Shia commander: ಶಿಯಾ ಕಮಾಂಡರ್​​​​ನಿಂದ ಸುನ್ನಿ ಯುವತಿ ಮೇಲೆ ಅತ್ಯಾಚಾರ: ಪೊಲೀಸರಿಂದ ಗುಂಡಿನ ದಾಳಿ, 36 ಜನ ದುರ್ಮರಣ

ಗುಂಡಿನ ದಾಳಿಯಲ್ಲಿ 36 ಜನ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಕಮಾಂಡರ್​ ಇಬ್ರಾಹಿಂ ಖುಚಾಕಜಾಯಿ ಎಂಬಾತ 15 ವರ್ಷದ ಬಾಲಕಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರವೆಸಗಿದ್ದ.

Shia commander: ಶಿಯಾ ಕಮಾಂಡರ್​​​​ನಿಂದ ಸುನ್ನಿ ಯುವತಿ ಮೇಲೆ ಅತ್ಯಾಚಾರ: ಪೊಲೀಸರಿಂದ ಗುಂಡಿನ ದಾಳಿ, 36 ಜನ ದುರ್ಮರಣ
ಶಿಯಾ ಕಮಾಂಡರ್​​​​ನಿಂದ ಸುನ್ನಿ ಯುವತಿ ಮೇಲೆ ಅತ್ಯಾಚಾರ; ಪೊಲೀಸರಿಂದ ಗುಂಡಿನ ದಾಳಿ, 36 ಜನ ದುರ್ಮರಣ
Image Credit source: Jim Huylebroek/The New York Times
Updated By: ಸಾಧು ಶ್ರೀನಾಥ್​

Updated on: Oct 01, 2022 | 4:58 PM

ಇರಾನ್​​ನಲ್ಲಿ ಶಿಯಾ ಕಮಾಂಡರ್​​​​ನಿಂದ (Shia commander) ಸುನ್ನಿ ಯುವತಿ ಮೇಲೆ ಅತ್ಯಾಚಾರ ನಡೆದಿದ್ದು, ಅತ್ಯಾಚಾರ ಖಂಡಿಸಿ ಸುನ್ನಿ ಸಮುದಾಯ (Sunni Islam) ಬೃಹತ್ ಪ್ರತಿಭಟನೆ (mob violence) ನಡೆದಿದೆ. ಸರ್ಕಾರಿ ಕಚೇರಿ, ಪೊಲೀಸ್​ ಠಾಣೆಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರಿಂದ ಫೈರಿಂಗ್ ನಡೆದಿದೆ. ಪೊಲೀಸರ ಗುಂಡಿನ ದಾಳಿಗೆ (police firing) 36 ಜನರು ಆಹುತಿಯಾಗಿದ್ದಾರೆ.

ಗುಂಡಿನ ದಾಳಿಯಲ್ಲಿ 36 ಜನ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಕಮಾಂಡರ್​ ಇಬ್ರಾಹಿಂ ಖುಚಾಕಜಾಯಿ ಎಂಬಾತ 15 ವರ್ಷದ ಬಾಲಕಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರವೆಸಗಿದ್ದ.

Published On - 4:57 pm, Sat, 1 October 22