McDonald’s ಕಾಮಕಾಂಡ: ಮಾಜಿ ಸಿಇಒ ಈ-ಮೇಲ್​ನಲ್ಲಿ ಮಹಿಳೆಯರ ನಗ್ನ ಫೋಟೋ ಪತ್ತೆ!

| Updated By: ಸಾಧು ಶ್ರೀನಾಥ್​

Updated on: Aug 12, 2020 | 3:14 PM

ಅಮೆರಿಕಾದ ಪ್ರತಿಷ್ಠಿತ ಮೆಕ್​ ಡೊನಾಲ್ಡ್ಸ್​ ಫಾಸ್ಟ್​ ಫುಡ್​ ಸರಣಿ ರೆಸ್ಟೋರೆಂಟ್​ ಕಂಪನಿಯ ಮಾಜಿ ಸಿಇಒ ಸ್ಟೀವ್​ ಈಸ್ಟರ್​ಬ್ರೂಕ್​ರ ಖಾಸಗಿ ಇ-ಮೇಲ್​ ಖಾತೆಯಲ್ಲಿ ಮಹಿಳೆಯರ ನೂರಾರು ನಗ್ನ ಫೋಟೋಗಳು ಪತ್ತೆಯಾಗಿದೆ. ಜೊತೆಗೆ, ಸ್ಟೀವ್​ ಕಂಪನಿಯ ಕೆಲವು ಮಹಿಳಾ ಉದ್ಯೋಗಿಗಳೊಂದಿಗೆ ಲೈಂಗಿಕ ಸಂಬಂಧ ಸಹ ಹೊಂದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಕಳೆದ ವರ್ಷ ಮಹಿಳಾ ಸಹೋದ್ಯೋಗಿಯೊಂದಿಗೆ ಸ್ಟೀವ್​ ಲೈಂಗಿಕ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮೆಕ್​ ಡೊನಾಲ್ಡ್ಸ್ ಕಂಪನಿಯ ಆಡಳಿತವು ಅಂದಿನ ಸಿಇಒ […]

McDonalds ಕಾಮಕಾಂಡ: ಮಾಜಿ ಸಿಇಒ ಈ-ಮೇಲ್​ನಲ್ಲಿ ಮಹಿಳೆಯರ ನಗ್ನ ಫೋಟೋ ಪತ್ತೆ!
Follow us on

ಅಮೆರಿಕಾದ ಪ್ರತಿಷ್ಠಿತ ಮೆಕ್​ ಡೊನಾಲ್ಡ್ಸ್​ ಫಾಸ್ಟ್​ ಫುಡ್​ ಸರಣಿ ರೆಸ್ಟೋರೆಂಟ್​ ಕಂಪನಿಯ ಮಾಜಿ ಸಿಇಒ ಸ್ಟೀವ್​ ಈಸ್ಟರ್​ಬ್ರೂಕ್​ರ ಖಾಸಗಿ ಇ-ಮೇಲ್​ ಖಾತೆಯಲ್ಲಿ ಮಹಿಳೆಯರ ನೂರಾರು ನಗ್ನ ಫೋಟೋಗಳು ಪತ್ತೆಯಾಗಿದೆ. ಜೊತೆಗೆ, ಸ್ಟೀವ್​ ಕಂಪನಿಯ ಕೆಲವು ಮಹಿಳಾ ಉದ್ಯೋಗಿಗಳೊಂದಿಗೆ ಲೈಂಗಿಕ ಸಂಬಂಧ ಸಹ ಹೊಂದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಕಳೆದ ವರ್ಷ ಮಹಿಳಾ ಸಹೋದ್ಯೋಗಿಯೊಂದಿಗೆ ಸ್ಟೀವ್​ ಲೈಂಗಿಕ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮೆಕ್​ ಡೊನಾಲ್ಡ್ಸ್ ಕಂಪನಿಯ ಆಡಳಿತವು ಅಂದಿನ ಸಿಇಒ ಆಗಿದ್ದ ಸ್ಟೀವ್​ನ ಕೆಲಸದಿಂದ ವಜಾಮಾಡಿತ್ತು. ಆದರೆ, ಇದೀಗ, ಆತ ಕಂಪನಿಯ ಹಲವಾರು ಮಹಿಳಾ ಉದ್ಯೋಗಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಎಂಬ ಆರೋಪಗಳ ಸರಮಾಲೆ ಹೊರಬರುತ್ತಿದ್ದಂತೆ ಆತನ ಮೇಲೆ ನ್ಯಾಯಾಲಯದಲ್ಲಿ ಕೇಸ್​ ದಾಖಲಿಸಿತ್ತು.

ಕೇಸ್​ ವಿಚಾರಣೆ ವೇಳೆ ಕಂಪನಿಯು ಸ್ಟೀವ್​ ತನ್ನ ಅಧಿಕೃತ ಇ-ಮೇಲ್​ ಖಾತೆಯಿಂದ ಹಲವಾರು ಮಹಿಳಾ ಉದ್ಯೋಗಿಗಳ ನಗ್ನ ಫೋಟೋಗಳನ್ನ ತನ್ನ ಖಾಸಗಿ ಇ-ಮೇಲ್​ಗೆ ವರ್ಗಾಯಿಸಿದ್ದ. ಅದರಲ್ಲಿ, ತನ್ನೊಟ್ಟಿಗೆ ಲೈಂಗಿಕ ಸಂಬಂಧ ಬೆಳೆಸಿದ್ದ ಉದ್ಯೋಗಿಗಳ ಫೋಟೋ ಸಹ ಇದೆ ಎಂದು ಕೋರ್ಟ್​ನಲ್ಲಿ ಉಲ್ಲೇಖಿಸಿತ್ತು.

ಮೆಕ್​ ಡೊನಾಲ್ಡ್ಸ್ ಕಂಪನಿಯು ತಾನು ಮಂಡಿಸಿರುವ ವಾದದಲ್ಲಿ ರಾಜೀನಾಮೆ ವೇಳೆ ಸ್ಟೀವ್​ ತೆಗೆದುಕೊಂಡಿದ್ದ ಬೇರ್ಪಡಿಕೆ ಮೊತ್ತದಲ್ಲಿ ಸುಮಾರು 42 ಮಿಲಿಯನ್​ ಡಾಲರ್​ಗಳನ್ನು ವಾಪಸ್​ ಕೊಡಿಸಲು ಕೋರ್ಟ್​ಗೆ ಮನವಿ ಮಾಡಿದೆ.