ಫ್ಲೋರಿಡಾದ ಜಿಮ್​​ನಲ್ಲಿ ದಾಳಿ ಮಾಡಲು ಬಂದವನಿಗೆ ಬುದ್ಧಿ ಕಲಿಸಿದ ಫಿಟ್​ನೆಸ್ ಮಾಡೆಲ್ ;ವಿಡಿಯೊ ನೋಡಿ

ಸಾಮಾಜಿಕ ಮಾಧ್ಯಮದಲ್ಲಿ ಹಿಲ್ಸ್‌ಬರೋ ಕೌಂಟಿ ಶೆರಿಫ್ ಕಚೇರಿಯಿಂದ ಪೋಸ್ಟ್ ಮಾಡಲಾದ ವೀಡಿಯೊದ ಪ್ರಕಾರ, ನಶಾಲಿಯವರು ಬಾಗಿಲಿನ ಮೂಲ ಯಾರೋ ಒಬ್ಬ ವ್ಯಕ್ತಿ ಜಿಮ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಆಕೆ ಬಾಗಿಲನ್ನು ತೆರೆದು ತನ್ನ ವ್ಯಾಯಾಮವನ್ನು ಮುಂದುವರೆಸಿದಳು

ಫ್ಲೋರಿಡಾದ ಜಿಮ್​​ನಲ್ಲಿ ದಾಳಿ ಮಾಡಲು ಬಂದವನಿಗೆ ಬುದ್ಧಿ ಕಲಿಸಿದ ಫಿಟ್​ನೆಸ್ ಮಾಡೆಲ್ ;ವಿಡಿಯೊ ನೋಡಿ
ಜಿಮ್ ಒಳಗೆ ದಾಳಿಕೋರನ ಜತೆ ಹೋರಾಡುತ್ತಿರುವ ಮಹಿಳೆ
ರಶ್ಮಿ ಕಲ್ಲಕಟ್ಟ Edited By:

Updated on: Feb 17, 2023 | 2:53 PM

ಜಿಮ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅಮೆರಿಕದ(USA) ಮಹಿಳೆಯ ಮೇಲೆ ದಾಳಿ ನಡೆಸಿದ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video)ಆಗಿದೆ. ಫಿಟ್‌ನೆಸ್ ಮಾಡೆಲ್ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಯಾಗಿರುವ (social media influencer) ಮಹಿಳೆ, ಈತನನ್ನು ಎದುರಿಸಿದ್ದು ಧೈರ್ಯದಿಂದ ಆತನ ಜತೆ ಹೋರಾಡಿದ್ದಾರೆ. ಮಹಿಳೆಯ ದಿಟ್ಟ ಹೆಜ್ಜೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 24 ವರ್ಷದ ನಶಾಲಿ ಅಲ್ಮಾ ಜನವರಿ 22 ರಂದು ಟ್ಯಾಂಪಾದಲ್ಲಿನ ಇನ್‌ವುಡ್ ಪಾರ್ಕ್ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಕ್ಸೇವಿಯರ್ ಥಾಮಸ್-ಜೋನ್ಸ್ ಎಂಬಾತ ಅವರ ಮೇಲೆ ದಾಳಿ ಮಾಡಿದ್ದಾನೆ ಎಂದು ಹಿಲ್ಸ್‌ಬರೋ ಕೌಂಟಿ ಶೆರಿಫ್ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.

ನಶಾಲಿ ಅಂಜದೆ ದಾಳಿಕೋರನ ಜತೆ ಫೈಟ್ ಮಾಡಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾರೆ. ತದನಂತರ ಆತನನ್ನು ಬಂಧಿಸಲಾಗಿದೆ

ಸಾಮಾಜಿಕ ಮಾಧ್ಯಮದಲ್ಲಿ ಹಿಲ್ಸ್‌ಬರೋ ಕೌಂಟಿ ಶೆರಿಫ್ ಕಚೇರಿಯಿಂದ ಪೋಸ್ಟ್ ಮಾಡಲಾದ ವೀಡಿಯೊದ ಪ್ರಕಾರ, ನಶಾಲಿಯವರು ಬಾಗಿಲಿನ ಮೂಲ ಯಾರೋ ಒಬ್ಬ ವ್ಯಕ್ತಿ ಜಿಮ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಆಕೆ ಬಾಗಿಲನ್ನು ತೆರೆದು ತನ್ನ ವ್ಯಾಯಾಮವನ್ನು ಮುಂದುವರೆಸಿದಳು, ಆದರೆ ಸ್ವಲ್ಪ ಸಮಯದ ನಂತರ ಆರೋಪಿ ಕ್ಸೇವಿಯರ್ ಥಾಮಸ್-ಜೋನ್ಸ್, ಹತ್ತಿರ ಬಂದು ಅವಳನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ತಕ್ಷಣವೇ ಜಾಗೃತಳಾದ ನಶಾಲಿ ಆತನ ಜತೆ ಹೋರಾಡಿದ್ದಾಳೆ. ಸ್ವಲ್ಪ ಸಮಯದ ಹೋರಾಟದ ನಂತರ ದಾಳಿಕೋರ ಆಕೆಯ ಮುಂದೆ ಸೋತಿದ್ದಾನೆ.


ಅವನು ನನ್ನ ಹತ್ತಿರ ಬರುತ್ತಿದ್ದಂತೆ, ನಾನು ಅವನನ್ನು ತಳ್ಳಿದೆ. ನಾನು ಹೇಳಿದೆ, ಬ್ರೋ, ನೀವು ಏನು ಮಾಡುತ್ತಿದ್ದೀರಿ? ನನ್ನಿಂದ ದೂರ ಹೋಗು. ನನ್ನನ್ನು ಮುಟ್ಟಲು ಪ್ರಯತ್ನಿಸಬೇಡಿ ಎಂದೆ. ಅವರು ಬೆಂಚ್ ಸುತ್ತಲೂ ನನ್ನನ್ನು ಬೆನ್ನಟ್ಟಲು ಪ್ರಾರಂಭಿಸಿದರು ನಾವು ಜಿಮ್‌ನ ಇನ್ನೊಂದು ಬದಿಯಲ್ಲಿ ಮುಖಾಮುಖಿಯಾದೆವು ಎಂದು 24 ವರ್ಷದ ನಶಾಲಿ ಅಲ್ಮಾ, ಹಿಲ್ಸ್‌ಬರೋ ಕೌಂಟಿ ಶೆರಿಫ್ ಕಚೇರಿಯಿಂದ ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ.

ಎಂದಿಗೂ ಬಿಟ್ಟುಕೊಡಬಾರದು ಎಂಬುದೇ ನನ್ನ ಸಲಹೆ. ನನ್ನ ಪೋಷಕರು ಕೂಡಾ ಅದನ್ನೇ ಹೇಳುತ್ತಿದ್ದರು. ಯಾವುದನ್ನೂ ಎಂದಿಗೂ ಬಿಟ್ಟುಕೊಡುವುದಿಲ್ಲ. ನಾನು ಹೀಗೆ ಹೋರಾಡುವಾಗ ಯಾವಾಗಲೂ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇನೆ ಎಂದಿದ್ದಾರೆ ನಶಾಲಿ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Fri, 17 February 23

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Loading...
Unable to load recommendations.
Follow Us