದು ವೇಷವನ್ನು ಧರಿಸಿಕೊಂಡು ಎಲ್ಲರನ್ನೂ ಸಂಘಟನೆ ಮಾಡುತ್ತಿದ್ದರು. ತುರ್ತು ಪರಿಸ್ಥಿತಿ ಬಗ್ಗೆ ಜನರಿಗೆ ತಿಳಿಸುತ್ತಿದ್ದರು.
ನರೇಂದ್ರ ಮೋದಿ ಅವರು ತುರ್ತು ಪರಿಸ್ಥಿತಿ ಪ್ರತಿರೋಧ ಚಳವಳಿಯಲ್ಲಿ ನಿರ್ಣಾಯಕ ವ್ಯಕ್ತಿಯಾಗಿ ಹೊರಹೊಮ್ಮಿದರು. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳ ನೇತೃತ್ವವನ್ನು ಮೋದಿ ಅವರು ವಹಿಸಿದರು. ಹಾಗೂ 1974 ರಲ್ಲಿ ನವನಿರ್ಮಾಣ ಆಂದೋಲನದ ಸಮಯದಲ್ಲಿ ಆರ್‌ಎಸ್‌ಎಸ್‌ನ ಯುವ ಪ್ರಚಾರಕರಾಗಿದ್ದರು. ಇನ್ನು ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಲು ಹಾಗೂ ಆರ್ಎಸ್ಎಸ್ ಸ್ವಯಂ ಸೇವಕರನ್ನು ಸಂಪರ್ಕಿಸಲು ಮೋದಿ ಅವರು ದಿನಕ್ಕೂಂದು ವೇಷವನ್ನು ಹಾಕಿದ್ದರು. ಒಂದು ದಿನ ಕೇಸರಿ ಉಡುಪಿನಲ್ಲಿ ಸ್ವಾಮೀಜಿಯಂತೆ, ಮತ್ತೊಂದು ದಿನ ಪೇಟವನ್ನು ಹೊಂದಿರುವ ಸಿಖ್ ವ್ಯಕ್ತಿಯಂತೆ ವೇಷವನ್ನು ಧರಿಸುತ್ತಿದ್ದರು.
Narendra Modi’s colleagues abroad sent photocopies of ‘Satyavani’ and other newspapers published internationally that featured articles opposing the #DarkDaysOfEmergency. He would ensure copies of those materials were prepared and then deliver them to the jails. Additionally,… pic.twitter.com/vz1aSblFCj
— Modi Archive (@modiarchive) June 25, 2024
ಈ ವೇಷವನ್ನು ಹಾಕಿಕೊಂಡು ಪೊಲೀಸರ ಕಣ್ತಪ್ಪಿಸಿಕೊಂಡು ಹೋಗುತ್ತಿದ್ದರು. ಹೀಗಾಗಿ ಪೊಲೀಸರಿಗೆ ಅವರನ್ನು ಬಂಧಿಸಲಾಗುತ್ತಿರುಲಿಲ್ಲ, 1977 ರಲ್ಲಿ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ನಂತರ ಮೋದಿ ಅವರು ಜನಪ್ರಿಯತೆ ಹೆಚ್ಚಾಯಿತು. ಮೋದಿಯವರ ಕ್ರಿಯಾಶೀಲತೆ ಮತ್ತು ನಾಯಕತ್ವವು ಮನ್ನಣೆ ಹೆಚ್ಚಾಯಿತು. ಯುವಕರಲ್ಲಿ ದೇಶದ ಬಗ್ಗೆ ಹಾಗೂ ಕಾಂಗ್ರೆಸ್ ದುರಾಡಳಿತದ ಬಗ್ಗೆ ಮೋದಿ ಅವರು ತಿಳಿಸಿದರು, ಅವರ ಭಾಷಣಕ್ಕಾಗಿ ಮುಂಬೈ ಹಾಗೂ ಅನೇಕ ಕಡೆ ಕಾಯುತ್ತಿದ್ದರು.
ಇದನ್ನೂ ಓದಿ: ತುರ್ತು ಪರಿಸ್ಥತಿ ಹೇರಿ ಸಂವಿಧಾನವನ್ನು ತುಳಿದು ಮೂಲಭೂತ ಸ್ವಾತಂತ್ರ್ಯವನ್ನು ಬುಡಮೇಲು ಮಾಡಿತ್ತು ಕಾಂಗ್ರೆಸ್: ಮೋದಿ
1978 ರಲ್ಲಿ ಪ್ರಧಾನಿ ಮೋದಿ ಅವರು ‘ಸಂಘರ್ಷ್ ಮಾ ಗುಜರಾತ್’ ಎಂಬ ಪುಸ್ತಕವನ್ನು ಬರೆದರು. ಅದರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರ ಅನುಭವಗಳ ಸ್ಮರಣಿಕೆಯಾಗಿತ್ತು. ಈ ಪುಸ್ತಕವನ್ನು ಬರೆಯಲು ಕೇವಲ 23 ದಿನಗಳನ್ನು ತೆಗೆದುಕೊಂಡಿದರು. ಗುಜರಾತ್‌ನ ಅಂದಿನ ಮುಖ್ಯಮಂತ್ರಿ ಬಾಬುಭಾಯಿ ಜಸ್‌ಭಾಯ್ ಪಟೇಲ್ ಬಿಡುಗಡೆ ಮಾಡಿದ ಈ ಪುಸ್ತಕವು ತುರ್ತು ಪರಿಸ್ಥಿತಿಯ ವಸ್ತುನಿಷ್ಠ ಪ್ರಸಾರಕ್ಕಾಗಿ ವ್ಯಾಪಕ ಮೆಚ್ಚುಗೆಯನ್ನು ಪಡೆಯಿತು ಮತ್ತು ರಾಷ್ಟ್ರೀಯ ಸಾರ್ವಜನಿಕ ರೇಡಿಯೋ ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಇದನ್ನು ವಿಮರ್ಶೆ ಕೂಡ ಮಾಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Wed, 26 June 24