AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pulwama Day 2026: ಫೆಬ್ರವರಿ 14ರಂದು ಪುಲ್ವಾಮಾ ದಿನ, 40 ಸೈನಿಕರ ಬಲಿದಾನದ ಸ್ಮರಣೆ, ಉಗ್ರ ದಾಳಿ ನಡೆದಿದ್ಹೇಗೆ?

ಫೆಬ್ರವರಿ 14, 2019 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ 40 CRPF ಸೈನಿಕರು ಹುತಾತ್ಮರಾದರು. ಈ ಭೀಕರ ಉಗ್ರ ದಾಳಿಯ 7 ವರ್ಷಗಳ ನಂತರವೂ ಆ ನೋವು ಅಚ್ಚಳಿಯದೆ ಉಳಿದಿದೆ. ಜೈಶ್-ಎ-ಮೊಹಮ್ಮದ್ ಹೊಣೆ ಹೊತ್ತ ಈ ಘಟನೆಗೆ ಭಾರತ ಬಾಲಕೋಟ್ ಏರ್ ಸ್ಟ್ರೈಕ್ ಮೂಲಕ ತಕ್ಕ ಪ್ರತ್ಯುತ್ತರ ನೀಡಿತು, ಉಗ್ರ ಶಿಬಿರಗಳನ್ನು ನಾಶಪಡಿಸಿತು. ಈ ದಿನ ಹುತಾತ್ಮರಿಗೆ ಗೌರವ ಸಲ್ಲಿಸೋಣ.

Pulwama Day 2026: ಫೆಬ್ರವರಿ 14ರಂದು ಪುಲ್ವಾಮಾ ದಿನ, 40 ಸೈನಿಕರ ಬಲಿದಾನದ ಸ್ಮರಣೆ, ಉಗ್ರ ದಾಳಿ ನಡೆದಿದ್ಹೇಗೆ?
ಪುಲ್ವಾಮಾ ದಾಳಿ
ನಯನಾ ರಾಜೀವ್
|

Updated on: Feb 12, 2026 | 7:50 AM

Share

ಶ್ರೀನಗರ, ಫೆಬ್ರವರಿ 12: ಪುಲ್ವಾಮಾ ದಾಳಿ(Pulwama Attack) ನಡೆದು 7 ವರ್ಷಗಳು ಕಳೆದಿವೆ. ಫೆಬ್ರವರಿ 14, 2019 ದೇಶವು ಎಂದಿಗೂ ಮರೆಯದ ದಿನ ಅದು. ಪುಲ್ವಾಮಾ ಭಯೋತ್ಪಾದಕ ದಾಳಿಯಾಗಿ 7 ವರ್ಷಗಳು ಕಳೆದಿರಬಹುದು, ಆದರೆ ದುಃಖ ಮತ್ತು ನೋವು ಜನರ ಮನಸ್ಸಿನಲ್ಲಿ ಇನ್ನು ಹಸಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಕೇಂದ್ರ ಪೊಲೀಸ್ ಪಡೆ(ಸಿಆರ್​ಪಿಎಫ್) ಪ್ರಯಾಣಿಸುತ್ತಿತ್ತು. ಅವಂತಿಪೋರಾ ಗೋರಿಪೋರಾ ಬಳಿ ಬೆಂಗಾವಲು ಪಡೆಯ ಬಸ್​​ಗಳ ಪಕ್ಕದಲ್ಲಿಯೇ ವಾಹನವೊಂದು ಹಾದು ಹೋಗುತ್ತಿತ್ತು. ಸೇನಾ ಸಿಬ್ಬಂದಿ ಪದೇ ಪದೇ ಆ ಕಾರು ಚಾಲಕನಿಗೆ ತಮ್ಮ ವಾಹನದಿಂದ ದೂರ ಇರುವಂತೆ ಹೇಳುತ್ತಿದ್ದರು. ಆದರೆ ಚಾಲಕ ಅದನ್ನು ನಿರ್ಲಕ್ಷಿಸುತ್ತಿದ್ದ. ಸೈನಿಕರು ಅರ್ಥ ಮಾಡಿಕೊಳ್ಳುವ ಮುನ್ನವೇ ಕಾರು ಬೆಂಗಾವಲು ಪಡೆಯ ಬಸ್​​ಗೆ ಡಿಕ್ಕಿ ಹೊಡೆದು, ಬೃಹತ್ ಸ್ಫೋಟ ಸಂಭವಿಸಿತ್ತು. 40 ಸೈನಿಕರ ದೇಹ ನೋಡನೋಡುತ್ತಲೇ ಛಿದ್ರ ಛಿದ್ರವಾಗಿತ್ತು.

ಈ ದಾಳಿ ಹೇಗೆ ನಡೆಯಿತು, ಭಾರತ ನಂತರ ಯಾವ ಕ್ರಮ ಕೈಗೊಂಡಿತು ಮತ್ತು ಭಾರತೀಯ ಸೈನಿಕರು ಪಾಕಿಸ್ತಾನದಲ್ಲಿ ಕುಳಿತಿದ್ದ ಜೈಶ್ ಭಯೋತ್ಪಾದಕರನ್ನು ಹೇಗೆ ಆಯ್ದುಕೊಡಿದ್ದು ಇತರೆ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ. ಸ್ಫೋಟದ ಶಬ್ದವು ಎಷ್ಟು ವಿನಾಶಕಾರಿಯಾಗಿತ್ತೆಂದರೆ, ಅದರ ಶಬ್ದವು ಹಲವಾರು ಕಿಲೋಮೀಟರ್‌ಗಳವರೆಗೆ ಕೇಳಿಬಂದಿತ್ತು.  ಪುಲ್ವಾಮಾ ಸುತ್ತಮುತ್ತಲಿನ ಪ್ರದೇಶವು ಬೆಂಕಿ ಮತ್ತು ಹೊಗೆಯಿಂದ ಆವೃತವಾಗಿತ್ತು. ದಾಳಿಯಲ್ಲಿ ನಲವತ್ತು ಸೈನಿಕರು ಹುತಾತ್ಮರಾಗಿದ್ದರು.

ಜೈಶ್-ಎ-ಮೊಹಮ್ಮದ್ ಹೊಣೆ ಹೊತ್ತುಕೊಂಡಿತ್ತು ಅವಂತಿಪೋರಾದಲ್ಲಿ ನಡೆದ ದಾಳಿಯ ಹೊಣೆಯನ್ನು ಜೈಶ್-ಎ-ಮೊಹಮ್ಮದ್ ಹೊತ್ತುಕೊಂಡಿತ್ತು. ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ಹಲವಾರು ಬಸ್‌ಗಳು ತೀವ್ರವಾಗಿ ಹಾನಿಗೊಳಗಾದವು. ಈ ದಾಳಿಯು ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಭಯೋತ್ಪಾದನಾ ಕೃತ್ಯವು ಭಾರತೀಯರ ಕಣ್ಣಲ್ಲಿ ನೀರು ತರಿಸಿತ್ತು.

ಮತ್ತಷ್ಟು ಓದಿ: Pulwama Attack: ಫೆಬ್ರವರಿ 14 ಭಾರತೀಯರಿಗೆ ಕರಾಳ ದಿನ, ಈ ಉಗ್ರರ ದಾಳಿಗೆ ಭಾರತ ಪ್ರತ್ಯುತ್ತರ ಹೇಗೆ ನೀಡಿತ್ತು? ಇಲ್ಲಿದೆ ಮಾಹಿತಿ

ಸರ್ಜಿಕಲ್ ಸ್ಟ್ರೈಕ್ ಮತ್ತು ಪಾಕಿಸ್ತಾನಕ್ಕೆ ಪಾಠ ಪುಲ್ವಾಮಾ ಭಯೋತ್ಪಾದಕ ದಾಳಿಯ ನಿಖರವಾಗಿ 12 ದಿನಗಳ ನಂತರ, ಫೆಬ್ರವರಿ 25 ರ ತಡರಾತ್ರಿ ಭಾರತ ಪಾಕಿಸ್ತಾನದ ಬಾಲಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿತು. ಈ ದಾಳಿಯಲ್ಲಿ, ಸೇನೆಯು ಸುಮಾರು 300 ಪಾಕಿಸ್ತಾನಿ ಭಯೋತ್ಪಾದಕರನ್ನು ಕೊಂದಿತು. ಸರ್ಕಾರದ ಹೇಳಿಕೆಗಳ ಪ್ರಕಾರ, 2,000 ವಾಯುಪಡೆಯ ವಿಮಾನಗಳು ಈ ಪ್ರದೇಶದ ಭಯೋತ್ಪಾದಕ ಶಿಬಿರಗಳ ಮೇಲೆ ಸುಮಾರು 1,000 ಕಿಲೋಗ್ರಾಂಗಳಷ್ಟು ಬಾಂಬ್‌ಗಳನ್ನು ಹಾಕಿದವು. ಪಾಕಿಸ್ತಾನಕ್ಕೆ ಈ ಕಾರ್ಯಾಚರಣೆಯ ಬಗ್ಗೆ ತಿಳಿದಿರಲಿಲ್ಲ. ಈ ದಾಳಿಯನ್ನು ಬಾಲಕೋಟ್ ವೈಮಾನಿಕ ದಾಳಿ ಎಂದು ಕರೆಯಲಾಯಿತು.

ವಿಂಗ್ ಕಮಾಂಡರ್ ಅಭಿನಂದನ್ ಈ ಕಾರ್ಯಾಚರಣೆಯ ಸಮಯದಲ್ಲಿ, ಭಾರತದ ಮಿಗ್ -21 ಬೈಸನ್ ಯುದ್ಧ ವಿಮಾನವು ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿತು. ಈ ಬಾಲಕೋಟ್ ವೈಮಾನಿಕ ದಾಳಿಯಲ್ಲಿ, ಭಾರತದ ಮಿಗ್ -21 ಯುದ್ಧ ವಿಮಾನವು ಹಾನಿಗೊಳಗಾಗಿ ಪಾಕಿಸ್ತಾನಕ್ಕೆ ಅಪ್ಪಳಿಸಿತ್ತು. ಮತ್ತು ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಪಾಕಿಸ್ತಾನಿ ಸೇನೆ ವಶಪಡಿಸಿಕೊಂಡಿತು. ಆದಾಗ್ಯೂ, ಅಭಿನಂದನ್ ವರ್ತಮಾನ್ ಅವರನ್ನು ಮಾರ್ಚ್ 1, 2019 ರಂದು ಪಾಕಿಸ್ತಾನ ಬಿಡುಗಡೆ ಮಾಡಿತು ಮತ್ತು ಭಾರತ ಸರ್ಕಾರವು ಅವರಿಗೆ ‘ವೀರ್ ಚಕ್ರ’ ನೀಡಿ ಗೌರವಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!