AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಬರ್ಬರ ಹತ್ಯೆ

ಪುಲ್ವಾಮಾ ದಾಳಿಗೆ ಸಂಬಂಧಿಸಿದ ವಾಂಟೆಡ್ ಭಯೋತ್ಪಾದಕನಾದ ಹಮ್ಜಾ ಬುರ್ಹಾನ್ ಎಂಬುವವನನ್ನು ಇಂದು ಪಾಕಿಸ್ತಾನದ ಮುಜಫರಾಬಾದ್ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಹಮ್ಜಾ ಬುರ್ಹಾನ್ ಎಂಬ ಭಯೋತ್ಪಾದಕನ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ, ಆತನ ಮೇಲೆ ಹಲವಾರು ಸುತ್ತು ಗುಂಡುಗಳನ್ನು ಎಸೆದಿದ್ದಾರೆ. ಈ ದಾಳಿಯ ಸಮಯದಲ್ಲಿ ಆತ ತೀವ್ರವಾಗಿ ಗಾಯಗೊಂಡಿದ್ದ. ಕೊನೆಗೆ ಆತ ಮೃತಪಟ್ಟಿದ್ದಾನೆ.

ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಬರ್ಬರ ಹತ್ಯೆ
Hamza BurhanImage Credit source: x
ಸುಷ್ಮಾ ಚಕ್ರೆ
|

Updated on:May 21, 2026 | 6:14 PM

Share

ನವದೆಹಲಿ, ಮೇ 21: 2019ರ ಪುಲ್ವಾಮಾ (Pulwama Attack) ಭೀಕರ ಭಯೋತ್ಪಾದನಾ ದಾಳಿಯ ಸಂಚುಗಾರರಲ್ಲಿ ಒಬ್ಬನಾದ ಹಮ್ಜಾ ಬುರ್ಹಾನ್ (Hamza Burhan) ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಅಪರಿಚಿತ ಬಂದೂಕುಧಾರಿಗಳಿಂದ ಕೊಲ್ಲಲ್ಪಟ್ಟಿದ್ದಾನೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಮುಜಫರಾಬಾದ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿ ನಡೆಸಿದವರ ಗುರುತು ಅಥವಾ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಪುಲ್ವಾಮಾ ದಾಳಿಗೆ ಸಂಬಂಧಿಸಿದ ಭಯೋತ್ಪಾದಕ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಪ್ರಮುಖ ಮಾಸ್ಟರ್ ಮೈಂಡ್‌ಗಳಲ್ಲಿ ಹಮ್ಜಾ ಬುರ್ಹಾನ್ ಒಬ್ಬನೆಂದು ವರದಿಯಾಗಿದೆ. ನಿಷೇಧಿತ ‘ಅಲ್-ಬದ್ರ್’ (Al-Badr) ಭಯೋತ್ಪಾದಕ ಸಂಘಟನೆಯ ಕಮಾಂಡರ್ ಆಗಿದ್ದ ಹಮ್ಜಾ ಬುರ್ಹಾನ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಮುಜಾಫರಾಬಾದ್ ನಗರದಲ್ಲಿದ್ದಾಗ ಅಪರಿಚಿತ ಸಶಸ್ತ್ರಧಾರಿಗಳು ಆತನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಆತನ ದೇಹಕ್ಕೆ ಹಲವು ಗುಂಡುಗಳು ತಗುಲಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದಾಳಿ ನಡೆಸಿದವರು ತಕ್ಷಣವೇ ಅಲ್ಲಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: Pulwama Attack: ಪುಲ್ವಾಮಾದಲ್ಲಿ ದಾಳಿ ಮಾಡಿದ್ದು ನಾವೇ ಎಂದು ಒಪ್ಪಿಕೊಂಡ ಪಾಕಿಸ್ತಾನ

ಈತ ಮೂಲತಃ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಖರ್ಬತ್‌ಪೋರಾ ನಿವಾಸಿಯಾಗಿದ್ದ. 2017ರಲ್ಲಿ ಉನ್ನತ ಶಿಕ್ಷಣದ ನೆಪದಲ್ಲಿ ಪಾಕಿಸ್ತಾನಕ್ಕೆ ತೆರಳಿದ ಈತ, ಅಲ್ಲಿ ಉಗ್ರಗಾಮಿ ಸಂಘಟನೆ ಸೇರಿಕೊಂಡ. ಭಯೋತ್ಪಾದಕ ವಲಯದಲ್ಲಿ ಈತನನ್ನು ‘ಡಾಕ್ಟರ್’ ಎಂಬ ಉಪನಾಮದಿಂದ ಕರೆಯಲಾಗುತ್ತಿತ್ತು. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು 2022ರಲ್ಲೇ ಈತನನ್ನು ‘ಯುಎಪಿಎ’ (UAPA) ಕಾಯ್ದೆಯಡಿ ‘ಘೋಷಿತ ಭಯೋತ್ಪಾದಕ’ ಎಂದು ಪ್ರಕಟಿಸಿತ್ತು.

ಇದನ್ನೂ ಓದಿ: Pulwama Day 2026: ಫೆಬ್ರವರಿ 14ರಂದು ಪುಲ್ವಾಮಾ ದಿನ, 40 ಸೈನಿಕರ ಬಲಿದಾನದ ಸ್ಮರಣೆ, ಉಗ್ರ ದಾಳಿ ನಡೆದಿದ್ಹೇಗೆ?

2019ರ ಫೆಬ್ರವರಿ 14ರಂದು ಪುಲ್ವಾಮಾದ ಲೆಥ್‌ಪೋರಾದಲ್ಲಿ ಸಿಆರ್‌ಪಿಎಫ್ ಜವಾನರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಇಡೀ ಭೀಕರ ದಾಳಿಯ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಹಂಜಾ ಬುರ್ಹಾನ್ ಹೆಸರನ್ನು ಪ್ರಮುಖ ಸಂಚುಗಾರನಾಗಿ ಉಲ್ಲೇಖಿಸಲಾಗಿತ್ತು. ಗಡಿಯ ಆಚೆ ಕುಳಿತು ಭಾರತದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಈತ ಹಣಕಾಸು ಮತ್ತು ಯೋಜನಾ ನೆರವು ನೀಡುತ್ತಿದ್ದನು. ಆತ ಈಗ ಕೊಲೆಯಾಗಿದ್ದಾನೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:57 pm, Thu, 21 May 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ