AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

9ನೇ ಕ್ಲಾಸ್ ಓದಿ ವೈದ್ಯನೆಂದು ಹೇಳಿಕೊಂಡು 20 ವರ್ಷದಿಂದ ಯಾಮಾರಿಸುತ್ತಿದ್ದ ಡಾಕ್ಟರ್!

ಈತ ಯಾವ ಎಂಬಿಬಿಎಸ್​ ಕೂಡ ಮಾಡಿಲ್ಲ, ವೈದ್ಯಕೀಯ ಕೋರ್ಸ್ ಕೂಡ ಮುಗಿಸಿಲ್ಲ. ಆದರೂ 20 ವರ್ಷಗಳಿಂದ ಸ್ವಂತ ಕ್ಲಿನಿಕ್ ಇಟ್ಟುಕೊಂಡು, ಸರ್ಜರಿ ಮಾಡುತ್ತಾ, ತಾನೊಬ್ಬ ಉತ್ತಮ ವೈದ್ಯನೆಂದು ಜನರನ್ನು ನಂಬಿಸಿದ್ದ. ಈತ ಓದಿದ್ದು ಬರೀ 9ನೇ ಕ್ಲಾಸ್. ಈ ನಕಲಿ ವೈದ್ಯನ ಕತೆ ಇಲ್ಲಿದೆ.

9ನೇ ಕ್ಲಾಸ್ ಓದಿ ವೈದ್ಯನೆಂದು ಹೇಳಿಕೊಂಡು 20 ವರ್ಷದಿಂದ ಯಾಮಾರಿಸುತ್ತಿದ್ದ ಡಾಕ್ಟರ್!
ಡಾಕ್ಟರ್
ಸುಷ್ಮಾ ಚಕ್ರೆ
|

Updated on: Sep 28, 2024 | 6:59 PM

Share

ನಿಮಗೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಉಪ್ಪಿದಾದಾ ಎಂಬಿಬಿಎಸ್ ಸಿನಿಮಾ ನೆನಪಿದೆಯಾ? ಇದರಲ್ಲಿ ಹೀರೋ ತಾನು ಎಂಬಿಬಿಎಸ್​ ಓದಿ ವೈದ್ಯನಾಗಿದ್ದೇನೆ ಎಂದು ನಾಯಕಿ, ತನ್ನ ಪೋಷಕರನ್ನೆಲ್ಲ ನಂಬಿಸಿರುತ್ತಾನೆ. ಅದೇ ರೀತಿಯ ಘಟನೆಯೊಂದು ನಿಜಜೀವನದಲ್ಲೂ ನಡೆದಿದೆ. ಇಲ್ಲಿ ವ್ಯಕ್ತಿಯೊಬ್ಬ ಜನರಿಗೆ ಮೋಸ ಮಾಡಿ ಸಿನಿಮಾದ ಕಥೆಯನ್ನು ನಿಜ ಮಾಡಿದ್ದಾನೆ. ಕೇವಲ 9ನೇ ತರಗತಿವರೆಗೆ ಓದಿದ ವ್ಯಕ್ತಿಯೊಬ್ಬ ತಾನು ವೈದ್ಯನೆಂದು ಹೇಳಿಕೊಂಡು ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದಾನೆ.

ಅಚ್ಚರಿ ಎಂದರೆ ಕಳೆದ 20 ವರ್ಷಗಳಿಂದ ಈತ ವೈದ್ಯ ವೃತ್ತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾನೆ. ಈ ನಕಲಿ ವೈದ್ಯ ತನ್ನನ್ನು ಪ್ರತಿಷ್ಠಿತ ಕಾಲೇಜಿನಲ್ಲಿ ಓದಿದ ವೈದ್ಯ ಎಂದು ಪರಿಚಯಿಸಿಕೊಂಡು ಸ್ವಂತ ಕ್ಲಿನಿಕ್ ತೆರೆದಿದ್ದಾನೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆತನ ಬಳಿ ಚಿಕಿತ್ಸೆಗೆ ಬರುತ್ತಿದ್ದರು. ಅವರ ಸಮಸ್ಯೆಗಳಿಗೆ ಸಣ್ಣಪುಟ್ಟ ಚಿಕಿತ್ಸೆ ಮತ್ತು ಔಷಧಗಳನ್ನು ನೀಡುವ ಮೂಲಕ ನಿಮ್ಮ ಕಾಯಿಲೆಗಳು ಸಂಪೂರ್ಣವಾಗಿ ಗುಣವಾಗುತ್ತವೆ ಎಂದು ಆತ ಭರವಸೆ ನೀಡುತ್ತಿದ್ದ. ಹೀಗಾಗಿ ಜನರಲ್ಲಿ ಆತ ಮಹಾನ್ ವೈದ್ಯ ಎಂದು ಹೆಸರಾಗಿದ್ದ. ಆದರೆ, ಆತ ವೈದ್ಯನೇ ಅಲ್ಲ ಎಂಬುದು ಈಗ ಬೆಳಕಿಗೆ ಬಂದಿದೆ. ಈ ಆಘಾತಕಾರಿ ಘಟನೆ ನಡೆದಿರುವುದು ಥಾಯ್ಲೆಂಡ್​ನಲ್ಲಿ.

ಇದನ್ನೂ ಓದಿ: ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್

ಥಾಯ್ಲೆಂಡ್‌ನ ವ್ಯಕ್ತಿಯೊಬ್ಬ ಓದಿದ್ದು ಕೇವಲ 9ನೇ ತರಗತಿ. ಆದರೆ, ದೊಡ್ಡ ವೈದ್ಯ ಎಂದು ಹೇಳಿಕೊಂಡು ಸ್ವಂತ ಆಸ್ಪತ್ರೆ ಸ್ಥಾಪಿಸಿದ್ದ. ಸ್ಥಳೀಯ ಜನರಿಗೆ ಚಿಕಿತ್ಸೆ ನೀಡುವಲ್ಲಿ ಆತ ಯಶಸ್ವಿಯಾಗಿದ್ದ. ಅದರೊಂದಿಗೆ ಅವರ ಚಿಕಿತ್ಸಾಲಯಕ್ಕೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಿತು. ಈ ನಕಲಿ ವೈದ್ಯ ಕೇವಲ ಔಷಧ ಮಾತ್ರ ನೀಡುವುದಿಲ್ಲ. ಸಣ್ಣಪುಟ್ಟ ಸರ್ಜರಿಗಳನ್ನೂ ಮಾಡುತ್ತಾನೆ. ಈ ಕ್ರಮದಲ್ಲಿ ರೋಗಿಯೊಬ್ಬನಿಗೆ ಆಪರೇಷನ್ ನಂತರ ಗಂಭೀರ ಸೋಂಕು ತಗುಲಿ ಮತ್ತೆ ವೈದ್ಯರ ಬಳಿ ಹೋಗಬೇಕಾಯಿತು. ಆಗ ಈ ಅಸಲಿ ವಿಷಯ ಬೆಳಕಿಗೆ ಬಂದಿತು. ವೈದ್ಯರ ಅನುಚಿತ ವರ್ತನೆ ಮತ್ತು ಅಸಮಂಜಸ ಉತ್ತರಗಳು ರೋಗಿಯನ್ನು ಅನುಮಾನಿಸುವಂತೆ ಮಾಡಿತು. ಇದರಿಂದ ಅನುಮಾನಗೊಂಡ ರೋಗಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಕೇರಳ: ಸಿನಿಮಾ ಶೈಲಿಯಲ್ಲಿ ಕಾರು ಸುತ್ತುವರಿದು 2.5 ಕೆಜಿ ಚಿನ್ನಾಭರಣ ದರೋಡೆ; ವಿಡಿಯೊ ವೈರಲ್

ಪೊಲೀಸರು ಸ್ಟಿಂಗ್ ಆಪರೇಷನ್ ಮೂಲಕ ಈ ನಕಲಿ ಸರ್ಜನ್​ನನ್ನು ಬಂಧಿಸಿದ್ದಾರೆ. ಆತನನ್ನು ಬಂಧಿಸಿದಾಗ, ತಾನು ವೈದ್ಯಕೀಯ ಶಿಕ್ಷಣ ಪಡೆದಿಲ್ಲ ಮತ್ತು ವೈದ್ಯಕೀಯ ಪರವಾನಗಿ ಪ್ರಮಾಣಪತ್ರವನ್ನು ಹೊಂದಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಕಾನೂನು ಬಾಹಿರ ಕ್ಲಿನಿಕ್ ನಡೆಸುತ್ತಿದ್ದ ಹಾಗೂ ಪರವಾನಗಿ ಇಲ್ಲದೇ ಅಭ್ಯಾಸ ನಡೆಸುತ್ತಿದ್ದ ಆತನ ವಿರುದ್ಧ ಕೇಸ್ ದಾಖಲಾಗಿವೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇನ್ನಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ