AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಲೋಡಿಯೆಂದೇ ಟ್ರೆಂಡ್ ಆಗಿರುವ ಮೆಲೋನಿಯ ಆಸ್ತಿ ಎಷ್ಟು? ಇಟಲಿ ಪ್ರಧಾನಿ ಕುರಿತ ರೋಚಕ ಸಂಗತಿಗಳಿವು

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ದೀರ್ಘಕಾಲದ ಸಂಗಾತಿ ಮತ್ತು ಟಿವಿ ಪತ್ರಕರ್ತ ಆಂಡ್ರಿಯಾ ಗಿಯಾಂಬ್ರುನೋ ಅವರೊಂದಿಗೆ ದಶಕಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು. ಆದರೆ, ಆಂಡ್ರಿಯಾ ಅವರು ಮಹಿಳಾ ಸಹೋದ್ಯೋಗಿಗಳೊಂದಿಗೆ ಅಶ್ಲೀಲ ಸಂಭಾಷಣೆ ನಡೆಸಿದ ಆಡಿಯೋ ಲೀಕ್ ಆದ ತಕ್ಷಣ, ಮೆಲೋನಿ ಅವರು ಯಾವುದೇ ಹಿಂಜರಿಕೆಯಿಲ್ಲದೆ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ತನ್ನ ಗಂಡನೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುವುದಾಗಿ ಘೋಷಿಸಿದರು. ಅವರ ಈ ದಿಟ್ಟ ನಿರ್ಧಾರ ಇಟಲಿಯ ಮಹಿಳೆಯರಲ್ಲಿ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು.

ಮೆಲೋಡಿಯೆಂದೇ ಟ್ರೆಂಡ್ ಆಗಿರುವ ಮೆಲೋನಿಯ ಆಸ್ತಿ ಎಷ್ಟು? ಇಟಲಿ ಪ್ರಧಾನಿ ಕುರಿತ ರೋಚಕ ಸಂಗತಿಗಳಿವು
Pm Modi With Meloni Image Credit source: PTI
ಸುಷ್ಮಾ ಚಕ್ರೆ
|

Updated on:May 21, 2026 | 8:12 PM

Share

ನವದೆಹಲಿ, ಮೇ 21: ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿ ಮತ್ತು ಜಾಗತಿಕ ರಾಜಕಾರಣದ ಅತ್ಯಂತ ಪ್ರಭಾವಶಾಲಿ ನಾಯಕಿಯರಲ್ಲಿ ಒಬ್ಬರಾದ ಜಾರ್ಜಿಯಾ ಮೆಲೋನಿ (Giorgia Meloni) ಅವರ ಜೀವನದ ರೋಚಕ ಕಥೆ ಮತ್ತು ಅವರ ಆಸ್ತಿ ವಿವರಗಳ ಮಾಹಿತಿ ಇಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಸ್ನೇಹಿತೆ ಎಂದೇ ಬಿಂಬಿಸಲ್ಪಟ್ಟಿರುವ ಮೆಲೋನಿ ಇಟಲಿಯ ಪ್ರಧಾನಿ. ಮೋದಿ ಹಾಗೂ ಮೆಲೋನಿಯವರ ಭೇಟಿಯ ಫೋಟೋಗಳು, ವಿಡಿಯೋಗಳು, ಸೆಲ್ಫಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇವರಿಬ್ಬರ ಅಭಿಮಾನಿಗಳು ಈ ಜೋಡಿಗೆ ಮೆಲೋಡಿ ಎಂದು ಹೆಸರಿಟ್ಟಿದ್ದಾರೆ.

ಜಾರ್ಜಿಯಾ ಮೆಲೋನಿ 1977ರ ಜನವರಿ 15ರಂದು ಇಟಲಿಯ ರೋಮ್ ನಗರದಲ್ಲಿ ಜನಿಸಿದರು. ಇವರ ಬಾಲ್ಯ ಅಷ್ಟು ಸುಲಭವಾಗಿರಲಿಲ್ಲ. ಇವರಿಗೆ ಕೇವಲ ಒಂದೂವರೆ ವರ್ಷ ವಯಸ್ಸಾಗಿದ್ದಾಗ ಇವರ ತಂದೆ ಫ್ರಾನ್ಸೆಸ್ಕೊ ಮೆಲೋನಿ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಸ್ಪೇನ್‌ಗೆ ಓಡಿಹೋದರು. ತಾಯಿಯೇ ಇವರನ್ನು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಸಾಕಿ ಬೆಳೆಸಿದರು. ಮೆಲೋನಿ ಅವರು ರೋಮ್‌ನ ಅತ್ಯಂತ ಬಡ ಮತ್ತು ಕಾರ್ಮಿಕ ವರ್ಗದವರು ವಾಸಿಸುವ ‘ಗರ್ಬಟೆಲ್ಲಾ’ ಎಂಬ ಪ್ರದೇಶದಲ್ಲಿ ಬೆಳೆದರು.

Pm Modi With Meloni

Pm Modi With Meloni

ಮೆಲೋನಿ ಅವರು ಭಾಷಾಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಕುಟುಂಬಕ್ಕೆ ಆಸರೆಯಾಗಲು ಅವರು ರೆಸ್ಟೋರೆಂಟ್​ಗಳಲ್ಲಿ ಬಾರ್‌ಮೇಡ್ ಆಗಿ, ಮನೆಗಳಲ್ಲಿ ಬೇಬಿಸಿಟ್ಟರ್ ಆಗಿ ಮತ್ತು ರೋಮ್‌ನ ಪ್ರಸಿದ್ಧ ನೈಟ್ ಕ್ಲಬ್‌ಗಳಲ್ಲಿ ಕೆಲಸ ಮಾಡಿದ್ದರು. ಮೆಲೋನಿ ಅವರು ತಮ್ಮ 15ನೇ ವಯಸ್ಸಿನಲ್ಲೇ ರಾಜಕೀಯಕ್ಕೆ ಪ್ರವೇಶಿಸಿದರು. ಇಟಲಿಯ ಕಮ್ಯುನಿಸ್ಟ್ ವಿರೋಧಿ ಮತ್ತು ರಾಷ್ಟ್ರೀಯತಾವಾದಿ ‘ಯೂತ್ ಫ್ರಂಟ್’ ಸೇರಿದರು. ಚುರುಕಾದ ಮಾತುಗಾರಿಕೆ ಮತ್ತು ಧೈರ್ಯದಿಂದಾಗಿ ಅವರು ವಿದ್ಯಾರ್ಥಿ ನಾಯಕಿಯಾಗಿ ಬೆಳೆದರು.

ಇದನ್ನೂ ಓದಿ: ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ?

ತಮ್ಮ 29ನೇ ವಯಸ್ಸಿನಲ್ಲಿ ಇಟಲಿಯ ಸಂಸತ್ ಸದಸ್ಯೆಯಾಗಿ ಆಯ್ಕೆಯಾದರು. ಇಟಲಿಯ ಅಂದಿನ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರ ಸರ್ಕಾರದಲ್ಲಿ ‘ಯುವಜನ ಕಲ್ಯಾಣ ಸಚಿವೆ’ ಆಗಿ ನೇಮಕಗೊಂಡರು. ಇದರೊಂದಿಗೆ ಇಟಲಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2012ರಲ್ಲಿ ಮೆಲೋನಿ ತಮ್ಮದೇ ಆದ ‘ಬ್ರದರ್ಸ್ ಆಫ್ ಇಟಲಿ’ (Brothers of Italy) ಎಂಬ ಬಲಪಂಥೀಯ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. 2022ರ ಸಾರ್ವತ್ರಿಕ ಚುನಾವಣೆಯಲ್ಲಿ ಇವರ ಪಕ್ಷವು ಭರ್ಜರಿ ಜಯ ಗಳಿಸಿತು. ಅಕ್ಟೋಬರ್ 2022ರಲ್ಲಿ ಜಾರ್ಜಿಯಾ ಮೆಲೋನಿ ಇಟಲಿಯ ಮೊಟ್ಟಮೊದಲ ಮಹಿಳಾ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದರು.

Pm Modi With Meloni

Pm Modi With Meloni

ಜಾರ್ಜಿಯಾ ಮೆಲೋನಿ ಅವರಿಗೆ ‘ಜಿನೆವ್ರಾ’ ಎಂಬ ಮಗಳಿದ್ದಾಳೆ. ತಮ್ಮ ದೀರ್ಘಕಾಲದ ಸಂಗಾತಿಯಾಗಿದ್ದ ಪತ್ರಕರ್ತ ಆಂಡ್ರಿಯಾ ಗಿಯಾಂಬ್ರುನೋ ಅವರೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಕಾರಣ ಅವರು 2023ರಲ್ಲಿ ವಿಚ್ಛೇದನ ಪಡೆದಿದ್ದರು. ಈಗ ಅವರು ತಮ್ಮ ಮಗಳೊಂದಿಗೆ ವಾಸವಾಗಿದ್ದಾರೆ.

ಅನೇಕ ಪಾಶ್ಚಿಮಾತ್ಯ ದೇಶಗಳ ನಾಯಕರಿಗೆ ಹೋಲಿಸಿದರೆ ಜಾರ್ಜಿಯಾ ಮೆಲೋನಿ ತೀರಾ ಶ್ರೀಮಂತ ಹಿನ್ನೆಲೆಯಿಂದ ಬಂದವರಲ್ಲ. ಇಟಲಿಯ ಅಧಿಕೃತ ಆಸ್ತಿ ಘೋಷಣೆಗಳ ಪ್ರಕಾರ ಅವರ ಆಸ್ತಿ ವಿವರ ಹೀಗಿದೆ. ಮೆಲೋನಿ ಅವರ ಒಟ್ಟು ಆಸ್ತಿಯ ಮೌಲ್ಯ ಸರಿಸುಮಾರು 2 ಮಿಲಿಯನ್ ಯೂರೋಗಳಿಂದ 2.5 ಮಿಲಿಯನ್ ಯೂರೋಗಳು (ಭಾರತೀಯ ರೂ.ಗಳಲ್ಲಿ ಸುಮಾರು 18ರಿಂದ 22 ಕೋಟಿ).

ಇದನ್ನೂ ಓದಿ: ವೆಲ್​ಕಮ್ ಟು ರೋಮ್, ಮೈ ಫ್ರೆಂಡ್, ರೋಮ್​ಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಸ್ವಾಗತಿಸಿ, ಸೆಲ್ಫಿ ಹಂಚಿಕೊಂಡ ಜಾರ್ಜಿಯಾ ಮೆಲೋನಿ

ರೋಮ್ ನಗರದಲ್ಲಿ ಅವರು ತಮ್ಮ ಮಗಳೊಂದಿಗೆ ವಾಸಿಸಲು ಇತ್ತೀಚೆಗೆ ದೊಡ್ಡದೊಂದು ಸುಸಜ್ಜಿತ ಮನೆಯನ್ನು ಖರೀದಿಸಿದ್ದಾರೆ. ಇದರ ಮೌಲ್ಯ ಸುಮಾರು 1 ಮಿಲಿಯನ್ ಯೂರೋಗಳಿಗಿಂತ ಅಧಿಕ ಎನ್ನಲಾಗಿದೆ. ಇಟಲಿಯ ಪ್ರಧಾನ ಮಂತ್ರಿಯಾಗಿ ಅವರಿಗೆ ವಾರ್ಷಿಕವಾಗಿ ಸುಮಾರು 80,000ದಿಂದ 1 ಲಕ್ಷ ಯೂರೋಗಳ (ಸುಮಾರು 70ರಿಂದ 90 ಲಕ್ಷ ರೂ.) ಸಂಬಳ ಸಿಗುತ್ತದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಇವರ ರಾಜತಾಂತ್ರಿಕ ಸ್ನೇಹ ಮತ್ತು “ಮೆಲೋಡಿ” (#Melodi) ಎಂಬ ಸಾಮಾಜಿಕ ಮಾಧ್ಯಮಗಳ ಟ್ರೆಂಡ್ ಭಾರತದಲ್ಲೂ ಇವರನ್ನು ಅತ್ಯಂತ ಜನಪ್ರಿಯಗೊಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:08 pm, Thu, 21 May 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್